ಉತ್ತರಕಾಶಿ ಬಸ್ ನಿಲ್ದಾಣಕ್ಕೆ ಅತ್ಯಂತ ಸಮೀಪದಲ್ಲಿರುವ ಜನಪ್ರಿಯ ಧಾರ್ಮಿಕ ತಾಣ ವಿಶ್ವನಾಥ ದೇವಾಲಯ. ಹಿಂದು ದೇವರಾದ ಶಿವನಿಗೆ ಇದು ಮೀಸಲಾಗಿದೆ. ಇಲ್ಲಿ ಬರುವ ಪ್ರವಾಸಿಗರು ಸದಾ ಮಂತ್ರ ಪಠಿಸುತ್ತಿರುವುದನ್ನು ಗಮನಿಸಬಹುದು. ಇದನ್ನು ರಾಜ ಜ್ಞಾನೇಶ್ವರ ನಿರ್ಮಿಸಿದನೆನ್ನಲಾಗಿದೆ. ಇಲ್ಲಿರುವ ಶಿವನ ತ್ರಿಶೂಲ ಅತ್ಯಂತ ಪ್ರಾಧಾನ್ಯತೆಯನ್ನು ಹೊಂದಿದೆ. ಇದು 8-9 ಇಂಚು ಅಗಲವಾಗಿದ್ದು, 26 ಅಡಿ ಉದ್ದವಾಗಿದೆ. ಇಲ್ಲಿನ ಇನ್ನೊಂದು ಪ್ರಮುಖ ಧಾರ್ಮಿಕ ಕೇಂದ್ರ, ಶಕ್ತಿ ದೇವಾಲಯ (ಸತಿ ದೇವತೆಗೆ ಈ ದೇಗುಲ ಮೀಸಲಾಗಿದೆ) ವಿಶ್ವನಾಥ ದೇವಾಲಯದ ಎದುರಗಡೆಯೇ ದೇವಿಯ ದೇವಾಲಯವೂ ಸ್ಥಾಪಿತವಾಗಿದೆ.


Click it and Unblock the Notifications