Search
  • Follow NativePlanet
Share
ಮುಖಪುಟ » ಸ್ಥಳಗಳು » ಉದೈಪುರ್ » ಆಕರ್ಷಣೆಗಳು » ಕ್ರಿಸ್ಟಲ್‌ ಗ್ಯಾಲರಿ

ಕ್ರಿಸ್ಟಲ್‌ ಗ್ಯಾಲರಿ, ಉದೈಪುರ್

1

ಕ್ರಿಸ್ಟಲ್‌ ಗ್ಯಾಲರಿಯು ಫತೇಹ್‌ ಪ್ರಕಾಶ್‌ ಅರಮನೆಯ ಒಂದು ಭಾಗ. 1994ರಲ್ಲಿ ಈ ಗ್ಯಾಲರಿಯು ಜನಸಾಮಾನ್ಯರಿಗೆ ತೆರೆದುಕೊಂಡಿದೆ. ಈ 129 ವರ್ಷ ಹಳೆಯ ಗ್ಯಾಲರಿಯಲ್ಲಿ ಓಸ್ಲರರ ಕ್ರಿಸ್ಟಲ್‌ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಮಹಾರಾಣ ಸಜ್ಜನ್‌ ಸಿಂಗ್‌ ಇಂಗ್ಲೆಂಡ್‌ನ ಜನಪ್ರಿಯವಾದ ಕ್ರಿಸ್ಟಲ್‌ ಮೇಕರುಗಳಾದ ಎಪ್‌ ಎಂಡ್‌ ಸಿ ಓಸ್ಲರ್ ಕಂಪನಿಯಿಂದ 1877ರಲ್ಲಿ ತರಿಸಿದ್ದರು.

ಗ್ಯಾಲರಿಯಲ್ಲಿ, ಪ್ರವಾಸಿಗರು ಕ್ರಿಸ್ಟಲ್‌ ವಿನ್ಯಾಸಗಳನ್ನು, ಗಾಜಿನ ಟೇಬಲ್‌ಟಾಪ್‌ಗಳನ್ನು, ಸೋಫಾ ಸೆಟ್‌ಗಳನ್ನು, ಅಲಂಕೃತ ಕಾರ್ಪೆಟ್‌ಗಳನ್ನು, ಹಾಸಿಗೆಗಳನ್ನು ಮತ್ತು ಕುರ್ಚಿಗಳನ್ನು ಇಡಲಾಗಿದೆ. ಇದೆಲ್ಲದರ ಹೊರತಾಗಿ ಸುಗಂಧ ದ್ರವ್ಯಗಳು ಮತ್ತು ಜೇನಿನ ಬಾಟಲ್‌ಗಳು, ಕ್ಯಾಂಡಲ್‌ ಸ್ಟ್ಯಾಂಡ್‌ಗಳು ಮತ್ತು ಗ್ಲಾಸ್‌ನಿಂದ ಮಾಡಿದ ಕೋಸ್ಟರ್ಸ್‌ಗಳನ್ನು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ದರ್ಬಾರ್ ಹಾಲ್‌ನಲ್ಲಿ ಉದಯಪುರದ ಹಿಂದಿನ ರಾಜರುಗಳ ಚಿತ್ರಗಳಿವೆ. ಮೊಘಲ್‌ ದೊರೆ ಅಕ್ಬರನ ವಿರುದ್ಧ ಹೋರಾಡಿದ ಮಹಾರಾಣ ಪ್ರತಾಪರನ್ನೂ ಒಳಗೊಂಡು ಇಲ್ಲಿ ಹಲವು ರಾಜರ ಚಿತ್ರಗಳಿವೆ.

ಗ್ಯಾಲರಿಯಲ್ಲಿ ರಾಜರ ಪಾರ್ಟಿಗಳು ಮತ್ತು ಮದುವೆಗಳು ನಡೆಯುತ್ತಿದ್ದವು. ದಿಲ್‌ಕುಶ್‌ ಮಹಲ್‌ ಇರುವುದು ಕ್ರಿಸ್ಟಲ್‌ ಗ್ಯಾಲರಿಯ ಪಕ್ಕದಲ್ಲಿ. ಇದು ಸುಂದರವಾದ ಪೇಂಟಿಂಗ್‌ಗಳಿಗೆ ಪ್ರಸಿದ್ಧ. ಮೋತಿ ಮಹಲ್‌ ಅಥವಾ ಪರ್ಲ್‌ ಪ್ಯಾಲೇಸ್‌ನಲ್ಲಿ ಗಾಜಿನ ಕುಸುರಿ ಕೆಲಸಗಳನ್ನು ನೋಡುವುದೇ ಒಂದು ಸೊಗಸು.

ಚೀನೀ ಮಹಲ್‌ ಈ ಗ್ಯಾಲರಿಯ ಸಮೀಪದಲ್ಲೇ ಇದೆ. ಕೃಷ್ಣ ವಿಲಾಸದಲ್ಲಿ ಪ್ರವಾಸಿಗರು ಸಣ್ಣ ಸಣ್ಣ ಪೇಂಟಿಂಗ್‌ಗಳ ಸಂಗ್ರಹವನ್ನು ನೋಡಬಹುದು. ಇದು ರಾಜರ ಕಾಲದ ಹಬ್ಬಗಳು ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತವೆ. ಹಿಂದಿನ ಮಹಾರಾಣರ ಚಿತ್ರಗಳೂ ಕೂಡಾ ಈ ವಿಲ್ಲಾದಲ್ಲಿದೆ. ಬಾರಿ ಮಹಲ್‌ ಅಥವಾ ಅರಮನೆಯ ಉದ್ಯಾನವು ಗ್ಯಾಲರಿಯ ಸಮೀಪದಲ್ಲಿದೆ. ಈ ಪ್ರದೇಶವು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮತ್ತು ಸಂಜೆ 3 ಗಂಟೆಯಿಂದ ರಾತ್ರಿ 8 ಗಂಟೆಯವರೆಗೂ ತೆರೆದಿರುತ್ತದೆ.

One Way
Return
From (Departure City)
To (Destination City)
Depart On
25 Apr,Sat
Return On
26 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Sat
Check Out
26 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Sat
Return On
26 Apr,Sun