ಕುಂಬಳಗಢ ವನ್ಯಧಾಮವು ಉದಯಪುರದಿಂದ ಸುಮಾರು 65 ಕಿ.ಮೀ ದೂರದಲ್ಲಿದೆ. ಉದಯಪುರ-ಪಾಲಿ-ಜೋಧ್‌ಪುರ ರಸ್ತೆಯಲ್ಲಿದ್ದು, ಇಲ್ಲಿ ಕುಂಬಳಗಢ ಕೋಟೆ ಕೂಡಾ ಇದೆ. ಈ ವನ್ಯಧಾಮವು ಸುಮಾರು 578 ಚದರ ಕಿ.ಮೀ ವ್ಯಾಪ್ತಿಯಲ್ಲಿ ಆವರಿಸಿಕೊಂಡಿದೆ. ಈ ಕೋಟೆಯಿಂದಾಗಿ ವನ್ಯಧಾಮಕ್ಕೆ ಈ ಹೆಸರು ಬಂದಿದೆ. ರಾಜಸ್ಮಂದ್, ಉದಯಪುರ ಮತ್ತು ಪಾಲಿ ಜಿಲ್ಲೆಯ ಭಾಗಗಳನ್ನು ಇದು ಒಳಗೊಂಡಿದೆ.
ತೋಳಗಳಿರುವ ರಾಜಸ್ತಾನದ ಏಕೈಕ ವನ್ಯಧಾಮವಿದು. ಕತ್ತೆಕಿರುಗಳು, ನರಿಗಳು, ಚಿರತೆಗಳು, ಕರಡಿಗಳು, ಕಾಡುಬೆಕ್ಕು, ಜಿಂಕೆ, ನೀಲ್ಗಾಯಿಗಳು ಮತ್ತು ಇತರ ಹಲವು ಪ್ರಾಣಿಗಳನ್ನು ಇಲ್ಲಿ ಕಾಣಬಹುದು.
ಬೇಸಿಗೆಕಾಲದಲ್ಲಿ ಪ್ರವಾಸಿಗರು ನೀರಿನ ಹೊಂಡಗಳಲ್ಲಿ ತೋಳಗಳ ಗುಂಪುಗಳನ್ನೇ ನೋಡಬಹುದು. ಈ ವನ್ಯಧಾಮವು ಪಕ್ಷಿಪ್ರಿಯರಿಗೆ ಅತ್ಯಂತ ಇಷ್ಟವಾಗುವ ತಾಣ. ಸಾವಿರಾರು ಹಕ್ಕಿಗಳು ಇಲ್ಲಿ ವಾಸಿಸುತ್ತವೆ. ನೀರಿನ ಮೂಲಗಳ ಸಮೀಪ ಪಾರಿವಾಳಗಳು, ನವಿಲುಗಳು, ಬುಲ್‌ಬುಲ್‌ಗಳು, ಕಿಂಗ್‌ಫಿಷರ್ ಹಕ್ಕಿಗಳನ್ನೂ ಕಾಣಬಹುದು.
ಕುದುರೆ ಸವಾರಿಯು ಈ ಪ್ರದೇಶದಲ್ಲಿ ಖುಷಿ ಕೊಡುವ ಪ್ರಯಾಣ. ನಿಸರ್ಗಪ್ರಿಯರಿಗೆ ಖುಷಿಪಡುವ ಈ ವಿಧಾನಕ್ಕಿಂತ ಉತ್ತಮವಾದುದು ಇನ್ನೊಂದಿಲ್ಲ.


Click it and Unblock the Notifications