Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಜಯವಾಡಾ » ಹವಾಮಾನ

ವಿಜಯವಾಡಾ ಹವಾಮಾನ

ವಿಜಯವಾಡಕ್ಕೆ ಪ್ರವಾಸಕ್ಕೆ ಬರಲು ಸೂಕ್ತ ಸಮಯವೆಂದರೆ  ಚಳಿಗಾಲ. ಅಂದರೆ ಅಕ್ಟೋಬರ್ ನಿಂದ ಮಾರ್ಚ್ ತಿಂಗಳುಗಳು. ಈ ಸಮಯದಲ್ಲಿ ಹವಾಮಾನ ಆಹ್ಲಾದಕರವಾಗಿರುತ್ತದೆ ಹಾಗೂ ಪ್ರಯಾಣವೂ ಸುಖಕರವಾಗಿರುತ್ತದೆ. ಈ ತಿಂಗಳುಗಳಲ್ಲಿ ವಿಜಯವಾಡದ ಪ್ರಮುಖ ಹಬ್ಬಗಳಾದ ದಸರಾ ಹಾಗೂ ದೀಪಾವಳಿಗಳನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಪ್ರವಾಸಕ್ಕೆ ಬರುವುದು ಅತ್ಯಂತ ಸೂಕ್ತ. ಅಲ್ಲದೇ ಡೆಕ್ಕನ್ ಹಾಗೂ ಲುಂಬಿನಿ ವಾರ್ಷಿಕ ಉತ್ಸವಗಳೂ ಈ ತಿಂಗಳುಗಳ ಆಸುಪಾಸಿನಲ್ಲೇ ನಡೆಯುತ್ತವೆ. ಆದ್ದರಿಂದ ಈ ಸಮಯದಲ್ಲಿಯೇ ವಿಜಯವಾಡ ಪಟ್ಟಣಕ್ಕೆ ಭೇಟಿ ನೀಡಿ, ಇಲ್ಲಿನ ಆಚರಣೆಗಳ ವೈಭವಕ್ಕೆ ನೀವೂ ಸಾಕ್ಷಿಗಳಾಗಿ !

ಬೇಸಿಗೆಗಾಲ

ವಿಜಯವಾಡಾ ನಗರವು  ಏಪ್ರಿಲ್ ಹಾಗೂ  ಜೂನ್ ತಿಂಗಳುಗಳಲ್ಲಿ ಬೇಸಿಗೆಯ ಅನುಭವವನ್ನು ಪಡೆಯುತ್ತದೆ. ಈ ಸಮಯದಲ್ಲಿ ತಾಪಮಾನವು 20  ಡಿ ಸೆ. ನಿಂದ 47 ಡಿ ಸೆ. ನಷ್ಟು ದಾಖಲಾಗುತ್ತದೆ. ಬೇಸಿಗೆಯ ಹವಾಮಾನವು ಅತ್ಯಂತ ಉಷ್ಣ ಹಾಗೂ ಆರ್ದ್ರತೆಯಿಂದ ಕೂಡಿರುತ್ತದೆ. ಈ ಸಮಯದಲ್ಲಿ ವಿಜಯವಾಡಕ್ಕೆ ಪ್ರಯಾಣ ಕೈಗೊಳ್ಳುವುದು ಸೂಕ್ತವಲ್ಲ.

ಮಳೆಗಾಲ

ವಿಜಯವಾಡದಲ್ಲಿ ಮಳೆಗಾಲವು ಜೂನ್ ತಿಂಗಳಿನಲ್ಲಿ ಆರಂಭವಾಗಿ ಅಕ್ಟೋಬರ್ ತಿಂಗಳವರೆಗೆ ಮುಂದುವರಿಯುತ್ತದೆ. ಈ ಸಮಯದಲ್ಲಿ ಮಳೆಯಿಂದಾಗಿ ಮಾತಾವರಣವು ಶಾಂತ ಹಾಗೂ ಸಹನೀಯವಾಗಿರುತ್ತದೆ. ಈ ವೇಳೆ ಪ್ರವಾಸಕ್ಕಾಗಿ ವಿಜಯವಾಡಕ್ಕೆ ಭೇಟಿ ನೀಡಲೂಬಹುದು.

ಚಳಿಗಾಲ

ವಿಜಯವಾಡಕ್ಕೆ ಪ್ರವಾಸಕ್ಕಾಗಿ ಆಗಮಿಸುವುದಾದರೆ ಚಳಿಗಾಲವು ಅತ್ಯಂತ ಪ್ರಶಸ್ತವಾದ ಸಮಯ. ಈ ಸಮಯದಲ್ಲಿ ತಾಪಮಾನವು 10 ಡಿ ಸೆ. ನಿಂದ 30 ಡಿ ಸೆ. ನಷ್ಟಿರುತ್ತದೆ. ಅಲ್ಲದೇ ಹವಾಮಾನವು ಅತ್ಯಂತ ಪ್ರಶಾಂತ ಹಾಗೂ ಆಹ್ಲಾದಕರವಾಗಿರುತ್ತದೆ.