ಸಮುದ್ರ ಮಟ್ಟದಿಂದ ಸುಮಾರು 3048 ಮೀಟರ್ ಎತ್ತರದಲ್ಲಿದೆ ಈ ದಯಾರ ಬುಗ್ಯಾಲ. ಅತ್ಯಾಕರ್ಷಕ ನೈಸರ್ಗಿಕ ಸೌಂದರ್ಯ ವೀಕ್ಷಣೆಗೆ ಇದು ಹೇಳಿ ಮಾಡಿಸಿದ ತಾಣ. ನಿಸರ್ಗ ವೈಭವವನ್ನು ಇಲ್ಲಿ ಕಾಣಬಹುದು. ಹಿಮಾಲಯ ಪರ್ವತದ ಆಕರ್ಷಕ ಛಾಯಾಗ್ರಾಹಿ ನೋಟಗಳು ಹೃನ್ಮನ ಸೆಳೆಯುತ್ತದೆ. ಬತ್ವಾರಿ ಇಲ್ಲಿನ ಪ್ರಮುಖ ಆಕರ್ಷಣೆ. ಇದು ಉತ್ತರಕಾಶಿ-ಗಂಗೋತ್ರಿ ಸಾಗುವ ಮಾರ್ಗದಲ್ಲಿ ಇದೆ. ಇಲ್ಲಿಗೆ ಪ್ರವಾಸಿಗರು ತಲುಪಬೇಕೆಂದರೆ ಬರಶಿ ಹಳ್ಳಿಯಿಂದ ಟ್ರೆಕ್ಕಿಂಗ್ ಹೊರಟು 8 ಕಿ.ಮೀ. ಕ್ರಮಿಸಬೇಕು. ಇಲ್ಲಿಯವರೆಗೆ ಮಾತ್ರ ವಾಹನಗಳು ತಲುಪುತ್ತವೆ.
ಚಳಿಗಾಲದಲ್ಲಿ ಭೇಟಿ ನೀಡುವ ಸ್ಥಳ ಇದಾಗಿದೆ. ಇದು ಸುತ್ತಲಿನ 28 ಚದರ್ ಕಿ.ಮೀ. ವಿಸ್ತಾರದ ತಾಣದ ವಿಹಂಗಮ ನೋಟವನ್ನು ಸವಿಯಲು ಅನುವುಮಾಡಿಕೊಡುತ್ತದೆ. ಹಿಮಾಲಯದ ಅತ್ಯಾಕರ್ಷಕ ನೋಟ ಸವಿಯಲು ಇದು ಹೇಳಿ ಮಾಡಿಸಿದ ತಾಣ. ಇಲ್ಲಿಯೇ ಸಮೀಪದಲ್ಲಿರುವ ಕೆರೆಯ ಸಮೀಪ ಪ್ರವಾಸಿಗರು ಕ್ಯಾಂಪ್ ಹೂಡಲು ಅವಕಾಶ ಇದೆ. ಟ್ರೆಕ್ಕಿಂಗ್ನ್ನು ಡೋಟಿಯಾಲ (ಶುದ್ಧನೀರಿನ ಕೆರೆ)ಗೂ ಹಮ್ಮಿಕೊಳ್ಳಬಹುದು. ಇದು ದಯಾರ ಬುಗ್ಯಾಲದಿಂದ 30 ಕಿ.ಮೀ. ದೂರದಲ್ಲಿದೆ. ಪ್ರವಾಸಿಗರ ಪಾಲಿಗೆ ಇದೊಂದು ಅತ್ಯಾಕರ್ಷಕ ತಾಣ.