ಭಾರತದಲ್ಲಿರುವ ಅನೇಕ ಸುಂದರ ಪ್ರೇಕ್ಷಣೀಯ ಸ್ಥಳಗಳಲ್ಲಿ ಲಕ್ಷದ್ವೀಪವು ಕೂಡಾ ಒಂದು. ಇದರ ವಿಹಂಗಮ ನೋಟವನ್ನು ಆಸ್ವಾದಿಸುವುದು ಮಾತ್ರವಲ್ಲದೆ ಅಲ್ಲಿ ಇನ್ನೂ ಅನೇಕ ಚಟುವಟಿಕೆಗಳನ್ನು ಮಾಡಬಹುದಾಗಿದೆ. ಸುಂದರ ವಾತಾವರಣ ಹಾಗೂ ಕಡಲತೀರಕ್ಕೆ ಹೆಸರುವಾಸಿಯಾಗಿರುವ ಲಕ್ಷದ್ವೀಪವು ವಾಟರ್ ಸ್ಫೋರ್ಟ್‌ಗೂ ಹೆಸರುವಾಸಿಯಾಗಿದೆ. ಇಲ್ಲಿನ ಕಲರ್‌ಫುಲ್ ನೀರಿನಲ್ಲಿ ಆಟ ಆಡೋದಂದ್ರೆ ಯಾರಿಗೆ ಯಾನೆ ಇಷ್ಟ ಆಗೋಲ್ಲ ಹೇಳಿ.

ಸ್ಕೂಬಾ ಡೈವಿಂಗ್
ಅಂಡಮಾನ್ ನಿಕೋಬಾರ್ ಐಸ್‌ಲ್ಯಾಂಡ್‌ನ್ನು ಹೊರತುಪಡಿಸಿ ಸ್ಕೂಬಾ ಡೈವಿಂಗ್‌ಗೆ ಹೆಸರುವಾಸಿಯಾಗಿರುವ ಪ್ರದೇಶ ಅಂದ್ರೆ ಅದು ಲಕ್ಷದ್ವೀಪ. ಇಲ್ಲಿನ ವಾತಾವರಣ ಹಾಗೂ ಶುದ್ಧ ನೀರು, ಜನಜಂಗುಳಿ ಇಲ್ಲದ ವಾತಾವರಣ ಇದೆಲ್ಲವೂ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಲಕ್ಷದ್ವೀಪ ನೀರಿನಲ್ಲಿ ಆಳಕ್ಕೆ ಹೋಗಿ ಅಲ್ಲಿನ ಜಲಜೀವಿಗಳನ್ನು ಅನ್ವೇಷಿಸದೇ ಇದ್ದಲ್ಲಿ ನಿಮ್ಮ ಲಕ್ಷದ್ವೀಪ ಪ್ರವಾಸ ಪೂರ್ಣವಾಗೋದೇ ಇಲ್ಲ.

ಸ್ನಾರ್ಕೇಲಿಂಗ್
ಲಕ್ಷದ್ವೀಪದ ಹಿತವಾದ ನೀರಿನಲ್ಲಿ ಸ್ವಿಮ್ಮಿಂಗ್ ಮಾಡೋದಕ್ಕಿಂತ ಮಜಾ ಬೇರೊಂದಿಲ್ಲ. ವೈವಿಧ್ಯಮಯ ನೀರಿನ ಘಟಕಗಳನ್ನು ಕಂಡುಹಿಡಿಯುವುದು ಒಂದು ಸಾಹಸಮಯ ಚಟುವಟಿಕೆಯಾಗಿದೆ. ನಿಮಗೆ ನೀರಿನ ಆಳಕ್ಕೆ ಹೋಗೋದು ಇಷ್ಟವಿಲ್ಲವೆಂದಾದಲ್ಲಿ ಸ್ನೋರ್ಕೆಲಿಂಗ್ ಬೆಸ್ಟ್ .

ಸ್ಫೋರ್ಟ್ಸ್‌ಫಿಶ್ಶಿಂಗ್
ಸ್ಫೋರ್ಟ್ಸ್‌ಫಿಶ್ಶಿಂಗ್ ಇನ್ನೊಂದು ರೀತಿಯ ಮನರಂಜನೆಯ ಚಟುವಟಿಕೆಯಾಗಿದೆ. ಸಣ್ಣ ಪುಟ್ಟ ನದಿಯಲ್ಲಿ ಫಿಶ್ಶಿಂಗ್ ಸ್ಟಿಕ್ ಹಿಡಿದು ಸಣ್ಣ ಪುಟ್ಟ ಮೀನುಗಳಿಗೆ ಗಾಳ ಹಾಕೋದಕ್ಕಿಂತ ಆಳವಾದ ಸಾಗರದಲ್ಲಿ ಬೋಟ್‌ನಲ್ಲಿ ಹೋಗಿ ಫಿಶ್ಶಿಂಗ್ ಸ್ಟಿಕ್ ಮೂಲಕ ಮೀನುಗಳನ್ನು ಹಿಡಿಯುವುದರಲ್ಲಿರುವ ಆನಂದವೇ ಬೇರೆ. ಸ್ಫೋರ್ಟ್ಸ್‌ಫಿಶ್ಶಿಂಗ್ ಮೂಲಕ ಲಕ್ಷದ್ವೀಪದ ರಮಣೀಯ ಸೌಂದರ್ಯವನ್ನು ಕಣ್ಣುತುಂಬಿಸಿಕೊಳ್ಳಬಹುದು.

ಕಯಾಕಿಂಗ್
ಕಯಾಕಿಂಗ್ ಅಂದರೆ ನಿಮಗೆ ಗೊತ್ತಿರಬಹುದು. ನೀರಿನಲ್ಲಿ ಸುತ್ತಾಡಲು ಬಳಸುವ ವಾಟರ್ ಕ್ರಾಫ್ಟ್ ಇದಾಗಿದೆ. ನದಿಯಲ್ಲಿ ಸಣ್ಣ ಬೋಟ್ ಮೂಲಕ ಹೇಗೆ ತಿರುಗಾಡುತ್ತೇವೆ, ನದಿಗೆ ಒಂದು ರೌಂಡ್ ಬರುತ್ತೇವೋ ಅದೇ ರೀತಿ ಕಯಾಕಿಂಗ್ ಎಂದರೆ ಒಂದು ಸಣ್ಣ ಬೋಟ್‌ನಲ್ಲಿ ನೀವೇ ಹುಟ್ಟು ಹಾಕುತ್ತಾ ಬೋಟಿಂಗ್ ಮಾಡೋದು. ರಿವರ್ ರಾಫ್ಟಿಂಗ್, ಪೆಡಲಿಂಗ್ ಕೂಡಾ ಇಲ್ಲಿದೆ. ಇದನ್ನು ಮಿಸ್ ಮಾಡಲೇ ಬಾರದು.


Click it and Unblock the Notifications

















