ವಾಗಮೋನ್‌ನಲ್ಲಿ ಸೂಸೈಡ್ ಪಾಯಿಂಟ್ ಕೂಡಾ ಇದೆ. ಇದನ್ನು ಮೂನ್‌ಪರ ಎಂದು ಕರೆಯಲಾಗುತ್ತದೆ. ಇದು V ಆಕೃತಿಯಲ್ಲಿದೆ. ವಾಗಮೋನ್‌ನಲ್ಲೇ ಅತ್ಯಂತ ಸುಂದರವಾದ ತಾಣ ಇದು. ಈ ಪ್ರದೇಶದಿಂದ ಆಳವಾದ ಕಣಿವೆಯನ್ನು ನೊಡಬಹುದು. ಈ ಕಣಿವೆಯು ಕೂಪದಂತೆ ಭಾಸವಾಗುತ್ತದೆ. ಸೂಸೈಡ್ ಪಾಯಿಂಟ್‌ಗೆ ಚಾರಣ ಮಾಡುವುದು ಅತ್ಯಂತ ಸಾಹಸದ ಕೆಲಸ. ಇಲ್ಲಿನ ಅತ್ಯದ್ಭುತ ಪರಿಸರ ನಿಮ್ಮನ್ನು ಮೇಲೆ ಹತ್ತುವಂತೆ ಪ್ರೋತ್ಸಾಹಿಸುತ್ತದೆ. ಒಮ್ಮೆ ನೀವು ಬೆಟ್ಟವನ್ನು ಏರಿದ ಮೇಲೆ ಮೇಲೆ ಹತ್ತಿದ ಆಯಾಸವನ್ನೆಲ್ಲಾ ಮರೆಯುತ್ತೀರಿ. ಅಂತಹ ಸುಂದರ ದೃಶ್ಯವನ್ನು ನೀವು ಮೇಲಿನಿಂದ ನೋಡಬಹುದು.


Click it and Unblock the Notifications