Search
  • Follow NativePlanet
Share
ಮುಖಪುಟ » ಸ್ಥಳಗಳು » ಉಡುಪಿ » ಆಕರ್ಷಣೆಗಳು » ಪಾಜಕ

ಪಾಜಕ, ಉಡುಪಿ

1

ಪಾಜಕವು ಶ್ರೀ ಮಧ್ವಾಚಾರ್ಯರ ಹುಟ್ಟಿದ ಸ್ಥಳ ಎಂದು ಹೇಳಲಾಗುತ್ತದೆ, ಇವರು ದ್ವೈತ ಸಿದ್ಧಾಂತ ಸಂಸ್ಥಾಪಕರು. ಐತಿಹಾಸಿಕವಾದ ಮಧ್ವಾಚಾರ್ಯರ ಮನೆ ಇಲ್ಲಿನ ಪ್ರಮುಖ ಆಕರ್ಷಣೆ. ಮಾಧ್ವ ಮಂದಿರ ಇನ್ನೊಂದು ಆಕರ್ಷಣೆಯ ಕೇಂದ್ರ. ಇಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ. ವೇದ ಮತ್ತು ಸಂಸ್ಕೃತಕ್ಕೆ ಇದು ಶಾಲೆಯಾಗಿದೆ. ಪರಶುರಾಮನ ದೇಗುಲವೂ ಕೂಡಾ ಇಲ್ಲಿದೆ.ಅನಂತಪದ್ಮನಾಭ ದೇಗುಲ, ಶ್ರೀ ಮಧ್ವಾಚಾರ್ಯರ ಮನೆ ಮತ್ತು ಶ್ರೀ ವಾದಿರಾಜರು ನಿರ್ಮಿಸಿದ ಶ್ರೀ ಮಧ್ವಾಚಾರ್ಯರ ಮೂರ್ತಿ ಇಲ್ಲಿನ ಪ್ರೇಕ್ಷಣೀಯ ಸ್ಥಳ. ಇಲ್ಲಿನ ಬಹುತೇಕ ಎಲ್ಲಾ ಸ್ಥಳಗಳೂ ಕೂಡಾ ಶ್ರೀ ಮಧ್ವಾಚಾರ್ಯರಿಗೇ ಸಂಬಂಧವನ್ನು ಹೊಂದಿದೆ. ಉದಾಹರಣೆಗೆ ಶ್ರೀ ಮಧ್ವಾಚಾರ್ಯರು ನೆಟ್ಟು ಬೆಳೆಸಿದ ಆಲದ ಮರ ಮತ್ತು ಮಧ್ವಾಚಾರ್ಯರು ನೀರನ್ನು ತೆಗೆದುಕೊಳ್ಳಲು ಮಾಡಲಾಗಿದ್ದ ನಾಲ್ಕು ಬಾವಿಗಳು.ಪಾಜಕ ಕ್ಷೇತ್ರವು ಉಡುಪಿಯಿಂದ ಕೇವಲ ೧೩ ಕಿ.ಮೀ ದೂರದಲ್ಲಿ ಆಗ್ನೇಯದಲ್ಲಿದೆ. ಸಮೀಪದ ವಿಮಾನ ನಿಲ್ದಾಣವೆಂದರೆ ಮಂಗಳೂರು ಹಾಗೂ ಸಮೀಪದ ರೈಲ್ವೇ ಸ್ಟೇಷನ್‌ ಎಂದರೆ ಉಡುಪಿಯಾಗಿರುತ್ತದೆ. ಉಡುಪಿಯಿಂದ ಪಾಜಕಕ್ಕೆ ಬಸ್‌ ಸೌಲಭ್ಯವಿದೆ. ಪ್ರವಾಸಿಗರು ಉಡುಪಿಯಲ್ಲಿರುವ ಹೋಟೆಲ್‌ಗಳಲ್ಲಿ ತಂಗಬಹುದು.

One Way
Return
From (Departure City)
To (Destination City)
Depart On
10 Mar,Tue
Return On
11 Mar,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
10 Mar,Tue
Check Out
11 Mar,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
10 Mar,Tue
Return On
11 Mar,Wed