Search
  • Follow NativePlanet
Share
ಮುಖಪುಟ » ಸ್ಥಳಗಳು » ಉಡುಪಿ » ಆಕರ್ಷಣೆಗಳು » ಕೋಟ-ಕೋಟೇಶ್ವರ ದೇವಾಲಯ

ಕೋಟ-ಕೋಟೇಶ್ವರ ದೇವಾಲಯ, ಉಡುಪಿ

0

ಕೋಟೇಶ್ವರ ಹಳ್ಳಿಯು ಉಡುಪಿ ಜಿಲ್ಲೆಯ ಕುಂದಾಪುರದ ಸಮೀಪದಲ್ಲಿ ಇದೆ. ಕೋಟೇಶ್ವರವು ಕುಂದಾಪುರದಿಂದ ಸುಮಾರು 4 ಕಿ.ಮೀ ದೂರದಲ್ಲಿ ಇದೆ. ಕೋಟೇಶ್ವರದಲ್ಲಿನ ಪ್ರಮುಖ ಆಕರ್ಷಣೆಯೆಂದರೆ ಕೋಟಿನಾಥ ಅಥವಾ ಕೋಟಿಲಿಂಗೇಶ್ವರ ದೇವಾಲಯ. ಸುಬ್ರಹ್ಮಣ್ಯ, ಗಣಪತಿ, ಗೋಪಾಲಕೃಷ್ಣ ಮತ್ತು ಜ್ಯೇಷ್ಠ ಲಕ್ಷ್ಮಿ ದೇವಾಲಯಗಳೂ ಸೇರಿದಂತೆ ಇನ್ನೂ ಹಲವು ದೇವಸ್ಥಾನಗಳು ಕೋಟೇಶ್ವರದಲ್ಲಿವೆ.ಕೋಟೇಶ್ವರ ದೇವಸ್ಥಾನದ ಸಮೀಪದಲ್ಲಿ ಒಂದು ದೊಡ್ಡ ಕೆರೆಯಿದೆ. ಹಲವು ಐತಿಹ್ಯಗಳು ದೇವಸ್ಥಾನಕ್ಕೆ ಸಂಬಂಧಿಸಿದಂತೆ ಇದ್ದು, ಅದರಲ್ಲೊಂದು ಈ ದೇಗುಲದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ವಂದೂರು ಕಂಬಳಗದ್ದೆಗೆ ಇಲ್ಲಿಂದ ಸುರಂಗ ಮಾರ್ಗವಿದೆ ಎಂಬುದೂ ಆಗಿದೆ.ಇನ್ನೂ ಹಲವು ಪ್ರಮುಖ ದೇವಸ್ಥಾನಗಳಾದ, ಪಟ್ಟಾಭಿರಾಮಚಂದ್ರ ದೇವಸ್ಥಾನ ಮತ್ತು ಕೋದಂಡರಾಮ ದೇವಸ್ಥಾನ ಕೂಡಾ ಇಲ್ಲಿಗೆ ಸಮೀಪದಲ್ಲಿದೆ. ಪ್ರತೀವರ್ಷ ಇಲ್ಲಿಗೆ ಸಾವಿರಾರು ಭಕ್ತರು ಕರ್ನಾಟಕ ಹಾಗೂ ಸಮೀಪದ ಕೇರಳ ರಾಜ್ಯದಿಂದ ಭೇಟಿ ನೀಡುತ್ತಾರೆ.ಕುಂದಾಪುರದಿಂದ ಈ ಪ್ರದೇಶಕ್ಕೆ ಸೂಕ್ತ ಸಾರಿಗೆ ವ್ಯವಸ್ಥೆ ಇದೆ. ಸಾಕಷ್ಟು ಬಸ್‌ ಸೇವೆ ಕೂಡಾ ಕುಂದಾಪುರದಿಂದ ಕೋಟೇಶ್ವರಕ್ಕೆ ಇದೆ. ಸಮೀಪದ ವಿಮಾನ ನಿಲ್ದಾಣ ಎಂದರೆ ಮಂಗಳೂರು. ಮಂಗಳೂರಿನಲ್ಲಿ ಉತ್ತಮ ವಸತಿ ಸೌಲಭ್ಯವನ್ನು ಪ್ರವಾಸಿಗರು ಪಡೆಯಬಹುದು.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue