ವಿದಿಶಾ ಜಿಲ್ಲೆಯ ಸಿರೊಂಜ್ನ ಧರ್ಮಪುರದಲ್ಲಿ ಜೈನ ಚಿತ್ರಗಳನ್ನು ಕಾಣಬಹುದು. ಇವುಗಳಲ್ಲಿ ಬಹುಮುಖ್ಯವಾದದ್ದು 8ನೇ ಜೈನತೀರ್ಥಂಕರನಾದ ಚಂದ್ರನಾಥನ ಚಿತ್ರ. ಈ ಚಿತ್ರವು ಸರಿಸುಮಾರು 2 ಅಡಿ ಎತ್ತರ ಮತ್ತು 1 ಅಡಿಯಷ್ಟು ಅಗಲವಿದೆ. ಇದರ ಮೇಲಿನ ಶಾಸನವು ಕ್ರಿಪೂ 155ಕ್ಕೆ ಸೇರಿದ್ದು. ಭೂಮಿಯಲ್ಲಿ ಅರ್ಧಭಾಗ ಹೂತುಹೋಗಿದ್ದ ಇದನ್ನು ಅಗೆದು ತೆಗೆಯಲಾಗಿದೆ. ಇದನ್ನು ಸ್ಥಳೀಕರು ಕಾಲಿ ತೆಲನ್ ಎಂದು ಕರೆಯುತ್ತಾರೆ. ಇನ್ನೊಂದು ಇಲ್ಲಿ ಸಿಕ್ಕ ಐತಿಹಾಸಿಕ ಮಹತ್ವದ ವಸ್ತುವೆಂದರೆ ಜೈನ ಪವಿತ್ರ ವಸ್ತುವಾದ ನಿಸಿಯ. ಇಲ್ಲೊಂದು ಮುರಿದ ಹಳೆಯ ಮಹಾವೀರನ ವಿಗ್ರಹ ಕೂಡ ಸಿಕ್ಕಿದೆ.


Click it and Unblock the Notifications