ಇದು ನೈಸರ್ಗಿಕ ಸುಣ್ಣದ ಗುಹೆ,ಪುರಾತತ್ವ ಶಾಸ್ತ್ರಗಳ ಪ್ರಕಾರ ನಂತರ ಇದನ್ನು ಖಂಗ್ಕುಯ್ ಮಂಗ್ಸುರ್ ಎಂದು ಕರೆಯಲಾಯಿತು. ಇದು ಭಾರತದಲ್ಲೇ ಅತ್ಯಂತ ಹಳೆಯ ಪುರಾತತ್ವ ಗುಹೆಯಾಗಿದೆ.ಖಂಗ್ಕುಯ್ ಮಂಗ್ಸುರ್ ಗುಹೆಯು ಉಖ್ರುಲ್ ನಿಂದ 16 ಕಿ ಮೀ ಅಂತರದಲ್ಲಿರುವ ತಂಗ್ಕಲ್ ನಾಗ ಗ್ರಾಮವಾದ ಖಂಗ್ಕುಯ್ ಎಂಬಲ್ಲಿದೆ.
ಭೂತಗಳ ದರ್ಬಾರ್ ಹಾಲ್ ಎಂದೇ ಕರೆಯಲಾದ ದೊಡ್ಡ ಹಾಲ್ ಈ ಗುಹೆಯಲ್ಲಿದೆ. ಗುಹೆಯಲ್ಲಿ ದೆವ್ವಗಳಿವೆ ಎಂದು ನಂಬಲಾಗಿದೆ. ಉತ್ತರ ಭಾಗದಲ್ಲಿರುವ ಹಾಲ್ ದೆವ್ವದ ಮಲಗುವ ಕೊನೆಯಾಗಿದ್ದು ಅಲ್ಲಿ ದೆವ್ವ ತನ್ನ ಇಬ್ಬರು ಹೆಂಡತಿಯೊಂದಿಗೆ ಇರುತ್ತದೆ ಎನ್ನಲಾಗಿದೆ. 2 ಹೆಂಡತಿಯರಿಗೆ ಬೇರೆಬೇರೆ ಕೊಠಡಿಗಳಿದ್ದು ಒಟ್ಟು ಅಲ್ಲಿ 5 ಕೊಠಡಿಗಳನ್ನು ಕಾಣಬಹುದು.
ಪುರಾತತ್ವ ಪರಾವೆಗಳ ಪ್ರಕಾರ, ಈ ಗುಹೆ ಪ್ರಾಚೀನ ಶಿಲಾಯುಗದಿಂದ ಇದೆ ಮತ್ತು ಆ ಕಾಲದ ಭಾಗಗಳೂ ಕಂಡು ಬಂದಿವೆ. 2 ನೇ ಪ್ರಪಂಚ ಯುದ್ಧದಲ್ಲಿ ಈ ಗುಹೆಯನ್ನು ಸ್ಥಳೀಯರು ಉಳಿದುಕೊಳ್ಳಲು ಬಳಸಿದ್ದರು.


Click it and Unblock the Notifications