Search
  • Follow NativePlanet
Share
» »ಲೈಫ್‌ನಲ್ಲಿ ಒಮ್ಮೆಯಾದ್ರೂ ಬೆಂಗ್ಳೂರಿಗೆ ಹೋಗಲೇ ಬೇಕು ಏಕೆ?

ಲೈಫ್‌ನಲ್ಲಿ ಒಮ್ಮೆಯಾದ್ರೂ ಬೆಂಗ್ಳೂರಿಗೆ ಹೋಗಲೇ ಬೇಕು ಏಕೆ?

ಐಟಿ ಹಬ್ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರು ದಕ್ಷಿಣ ಭಾರತದ ಪ್ರಮುಖ ಪ್ರವಾಸಿ ಕೇಂದ್ರ ಕೂಡಾ ಆಗಿದೆ. ಇದು ದೇಶದ ಐದನೇ ದೊಡ್ಡ ಮಹಾನಗರವೂ ಆಗಿದೆ. ಇಲ್ಲಿ ಸಾಫ್ಟ್‌ವೇರ್ ಹಾಗೂ ಕಂಪ್ಯೂಟರ್‌ಗೆ ಸಂಬಂಧಿಸಿದ ಅನೇಕ ಪ್ರಸಿದ್ಧ ಕಂಪನಿಗಳಿವೆ. ಹಾಗಾಗಿ ಹೆಚ್ಚಿನ ಜನರು ಉದ್ಯೋಗಕ್ಕಾಗಿ ಬೆಂಗಳೂರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇಲ್ಲಿ ಸುಮಾರು 50%ನಷ್ಟು ಜನರು ದೇಶದ ವಿವಿಧ ಮೂಲೆಗಳಿಂದ ಬಂದಿರುವವರಾಗಿದ್ದಾರೆ. ಇದೊಂದು ಐಟಿ ಹಬ್ ಹೇಗೆಯೋ ಹಾಗೆಯೇ ಬೆಂಗಳೂರನ್ನು ಸುತ್ತಾಡಲು ಅನೇಕ ಕಾರಣಗಳಿವೆ.

ಉತ್ತಮ ವಾತಾವರಣ

ಉತ್ತಮ ವಾತಾವರಣ

ದೇಶದ ಇತರ ಊರುಗಳಿಗೆ ಹೋಲಿಸಿದರೆ ಬೆಂಗಳೂರಿನ ವಾತಾವರಣವೂ ತುಂಬಾ ಚೆನ್ನಾಗಿದೆ. ಬೆಂಗಳೂರಿಗೆ ಬಂದವರು ಇಲ್ಲಿನ ವಾತಾವರಣಕ್ಕೆ ಮಾರುಹೋಗುತ್ತಾರೆ. ಇಲ್ಲಿ ಬರುವ ಅಕಾಲಿಕ ಮಳೆಯು ಜನರಿಗೆ ಇನ್ನಷ್ಟು ಆನಂದವನ್ನು ನೀಡುತ್ತದೆ. ತಂಪಾದ ವಾತಾವರಣ ಎಲ್ಲರನ್ನೂ ಮುದಗೊಳಿಸುತ್ತದೆ.

ವಿಕೇಂಡ್ ತಾಣ

ವಿಕೇಂಡ್ ತಾಣ

PC:Augustus Binu

ನೀವು ವಾರದ ಕೊನೆಗೆ ಸುತ್ತಾಡಲು ಹೋಗುವಂತಹ ಅನೇಕ ಸ್ಥಳಗಳು ಬೆಂಗಳೂರಿನಿಂದ 100ಕಿ.ಮೀ ದೂರದಲ್ಲಿದೆ. ಇಲ್ಲಿ ನೀವು ವಿಶ್ರಾಂತಿಯನ್ನು ಪಡೆಯಬಹುದು. ಆಫೀಸ್‌ನ ಜಂಜಾಟದಿಂದ ದೂರವಿದ್ದು ಆರಾಮವಾಗಿ ಸ್ನೇಹಿತರು ಅಥವಾ ಫ್ಯಾಮಿಲಿ ಜೊತೆ ಕಾಲ ಕಳೆಯಬಹುದು.

ಉದ್ಯಾನ ನಗರಿ

ಉದ್ಯಾನ ನಗರಿ

PC:Mouleesha

ಬೆಂಗಳೂರನ್ನು ಉದ್ಯಾನ ನಗರಿ ಎಂದೂ ಕರೆಯಲಾಗುತ್ತದೆ. ಇಲ್ಲಿ ಅನೇಕ ಪಾರ್ಕ್‌ಗಳಿವೆ. ಕಬ್ಬನ್ ಪಾರ್ಕ್, ಲಾಲ್‌ಬಾಗ್ ಇಲ್ಲಿನ ಪ್ರವಾಸಿ ತಾಣಗಳಲ್ಲೊಂದಾಗಿದೆ. ಇಲ್ಲಿ ಅನೇಕ ಜಾತಿಯ ಗಿಡ, ಮರಗಳು ಹೂವುಗಳು ಕಾಣಸಿಗುತ್ತದೆ. ಪ್ರವಾಸಿಗರಿಗೆ ಇದೊಂದು ಉತ್ತಮ ತಾಣವಾಗಿದೆ. ಕಬ್ಬನ್ ಪಾರ್ಕ್ ಸುಮಾರು 100 ಎಕರೆ ವಿಸ್ತೀರ್ಣದಲ್ಲಿದ್ದರೆ ಬನ್ನೇರ್ ಘಟ್ಟ ನ್ಯಾಷನಲ್ ಪಾರ್ಕ್ 25000ಎಕರೆ ಪ್ರದೇಶದಲ್ಲಿದೆ.

ಶಾಪಿಂಗ್‌ಗೆ ಪರ್ಪೇಕ್ಟ್ ಬೆಂಗಳೂರು

ಶಾಪಿಂಗ್‌ಗೆ ಪರ್ಪೇಕ್ಟ್ ಬೆಂಗಳೂರು

ನೀವು ಬೆಂಗಳೂರು ತುಂಬಾ ಕಾಸ್ಲಿ ಸಿಟಿ ಹಾಗಾಗಿ ಅಲ್ಲಿ ಶಾಪಿಂಗ್ ಕೂಡಾ ತುಂಬಾ ದುಬಾರಿಯಾಗಿರುತ್ತದೆ ಎಂದು ನೀವು ತಿಳಿದಿದ್ದರೆ ಅದು ನಿಮ್ಮ ತಪ್ಪು ಕಲ್ಪನೆ. ಬೆಂಗಳೂರಿನಲ್ಲೂ ಕಡಿಮೆ ಬೆಲೆಗೆ ಶಾಪಿಂಗ್ ಮಾಡಬಹುದಾದ ಶಾಪಿಂಗ್ ಸ್ಟ್ರೀಟ್‌ಗಳಿವೆ. ಒಂದು ವೇಳೆ ನೀವು ಬ್ರಾಂಡೆಡ್ ಬಟ್ಟೆ ಕೊಳ್ಳಬೇಕೆಂದಿದ್ದರೆ, ಅಥವಾ ವಿಂಡೋ ಶಾಪಿಂಗ್ ಮಾಡಬೇಕೆಂದಿದ್ದರೆ ಇಲ್ಲಿ ಅನೇಕ ಮಾಲ್‌ಗಳಿವೆ. ಫಾರಂ ಮಾಲ್, ಗರುಡಾ ಮಾಲ್, ಮಂತ್ರಿ ಮಾಲ್, ಓರೈನ್ ಮಾಲ್ ಮುಂತಾದ ಹಲವಾರು ಮಾಲ್‌ಗಳಿವೆ.

ಸ್ಟ್ರೀಟ್ ಫುಡ್

ಸ್ಟ್ರೀಟ್ ಫುಡ್

PC: youtube

ಬೆಂಗಳೂರು ಸ್ಟ್ರೀಟ್ ಫುಡ್‌ಗೆ ಫೇಮಸ್. ಇಲ್ಲಿ ನಿಮಗೆ ರುಚಿಕರ ಆಹಾರ ರಸ್ತೆ ಬದಿಯ ಡಾಬಾಗಳಲ್ಲಿ ಗಾಡಿಗಳಲ್ಲಿ ಸಿಗುತ್ತದೆ. ದೋಸಾ, ನಾನ್‌ವೆಜ್, ಫೀಜ್ಜಾ ಎಲ್ಲವೂ ರಸ್ತೆ ಬದಿಯಲ್ಲೇ ಸಿಗುತ್ತದೆ. ಬೆಲೆಯೂ ಕಡಿಮೆ ಇರುತ್ತದೆ ಹಾಗೆಯೇ ರುಚಿಕರವೂ ಆಗಿರುತ್ತದೆ. ದುಬಾರಿ ಹಣ ಕೊಟ್ಟು ರೆಸ್ಟೋರೆಂಟ್‌ಗಳಲ್ಲಿ ಇದನ್ನು ತಿನ್ನಬೇಕೆಂದಿಲ್ಲ.

ಪ್ರಾಚೀನ ಮಂದಿರಗಳು

ಪ್ರಾಚೀನ ಮಂದಿರಗಳು

PC: youtube

ನಿಮಗೆ ಶಿವ ಹಾಗೂ ಹನುಮಾನ್‌ನ ದೊಡ್ಡ ಮೂರ್ತಿಯನ್ನು ನೋಡಬೇಕಾದರೆ ನೀವು ಬೆಂಗಳೂರಿಗೆ ಬರಬೇಕು. ಹಾಗೆಯೇ ಇಲ್ಲಿ ಅನೇಕ ಪ್ರಾಚೀನ ಮಂದಿರಗಳಿವೆ. ಹಲವಾರು ವಿಶೇಷತೆಗಳನ್ನೊಳಗೊಂಡ ಮಂದಿರಗಳಿವೆ. ಗವಿಗಂಗಾಧರೇಶ್ವರ ಮಂದಿರ, ಬಸವನ ಗುಡಿ ಹೀಗೆ ಹಲವಾರು ಪ್ರಸಿದ್ಧ ಮಂದಿರಗಳಿವೆ.

ಹ್ಯಾಂಗ್‌ಔಟ್ ಸ್ಥಳಗಳು

ಹ್ಯಾಂಗ್‌ಔಟ್ ಸ್ಥಳಗಳು


ಬೆಂಗಳೂರಿನಲ್ಲಿ ಪಾರ್ಟಿ ಮಾಡಲು, ಅನೇಕ ರೆಸ್ಟೋರೆಂಟ್‌ಗಳಿವೆ. ಪಾರ್ಟಿ ಪಬ್‌ಗಳಿವೆ, ಬಾರ್ ಆಂಡ್ ರೆಸ್ಟೋರೆಂಟ್‌ಗಳಿವೆ. ನೀವು ನಿಮ್ಮ ಸ್ನೇಹಿತರ ಜೊತೆ ಹ್ಯಾಂಗ್‌ಔಟ್ ಮಾಡಬೇಕೆಂದಿದ್ದರೆ ಬೆಂಗಳೂರು ನಿಮಗೆ ಫರ್‌ಫೆಕ್ಟ್ ತಾಣವಾಗಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+