Hiking Travel Tips: ಪ್ರಯಾಣ, ಪ್ರವಾಸ ಇಷ್ಟಪಡುವ ಜನರು ಸಾಮಾನ್ಯವಾಗಿ ಹೈಕಿಂಗ್ ಹೋಗಲು ಇಷ್ಟಪಡುತ್ತಾರೆ. ಹೈಕಿಂಗ್ ಮತ್ತು ಟ್ರೆಕ್ಕಿಂಗ್ ನಡುವೆ ಯಾವುದೇ ಗಮನಾರ್ಹ ವ್ಯತ್ಯಾಸವಿಲ್ಲ. ಆದರೆ ಟ್ರೆಕ್ಕಿಂಗ್‌ಗೆ ದೂರದ ಮತ್ತು ಒರಟಾದ ರಸ್ತೆಗಳ ಮೂಲಕ ಪಯಣ ಬೆಳೆಸಬೇಕಾಗುತ್ತದೆ. ಹೈಕಿಂಗ್‌ಗೆ ಕಡಿಮೆ ದೂರ ಮತ್ತು ಸುಲಭವಾದ ಮಾರ್ಗಗಳ ಮೂಲಕ ಹೆಜ್ಜೆ ಹಾಕಲು ಆದ್ಯತೆ ನೀಡಲಾಗುತ್ತದೆ. ವಿಶೇಷವಾಗಿ ಆರಂಭಿಕರಿಗಾಗಿ ಹೈಕಿಂಗ್ ಅತ್ಯುತ್ತಮ ಆಯ್ಕೆಯಾಗಿದೆ. ಒಂದು ವೇಳೆ ನೀವು ಹೈಕಿಂಗ್ ಹೋಗಲು ಯೋಜಿಸುತ್ತಿದ್ದರೆ ನಿಮ್ಮ ಬಟ್ಟೆ ಮತ್ತು ಶೂಗಳ ಬಣ್ಣಗಳಿಗೆ ಗಮನ ಕೊಡುವುದು ಬಹಳ ಮುಖ್ಯ.
ಯಾವ ಬಣ್ಣದ ಬಟ್ಟೆಗಳು ಉತ್ತಮ?
ಬಟ್ಟೆಗಳ ವಿಚಾರ ಬಂದಾಗ ನೀವು ಎಲ್ಲಿದ್ದೀರಿ ಮತ್ತು ಯಾವ ಸೀಸನ್ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಕೆಲವರ ಪ್ರಕಾರ, ಹೈಕಿಂಗ್ ಮಾಡುವಾಗ ಯಾವಾಗಲೂ ಗಾಢ ಬಣ್ಣದ ಬಟ್ಟೆಗಳನ್ನು ಒಯ್ಯುವುದು ಉತ್ತಮ. ಸಾಮಾನ್ಯವಾಗಿ, ಜನರು ಹೈಕಿಂಗ್ ಮಾಡುವಾಗ ಕಪ್ಪು ಬಟ್ಟೆ ಮತ್ತು ಬೂಟುಗಳನ್ನು ಆಯ್ಕೆ ಮಾಡುತ್ತಾರೆ. ಏಕೆಂದರೆ ಕಪ್ಪು ಬಣ್ಣ ಸುಲಭವಾಗಿ ಕೊಳೆಯಾಗುವುದಿಲ್ಲ. ಆದರೆ ಗಾಢ ಬಣ್ಣದ ಉಡುಗೆ ಮತ್ತು ಬೂಟುಗಳನ್ನು ಧರಿಸುವುದು ನಿಮಗೆ ಸುರಕ್ಷಿತವೆಂದು ಹೇಳಲಾಗುತ್ತದೆ. ತಜ್ಞರ ಪ್ರಕಾರ, ಟ್ರೆಕ್ಕಿಂಗ್ ಮತ್ತು ಹೈಕಿಂಗ್ ಮಾಡುವಾಗ ಅನೇಕ ಜನರು ಅಪಘಾತಗಳಿಗೆ ಬಲಿಯಾಗುತ್ತಾರೆ. ಇಂತಹ ಸಮಯದಲ್ಲಿ ನೀವು ಗಾಢ ಬಣ್ಣದ ಬಟ್ಟೆಗಳು ಮತ್ತು ಬೂಟುಗಳನ್ನು ಧರಿಸಿದ್ದರೆ, ರಕ್ಷಣಾ ತಂಡವು ನಿಮ್ಮನ್ನು ಸುಲಭವಾಗಿ ಹುಡುಕಬಹುದು. ಒಂದು ವೇಳೆ ನೀವು ಕಪ್ಪು ಬಟ್ಟೆಗಳನ್ನು ಧರಿಸಿದರೆ, ತುರ್ತು ಪರಿಸ್ಥಿತಿಯಲ್ಲಿ ನಿಮ್ಮ ಬಳಿ ತಲುಪಲು, ಸಹಾಯ ಮಾಡಲು ಕಷ್ಟಕರವಾಗುತ್ತದೆ.
ಬೇಟೆಗಾರರ ಕಾಟದಿಂದ ತಪ್ಪಿಸಿಕೊಳ್ಳಲು
ಅನೇಕ ಹೈಕಿಂಗ್ ಸ್ಥಳಗಳಲ್ಲಿ ಬೇಟೆಯಾಡುವುದನ್ನು ಸಹ ಕಾಣಬಹುದು. ಈ ಅವಧಿಯಲ್ಲಿ ನೀವು ಕಪ್ಪು ಬಟ್ಟೆಗಳನ್ನು ಧರಿಸಿದರೆ, ಬೇಟೆಯಾಡುವವರು ನಿಮ್ಮನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ಅದೇ ನೀವು ಬ್ರೈಟ್ ಬಟ್ಟೆಗಳನ್ನು ಧರಿಸಿದರೆ ಬೇಟೆಗಾರನೂ ನಿಮ್ಮನ್ನು ಸುಲಭವಾಗಿ ನೋಡುತ್ತಾನೆ. ಜೊತೆಗೆ ನೀವು ಯಾವುದೇ ಅಪಘಾತಕ್ಕೆ ಬಲಿಯಾಗುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕಾಗಿ ಹೈಕಿಂಗ್ ಮಾಡುವಾಗ ಪ್ರಕಾಶಮಾನವಾದ ಉಡುಪನ್ನು ಧರಿಸುವುದು ಪರ್‌ಫೆಕ್ಟ್ ಆಯ್ಕೆಯಾಗಿದೆ ಎನ್ನುತ್ತಾರೆ.

ಅರ್ಥ್ ಟೋನ್ ಬಣ್ಣದ ಪ್ರಯೋಜನಗಳು
ಹೈಕಿಂಗ್ ಮಾಡುವಾಗ ಅನೇಕ ಜನರು ಅರ್ಥ್ ಟೋನ್ ಬಟ್ಟೆಗಳನ್ನು ಧರಿಸುತ್ತಾರೆ. ಇಂತಹ ಡ್ರೆಸ್ ಧರಿಸುವುದರಿಂದ ನಿಸರ್ಗಕ್ಕೆ ಹತ್ತಿರವಾಗುವ ಭಾವನೆ ಮೂಡುತ್ತದೆ ಮತ್ತು ದಾರಿಯಲ್ಲಿ ಭೇಟಿಯಾಗುವ ಪ್ರಾಣಿ-ಪಕ್ಷಿಗಳು ಭಯ ಬೀಳುವುದಿಲ್ಲ ಎಂಬುದು ಚಾರಣಿಗರ ಭಾವನೆ. ಕಂದು, ಹಸಿರು, ಖಾಕಿ ಮತ್ತು ಆಲಿವ್‌ನಂತಹ ಬಣ್ಣಗಳು ಕಾಡುಗಳು, ಪರ್ವತಗಳು ಮತ್ತು ಮರುಭೂಮಿಗಳಂತಹ ನೈಸರ್ಗಿಕ ಪರಿಸರಗಳೊಂದಿಗೆ ಚೆನ್ನಾಗಿ ಹೊಂದಿಕೊಳ್ಳುತ್ತವೆ ಮತ್ತು ವನ್ಯಜೀವಿಗಳನ್ನು ಬೆಚ್ಚಿಬೀಳಿಸುವ ಸಾಧ್ಯತೆ ಕಡಿಮೆ. ಇನ್ನು ಚಳಿಗಾಲದಲ್ಲಿ ಗಾಢ ಬಣ್ಣದ ಬಟ್ಟೆಗಳು ದೇಹವನ್ನು ಬೆಚ್ಚಗಿಡಲು ಸಹಕಾರಿ. ಹಾಗೆಯೇ ರಾತ್ರಿ ವೇಳೆ ಅಥವಾ ದೀರ್ಘಕಾಲದವರೆಗೆ ಹೈಕಿಂಗ್‌ಗೆ ಉತ್ತಮ ಆಯ್ಕೆಯಾಗಿದೆ.
ಕೀಟಗಳು ಮತ್ತು ಸೊಳ್ಳೆಗಳು ದೂರ ಉಳಿಯುತ್ತವೆ
ಹೈಕಿಂಗ್ ಮಾಡುವಾಗ ನೀವು ಎತ್ತರದ ಹುಲ್ಲು ಮತ್ತು ಪೊದೆಗಳ ಮೂಲಕ ಹಾದು ಹೋಗಬೇಕು. ಆ ಸಮಯದಲ್ಲಿ ನಿಮ್ಮ ಬಟ್ಟೆಯ ಮೇಲೆ ಅನೇಕ ಕೀಟಗಳು ಬಂದು ಕುಳಿತುಕೊಳ್ಳುತ್ತವೆ. ಅದು ನಿಮಗೆ ಹಾನಿ ಉಂಟು ಮಾಡುತ್ತದೆ. ಅದೇ ನೀವು ಲೈಟ್ ಕಲರ್ ಉಡುಪನ್ನು ಧರಿಸಿದ್ದರೆ ಸುಲಭವಾಗಿ ಕೀಟಗಳನ್ನು ನಿಮ್ಮಿಂದ ದೂರವಿಡಬಹುದು. ವಿಶೇಷವಾಗಿ ಸೊಳ್ಳೆಗಳು ಲೈಟ್ ಕಲರ್ ಕಡೆಗೆ ಅಷ್ಟು ಸುಲಭಕ್ಕೆ ಆಕರ್ಷಿತವಾಗುವುದಿಲ್ಲ. ಆ ಸಮಯದಲ್ಲಿ, ನೀವು ಲೈಟ್ ಬಣ್ಣದ ಬಟ್ಟೆಗಳನ್ನು ಧರಿಸುವುದರ ಮೂಲಕ ನಿಮ್ಮನ್ನು ಸುರಕ್ಷಿತವಾಗಿ ಮತ್ತು ಆರೋಗ್ಯಕರವಾಗಿರಿಸಿಕೊಳ್ಳಬಹುದು ಎಂಬುದು ತಜ್ಞರ ಅನಿಸಿಕೆ.

ಸ್ಥಳದಿಂದ ಸ್ಥಳಕ್ಕೆ ಬದಲಾವಣೆ
ಕೆಲವು ಕೀಟಗಳನ್ನು ಆಕರ್ಷಿಸುವ ಕೆಲವು ಬಣ್ಣಗಳಿವೆ ಮತ್ತು ಇದು ಸ್ಥಳದಿಂದ ಬದಲಾಗುತ್ತದೆ. ಯಾವುದೇ ಒಟ್ಟಾರೆ ನಿಯಮವಿಲ್ಲ. ಉದಾಹರಣೆಗೆ ನೀಲಿ ಬಣ್ಣ ಪೂರ್ವ ಆಫ್ರಿಕಾದಲ್ಲಿ ಟ್ಸೆಟ್ಸೆ ನೊಣಗಳನ್ನು ಸೆಳೆಯುತ್ತವೆ. ನಿಯಾನ್ ಅಥವಾ ಫ್ಲೋರೊಸೆಂಟ್ ಬಣ್ಣ ಕೀಟಗಳನ್ನು ಆಕರ್ಷಿಸಬಹುದು. ಹಾಗಾಗಿ ನಿಮಗೆ ಬೇಕಾದುದನ್ನು ಸ್ಥಳಕ್ಕೆ ಅನುಗುಣವಾಗಿ ಧರಿಸಿ. ಸಾಮಾನ್ಯವಾಗಿ ಎಲ್ಲಾ ರೀತಿಯ ಬಣ್ಣಗಳಲ್ಲಿ ಚಾರಣಿಗರು ಕಾಣಿಸಿಕೊಳ್ಳುತ್ತಾರೆ. ಆದರೆ ಕೆಲವು ಜನರು ನಿಸ್ಸಂಶಯವಾಗಿ ಪ್ರಕಾಶಮಾನವಾದ ಬಟ್ಟೆ ಉತ್ತಮವೆಂದು ನಂಬುತ್ತಾರೆ.
ಯಶಸ್ವಿ ಚಾರಣಕ್ಕೆ...
ಹಿಮಭರಿತ ಸ್ಥಳಗಳಲ್ಲಿ ಟ್ರೆಕ್ಕಿಂಗ್ ಮಾಡುತ್ತಿದ್ದರೆ, ಕೆಂಪು ಅಥವಾ ಕಿತ್ತಳೆಯಂತಹ ಗಾಢವಾದ ಬಣ್ಣಗಳನ್ನು ಧರಿಸುವುದು ತುರ್ತು ಸಂದರ್ಭಗಳಲ್ಲಿ ಗೋಚರತೆಗೆ ಸಹಾಯ ಮಾಡುತ್ತವೆ. ಒಟ್ಟಾರೆಯಾಗಿ, ಆರಾಮದಾಯಕವಾದ, ಹವಾಮಾನ-ಸೂಕ್ತವಾದ ಮತ್ತು ಪರಿಸರದೊಂದಿಗೆ ಬೆರೆಯುವ ಬಟ್ಟೆಗಳನ್ನು ಆರಿಸುವುದು ಯಶಸ್ವಿ ಚಾರಣಕ್ಕೆ ಪ್ರಮುಖವಾಗಿದೆ.


Click it and Unblock the Notifications

















