Search
  • Follow NativePlanet
Share
» »ನಾವು ಯಾಕೆ ಪ್ರಯಾಣ ಮಾಡಬೇಕು ಅನ್ನೋದಕ್ಕೆ ಪ್ರಮುಖ ಕಾರಣಗಳು

ನಾವು ಯಾಕೆ ಪ್ರಯಾಣ ಮಾಡಬೇಕು ಅನ್ನೋದಕ್ಕೆ ಪ್ರಮುಖ ಕಾರಣಗಳು

ಜೀವನದ ಸುಂದರ ಅನುಭವವನ್ನು ಸಂಪೂರ್ಣವಾಗಿ ಪಡೆಯಬೇಕೆಂದರೆ ಒಬ್ಬ ವ್ಯಕ್ತಿಯು ಜಗತ್ತಿನ ಮೂಲೆ ಮೂಲೆಗಳಿಗೆ ಪ್ರಯಾಣ ಮಾಡಿ ಪಡೆದುಕೊಳ್ಳಬೇಕು ಎಂದು ಹೇಳುತ್ತಾರೆ. ನಾವೆಲ್ಲರೂ ಪ್ರಯಾಣ ಮಾಡುವುದನ್ನು ಇಷ್ಟ ಪಡುತ್ತೇವೆ ಮತ್ತು ನಮಗೆ ಇಷ್ಟವಾದ ಸ್ಥಳಗಳಗೆ ಹೋಗಿ ಅಲ್ಲಿ ಮೋಜು ಮಾಡಲು ಹಾಗೂ ವಿಶ್ರಾಂತಿ ಪಡೆಯಲು ಬಯಸುತ್ತೇವೆ.

ಆದರೆ ಪ್ರಯಾಣ ಮಾಡುವುದು ಕೇವಲ ನಮ್ಮ ನಿರಂತರ ಜೀವನದಿಂದ ಬಿಡುಗಡೆ ಹೊಂದುವುದಕ್ಕಾಗಿ ಮತ್ತು ಜಗತ್ತಿನ ಸುಂದರ ಅದ್ಬುತಗಳಲ್ಲಿ ಕಳೆದು ಹೋಗಲು ಎಂದು ಯೋಚಿಸುವುದಾದರೆ ಖಂಡಿತವಾಗಿಯೂ ನಿಮಗೆ ಈ ಲೇಖನ ಓದುವ ಅವಶ್ಯಕತೆ ಇದೆ. ಏಕೆಂದರೆ ಇದರಲ್ಲಿ ಪ್ರಯಾಣ ಮಾಡುವ ವಿವಿಧ ಉದ್ದೇಶದ ಬಗ್ಗೆ ಕಲಿಯಬಹುದು.ನಮ್ಮಲ್ಲಿ ಹೆಚ್ಚಿನವರು ಪ್ರಯಾಣ ಮಾಡುವುದು ಅಥವಾ ಪ್ರವಾಸ ಮಾಡುವುದು ಕೇವಲ ವಿಶ್ರಾಂತಿಗಾಗಿ ಎಂದೇ ತಿಳಿದಿದ್ದರೆ ಇನ್ನು ಕೆಲವರು ಜಗತ್ತಿನ ಸೌಂದರ್ಯದ ವೀಕ್ಷಣೆಗೆ ಎಂದು ಕೊಂಡರೆ ಮತ್ತು ಕೆಲವೇ ಕೆಲವರು ಅನ್ವೇಷಣೆಗೋಸ್ಕರ ಪ್ರಯಾಣ ಮಾಡುವವರಿದ್ದಾರೆ.

ನೀವು ಅಂತಹ ಕೆಲವೇ ಕೆಲವು ಅನ್ವೇಷಣೆ ಮಾಡುವ ಪ್ರಯಾಣಿಕರಲ್ಲಿ ಒಬ್ಬರಾಗಿದ್ದು ಜಗತ್ತಿನ ಸುತ್ತ ಮುತ್ತಲಿನ ಸಂಕೀರ್ಣತೆಯನ್ನು ಶೋಧಿಸಿ ಅವುಗಳ ಗುಪ್ತ ಸೌಂದರ್ಯತೆಯನ್ನು ಅನ್ವೇಷಣೆ ಮಾಡುವ ವ್ಯಕ್ತಿಯು ನಿಜವಾಗಿಯೂ ಜೀವನದಲ್ಲಿ ಅದ್ಬುತವಾದ ಎಂದು ಮರೆಯಲಾಗದಂತಹ ಅನುಭವವನ್ನು ಪಡೆದುಕೊಳ್ಳುತ್ತಾನೆ ಮತ್ತು ಜೀವನದ ಅರ್ಥವನ್ನು ಕಂಡುಕೊಳ್ಳುತ್ತಾನೆ. ನೀವು ಇಂತಹ ಪ್ರಯಾಣಿಕರಲ್ಲಿ ಒಬ್ಬರಾಗಲು ಬಯಸುವುದಿಲ್ಲವೆ? ಹೌದು ಎಂದಾದಲ್ಲಿ, ನೀವು ಈ ಲೇಖನವನ್ನು ಓದಲೇ ಬೇಕು. ಇಲ್ಲಿ ಪೂರ್ಣ ಪ್ರಮಾಣದಲ್ಲಿ ಒಬ್ಬ ವ್ಯಕ್ತಿಯು ಪ್ರಯಾಣ ಮಾಡುವ ಪ್ರಮುಖ ಕಾರಣಗಳ ಬಗ್ಗೆ ವಿವರಣೆ ನೀಡುತ್ತಿದ್ದೇವೆ.

ಜಗತ್ತಿನ ಗುಪ್ತ ಸೌಂದರ್ಯತೆಯನ್ನು ನೋಡಿ

ಜಗತ್ತಿನ ಗುಪ್ತ ಸೌಂದರ್ಯತೆಯನ್ನು ನೋಡಿ

ಇದೊಂದು ಬಹು ಸಹಜವಾದ ಸತ್ಯವಾಗಿದೆ. ನೀವು ನಿಮ್ಮದೇ ಆದ ಹೆಜ್ಜೆ ಮುಂದಿರಿಸದೆ ಜಗತ್ತಿನ ಇನ್ನಿತರ ಸೌಂದರ್ಯತೆಗಳ ಬಗ್ಗೆ ತಿಳಿಯಲು ಸಾಧ್ಯವೇ ಇಲ್ಲ. ಹೀಗೆ ಮಾಡಿದಲ್ಲಿ ನೀವು ಜಗತ್ತಿನ ನಿಜವಾದ ಅದ್ಬುತ ಸೌಂದರ್ಯತೆಗಳನ್ನು ನೋಡಬಹುದಾಗಿದೆ. ನೀವು ಪೂರ್ಣಕಾಲಿಕ ಪ್ರವಾಸಿಗರಾಗಿ ಪ್ರಯಾಣ ಕೈಗೊಳ್ಳುತ್ತಿದ್ದರೆ ಮತ್ತು ಪ್ರಪಂಚದ ಸೌಂದರ್ಯವನ್ನು ಅನಾವರಣಗೊಳಿಸಲು ಯಾವಾಗಲೂ ನೋಡುತ್ತಿದ್ದರೆ, ನೀವು ಯಾವತ್ತೂ ನೋಡದೇ ಅಥವಾ ಕೇಳದೇ ಇರುವಂತಹ ಜಗತ್ತಿನ ಅನೇಕ ಸುಂದರ ಸ್ಥಳಗಳ ಬಗ್ಗೆ ತಿಳಿಯಬಹುದು ಇವುಗಳು ನಿಮ್ಮನ್ನು ತಮ್ಮ ಅಸಾಧಾರಣ ಭವ್ಯತೆಯಿಂದ ಬೆರಗುಗೊಳ್ಳುವಂತೆ ಖಂಡಿತವಾಗಿಯೂ ಮಾಡುತ್ತವೆ ಎಂಬುದರಲ್ಲಿ ಸಂಶಯವೇ ಇಲ್ಲ.

ಸ್ವತಂತ್ರರಾಗಿ

ಸ್ವತಂತ್ರರಾಗಿ

ನೀವು ಪೂರ್ಣಕಾಲಿಕ ಪ್ರಯಾಣಿಕರಾಗುವಾಗ ನಿಮ್ಮ ಪರಿಚಯಸ್ಥರ ಬೆಂಬಲವನ್ನು ಪಡೆಯುವುದಕ್ಕಿಂತ ಅಥವಾ ಬಯಸುವುದಕ್ಕೆ ಬದಲಾಗಿ ನಿಮ್ಮನ್ನೇ ನೀವು ಅವಲಂಬಿಸಿ. ನೀವು ನಿಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆಯಿಡಿ ಇದರಿಂದಾಗಿ ಇದು ನಿಮ್ಮ ನಿರ್ಧಾರ ಮಾಡುವ ಸಾಮರ್ಥ್ಯವನ್ನು ಯಾವುದೇ ಸಂಶಯವಿಲ್ಲದೆ ನಿಭಾಯಿಸಲು ಅನುಕೂಲವಾಗುತ್ತದೆ.
ಇದರಿಂದಾಗಿ ನೀವು ಇಷ್ಟಪಡುವ ಸ್ಥಳಕ್ಕೆ ಎಲ್ಲಿಗೆ ಬೇಕಾದರೂ ಹೋಗಬಹುದು ಏನು ಅನ್ವೇಷಿಸಲು ಬಯಸುವಿರೋ ಅದನ್ನು ಮಾಡಬಹುದು. ಆದುದರಿಂದ ಹೀಗೆ ಪೂರ್ಣ ಕಾಲಿಕ ಪ್ರಯಾಣ ಮಾಡುವಾಗ ಇಂತಹ ಅದ್ಬುತವಾದ ಗುಣಗಳನ್ನು ಪಡೆಯಬಹುದು ಎಂದಾದರೆ ಇಂತಹ ಯಾತ್ರೆಯನ್ನು ಏಕೆ ಕೈಗೊಳ್ಳಬಾರದು?

ವಿವಿಧ ಸಂಪ್ರದಾಯಗಳ ಬಗ್ಗೆ ತಿಳಿದುಕೊಳ್ಳಿ

ವಿವಿಧ ಸಂಪ್ರದಾಯಗಳ ಬಗ್ಗೆ ತಿಳಿದುಕೊಳ್ಳಿ

ನೀವು ಮನುಷ್ಯನ ಜೀವನದ ಸೌಂದರ್ಯತೆಯ ಬಗ್ಗೆ ತಿಳಿಯಲು ನೋಡುತ್ತಿದ್ದಲ್ಲಿ ಮೊಟ್ಟಮೊದಲಿಗೆ ನೀವು ಮಾಡಬೇಕಾದ ವಿಷಯವೆಂದರೆ ಜಗತ್ತಿನ ವಿವಿಧ ಸಂಸ್ಕೃತಿಗಳ ಬಗ್ಗೆ ಅಧ್ಯಯನ ಮಾಡುವುದು. ಇದು ನೀವು ಪೂರ್ಣ ಕಾಲಿಕ ಪ್ರಯಾಣ ಮಾಡುವುದಾದಲ್ಲಿ ಮಾತ್ರ ನೆರವೇರಲು ಸಾಧ್ಯವಾಗುವುದು.
ಹೀಗೆ ಕಲಿಯುವುದರಿಂದ ನಿಮಗೆ ಕೇವಲ ಜಗತ್ತಿನ ವಿವಿಧ ಸಂಸ್ಕೃತಿಗಳ ವೈವಿಧ್ಯತೆಗಳ ಬಗ್ಗೆ ಮಾತ್ರ ತಿಳಿಯುವುದಲ್ಲದೆ ಇದರಿಂದಾಗಿ ಜಗತ್ತಿನಲ್ಲಿ ಮನುಷ್ಯನ ಜೀವನವು ಹೇಗೆ ನಡೆಯುತ್ತಿದೆ ಎಂಬುದರ ಅರಿವು ನೀಡುತ್ತದೆ. ಜಗತ್ತಿನ ವಿವಿಧ ರೋಮಾಂಚಕ ಜೀವನ ಶೈಲಿಗಳು ಮತ್ತು ವಿವಿಧ ಸಂಸ್ಕೃತಿಗಳ ನಿಕಟವಾಗಿ ಸಂಪರ್ಕವನ್ನು ಹೊಂದಲು ಮತ್ತು ತಿಳಿಯಲು ಇಚ್ಚಿಸುವುದಿಲ್ಲವೆ?

ನಿಮ್ಮ ವ್ಯಕ್ತಿತ್ವವನ್ನು ಪರಿಚಯಿಸಿ

ನಿಮ್ಮ ವ್ಯಕ್ತಿತ್ವವನ್ನು ಪರಿಚಯಿಸಿ

ಪೂರ್ಣ ಕಾಲಿಕವಾಗಿ ಪ್ರಯಾಣಿಸುವಾಗ ನೀವು ಮಾಡಬೇಕಾದ ಪ್ರಮುಖ ವಿಷಗಳಲ್ಲೊಂದೆಂದರೆ ನೀವು ನಿಮ್ಮ ಆತ್ಮಾವಲೋಕನದ ಮಟ್ಟವನ್ನು ಹೆಚ್ಚಿಸಿಕೊಳ್ಳಿ. ನಿರಂತರವಾದ ಜೀವನದಿಂದ ದೂರಬಂದಿರುವ ನೀವು ಇಲ್ಲಿ ಕೇವಲ ತೊಂದರೆ ರಹಿತ ಪರಿಸರದಲ್ಲಿ ನಿಮ್ಮ ವ್ಯಕ್ತಿತ್ವದ ಪದರಗಳ ಅನ್ವೇಷಣೆ ಮಾಡಿಕೊಳ್ಳಬಹುದಾಗಿದೆ. ಪ್ರಯಾಣ ಮಾಡುತ್ತಿರುವಾಗ ಹೊಸ ವಿಷಯಗಳನ್ನು ಕಲಿಯುತ್ತಾ ನೀವು ನಿರಂತರವಾಗಿ ಚಲಿಸುತ್ತಿರಬೇಕಾಗುತ್ತದೆ ಇದು ನಿಮ್ಮ ವ್ಯಕ್ತಿತ್ವಕ್ಕೆ ಒಂದು ಹೊಸ ಆಯಾಮ ನೀಡುವಲ್ಲಿ ಖಂಡಿತವಾಗಿಯೂ ಸಹಾಯ ಮಾಡುತ್ತದೆ.

ವಿಷಯಗಳನ್ನು ಹತ್ತಿರದಿಂದ ಪರಿಶೀಲಿಸಿ

ವಿಷಯಗಳನ್ನು ಹತ್ತಿರದಿಂದ ಪರಿಶೀಲಿಸಿ

ನೀವು ನಿಮ್ಮ ಕೋಣೆಯಲ್ಲಿ ಕುಳಿತುಕೊಳ್ಳುವಾಗ ನಿಮ್ಮದೇ ಆದ ಸಣ್ಣ ಪ್ರಪಂಚದಲ್ಲಿರುತ್ತೀರಿ ನೀವು ಹೊರಜಗತ್ತಿನ ಯಾವುದೇ ವಿಷಯವನ್ನು ಕಲಿಯಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ನೀವು ನಿಮ್ಮ ಮನೆಯಲ್ಲಿ ಕುಳಿತುಕೊಳ್ಳುವ ಅಭ್ಯಾಸವನ್ನು ಮುರಿದು ವಿಷಯಗಳ ಅನ್ವೇಷಣೆಯನ್ನು ಮಾಡಲು ಒಂದು ವಿಶೇಷವಾದ ಪ್ರಯಾಣವನ್ನು ಕೈಗೊಳ್ಳ ಬೇಕಾಗುತ್ತದೆ.
ನೀವು ಯಾವುದೇ ವಿಷಯ ಗಳನ್ನಾಗಲಿ ಹತ್ತಿರದಿಂದ ನೋಡಿ ಅವುಗಳ ಅನ್ವೇಷಣೆ ಮಾಡದೆ ನೀವು ಅವುಗಳ ಗುಪ್ತ ಸೌಂದರ್ಯತೆಗಳ ಬಗ್ಗೆ ತಿಳಿಯಲು ಸಾಧ್ಯವಿಲ್ಲ. ಪ್ರಯಾಣ ಮಾಡುವಾಗ ನೀವು ಯಾವುದೇ ಸಮಯದ ಕಟ್ಟುಪಾಡಿಗೆ ಒಳಗಾಗದೆ ಇದ್ದಲ್ಲಿ ನೀವು ವಿಷಯಗಳನ್ನು ಹತ್ತಿರದಿಂದ ಮತ್ತು ಸರಿಯಾಗಿ ಪರಿಶೀಲಿಸಲು ಸಾಧ್ಯವಾಗುತ್ತದೆ.

ಆರಾಮದಾಯಕ ಜೀವನವನ್ನು ಜೀವಿಸಿ

ಆರಾಮದಾಯಕ ಜೀವನವನ್ನು ಜೀವಿಸಿ

ನಿಸ್ಸಂದೇಹವಾಗಿ ಪ್ರಯಾಣವು ಜೀವನವನ್ನು ಆರಾಮದಾಯಕ ಮತ್ತು ಶಾಂತಿಯುತವಾಗುವಂತೆ ಮಾಡುತ್ತದೆ. ನೀವು ನಿಮ್ಮ ಸ್ವರವನ್ನು ಯಾವುದೇ ಅಡೆತಡೆ ಇಲ್ಲದಂತೆ ನೀವೇ ಕೇಳುವ ಅನುಭವವನ್ನು ಪಡೆಯಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ನೀವು ಪ್ರಯಾಣ ಮಾಡುತ್ತಾ ಮಾಡುತ್ತಾ ಪ್ರತೀ ಹೆಜ್ಜೆಯಲ್ಲಿಯೂ ಹೊಸ ವಿಷಯಗಳ ಅನುಭವವನ್ನು ಪಡೆಯುತ್ತಾ ಹೋಗಬಹುದು.
ಸ್ಥಳಗಳನ್ನು ಗುರುತಿಸಿ ನಿಮ್ಮ ಪ್ರಯಾಣ ಪಟ್ಟಿಯಲ್ಲಿ ಸೇರಿಸುವುರಿಂದ ಅದಕ್ಕೆ ಇನ್ನೇನು ಸೇರಿಸಬೇಕೆನ್ನುವುದನ್ನು ನಿರ್ಧಾರ ಮಾಡುವವರೆಗೆ ಪ್ರತಿಯೊಂದು ನಿಮಗೆ ತೃಪ್ತಿ ಯಾಗುವಂತಹ ವಿಷಯಗಳ ಬಗ್ಗೆ ನೀವು ಮಾಡಬಹುದಾಗಿದೆ. ಆದುದರಿಂದ ನೀವು ಆರಾಮದಾಯಕವಾಗಿ ರೈಲು ಹಿಡಿಯುವವರೆಗೆ ಹಿಂದೆ ಏನು ಬಿಟ್ಟು ಬಂದಿರುವಿರಿ ಎಂಬುದರ ಬಗ್ಗೆ ಯೋಚಿಸಬಹುದು.

ಇತಿಹಾಸದ ಪಠ್ಯ ಪುಸ್ತಕದಲ್ಲಿ ಓದಿರುವುದಕ್ಕಿಂತ ಹೆಚ್ಚಿನದನ್ನು ಕಲಿಯಿರಿ.

ಇತಿಹಾಸದ ಪಠ್ಯ ಪುಸ್ತಕದಲ್ಲಿ ಓದಿರುವುದಕ್ಕಿಂತ ಹೆಚ್ಚಿನದನ್ನು ಕಲಿಯಿರಿ.

ನೀವು ಇತಿಹಾಸವನ್ನು ಪುಸ್ತಕ ಓದಿ ತಿಳಿಯುತ್ತೇನೆ ಎಂದು ಯೋಚಿಸುತ್ತಿರುವಿರಾದಲ್ಲಿ ನಿಮ್ಮ ಊಹೆ ಖಂಡಿತವಾಗಿಯೂ ತಪ್ಪು. ನಿಜವಾಗಿಯೂ ಅಂತಹ ಸ್ಥಳಕ್ಕೆ ಹೋಗಿ ಅಲ್ಲಿಯ ಅನುಭವವನ್ನು ಪಡೆಯಲು ಪ್ರಯತ್ನಿಸಿ ಇದರಿಂದ ನಿಮಗೆ ಪಠ್ಯ ಪುಸ್ತಕದಲ್ಲಿ ಇರುವುದಕ್ಕಿಂತ ಹೆಚ್ಚಿನ ವಿಷಯಗಳನ್ನು ಕಲಿಯಬಹುದು . ಆದುದರಿಂದ ನೀವು ಯಾವಾಗಲೂ ಪಠ್ಯಪುಸ್ತಕದ ಹೊರತಾಗಿ ನೈಜವಾಗಿ ಅನ್ವೇಷಣೆ ಮಾಡುವ ಅಭ್ಯಾಸವು ಅತೀ ಉತ್ತಮವಾದುದಾಗಿದೆ.

Read more about: india ಪ್ರವಾಸ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X