ಮಳೆಗಾಲದಲ್ಲಿ ಜಲಪಾತಗಳನ್ನು ನೋಡುವುದೆಂದರೆ ಅದೇನೋ ಖುಷಿ...ಧುಮ್ಮಿಕ್ಕಿ ಹರಿಯುವ ಜಲಧಾರೆ ನೋಡಲು ಎರಡು ಕಣ್ಣು ಸಾಲದು. ಹೌದು, ಜಲಪಾತಗಳ ರುದ್ರ ರಮಣೀಯ ದೃಶ್ಯ ನೋಡಲು ಸಾಧ್ಯವಾಗುವುದು ಮಾನ್ಸೂನ್ ಸಮಯದಲ್ಲಿ ಅಂದರೆ ಮಳೆಗಾಲದಲ್ಲಿ ಮಾತ್ರ. ಮಳೆಯ ನೀರಿನ ಸಹಾಯದಿಂದ ಜಲಪಾತಗಳ ಹರಿವು ಹೆಚ್ಚಾಗುವುದಲ್ಲದೆ, ಅವುಗಳ ಸೌಂದರ್ಯವೂ ಹೆಚ್ಚಾಗುತ್ತದೆ. ಆದರೆ ನೀವಿಲ್ಲಿ ಒಂದಂಶವನ್ನು ನೆನಪಿನಲ್ಲಿಡಬೇಕು. ಅದೇನೆಂದರೆ ಈ ಋತುವಿನಲ್ಲಿ ಜಲಪಾತಗಳನ್ನು ನೋಡುವುದೇನೋ ಸರಿ...ಆದರೆ ಅಂತಹ ಜಾಗಕ್ಕೆ ಭೇಟಿ ನೀಡುವುದು ಸ್ವಲ್ಪ ಅಪಾಯಕಾರಿಯೇ. ಆದ್ದರಿಂದ ಮಳೆಗಾಲದಲ್ಲಿ ಜಲಪಾತ ನೋಡಲು ಪ್ಲಾನ್ ಮಾಡುತ್ತಿರುವವರು ಸುರಕ್ಷತಾ ಸಲಹೆಗಳನ್ನು ನಿರ್ಲಕ್ಷಿಸುವ ತಪ್ಪನ್ನು ಮಾಡದಿರಿ. ವಿಶೇಷವಾಗಿ ನೀವು ಕುಟುಂಬದೊಂದಿಗೆ ಹೋಗುತ್ತಿದ್ದರೆ.
ಇತ್ತೀಚಿನ ದಿನಗಳಲ್ಲಂತೂ ಪ್ರಯಾಣದ ಸಮಯದಲ್ಲಿ ರೀಲ್ಸ್ ಮಾಡುವುದು ಮತ್ತು ಫೋಟೋಗಳನ್ನು ಕ್ಲಿಕ್ ಮಾಡುವ ಕ್ರೇಜ್ ಸ್ವಲ್ಪ ಜಾಸ್ತಿಯೇ ಇರುತ್ತದೆ. ಇದಕ್ಕೋಸ್ಕರ ಜನರು ತಮ್ಮ ಪ್ರಾಣವನ್ನು ಸಹ ಪಣಕ್ಕಿಡುತ್ತಿದ್ದಾರೆ. ಹಾಗೆ ನೋಡುವುದಾದರೆ ಪ್ರಯಾಣ ಮಾಡುವುದು ಮೂಡ್ ಅನ್ನು ರಿಫ್ರೆಶ್ ಮಾಡುವುದಕ್ಕೆ ಮತ್ತು ಸ್ಥಳಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ. ಆದ್ದರಿಂದ ಫೋನ್ ಅನ್ನು ಪಕ್ಕಕ್ಕೆ ಇರಿಸಿ ಮತ್ತು ಪ್ರಯಾಣವನ್ನು ಆನಂದಿಸಿ. ವಿಶೇಷವಾಗಿ ನೀವು ಜಲಪಾತ ನೋಡಲು ಹೋಗುತ್ತಿದ್ದರೆ ಯಾವ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂಬುದನ್ನು ನಿಮಗೆ ತಿಳಿಸುತ್ತೇವೆ. ಜಲಪಾತ ನೋಡುವ ಮೊದಲು ಸಂದರ್ಶಕರಿಗೆ ಸುರಕ್ಷಿತವೆಂದು ಪರಿಗಣಿಸಲಾದ ಪ್ರಸಿದ್ಧ ಮತ್ತು ಜನಪ್ರಿಯ ಸ್ಥಳಗಳನ್ನು ಸಂಶೋಧಿಸಿ ಮತ್ತು ಆಯ್ಕೆಮಾಡಿ.
ಮಾರ್ಗವನ್ನು ಮಾತ್ರ ಅನುಸರಿಸಿ
ಸಾಹಸದ ಅನ್ವೇಷಣೆಯಲ್ಲಿ, ಅನೇಕ ಬಾರಿ ಜನರು ಪ್ರಸ್ತುತ ಅಸ್ತಿತ್ವದಲ್ಲಿರುವ ಮಾರ್ಗಗಳಿಂದ ಹೊರ ನಡೆದು, ಹೊಸ ಮಾರ್ಗವನ್ನು ತೆಗೆದುಕೊಳ್ಳುತ್ತಾರೆ. ಆದರೆ ಅದು ಅಪಾಯಕಾರಿ. ಅದರಲ್ಲೂ ನಿಮ್ಮ ಕುಟುಂಬದೊಂದಿಗೆ ಪ್ರವಾಸಕ್ಕೆ ತೆರಳಿದಾಗ ಅಂತಹ ಸಾಹಸಕ್ಕೆ ಕೈ ಹಾಕಬೇಡಿ.

ಕಲ್ಲುಗಳ ಮೇಲೆ ಹೋಗುವುದನ್ನು ತಪ್ಪಿಸಿ
ಜಲಪಾತ ಇರುವ ಕಡೆ ಸುತ್ತಲೂ ದೊಡ್ಡ ದೊಡ್ಡ ಕಲ್ಲುಗಳಿರುತ್ತವೆ. ನಿರಂತರ ಮಳೆಯಿಂದಾಗಿ ಆ ಕಲ್ಲುಗಳ ಜಾರುವಿಕೆ ಹೆಚ್ಚಾಗುತ್ತದೆ. ಹಾಗೆಯೇ ಜನರು ಅವುಗಳ ಮೇಲೆ ಹತ್ತಿ ಫೋಟೋಗಳನ್ನು ಕ್ಲಿಕ್ ಮಾಡಲು ಪ್ರಯತ್ನಿಸಿದಾಗ, ಅನೇಕ ಬಾರಿ ಜನರು ಅಪಘಾತಗಳಿಗೆ ಬಲಿಯಾಗುತ್ತಾರೆ. ಆದ್ದರಿಂದ ಹಾಗೆ ಮಾಡುವುದನ್ನು ತಪ್ಪಿಸಿ. ಎಲೆಗಳು ಅಥವಾ ಪಾಚಿಗಳಿಂದ ಮುಚ್ಚಿದ ಬಂಡೆಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಿ.
ಸ್ಪ್ರಿಂಗ್ ನೀರಿನಲ್ಲಿ ಸ್ನಾನ ಮಾಡಬೇಡಿ
ಜಲಪಾತದ ಕೆಳಗೆ ನಿಂತು ಸ್ನಾನ ಮಾಡುವುದು ಒಂದು ರೀತಿ ಮಜಾ ಕೊಡುತ್ತದೆ. ಆದರೆ ಮಳೆಗಾಲದಲ್ಲಿ ಹಾಗೆ ಮಾಡುವುದು ಅಪಾಯಕಾರಿ. ಮಳೆಯಿಂದಾಗಿ ನೀರಿನ ಮಟ್ಟ ಗಣನೀಯವಾಗಿ ಹೆಚ್ಚುತ್ತಿದೆ. ನಿಮಗೆ ಈಜು ತಿಳಿದಿಲ್ಲದಿದ್ದರೆ, ನೀರಿಗೆ ಇಳಿಯುವ ತಪ್ಪನ್ನು ಮಾಡಬೇಡಿ.
ರಾತ್ರಿ ವೇಳೆ ಹೋಗಬೇಡಿ
ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದಾದ ಸ್ನೇಹಿತರೊಂದಿಗೆ ಸಾಹಸಕ್ಕಾಗಿ ಸಮಯವನ್ನು ಆಯ್ಕೆ ಮಾಡಬೇಡಿ. ಜಲಪಾತಕ್ಕೆ ಭೇಟಿ ನೀಡಲು ರಾತ್ರಿ ಸಮಯ ಸರಿಯಲ್ಲ. ಹೆಚ್ಚಿನ ಜಲಪಾತಗಳನ್ನು ತಲುಪಲು ಕಾಡುಗಳ ಮೂಲಕ ಹಾದು ಹೋಗಬೇಕು, ಅಂತಹ ಪರಿಸ್ಥಿತಿಯಲ್ಲಿ ರಾತ್ರಿಯಲ್ಲಿ ಕಾಡು ಪ್ರಾಣಿಗಳ ದಾಳಿಯ ಅಪಾಯವು ಹೆಚ್ಚಾಗುತ್ತದೆ.

ಸೂಚನಾ ಫಲಕಗಳನ್ನು ಗಮನಿಸಿ
ಯಾವಾಗಲೂ ಸುರಕ್ಷತಾ ಚಿಹ್ನೆಗಳತ್ತ ಗಮನ ಕೊಡಿ. ಜಲಪಾತಗಳಲ್ಲಿ ಮತ್ತು ಜಲಪಾತಗಳ ಹಾದಿಗಳಲ್ಲಿ ಪೋಸ್ಟ್ ಮಾಡಲಾದ ಎಲ್ಲಾ ಸೂಚನೆಗಳನ್ನು ಅನುಸರಿಸಿ. ಈ ಸೂಚನೆಗಳನ್ನು ಸಾಮಾನ್ಯವಾಗಿ ನೀವು ತಿಳಿದಿರಬೇಕಾದ ಇತರ ಮಾಹಿತಿಯೊಂದಿಗೆ ನವೀಕರಿಸಲಾಗುತ್ತದೆ. ಮತ್ತು ಜಲಪಾತದ ಸ್ಥಳದಲ್ಲಿ ಒದಗಿಸಲಾದ ಮಾರ್ಗಸೂಚಿಗಳನ್ನು ಅನುಸರಿಸಿ. ಸಂಭಾವ್ಯ ಅಪಾಯಗಳು ಅಥವಾ ನಿರ್ಬಂಧಿತ ಪ್ರದೇಶಗಳ ಕುರಿತು ಸಂದರ್ಶಕರನ್ನು ಎಚ್ಚರಿಸಲು ಈ ಫಲಕಗಳನ್ನು ಇರಿಸಲಾಗುತ್ತದೆ. ಅಂತಹ ಚಿಹ್ನೆಗಳನ್ನು ನಿರ್ಲಕ್ಷಿಸುವುದರಿಂದ ಅಪಘಾತಗಳು ಮತ್ತು ದುರಂತಗಳಿಗೆ ಕಾರಣವಾಗಬಹುದು.
ಛಾಯಾಚಿತ್ರಗಳನ್ನು ತೆಗೆಯುವಾಗ ಜಾಗರೂಕರಾಗಿರಿ
ಯಾವುದೇ ಜಲಪಾತದ ಮೇಲ್ಭಾಗವು ಅತ್ಯಂತ ಅಪಾಯಕಾರಿ. ಆದ್ದರಿಂದ ನಿಮ್ಮ ಹೆಜ್ಜೆಯನ್ನು ಸುರಕ್ಷಿತವಾಗಿಡಬೇಕು. ಮೊದಲಿಗೆ ನೀವು ಸರಿಯಾದ ಸ್ಥಳದಲ್ಲಿದ್ದಾರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ವಿಶೇಷವಾಗಿ ನೀವು ಛಾಯಾಚಿತ್ರಗಳನ್ನು ತೆಗೆದುಕೊಳ್ಳುವಾಗ ಜಾಗರೂಕರಾಗಿರಿ.
ಸುರಕ್ಷತೆಯು ಯಾವಾಗಲೂ ಆದ್ಯತೆಯಾಗಿರಲಿ
ಜಲಪಾತದ ಬಳಿ ನಡೆಯುವಾಗ ಅಥವಾ ಹತ್ತುವಾಗ ಎಚ್ಚರಿಕೆ ವಹಿಸಿ. ಸೂಕ್ತವಾದ ಪಾದರಕ್ಷೆಗಳನ್ನು ಧರಿಸಿ. ಈ ಅಗತ್ಯ ಸಲಹೆಗಳನ್ನು ಅನುಸರಿಸುವ ಮೂಲಕ, ಪ್ರವಾಸಿಗರು ಜಲಪಾತಗಳ ಸೌಂದರ್ಯವನ್ನು ಆನಂದಿಸಬಹುದು ಮತ್ತು ಮುಂಬರುವ ಅಪಾಯಗಳನ್ನು ಕಡಿಮೆ ಮಾಡಬಹುದು. ನೆನಪಿಡಿ, ನೈಸರ್ಗಿಕ ಅದ್ಭುತಗಳನ್ನು ಅನ್ವೇಷಿಸುವಾಗ ಸುರಕ್ಷತೆಯು ಯಾವಾಗಲೂ ಆದ್ಯತೆಯಾಗಿರಬೇಕು.


Click it and Unblock the Notifications

















