ಪೋಕು ದೇವತಾ ದೇವಾಲಯವು ತೋನ್ಸ್ ನದಿ ದಂಡೆ ಮೇಲಿರುವ ನೆಟ್‌ವರ್ ಹಳ್ಳಿಯಲ್ಲಿದೆ. ಈ ನದಿಯು ಯಮುನಾ ನದಿಯ ಅತಿ ದೊಡ್ಡ ಉಪನದಿ ಎಂಬ ಖ್ಯಾತಿಯನ್ನೂ ಹೊಂದಿದೆ. ಇದೇ ಭಾಗದ ಇನ್ನೂ ಎರಡು ಪ್ರಸಿದ್ಧ ದೇವಾಲಯಗಳೆಂದರೆ ಕರ್ಣ ಮಂದಿರ ಹಾಗೂ ದುರ್ಯೋಧನ ಮಂದಿರ. ಇಡೀ ಹಳ್ಳಿಯು ದಟ್ಟವಾದ ಅರಣ್ಯದಿಂದ ಆವೃತ್ತವಾಗಿದೆ. ಪೈನ್, ಚೀರ್, ದೇವದಾರು ಮರಗಳು ಸಮೃದ್ಧವಾಗಿ ಬೆಳೆದುಕೊಂಡಿವೆ. ಇದು ಚಕ್ರತಾ-ಶಿಮ್ಲಾ ಮಾರ್ಗದಲ್ಲಿದ್ದು ಚಕ್ರತಾ ಮೂಲಕ ತಿವೂನಿಗೆ ಬಂದು ಅಲ್ಲಿಂದ ನೆಟ್‌ವರ್ ಹಳ್ಳಿ ತೆರಳಬಹುದಾಗಿದೆ. ನೇರವಾದ ಮಾರ್ಗ ಕಣಿವೆ ಮೂಲಕ ಸಾಗಿದೆ. ಕಬ್ಬಿಣದ ಸೇತುವೆ ನಿರ್ಮಿಸಲಾಗಿದ್ದು, ಅದರ ಮಾರ್ಗವಾಗಿಯೇ ಹಾದು ಹೋಗಬೇಕು. ಇದು ಪೋಕು ದೇವತಾ ದೇವಾಲಯಕ್ಕೆ ಕರೆದೊಯ್ಯುತ್ತದೆ.


Click it and Unblock the Notifications