Search
  • Follow NativePlanet
Share
» »ಇದು ಯಮಧರ್ಮರಾಜನ ದೇವಾಲಯ..!

ಇದು ಯಮಧರ್ಮರಾಜನ ದೇವಾಲಯ..!

ನಮ್ಮ ಭಾರತ ದೇಶದಲ್ಲಿ ಎಲ್ಲಾ ಮೂರು ಕೋಟಿ ದೇವರಿಗೂ ದೇವಾಲಗಳಿವೆ. ಆ ದೇವತೆಗಳಿಗೆ ಅದರದೇ ಆದ ಮಹತ್ವಗಳಿವೆ. ಯಮಧರ್ಮರಾಜನು ಮೃತ್ಯುವಿನ ದೇವರಾಗಿರುವುದರಿಂದ ಆತನನ್ನು ಪೂಜೆಯನ್ನು ಮಾಡಲು ಭಯ ಪಡುತ್ತಾರೆ. ಆತನನ್ನು ಪೂಜೆ ಮಾಡುವುದಿರಲಿ ಆತನ ಹೆಸರನ

ನಮ್ಮ ಭಾರತ ದೇಶದಲ್ಲಿ ಎಲ್ಲಾ ಮೂರು ಕೋಟಿ ದೇವರಿಗೂ ದೇವಾಲಗಳಿವೆ. ಆ ದೇವತೆಗಳಿಗೆ ಅದರದೇ ಆದ ಮಹತ್ವಗಳಿವೆ. ಯಮಧರ್ಮರಾಜನು ಮೃತ್ಯುವಿನ ದೇವರಾಗಿರುವುದರಿಂದ ಆತನನ್ನು ಪೂಜೆಯನ್ನು ಮಾಡಲು ಭಯ ಪಡುತ್ತಾರೆ. ಆತನನ್ನು ಪೂಜೆ ಮಾಡುವುದಿರಲಿ ಆತನ ಹೆಸರನ್ನು ನೆನೆಸಿಕೊಳ್ಳುವುದಕ್ಕೂ ಜನರು ಭಯ ಪಡುತ್ತಾರೆ. ಹಾಗೆ ನೋಡಿದರೆ ನಮ್ಮ ಭಾರತ ದೇಶದಲ್ಲಿ ಯಮಧರ್ಮ ರಾಜನಿಗೆ ಮುಡಿಪಾದ ದೇವಾಲಯಗಳು ಇರುವುದು ಕಡಿಮೆ. ಹಾಗಾದರೆ ಇಲ್ಲೊಂದು ಯಮಧರ್ಮರಾಜನಿಗೆ ಸಂಬಂಧ ಪಟ್ಟ ಒಂದು ಮಹಿಮಾನ್ವಿತವಾದ ಒಂದು ದೇವಾಲಯವಿದೆ. ಆ ದೇವಾಲಯ ಯಾವುದು? ಆ ದೇವಾಲಯದ ಮಹಿಮೆ ಏನು? ಎಂಬ ಹಲವಾರು ಪ್ರೆಶ್ನೆಗೆ ಉತ್ತರ ಲೇಖನದ ಮೂಲಕ ಸಂಕ್ಷಿಪ್ತವಾಗಿ ತಿಳಿಯೋಣ.

ಇದು ಯಮಧರ್ಮರಾಜನ ದೇವಾಲಯ..!

ಇದು ಯಮಧರ್ಮರಾಜನ ದೇವಾಲಯ..!

ಭಾರತದಲ್ಲಿ ಹಿಂದು ಧರ್ಮದ ಪ್ರಕಾರ ಎಷ್ಟೋ ಅನೇಕ ಪವಾಡಗಳನ್ನು ಮಾಡುವ ನೂರಾರು ದೇವಾಲಯಗಳಿವೆ. ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ, ವಿವಾಹ ಭಾಗ್ಯ, ಆರೋಗ್ಯ ಇನ್ನು ಅನೇಕ ಸಮಸ್ಯೆಗಳನ್ನು ಪರಿಹಾರ ಮಾಡುವ ಮಹಿಮಾನ್ವಿತವಾದ ದೇವಾಲಯಗಳು ಇವೆ. ಇವೆಲ್ಲಾ ಅವರವರ ಭಕ್ತಿಗೆ ಬಿಟ್ಟಿದ್ದು.

Biswarup Ganguly


ಇದು ಯಮಧರ್ಮರಾಜನ ದೇವಾಲಯ..!

ಇದು ಯಮಧರ್ಮರಾಜನ ದೇವಾಲಯ..!

ಇಲ್ಲೊಂದು ವಿಸ್ಮಯಕಾರಿಯಾದ ದೇವಾಲಯವಿದೆ. ಇಲ್ಲಿ ಮೃತ್ಯು ದೇವತೆಯನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಇತನನ್ನು ಹಿಂದೂ ಪುರಾಣದಲ್ಲಿ ಧರ್ಮ ದೇವತೆ ಎಂದು ಕರೆಯುತ್ತಾರೆ ಹಾಗು ಆರಾಧಿಸಲಾಗುತ್ತದೆ. ಆ ದೇವಾಲಯವನ್ನು ಧರ್ಮರಾಜ ಮಂದಿರ ಎಂದೇ ಹೆಸರುವಾಸಿಯಾಗಿದೆ.

Biswarup Ganguly

ಇದು ಯಮಧರ್ಮರಾಜನ ದೇವಾಲಯ..!

ಇದು ಯಮಧರ್ಮರಾಜನ ದೇವಾಲಯ..!

ಈ ದೇವಾಲಯವನ್ನು ಸುಮಾರು 300 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಮಹಿಮಾನ್ವಿತವಾದ ದೇವಾಲಯವು ಶಿಬಪುರದ ಧರ್ಮತಲಾ ಎಂಬ ಸ್ಥಳದಲ್ಲಿದೆ. ಇದು ಪಶ್ಚಿಮ ಬಂಗಾಲದಲ್ಲಿದ್ದು, ಅತ್ಯಂತ ಪ್ರಸಿದ್ಧವಾದ ದೇವಾಲಯವೇ ಆಗಿದೆ ಧರ್ಮತಲಾ ಎಂಬ ಹೆಸರು ಕೂಡ ಈ ಧರ್ಮರಾಜನ ದೇವಾಲಯದಿಂದಲೇ ಬಂದುದಾಗಿದೆ.

ಇದು ಯಮಧರ್ಮರಾಜನ ದೇವಾಲಯ..!

ಇದು ಯಮಧರ್ಮರಾಜನ ದೇವಾಲಯ..!

ಪ್ರಸ್ತುತ ದೇವಾಲಯವಿರುವ ಬೀದಿಯನ್ನು ಲೆನಿನ್ ಸರನ ಎಂಬ ಹೆಸರನ್ನು ಪಡೆದಿದ್ದಿರೂ ಕೂಡ ಜನಪ್ರಿಯವಾಗಿ ಧರ್ಮತಲಾ ಎಂಬ ಹೆಸರಿನಿಂದಲೇ ಗುರುತಿಸಲ್ಪಡುತ್ತಿದೆ. ಸ್ಥಳೀಯ ಇತಿಹಾಸಕಾರರ ಪ್ರಕಾರ, ಈ ದೇವಾಲಯದಲ್ಲಿರುವ ಮೂಲ ವಿಗ್ರಹವು ಅರಳುತ್ತಿರುವ ಕಮಲದ ಹೂವಿನ ಮೇಲೆ ನಿಂತಿರುವ ವಿಷ್ಣುವಿನ ವಿಗ್ರಹವೇ ಆಗಿದೆ.

ಇದು ಯಮಧರ್ಮರಾಜನ ದೇವಾಲಯ..!

ಇದು ಯಮಧರ್ಮರಾಜನ ದೇವಾಲಯ..!

ಈ ದೇವಾಲಯವನ್ನು ರಾಯ್ ಚೌಧುರಿ ಕುಟುಂಬದವರು ನಿರ್ಮಾಣ ಮಾಡಿದರು ಎಂದು ಹೇಳಲಾಗಿದೆ. ಆದರೆ ಇಂದು ಈ ದೇವಾಲಯವು ಯಮಧರ್ಮರಾಜನ ಮಂದಿರವಾಗಿಯೇ ಹೆಚ್ಚು ಪ್ರಸಿದ್ಧವಾಗಿದೆ. ಈ ದೇವಾಲಯದಲ್ಲಿನ ಸ್ವಾಮಿಯು ಸಕಲ ರೋಗಗಳನ್ನು ಪರಿಹಾರ ಮಾಡುತ್ತಾರೆ ಎಂದು ನಂಬಲಾಗಿದೆ.

ಇದು ಯಮಧರ್ಮರಾಜನ ದೇವಾಲಯ..!

ಇದು ಯಮಧರ್ಮರಾಜನ ದೇವಾಲಯ..!

ಯಾರಾದರೂ ತಮ್ಮ ಅಂಗವೈಕಲ್ಯತೆಯಿಂದ ನರಳುತ್ತಿರುತ್ತಾರೆಯೋ ಅವರಿಗೆ ಇಲ್ಲಿನ ಸ್ವಾಮಿಯು ಪರಿಹಾರ ಮಾಡುತ್ತಾನೆ ಎಂದು ನಂಬಲಾಗಿದೆ. ಇಲ್ಲಿ ಮುಖ್ಯವಾಗಿ ದೇವರ ವಿಗ್ರಹಗಳ ಜೊತೆ ಜೊತೆಗೆ ಕುದುರೆಯ ವಿಗ್ರಹಗಳಿದ್ದು ಅದನ್ನು ಕೂಡ ಭಕ್ತಿಯಿಂದ ಪೂಜಿಸುತ್ತಾರೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+