Search
  • Follow NativePlanet
Share
» »ಭಾರತದ ಅತಿ ದೊಡ್ಡ ಹಳ್ಳಿ ಯಾವುದು, ಅದು ಎಲ್ಲಿದೆ ಗೊತ್ತಾ?

ಭಾರತದ ಅತಿ ದೊಡ್ಡ ಹಳ್ಳಿ ಯಾವುದು, ಅದು ಎಲ್ಲಿದೆ ಗೊತ್ತಾ?

2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ 6 ಲಕ್ಷದ 40 ಸಾವಿರಕ್ಕೂ ಹೆಚ್ಚು ಹಳ್ಳಿಗಳಿವೆ. ಭಾರತವು ಗ್ರಾಮ ಪ್ರಾಬಲ್ಯವಿರುವ ರಾಷ್ಟ್ರವಾಗಿದೆ. ಭಾರತದಲ್ಲಿ ಅತಿ ಹೆಚ್ಚಿನ ಹಳ್ಳಿಗಳಿರುವುದು ಉತ್ತರ ಪ್ರದೇಶದಲ್ಲಿ. ರಾಜ್ಯವು ಒಂದು ಲಕ್ಷಕ್ಕಿಂತ ಹೆಚ್ಚಿನ ಹಳ್ಳಿಗಳನ್ನು ಹೊಂದಿದ್ದರೆ, ಅತ್ಯಂತ ಕಡಿಮೆ ಹಳ್ಳಿಗಳು ಕರಾವಳಿ ರಾಜ್ಯ ಗೋವಾದಲ್ಲಿದೆ. ಹಾಗಾದರೆ ಅತಿದೊಡ್ಡ ಹಳ್ಳಿ ಅಥವಾ ಗ್ರಾಮ ಯಾವುದು?, ಅದು ಎಲ್ಲಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ...

Which is the largest village in Asia

ದೊಡ್ಡದಾಗಿದೆ ಈ ಹಳ್ಳಿ

ಆ ಹಳ್ಳಿ ಉತ್ತರ ಪ್ರದೇಶ ರಾಜ್ಯದಲ್ಲಿದೆ. ಹೌದು, ಈ ಹಳ್ಳಿ ದೊಡ್ಡದಾಗಿದೆ ಮಾತ್ರವಲ್ಲದೆ ಇನ್ನೂ ಅನೇಕ ಕಾರಣಗಳಿಗಾಗಿ ಪ್ರಸಿದ್ಧವಾಗಿದೆ. ಹಳ್ಳಿಯ ಪ್ರತಿ ಮನೆಯಲ್ಲೂ ದೇಶಭಕ್ತಿಯ ಮನೋಭಾವನೆ ಇರುವುದಲ್ಲದೆ, ಪ್ರತಿಯೊಬ್ಬ ಯುವಕನ ಹೃದಯದಲ್ಲಿ ದೇಶ ಸೇವೆ ಮಾಡುವ ಹಂಬಲವಿದೆ. ಇದರಿಂದಾಗಿ ಎಲ್ಲರೂ ಸೈನಿಕರಾಗಲು ಪ್ರೇರೇಪಿಸಿದಂತಾಗುತ್ತದೆ. ಬನ್ನಿ...ಭಾರತದ ಈ ವಿಶಿಷ್ಟ ಹಳ್ಳಿಯ ಬಗ್ಗೆ ತಿಳಿಯೋಣ..

ಏಷ್ಯಾದ ಅತಿ ದೊಡ್ಡ ಹಳ್ಳಿ

ಈ ಒಂದು ವಿಶಿಷ್ಟವಾದ ಹಳ್ಳಿ ಉತ್ತರ ಪ್ರದೇಶದ ಗಾಜಿಪುರದ ಬಳಿಯಿದೆ. ಹೆಸರು ʼಗಹ್ಮರ್ʼ. ಇದು ಏಷ್ಯಾದ ಏಕೈಕ ಮತ್ತು ದೊಡ್ಡ ಹಳ್ಳಿ ಎಂದು ಹೇಳಲಾಗುತ್ತದೆ. ಈ ಮೊದಲೇ ಹೇಳಿದ ಹಾಗೆ ಹಳ್ಳಿಯ ವಿಶೇಷತೆ ಏನೆಂದರೆ ಇಲ್ಲಿನ ಪ್ರತಿಯೊಂದು ಮನೆಯಲ್ಲೂ ಒಂದೋ ಎರಡೋ ಜನ ನೇನೆಯಲ್ಲಿರುತ್ತಾರೆ. ಬಹುಶಃ ಇದೇ ಕಾರಣಕ್ಕೆ ಈ ಗ್ರಾಮವನ್ನು ಸೈನಿಕರ ಗ್ರಾಮ ಅಥವಾ ಆರ್ಮಿ ವಿಲೇಜ್‌ ಎಂದೂ ಕರೆಯುತ್ತಾರೆ. ಇಲ್ಲಿ ದೇಶ ಸೇವೆ ಮಾಡುವ ಸಲುವಾಗಿ ಸೈನಿಕನಾಗುವುದು ಹಲವು ತಲೆಮಾರುಗಳಿಂದ ಪೂರ್ವಜರ ಸಂಪ್ರದಾಯವಾಗಿದೆ.

Which is the largest village in Asia

ಗ್ರಾಮದ ಏಳಿಗೆಗೆ ಕಾರಣ

ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ಗಂಗಾನದಿಯ ದಕ್ಷಿಣ ದಂಡೆಯ ಮೇಲಿರುವ ಗಹ್ಮರ್ ಎಂಬ ಈ ಸೇನಾ ಗ್ರಾಮವು ಜನಸಂಖ್ಯೆಯ ದೃಷ್ಟಿಯಿಂದಲೂ ಏಷ್ಯಾದ ಅತಿದೊಡ್ಡ ಗ್ರಾಮ ಅಥವಾ ಹಳ್ಳಿಯೆಂದು ಪರಿಗಣಿಸಲಾಗಿದೆ. ಇಲ್ಲಿನ ಬಹುತೇಕ ಹುಡುಗರು ಸೇನೆಯಲ್ಲಿರುವುದು ಮಾತ್ರ ಗ್ರಾಮದ ಏಳಿಗೆಗೆ ಕಾರಣ ಎನ್ನುತ್ತಾರೆ ಸ್ಥಳೀಯರು. ಇಂದಿಗೂ ಈ ಸಂಪ್ರದಾಯದ ಪರಂಪರೆಯನ್ನು ಗಹ್ಮಾರ್‌ನ ಪ್ರತಿಯೊಬ್ಬ ಯುವಕರು ಸಂಪೂರ್ಣ ಜವಾಬ್ದಾರಿಯಿಂದ ನಿರ್ವಹಿಸುತ್ತಿದ್ದಾರೆ. ಪ್ರತಿ ಮನೆಯಲ್ಲೂ ಕನಿಷ್ಠ ಇಬ್ಬರು ಸೈನಿಕರಿದ್ದಾರೆ. ಇದು ಹಳ್ಳಿಗರ ಜೀವನದಲ್ಲಿ ಸಮೃದ್ಧಿ ಮತ್ತು ಗೌರವವನ್ನು ತರುತ್ತದೆ. ಆದರೆ ಪ್ರತಿ ಮನೆಯಲ್ಲೂ ಸರಾಸರಿ ಒಬ್ಬ ಸೈನಿಕನಿರುವುದು ಗ್ರಾಮದ ಹೆಮ್ಮೆಯನ್ನು ಹೆಚ್ಚಿಸಿದೆ.

ವಿಸ್ತೀರ್ಣ ದೃಷ್ಟಿಯಿಂದಲೂ ಅತಿ ದೊಡ್ಡದು

ಗಹ್ಮಾರ್‌ ಗ್ರಾಮವು ಭಾರತದ ಅತಿ ದೊಡ್ಡ ಹಳ್ಳಿಯಾಗಿದೆ. ಒಟ್ಟು ವಿಸ್ತೀರ್ಣ 4364 ಎಕರೆ. ಒಟ್ಟು ಜನಸಂಖ್ಯೆಯು 25994 (ಜನಗಣತಿ 2011 ರ ಪ್ರಕಾರ) ಜನಸಂಖ್ಯಾ ಸಾಂದ್ರತೆಯು 1,500/km2 ಆಗಿದೆ. ಆದ್ದರಿಂದ ವಿಸ್ತೀರ್ಣದ ದೃಷ್ಟಿಯಿಂದ ಗಹ್ಮಾರ್ ಭಾರತದ ಅತಿದೊಡ್ಡ ಗ್ರಾಮವಾಗಿದೆ. ಈ ಗ್ರಾಮವು ರಾಜಧಾನಿಯಿಂದ 377 ಕಿಲೋಮೀಟರ್ ದೂರದಲ್ಲಿದೆ. ಹಾಗೆಯೇ ವಾರಣಾಸಿಯಿಂದ 76 ಕಿಲೋಮೀಟರ್ ದೂರದಲ್ಲಿದೆ.

ಹಳ್ಳಿಯ ಮೂಲ

ಸೇನೆಗೆ ಸೇರುವ ಮೂಲಕ ದೇಶಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವ ಗಹ್ಮಾರ್‌ನ ಪ್ರತಿಯೊಬ್ಬ ಯುವಕನ ಎದೆಯಲ್ಲಿನ ಧೈರ್ಯವು ಅವರನ್ನು ಇಡೀ ದೇಶದಲ್ಲಿ ವಿಭಿನ್ನವಾಗಿಸುತ್ತದೆ. ಘಾಜಿಪುರ್ ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿಲೋಮೀಟರ್ ದೂರದಲ್ಲಿರುವ ಗಂಗಾನದಿಯ ದಡದಲ್ಲಿರುವ ಗಹ್ಮಾರ್ ಏಷ್ಯಾದ ಅತಿದೊಡ್ಡ ಗ್ರಾಮವೆಂದು ಪರಿಗಣಿಸಲಾಗಿದೆ. ಇವರ ಒಟ್ಟು ಜನಸಂಖ್ಯೆ ಒಂದು ಲಕ್ಷದ ಇಪ್ಪತ್ತು ಸಾವಿರ. ಅದರಲ್ಲಿ ಸುಮಾರು 25 ಸಾವಿರ ಮತದಾರರನ್ನು ಹೊಂದಿರುವ ಗಹ್ಮಾರ್ ಮಾತ್ರ 8 ಚದರ ಮೈಲಿಗಳಲ್ಲಿ ಹರಡಿಕೊಂಡಿದೆ. ಗಹ್ಮಾರ್‌ ನನ್ನು 22 ಪಟ್ಟಿಗಳು ಅಥವಾ ಕುಗ್ರಾಮಗಳಾಗಿ ವಿಂಗಡಿಸಲಾಗಿದೆ, ಐತಿಹಾಸಿಕ ದಾಖಲೆಗಳು 1530 ರ ಪ್ರಕಾರ ಕುಸುಮ್ ದೇವ್ ರಾವ್ ಅವರು ನಕ್ರಾ ದಿಸ್ ಎಂಬ ಸ್ಥಳದಲ್ಲಿ ಗಹ್ಮಾರ್‌ ಗ್ರಾಮವನ್ನು ಸ್ಥಾಪಿಸಿದರು.

ಈ ಸಂಪ್ರದಾಯ ಪ್ರಾರಂಭವಾಗಿದ್ದು ಹೇಗೆ?

ಮಿಲಿಟರಿ ಸೇವೆಗೆ ಸಂಬಂಧಿಸಿದಂತೆ ಗಹ್ಮಾರ್‌ ಈ ಸಂಪ್ರದಾಯವು ಮೊದಲ ಮಹಾಯುದ್ಧದಿಂದ ಪ್ರಾರಂಭವಾಯಿತು ಎಂದು ಹೇಳಲಾಗುತ್ತದೆ. ಎರಡನೆಯ ಮಹಾಯುದ್ಧದಲ್ಲಿ ಗಹ್ಮಾರ್‌ನ ಒಟ್ಟು 226 ಸೈನಿಕರನ್ನು ಬ್ರಿಟಿಷ್ ಸೈನ್ಯಕ್ಕೆ ಸೇರಿಸಲಾಯಿತು, ಅದರಲ್ಲಿ 21 ಜನರು ಹುತಾತ್ಮರಾದರು. ಇಂದು, ಗಹ್ಮಾರ್‌ ಗ್ರಾಮದ 12 ಸಾವಿರಕ್ಕೂ ಹೆಚ್ಚು ಜನರು ಭಾರತೀಯ ಸೇನೆಯ ವಿವಿಧ ವಿಭಾಗಗಳಲ್ಲಿ ಸೈನಿಕನಿಂದ ಕರ್ನಲ್ ಹುದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಗ್ರಾಮದಲ್ಲಿ 15 ಸಾವಿರಕ್ಕೂ ಹೆಚ್ಚು ಮಾಜಿ ಸೈನಿಕರು ವಾಸಿಸುತ್ತಿದ್ದಾರೆ.

More News

Read more about: asia india uttar pradesh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+