ಬೇಸಿಗೆ ಹಾಗೂ ಮಳೆಗಾಲ ಇಲ್ಲಿಗೆ ಪ್ರವಾಸ ಹಮ್ಮಿಕೊಳ್ಳಲು ಯೋಗ್ಯ ಕಾಲ. ಸಾಕಷ್ಟು ಹಬ್ಬಗಳು, ಉತ್ಸವಗಳು ಈ ಸಂದರ್ಭದಲ್ಲಿ ಇಲ್ಲಿ ನಡೆಯುತ್ತಿರುತ್ತವೆ.
(ಏಪ್ರಿಲ್ನಿಂದ ಜೂನ್): ಏಪ್ರಿಲ್ ತಿಂಗಳು ಇಲ್ಲಿ ಬೇಸಿಗೆ ಆರಂಭವಾಗುತ್ತದೆ. ಇದು ಜೂನ್ವರೆಗೂ ಮುಂದುವರಿಯುತ್ತದೆ. ಬೇಸಿಗೆಯಲ್ಲಿ ಉತ್ತರಕಾಶಿಯು ಅತಿ ಹೆಚ್ಚು ಅಂದರೆ 30 ಡಿಗ್ರಿ ಸೆಲ್ಶಿಯಸ್ ಹಾಗೂ ಕಡಿಮೆ ಎಂದರೆ 15 ಡಿಗ್ರಿ ಸೆಲ್ಶಿಯಸ್ ತಾಪಮಾನವನ್ನು ಹೊಂದಿರುತ್ತದೆ.
(ಜುಲೈನಿಂದ ಸೆಪ್ಟೆಂಬರ್): ಮಳೆಗಾಲ ಇಲ್ಲಿ ಜುಲೈ ತಿಂಗಳಲ್ಲಿ ಆರಂಭವಾಗಿ ಸೆಪ್ಟೆಂಬರ್ವರೆಗೂ ಮುಂದುವರಿಯುತ್ತದೆ. ಈ ಸಮಯದಲ್ಲಿ ಇಲ್ಲಿ ಭಾರೀ ಮಳೆ ಸುರಿಯುತ್ತದೆ. ಉತ್ತರಕಾಶಿಯ ಬಹುತೇಕ ಹಬ್ಬಗಳು ಇದೇ ಕಾಲದಲ್ಲಿ ಆಚರಣೆ ಆಗುತ್ತವೆ.
(ಅಕ್ಟೋಬರ್ನಿಂದ ಫೆಬ್ರವರಿ): ಅಕ್ಟೋಬರ್ ತಿಂಗಳಲ್ಲಿ ಆರಂಭವಾಗುವ ಚಳಿಗಾಲ ಫೆಬ್ರವರಿವರೆಗೂ ಮುಂದುವರಿಯುತ್ತದೆ. ಈ ಸಂದರ್ಭದಲ್ಲಿ ಕನಿಷ್ಠ ತಾಪಮಾನ 0 ಡಿಗ್ರಿ ಸೆಲ್ಶಿಯಸ್ ತಲುಪಿದರೆ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಶಿಯಸ್ ಆಗಿರುತ್ತದೆ.