ಕೃಷ್ಣ ದೇಗುಲ, ಉಡುಪಿ

ಉಡುಪಿಯ ಕೃಷ್ಣ ದೇಗುಲವು ದಕ್ಷಿಣ ಭಾರತದಲ್ಲೇ ತುಂಬಾ ಪವಿತ್ರವಾದ ದೇಗುಲ. ಕೃಷ್ಣನ ದರ್ಶನವನ್ನು ಪಡೆಯಲು ಸಾವಿರಾರು ಭಕ್ತರು ಇಲ್ಲಿಗೆ ಬರುತ್ತಾರೆ. ಈ ದೇವಸ್ಥಾನದ ಪ್ರಮುಖ ಆಕರ್ಷಣೆಯೆಂದರೆ, ಕನಕನ ಕಿಂಡಿ. ಕಿಂಡಿಯಲ್ಲಿರೊ ಒಂಭತ್ತು ರಂಧ್ರಗಳಿಂದ ಕೃಷ್ಣನ ದರ್ಶನ ಪಡೆಯಬಹುದು. ಕನಕನ ಕಿಂಡಿಯಲ್ಲಿರೊ ನವರಂಧ್ರಗಳಿಂದ ಕೃಷ್ಣನ ದರ್ಶನ ಪಡೆದರೆ ಪುಣ್ಯ ಬರುತ್ತದೆ ಎಂದು ನಂಬಲಾಗಿದೆ.

ಕೃಷ್ಣನಿಗೆ ಮಾಡುವ ಅಲಂಕಾರವು ತುಂಬಾ ಅದ್ಭುತವಾಗಿರುತ್ತದೆ. ಒಂದು ದಿನ ಕೃಷ್ಣನಿಗೆ ಚಿನ್ನದ ಆಭರಣಗಳಿಂದ ಶೃಂಗರಿಸಲಾಗುತ್ತದೆ ಮತ್ತು ಇನ್ನೊಂದು ದಿನ ವಜ್ರದ ಆಭರಣಗಳಿಂದ ಶೃಂಗರಿಸಲಾಗುತ್ತದೆ. ಈ ದೇವಸ್ಥಾನದಲ್ಲಿ ಗರುಡ ಮತ್ತು ಹನುಮಂತನ ಮೂರ್ತಿಗಳೂ ಇದೆ. ಈ ದೇವಸ್ಥಾನವು ಸುಮಾರು 1,500 ವರ್ಷಗಳ ಇತಿಹಾಸವನ್ನು ಹೊಂದಿದೆ.

ಇದರಿಂದಾಗಿ ಭಾರತದಲ್ಲೇ ಇದು ಅತಿ ಹಳೆಯ ದೇವಸ್ಥಾನ ಎಂಬ ಹೆಗ್ಗಳಿಕೆ ಪಡೆದಿದೆ. ರಾಮನವಮಿ ಮತ್ತು ಯುಗಾದಿ ಹಬ್ಬವನ್ನು ಇಲ್ಲಿ ಅತಿ ಸಂಭ್ರಮದಿಂದ ಆಚರಿಸಲಾಗುತ್ತದೆ.ಮುಖ್ಯ ಬಸ್‌ಸ್ಟಾಂಡ್‌ನಿಂದ ಸುಮಾರು 1 ಕಿ.ಮೀ ಪೂರ್ವಕ್ಕೆ ದೇವಸ್ಥಾನವಿದೆ ಮತ್ತು ರೈಲ್ವೇ ಸ್ಟೇಷನ್‌ನಿಂದ ಸುಮಾರು 3 ಕಿ.ಮೀ ಪಶ್ಚಿಮಕ್ಕೆ ಇದೆ. ಬಸ್‌ಸ್ಟ್ಯಾಂಡ್‌ನಿಂದ ಆಟೋಗೆ 10 ರೂ. ಶುಲ್ಕವಾಗಲಿದೆ ಮತ್ತು ರೈಲ್ವೇ ಸ್ಟೇಷನ್‌ನಿಂದ ರೂ. 25 ರೂ ಆಗುತ್ತದೆ. ದರ್ಶನದ ಸಮಯ ಬೆಳಗ್ಗೆ 5 ಗಂಟೆಯಿಂದ ರಾತ್ರಿ 9.30ರವರೆಗೆ.

Please Wait while comments are loading...