ಆಹಾರ್ ಆರ್ಕಿಯಲಾಜಿಕಲ್ ಮ್ಯೂಸಿಯಂ, ಉದಯಪುರದಿಂದ ಸುಮಾರು 3 ಕಿ.ಮೀ ದೂರದಲ್ಲಿದೆ. 10ನೇ ಶತಮಾನದ ಪುರಾತನ ಸಾಮಗ್ರಿಗಳನ್ನು ಇಲ್ಲಿ ಸಂರಕ್ಷಿಸಿಡಲಾಗಿದೆ. ಮಣ್ಣಿನ ಕುಡಿಕೆಗಳು, ಕಬ್ಬಿಣ ಸಾಮಗ್ರಿಗಳು ಮತ್ತು ಇತರ ಕಲಾಕೃತಿಗಳನ್ನು ಈ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿದೆ.
1700 ಬಿ.ಸಿ ಕಾಲದ ಕೆಲವು ವಸ್ತುಗಳು, ವಿಷ್ಣು ನಾಗ್ ನಾಥನ್‌ರ ಒಂದು ಮೂರ್ತಿ ಮತ್ತು 10ನೇ ಶತಮಾನದ ಬುದ್ಧನ ಮೂರ್ತಿಯು ಇಲ್ಲಿನ ಪ್ರಮುಕ ಆಕರ್ಷಣೆ. ನಾಲ್ಕು ಸಾವಿರ ವರ್ಷಗಳ ಹಿಂದಿನ ಪಟ್ಟಣವಾದ ಧೂಲ್‌ಕೋಟ್‌ನಿಂದ ಉತ್ಖನನ ಮಾಡಿದ ಸಂಗತಿಗಳನ್ನೂ ಇಲ್ಲಿ ಪ್ರದರ್ಶನಕ್ಕಿಡಲಾಗಿದೆ.


Click it and Unblock the Notifications