ಕುರಿಸುಮಾಲಾ ಆಶ್ರಮವು ಕುರಿಸುಮಾಲಾ ಗುಡ್ಡದ ಮೇಲಿದೆ. "ಮೌಂಟೇನ್ ಆಫ್ ದಿ ಹೋಲಿ ಕ್ರಾಸ್" ಎಂದು ಈ ಕುರಿಸುಮಾಲಾ ಗುಡ್ಡವನ್ನು ಕರೆಯಲಾಗುತ್ತದೆ. ಈ ಆಶ್ರಮವು ನಝ್ರಾನಿ ಕ್ಯಾಥೊಲಿಕ್ಸ್ರಿಗೆ ಸಂಬಂಧಿಸಿದ್ದಾದರೂ ಇದು ಗಾಂಧಿ ಸಿದ್ದಾಂತವನ್ನು ಬೆಂಬಲಿಸುವಂಥದ್ದು. ಇಲ್ಲಿಗೆ ಎಲ್ಲಾ ಧರ್ಮದ ಜನರೂ ಬರುತ್ತಾರೆ. ಗುಡ್ ಫ್ರೈಡೇಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಅವಧಿಯಲ್ಲಿ ಮರದ ಕ್ರಾಸ್ಅನ್ನು ಹಿಡಿದುಕೊಂಡು ಭಕ್ತರು ಗುಡ್ಡವನ್ನು ಏರುತ್ತಾರೆ. ಈ ಆಶ್ರಮವು ತನ್ನ ಉದಾರತೆಗೂ ಹೆಸರಾಗಿದೆ. ಪ್ರತಿದಿನ ನೂರಾರು ಜನರಿಗೆ ಊಟ ಉಪಚಾರವನ್ನು ಇಲ್ಲಿ ನಡೆಸಲಾಗುತ್ತಿದೆ.
ಆದರೆ ಇಲ್ಲಿಗೆ ಬರುವ ಭಕ್ತರು ಆಹಾರವನ್ನು ಹಾಳಾಗಿಸುವುದಕ್ಕೆ ಬಿಡುವುದಿಲ್ಲ. ಕುರಿಸುಮಾಲಾ ಆಶ್ರಮದಲ್ಲಿ ಒಂದು ದೊಡ್ಡ ಪ್ರಾರ್ಥನಾ ಹಾಲ್ ಇದೆ. ಭಕ್ತರು ಇಲ್ಲಿ ಬಂದು ಧ್ಯಾನ ಮತ್ತು ಪ್ರಾರ್ಥನೆಯನ್ನು ಮಾಡುತ್ತಾರೆ. ಈ ಮಂದಿರದ ಸಮೀಪದಲ್ಲೇ ಹಲವು ಡೈರಿ ಫಾರ್ಮ್ಗಳಿದ್ದು ಪ್ರತಿದಿನ ಸುಮಾರು 1500 ಲೀಟರಿನಷ್ಟು ಹಾಲನ್ನು ಉತ್ಪಾದಿಸುತ್ತವೆ. ಇಲ್ಲಿ 12 ಸಮಾಧಿಗಳಿವೆ. ಇಲ್ಲಿ ಅತಿ ಎತ್ತರದ ಪ್ರದೇಶವೇ ಪುನರುತ್ಥಾನದ ಉದ್ಯಾನ. ಧಾರ್ಮಿಕ ಭಾವನೆಯ ಹೊರತಾಗಿಯೂ ಈ ಪ್ರದೇಶವು ಉತ್ತಮವಾದ ಪ್ರವಾಸಿ ತಾಣ. ಚಹಾ ತೋಟಗಳು ಮತ್ತು ಕೆರೆಗಳು ಈ ತಾಣವನ್ನು ಇನ್ನಷ್ಟು ಸುಂದರವಾಗಿಸಿದೆ.