ಲುಂಗರ್ ಸಿಹೈ ಪಂಗ್ರೈ ಉಖ್ರುಲ್ ಜಿಲ್ಲೆಯಲ್ಲಿರುವ ಉದ್ದವಾದ ಸಮತಟ್ಟು ಬೆಟ್ಟ ಎನ್ನಬಹುದು. ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಇದು ಉತ್ತಮ ಪಿಕ್ನಿಕ್ ಸ್ಥಳವಾಗಿದೆ. ಈ ಬೆಟ್ಟ ಶಿರೈ ಲಿಲ್ಲಿ ಹೂವುಗಳಿಗೆ ಪ್ರಖ್ಯಾತಿಯಾಗಿರುವ ಶಿರೈ ಶಿಖರವನ್ನು ಸೇರುತ್ತದೆ.
ಲುಂಗರ್ ಸಿಹೈ ಪಂಗ್ರೈ ಸಸ್ಯ ಸಮೃದ್ದವಾಗಿದೆ. ವಿವಿಧ ರೀತಿಯ ಹೂವುಗಳು ಮತ್ತು ಹಣ್ಣುಗಳಾದ ಆರ್ಕಿಡ್ ಮತ್ತು ದ್ರಾಕ್ಷಿ, ಫ್ಯಾಶನ್ ಫ್ರುಟ್, ಪೀಚ್, ಸೇಬು, ಪಿಯರ್, ಪ್ಲಮ್ ಅನ್ನು ಬೆಳೆಯಲಾಗುತ್ತದೆ.
ಇಲ್ಲೇ ಕೆಳಗಿರುವ ಸುಂದರವಾದ ಜಲಪಾತ ಈ ಉದ್ಯಾನವನಕ್ಕೆ ಇನ್ನಷ್ಟು ಮೆರಗು ನೀಡುತ್ತದೆ. ಇಲ್ಲಿನ ಸುಂದರತೆಯಿಂದ ಈ ಸ್ಥಳ ಪ್ರವಾಸಿಗರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತದೆ.
'ಸಿಹೈ 'ಎಂಬ ಪದ ಉಖ್ರುಲ್ ನ ಗ್ರಾಮಗಳಾದ ಸಿಹಿ ಖುಲ್ಲೇನ್, ಸಿಹೈ ಖುನೌ ಮತ್ತು ಸಿಹೈ ಖಹಾನೋಪುಂಗ್ ಗೆ ಬಳಸುವ ಸಾಮಾನ್ಯ ಉಲ್ಲೇಖವಾಗಿದೆ.


Click it and Unblock the Notifications