Search
  • Follow NativePlanet
Share
» »ಯೇರ್ಕಾಡ್ ಎಂಬ ಸೊಗಸಾದ ಗಿರಿಧಾಮದಲ್ಲಿ...

ಯೇರ್ಕಾಡ್ ಎಂಬ ಸೊಗಸಾದ ಗಿರಿಧಾಮದಲ್ಲಿ...

By Vijay

ಬೇಸಿಗೆ ಬಂತೆಂದರೆ ಸಾಕು ನಮ್ಮೆಲ್ಲರಿಗೂ ನೆನಪಾಗುವುದು ತಂಪಾದ ಪ್ರದೇಶಕ್ಕೊಮ್ಮೆ ಸುತ್ತಾಡಿಬರುವುದು. ಮಕ್ಕಳಿಗಂತೂ ರಜಾ ಸಮಯವಾಗಿರುವುದರಿಂದ ಪ್ರವಾಸ ಯೋಜನೆಗಳಂತೂ ಹೆಚ್ಚು ಕಮ್ಮಿ ಗ್ಯಾರಂಟಿಯಾಗಿರುತ್ತದೆ. ಸಾಮಾನ್ಯವಾಗಿ ಬೇಸಿಗೆಯ ಸಮಯದಲ್ಲಿ ಪ್ರವಾಸ ಮಾಡಲು ಎಲ್ಲರೂ ಇಷ್ಟಪಡುವ ತಾಣವೆಂದರೆ ಗಿರಿಧಾಮಗಳು. ಸಮುದ್ರ ಮಟ್ಟದಿಂದ ಸಾವಿರ ಸಾವಿರ ಮೀಟರ್ ಗಳಷ್ಟು ಎತ್ತರದಲ್ಲಿರುವ ಈ ಗಿರಿಧಾಮಗಳು ಸ್ವಾಭಾವಿಕವಾಗಿ ನೈಸರ್ಗಿಕ ವನಸಿರಿಯಿಂದ ಸಂಪದ್ಭರಿತವಾಗಿದ್ದು ಮೈಮನಗಳಿಗೆ ಮುದ ನೀಡುವಂತಹ ಹಿತಕರವಾದ ವಾತಾವರಣವನ್ನು ಹೊಂದಿರುತ್ತವೆ. ಬೇಸಿಗೆಯಲ್ಲಿ ತಾಪಮಾನವು ಹೆಚ್ಚಾಗುವುದರಿಂದ ಮನುಷ್ಯ ತಂಪು ಪ್ರದೇಶಗಳನ್ನು ಅರಸುತ್ತ ಗಿರಿಧಾಮಗಳಿಗೆ ಭೇಟಿ ನೀಡುವುದು ಸಾಮಾನ್ಯ.

ಕರ್ನಾಟಕದಲ್ಲಿ ಹಲವು ಸುಮಧುರ ಗಿರಿಧಾಮಗಳಿವೆ. ರಾಜಧಾನಿ ಬೆಂಗಳೂರು ನಗರವಾಸಿಗಳು ಹಾಗು ರಾಜ್ಯದ ಇತರೆ ಪಟ್ಟಣವಾಸಿಗಳು ಹೆಚ್ಚಾಗಿ ಹೋಗಬಯಸುವ ಗಿರಿಧಾಮಗಳೆಂದರೆ ಕೊಡಗು, ಮುನ್ನಾರ್, ಕೊಡೈಕೆನಲ್, ಊಟಿ, ಅಲೆಪಿ, ತೆಕಡಿ, ಚಿಕ್ಕಮಗಳೂರು, ಆಗುಂಬೆ, ಕುದುರೆಮುಖ, ಕೆಮ್ಮಣ್ಣುಗುಂಡಿ ಮುಂತಾದವುಗಳು. ಆದರೆ ಇವುಗಳಷ್ಟೆ ಸುಂದರವಾದ, ಅಷ್ಟೊಂದಾಗಿ ಹೆಸರು ಕೇಳಲ್ಪಡದ ಬೆಂಗಳೂರಿನಿಂದ ಕೇವಲ 228 ಕಿ.ಮೀ ದೂರವಿರುವ ಒಂದು ಚೊಕ್ಕವಾದ ಗಿರಿಧಾಮದ ಹೆಸರು 'ಯೇರ್ಕಾಡ್'. ಈ ಗಿರಿಧಾಮವಿರುವುದು ತಮಿಳುನಾಡು ರಾಜ್ಯದಲ್ಲಿರುವ ಸೇಲಂ ಜಿಲ್ಲೆಯಲ್ಲಿ.

ಯೇರ್ಕಾಡ್:

ಯೇರ್ಕಾಡ್:

ಪೂರ್ವ ಘಟ್ಟಗಳ ಶಿವರೋಯಿ (ತಮಿಳಿನಲ್ಲಿ ಶೆರ್ವರಾಯನ್) ಗಿರಿ ಶ್ರೇಣಿಗಳಲ್ಲಿ ನೆಲೆಸಿರುವ ಈ ಗಿರಿಧಾಮವು ಸಮುದ್ರ ಮಟ್ಟದಿಂದ ಸುಮಾರು 1515 ಮೀ (4970 ಅಡಿಗಳು) ಗಳಷ್ಟು ಎತ್ತರದಲ್ಲಿದೆ. ಈ ಪ್ರವಾಸಿ ವಿಶೇಷತೆಯ ಗಿರಿಧಾಮದ ಅತಿ ಎತ್ತರದ ಸ್ಥಳವೆಂದರೆ ಶೆರ್ವರಾಯನ ದೇವಸ್ಥಾನ.

ಚಿತ್ರಕೃಪೆ: varun suresh

ಯೇರ್ಕಾಡ್:

ಯೇರ್ಕಾಡ್:

ಸಹಸ್ರಾರು ಗಿಡ ಮರಗಳಿಂದ ತುಂಬಿ ಹೋದ ಸ್ಥಳ ಇದಾಗಿದ್ದು ಸುಂದರವಾದ ಕೆರೆಯಿಂದ ಕಂಗೊಳಿಸುವುದರಿಂದ ಇದಕ್ಕೆ ಯೇರ್ಕಾಡ್ ಎಂಬ ಹೆಸರು ಬಂದಿದೆ ಎನ್ನಲಾಗಿದೆ. "ದಕ್ಷಿಣದ ರತ್ನ" ಎಂದು ಜನಜನಿತವಾಗಿರುವ ಈ ಗಿರಿಧಾಮ ಪಟ್ಟಣವು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 28 ರ ಮೂಲಕ ಸೇಲಂನೊಂದಿಗೆ ಸಂಪರ್ಕ ಹೊಂದಿದೆ.

ಚಿತ್ರಕೃಪೆ: Mithun Kundu

ಯೇರ್ಕಾಡ್:

ಯೇರ್ಕಾಡ್:

ಈ ಸೊಗಸಾದ ಗಿರಿಧಾಮ ಪಟ್ಟಣದಲ್ಲಿ ವಾತಾವರಣದ ತಾಪಮಾನವು ಎಂದಿಗೂ 29 ಡಿಗ್ರಿ ಸೆಲ್ಶಿಯಸ್ ದಾಟುವುದಿಲ್ಲ ಹಾಗು 13 ಸೆಲ್ಶಿಯಸ್ ಕೆಳಗೆ ಇಳಿಯುವುದಿಲ್ಲ. ಆದುದರಿಂದ ಇಲ್ಲಿ ಹೆಚ್ಚಾಗಿ ಆರೇಂಜ್, ಪೀರ್, ಹಲಸು, ಬಾಳೆ ಹಣ್ಣುಗಳ ಜೊತೆ ಕಾಫಿಯನ್ನೂ ಸಹ ಬೆಳೆಯಲಾಗುತ್ತದೆ.

ಚಿತ್ರಕೃಪೆ: Jai Kumara Yesappa

ಯೇರ್ಕಾಡ್:

ಯೇರ್ಕಾಡ್:

ಪ್ರಾಕೃತಿಕ ಸೌಂದರ್ಯದಿಂದ ಜಗಮಗಿಸುವ ಈ ಗಿರಿಧಾಮವು ಅದ್ಭುತ ದೃಶ್ಯಾವಳಿಗಳನ್ನು ಒಳಗೊಂಡಿದ್ದು ಎಂದಿಗೂ ಮರೆಯಲಾಗದಂತಹ ಅದ್ಭುತ ಆನಂದವನ್ನು ಕರುಣಿಸುತ್ತದೆ.

ಚಿತ್ರಕೃಪೆ: Aruna

ಯೇರ್ಕಾಡ್:

ಯೇರ್ಕಾಡ್:

ರಕ್ಷಿತ ಅರಣ್ಯವನ್ನು ಒಳಗೊಂಡು ಯೇರ್ಕಾಡ್ ಒಟ್ಟು 382.67 ಚ.ಕಿಮೀ ವಿಸ್ತೀರ್ಣದಲ್ಲಿ ಹರಡಿದೆ. ಇಲ್ಲಿ ಚಾರಣ ಮಾಡುವುದು ಒಂದು ಅಮೋಘ ಅನುಭವವಾಗಿದೆ.

ಚಿತ್ರಕೃಪೆ: Vvijayakumar

ಯೇರ್ಕಾಡ್:

ಯೇರ್ಕಾಡ್:

ಗಿರಿಧಾಮದ ಕೇಂದ್ರ ಭಾಗದಲ್ಲಿ ಸುಂದರವಾದ ಕೆರೆಯಿದ್ದು ಸುತ್ತಲೂ ಕಾಡಿರುವುದರಿಂದ ಇದಕ್ಕೆ ಯೇರ್ಕಾಡ್ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ಇನ್ನೊಂದು ನಂಬಿಕೆಯ ಪ್ರಕಾರ, ಏಳ್ ಎಂದರೆ ತಮಿಳಿನಲ್ಲಿ ಏಳು ಎಂದಾಗುತ್ತದೆ. ಏಳು ಕಾಡುಗಳಿಂದ ಇದಕ್ಕೆ ಯೇರ್ಕಾಡ್ ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ.

ಚಿತ್ರಕೃಪೆ: Mithun Kundu

ಯೇರ್ಕಾಡ್:

ಯೇರ್ಕಾಡ್:

ಯೇರ್ಕಾಡ್ ಕೆರೆಯಿಂದ ಐದು ಕಿ.ಮೀ ದೂರದಲ್ಲಿರುವ ಸೇರ್ವರಾಯನ್ ಗಿರಿಗಳಲ್ಲಿ ಶಿಲಾಯುಗಕ್ಕೆ ಸಂಬಂಧಿಸಿದ ಕೆಲವು ವಸ್ತುಗಳು ಪತ್ತೆಯಾಗಿರುವುದರಿಂದ ಪುರಾತತ್ವ ಶಾಸ್ತ್ರಜ್ಞರಿಗೂ ಇದೊಂದು ಆಸಕ್ತಿಕರ ತಾಣವಾಗಿದೆ.

ಚಿತ್ರಕೃಪೆ: PeriasamySakthivel

ಯೇರ್ಕಾಡ್:

ಯೇರ್ಕಾಡ್:

ಮದ್ರಾಸ್ ಪ್ರೆಸಿಡೆನ್ಸಿ ಸಮಯದಲ್ಲಿ ಸೇಲಂ ಜಿಲ್ಲೆಯ ಸ್ಕಾಟ್ ಲ್ಯಾಂಡ್ ಮೂಲದ ಕಲೆಕ್ಟರ್ ಆಗಿದ್ದ ಡೆವಿಡ್ ಕಾಕ್ ಬರ್ನ್ ಎಂಬುವವರನ್ನು ಯೇರ್ಕಾಡಿನ ಪಿತಾಮಹ ಎಂದು ಕರೆಯಲಾಗುತ್ತದೆ. ಏಕೆಂದರೆ ಇವರು ಈ ಒಂದು ಪ್ರದೇಶವನ್ನು ಅಭಿವೃದ್ಧಿ ಪಡಿಸಿ ಪೀರ್ಸ್, ಸೇಬು, ಕಾಫಿ ಬೆಳೆಗಳನ್ನು ಪರಿಚಯಿಸಿದ್ದರು.

ಚಿತ್ರಕೃಪೆ: Mithun Kundu

ಯೇರ್ಕಾಡ್:

ಯೇರ್ಕಾಡ್:

ಸಾಂಬಾರು ಪದಾರ್ಥವಾದ ದಾಲ್ಚಿನಿ (Cinnamon) ಯನ್ನು ರಿಚರ್ಡ್‍ಸನ್ ಎಂಬುವವರು ಈ ಪ್ರದೇಶದಲ್ಲಿ ಸುಮಾರು 1840 ಸಮಯದಲ್ಲಿ ಇಲ್ಲಿ ಪ್ರಪ್ರಥಮವಾಗಿ ಪರಿಚಯಿಸಿದ್ದರು.

ಚಿತ್ರಕೃಪೆ: Kurumban

ಯೇರ್ಕಾಡ್:

ಯೇರ್ಕಾಡ್:

ರಾಷ್ಟ್ರೀಯ ಆರ್ಕಿಡೇರಿಯಮ್ ಹಾಗು ಬೊಟಾನಿಕಲ್ ಉದ್ಯಾನಗಳನ್ನು ಯೇರ್ಕಾಡಿನಲ್ಲಿ ಕಾಣಬಹುದು. ಈ ಬೊಟಾನಿಕಲ್ ಉದ್ಯಾನವು ದಕ್ಷಿಣ ವಲಯದ ಬೊಟಾನಿಕಲ್ ಸರ್ವೆ ಆಫ್ ಇಂಡಿಯಾದಿಂದ ನಿರ್ವಹಿಸಲ್ಪಡುತ್ತದೆ.

ಚಿತ್ರಕೃಪೆ: Pradeepraj

ಯೇರ್ಕಾಡ್:

ಯೇರ್ಕಾಡ್:

18.4 ಹೆಕ್ಟೇರ್ ಪ್ರದೇಶದಲ್ಲಿ ವಿಶಾಲವಾಗಿ ಹರಡಿರುವ ಆರ್ಕಿಡೇರಿಯಮ್ ನಲ್ಲಿ 3000 ಗಿಡಗಳು, 1800 ಬಳ್ಳಿಗಳನ್ನು ಕಾಣಬಹುದು. ಕೀಟಭಕ್ಷಕ ಪಿಚರ್ ಸಸ್ಯ ಈ ಬೊಟಾನಿಕಲ್ ಉದ್ಯಾನದ ಪ್ರವಾಸಿ ಆಕರ್ಷಣೆಯಾಗಿದೆ.

ಚಿತ್ರಕೃಪೆ: Thangaraj Kumaravel

ಯೇರ್ಕಾಡ್:

ಯೇರ್ಕಾಡ್:

ಇಲ್ಲಿನ ನೈಸರ್ಗಿಕ ಕಾಡುಗಳಲ್ಲಿ ಈ ಪ್ರದೇಶಕ್ಕಷ್ಟೆ ಸೀಮಿತವಾದ ಕೆಲವು ಬಗೆಯ ಸಸ್ಯ ರಾಶಿಗಳನ್ನು ಕಾಣಬಹುದು. ಪ್ರಮುಖ ಪ್ರವಾಸಿ ಆಕರ್ಷಣೆಯಾದ ಯೇರ್ಕಾಡ್ ಕೆರೆ ನೋಡಲು ಮನಮೋಹಕವಾಗಿದ್ದು, ಆನಂದಮಯ ದೋಣಿ ಸವಾರಿಯನ್ನು ಅನುಭವಿಸಬಹುದು.

ಚಿತ್ರಕೃಪೆ: Mithun Kundu

ಯೇರ್ಕಾಡ್:

ಯೇರ್ಕಾಡ್:

ಇಲ್ಲಿರುವ ಮತ್ತೊಂದು ಜನಪ್ರಿಯ ಸ್ಥಳ ಲೇಡಿ ಸ್ ಸೀಟ್. ಇಲ್ಲಿ ದೂರದರ್ಶಕವೊಂದನ್ನು ಅಳವಡಿಸಲಾಗಿದ್ದು, ಈ ಗಿರಿಧಾಮದ ಸುಂದರ ದೃಶ್ಯಾವಳಿಗಳ ವಿಹಂಗಮ ನೋಟವನ್ನು ಇದರಲ್ಲಿ ಕಾಣಬಹುದು.

ಚಿತ್ರಕೃಪೆ: Mandayamr

ಯೇರ್ಕಾಡ್:

ಯೇರ್ಕಾಡ್:

ಈ ಗಿರಿಧಾಮದ ಎತ್ತರದ ಸ್ಥಳವಾದ ಸೇರ್ವರಾಯನ್ ಬೆಟ್ಟದಲ್ಲಿ ನೆಲೆಸಿದೆ ಸೇರ್ವರಾಯನ ದೇವಸ್ಥಾನ. ಪ್ರತಿ ವರ್ಷ ಮೇ ತಿಂಗಳಿನಲ್ಲಿ ಅದ್ದೂರಿಯಾಗಿ ಉತ್ಸವವನ್ನು ಇಲ್ಲಿ ಆಚರಿಸಲಾಗುತ್ತದೆ.

ಚಿತ್ರಕೃಪೆ: Tamal Das

ಯೇರ್ಕಾಡ್:

ಯೇರ್ಕಾಡ್:

ಯೇರ್ಕಾಡ್ ಭೇಟಿ ನೀಡಿದಾಗ ನೋಡಬಹುದಾದ ಮತ್ತೊಂದು ಜನಪ್ರಿಯ ಆಕರ್ಷಣೆಯೆಂದರೆ ಕಿಳಿಯೂರ್ ನೀರಿನ ಜಲಪಾತ. 90 ಅಡಿಗಳಷ್ಟು ಎತ್ತರದಿಂದ ಧುಮುಕುವ ಈ ಜಲಪಾತ ಎಂಥವರನ್ನು ಮೈಮರೆಯುವಂತೆ ಮಾಡುತ್ತದೆ.

ಚಿತ್ರಕೃಪೆ: Antkriz

ಯೇರ್ಕಾಡ್:

ಯೇರ್ಕಾಡ್:

ಯೇರ್ಕಾಡ್ ಸೇಲಂ ನಗರದಿಂದ ಕೇವಲ 36 ಕಿ.ಮೀ ಅಂತರದಲ್ಲಿದೆ. ಸೇಲಂ ಪಟ್ಟಣವು ಚೆನ್ನೈ ಹಾಗು ಬೆಂಗಳೂರಿನಂತಹ ಪ್ರಮುಖ ನಗರಗಳಿಗೆ ಉತ್ತಮವಾದ ರಸ್ತೆ ಹಾಗು ರೈಲು ಸಂಪರ್ಕವನ್ನು ಹೊಂದಿದೆ.

ಚಿತ್ರಕೃಪೆ: Santhoshj

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+