Search
  • Follow NativePlanet
Share
ಮುಖಪುಟ » ಸ್ಥಳಗಳು » ಉದೈಪುರ್ » ಆಕರ್ಷಣೆಗಳು » ಸಹೇಲಿಯೋಂಕಿ ಬಾರಿ

ಸಹೇಲಿಯೋಂಕಿ ಬಾರಿ, ಉದೈಪುರ್

1

ಸಹೇಲಿಯೋಂಕಿ ಬಾರಿ ಎಂದರೆ ಮಹಿಳೆಯರ ಉದ್ಯಾನ ಎಂದರ್ಥ. ಇದನ್ನು 18ನೇ ಶತಮಾನದಲ್ಲಿ ರಾಜ ಮನೆತನದ ಮಹಿಳೆಯರಿಗಾಗಿ ಮಹಾರಾಣ ಸಂಗ್ರಾಮ್‌ ಸಿಂಗ್‌ ನಿರ್ಮಿಸಿದ್ದರು. ಈ ಉದ್ಯಾನವನ್ನು ಸ್ವತಃ ರಾಜನೇ ವಿನ್ಯಾಸಗೊಳಿಸಿದ್ದರು ಎಂದು ಹೇಳಲಾಗಿದೆ. ನಂತರ ಇದನ್ನು ತನ್ನ ರಾಣಿಗೆ ಉಡುಗೊರೆಯಾಗಿ ನೀಡಿದ ಎಂದು ಹೇಳಲಾಗಿದೆ. ಫತೇಹ್ ಸಾಗರ ಕೆರೆಯ ದಡದಲ್ಲಿ ಇರುವ ಈ ಉದ್ಯಾನವು ಕಾರಂಜಿಗಳು, ಸುಂದರ ಹಸಿರು ನೆಲ ಮತ್ತು ಮಾರ್ಬಲ್‌ ಕೆತ್ತನೆಯಿಂದ ಜನಪ್ರಿಯವಾಗಿದೆ.

ಈ ಉದ್ಯಾನದ ಪ್ರಮುಖ ಆಕರ್ಷಣೆಯೆಂದರೆ ಕಾರಂಜಿಗಳು. ಇದನ್ನು ಇಂಗ್ಲೆಂಡಿನಿಂದ ಆಮದು ಮಾಡಿಕೊಳ್ಳಲಾಗಿತ್ತು. ಎಲ್ಲಾ ಕಾರಂಜಿಗಳನ್ನೂ ಹಕ್ಕಿಗಳು ತಮ್ಮ ಕೊಕ್ಕಿನಿಂದ ನೀರನ್ನು ಚಿಮ್ಮಿಸುವ ಶೈಲಿಯಲ್ಲಿ ಮಾಡಲಾಗಿದೆ. ಕಾರಂಜಿಯ ಸುತ್ತಲೂ ಕಪ್ಪು ಕಲ್ಲಿನಿಂದ ಆಸನಗಳನ್ನು ಮಾಡಲಾಗಿದೆ. ರಾಜ ಮನೆತನದ ಸಾಮಗ್ರಿಗಳನ್ನು ಪ್ರದರ್ಶಿಸುವ ಸಣ್ಣದೊಂದು ಮ್ಯೂಸಿಯಂ ಕೂಡಾ ಇಲ್ಲಿದೆ. ಮ್ಯೂಸಿಯಂನ ಹೊರತಾಗಿ ಇಲ್ಲೊಂದು ಗುಲಾಬಿ ತೋಟವಿದೆ ಮತ್ತು ಕಮಲ ಕೊಳವೂ ಇದೆ. ಉದ್ಯಾನವು ಜನಸಾಮಾನ್ಯರಿಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
09 Jun,Tue
Return On
10 Jun,Wed
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
09 Jun,Tue
Check Out
10 Jun,Wed
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
09 Jun,Tue
Return On
10 Jun,Wed