ನೀವು ವಾಗಮೋನ್‌ಗೆ ಹೋದರೆ ಚಾರಣ ಮಾಡಲೇಬೇಕು. ವಿವಿಧ ಜಾತಿಯ ಹೂವುಗಳು ಮತ್ತು ಸಸ್ಯಗಳಿಂದಾಗಿ ಹಸಿರು ಹೊದ್ದು ಮಲಗಿದೆ ಈ ತಾಣ. ಅಡ್ಡಾದಿಡ್ಡಿಯಾಗಿ ಹರಿಯುವ ಜಲಪಾತಗಳು ಪ್ರವಾಸಿಗರ ಕಣ್ಮನ ತಣಿಸುತ್ತವೆ. ಇಲ್ಲಿನ ತಂಪಾದ ನೀರಿನ ಅನುಭವ ನಿಮಗಾಗುತ್ತದೆ. ಇಲ್ಲಿನ ಸುಂದರ ಪರಿಸರ ಖಂಡಿತ ನಿಮ್ಮ ಮನಸ್ಸನ್ನು ಚಾರಣದ ಮೂಲಕ ತಣಿಸುತ್ತದೆ. ವಾಗಮೋನ್‌ನ ಯಾವುದೇ ಪ್ರದೇಶದಲ್ಲೂ ನೀವು ಚಾರಣ ಮಾಡಬಹುದು. ಇಲ್ಲಿ ಪ್ಯಾರಾಗ್ಲೈಡಿಂಗ್, ಗುಡ್ಡ ಹತ್ತುವುದು ಮತ್ತು ಕಲ್ಲು ಬಂಡೆ ಏರುವ ಸಾಹಸಕ್ಕೂ ಸೂಕ್ತ ತಾಣ. ವಾಗಮೋನ್‌ನಲ್ಲಿ ಚಾರಣ ಮಾಡುವುದರಿಂದ ನಿಮ್ಮ ಉತ್ಸಾಹವು ಹೆಚ್ಚುತ್ತದೆ ಮತ್ತು ಈ ಸುಂದರ ತಾಣದಲ್ಲಿ ನೀವು ನಿಮ್ಮನ್ನು ತೆರೆದುಕೊಳ್ಳುತ್ತೀರಿ.


Click it and Unblock the Notifications