Search
  • Follow NativePlanet
Share
» »ವಿಗ್ರಹವು ಚಲನ ಸ್ಥಿತಿಯಲ್ಲಿರುವ ದೇವಿ ಇವಳು...

ವಿಗ್ರಹವು ಚಲನ ಸ್ಥಿತಿಯಲ್ಲಿರುವ ದೇವಿ ಇವಳು...

ತುಳಜಾಭವಾನಿ ದೇವಾಲಯವು ಹಿಂದೂ ದೇವಾಲಯವಾಗಿದ್ದು, ಇದೊಂದು ಶಕ್ತಿ ಪೀಠ ಕೂಡ ಆಗಿದೆ. ಇದೊಂದು ಹಿಂದೂ ದೇವಾಲಯವಾಗಿದ್ದು, ಮಹಾರಾಷ್ಟ್ರದಲ್ಲಿನ ಪ್ರಸಿದ್ಧವಾದ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. 51 ನೇ ಶಕ್ತಿಪೀಠಗಳಲ್ಲಿ ಒಂದಾಗಿರುವ ಈ ತೀರ್ಥಕ್ಷೇತ

By Sowmyabhai

ತುಳಜಾಭವಾನಿ ದೇವಾಲಯವು ಹಿಂದೂ ದೇವಾಲಯವಾಗಿದ್ದು, ಇದೊಂದು ಶಕ್ತಿ ಪೀಠ ಕೂಡ ಆಗಿದೆ. ಇದೊಂದು ಹಿಂದೂ ದೇವಾಲಯವಾಗಿದ್ದು, ಮಹಾರಾಷ್ಟ್ರದಲ್ಲಿನ ಪ್ರಸಿದ್ಧವಾದ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದೆ. 51 ನೇ ಶಕ್ತಿಪೀಠಗಳಲ್ಲಿ ಒಂದಾಗಿರುವ ಈ ತೀರ್ಥಕ್ಷೇತ್ರಕ್ಕೆ ದೇಶದ ಮೂಲೆ-ಮೂಲೆಯಿಂದಲೇ ಅಲ್ಲದೇ ವಿದೇಶದಿಂದಲೂ ಕೂಡ ಭಕ್ತಾದಿಗಳು ಭೇಟಿ ನೀಡುತ್ತಿರುತ್ತಾರೆ. ಮಹಾರಾಷ್ಟ್ರ ರಾಜ್ಯದ ಸೋಲಾಪುರದಿಂದ ಕೇವಲ 45 ಕಿಲೋಮೀಟರ್ ದೂರದಲ್ಲಿರುವ ಈ ಕ್ಷೇತ್ರವು ಅತ್ಯಂತ ಪ್ರಖ್ಯಾತಿಯನ್ನು ಪಡೆದಿದೆ.

ಈ ತಾಯಿಯ ದೇವಾಲಯವು ಪುರಾತನವಾದ ದೇವಾಲಯವಾಗಿದ್ದು, 12 ನೇ ಶತಮಾನದಲ್ಲಿ ನಿರ್ಮಿಸಿದ್ದಾರೆ ಎಂದು ನಂಬಲಾಗಿದೆ. ತುಳಜಾ ಭವನಿ ದೇವಾಲಯವೇ ಅಲ್ಲದೆ ಅಲ್ಲಿ ಅನೇಕ ಪ್ರವಾಸಿ ತಾಣಗಳು ಕೂಡ ಇವೆ. ಈ ಮಹಿಮಾನ್ವಿತ ದೇವಾಲಯದ ಬಗ್ಗೆ ನಿಮಗೆ ಎಷ್ಟು ಗೊತ್ತು?

1.ಚಲನ ಸ್ಥಿತಿಯಲ್ಲಿರುವ ದೇವಿ

1.ಚಲನ ಸ್ಥಿತಿಯಲ್ಲಿರುವ ದೇವಿ

PC:wekimedia

ಪ್ರಶಾಂತವಾದ ವಾತಾವರಣದಲ್ಲಿ ನೆಲೆಸಿರುವ ಈ ತಾಯಿಯು ಚಲನ ಸ್ಥಿತಿಯಲ್ಲಿರುವುದು ವಿಶೇಷ. ಈಕೆಯು ಅತ್ಯಂತ ಶಕ್ತಿ ಸ್ವರೂಪಿ ಎಂದು ನಂಬಲಾಗಿದೆ. ಮಹಾರಾಷ್ಟ್ರದ ಉಸ್ಮಾನಾಬಾದ್‍ನಲ್ಲಿ ನೆಲೆಸಿರುವ ಈ ದೇವಿಯ ದೇವಾಲಯವು ಸಮುದ್ರ ಮಟ್ಟದಿಂದ ಸಮಾರು 650 ಮೀಟರ್ ಎತ್ತರದಲ್ಲಿ ನೆಲೆಸಿದ್ದಾಳೆ. ಸಹ್ಯಾದ್ರಿ ಪರ್ವತ ಶ್ರೇಣಿಯ ಯಮುನಾಚಲ ಬೆಟ್ಟದ ಮೇಲೆ ಸುಂದರ ಸ್ಥಳ ತುಳಜಾಪುರ್. ಈ ತುಳಜಾಪುರ್ ಪ್ರದೇಶದಲ್ಲಿಯೇ ತುಳಜಾ ಭವನಿ ನೆಲೆಸಿರುವುದು. ದೇವಾಲಯದ ಒಳಗೆ ಪ್ರವೇಶಿಸುತ್ತಿದ್ದಂತೆ ಭಕ್ತಿ-ಭಾವವು ಮನದಲ್ಲಿ ಮೂಡುತ್ತದೆ. ಇಲ್ಲಿ ಕಲ್ಲೋಲ ತೀರ್ಥವಿದೆ. ಈ ತೀರ್ಥವು ಅತ್ಯಂತ ಪವಿತ್ರವಾದುದು ಎಂದು ನಂಬಲಾಗಿದೆ.

3.ಚಲನ ಸ್ಥಿತಿಯಲ್ಲಿರುವ ದೇವಿ

3.ಚಲನ ಸ್ಥಿತಿಯಲ್ಲಿರುವ ದೇವಿ

PC:YOUTUBE

ಆ ಮಾತನ್ನು ಕೇಳಿಸಿಕೊಂಡ ಆಕೆಯು ತನ್ನ ಮನಸ್ಸನ್ನು ಪರಿರ್ವತನೆ ಮಾಡಿಕೊಂಡು ಮಂದಾಕಿನಿ ನದಿ ತೀರದಲ್ಲಿ ತಪಸ್ಸು ಆಚರಿಸಲು ಪ್ರಾರಂಭಿಸುತ್ತಾಳೆ. ಆಕೆಯು ಸಮಾಧಿಯ ಸ್ಥಿತಿಯಲ್ಲಿ ಇರುತ್ತಾಳೆ. ಒಬ್ಬ ಮಹಾರಾಜನು ಆಕೆಯನ್ನು ಸಮಾಧಿ ಸ್ಥಿತಿಯಲ್ಲಿರುವುದನ್ನು ಕಾಣುತ್ತಾನೆ. ಆಕೆಯನ್ನು ಹೇಗಾದರು ಮಾಡಿ ಪಡೆಯಬೇಕು ಎಂಬ ಆಸೆಯಿಂದ ಕೊನೆಯದಾಗಿ ಬಲವಂತ ಮಾಡುತ್ತಾನೆ. ಈ ಪರಿಣಾಮದಿಂದ ಅನುಭೂತಿ ತಾಯಿಯನ್ನು ಬೇಡಿಕೊಳ್ಳುತ್ತಾಳೆ. ಆಕೆಯ ಆಕ್ರಂದನವನ್ನು ಕೇಳಿಸಿಕೊಂಡ ತುಳಜಾ ಭವನಿಯು ಪ್ರತ್ಯಕ್ಷವಾಗುತ್ತಾಗುತ್ತಾಳೆ. ಆ ಮಹಾರಾಜನು ತನ್ನ ರೂಪವನ್ನು ಪಶುವಾಗಿ ಮಾರ್ಪಟು ಮಾಡಿಕೊಂಡು ಯುದ್ಧ ಭೂಮಿಯಲ್ಲಿ ವಿಕೃತವಾಗಿ ನಾಟ್ಯ ಮಾಡುತ್ತಿರುತ್ತಾನೆ.

4.ಚಲನ ಸ್ಥಿತಿಯಲ್ಲಿರುವ ದೇವಿ

4.ಚಲನ ಸ್ಥಿತಿಯಲ್ಲಿರುವ ದೇವಿ

PC:YOUTUBE

ಆ ನಂತರ ತುಳಜಾ ಭಾವನಿ ಆತನನ್ನು ಸಂಹಾರ ಮಾಡುತ್ತಾಳೆ. ಹಾಗಾಗಿಯೇ ಆ ದಿನದಂದು ವಿಜಯದಶಮಿಯನ್ನು ಆಚರಿಸಿಕೊಳ್ಳುತ್ತಾರೆ. ಕಷ್ಟದಲ್ಲಿರುವ ಭಕ್ತರನ್ನು ಈ ತಾಯಿ ಕಾಪಾಡುತ್ತಾಳೆ ಎಂದು ನಂಬಲಾಗಿದೆ. ಸ್ವಯಂ ಭೂವಾಗಿ ನೆಲೆಸಿರುವ ತುಳಜಾ ಭವನಿ ವಿಗ್ರಹಕ್ಕೆ 8 ಕೈಗಳು ಇವೆ. ಇಲ್ಲಿನ ತಾಯಿಯ ಪ್ರತಿಷ್ಟಾಪನೆಯು ಸ್ಥಿರವಾಗಿ ನೆಲೆಸಿಲ್ಲ. ಇತರ ದೇವಾಲಯಗಳ ಹಾಗೆ ಅಲ್ಲದೇ ಈ ದೇವಾಲಯದ ತಾಯಿಯ ವಿಗ್ರಹವು ಚಲನ ಸ್ಥಿತಿಯಲ್ಲಿರುವುದು ವಿಶೇಷ. ಅಂದರೆ ಈ ವಿಗ್ರಹವು ಕದಲುತ್ತದೆ. ನವರಾತ್ರಿಯ ಸಂದರ್ಭದಲ್ಲಿ ಅಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.

5.ಭೇಟಿ ನೀಡಲು ಅತ್ಯುತ್ತಮ ಸಮಯ

5.ಭೇಟಿ ನೀಡಲು ಅತ್ಯುತ್ತಮ ಸಮಯ

PC:YOUTUBE

ಗುಡಿ ಪಡ್ವಾ, ರಥಸಪ್ತಮಿ ಮತ್ತು ನವರಾತ್ರಿಗಳು ತುಳಜಾ ಭವನಿ ದೇವಾಲಯಕ್ಕೆ ಭೇಟಿ ನೀಡಲು ಸೂಕ್ತವಾದ ಸಮಯವಾಗಿದೆ. ಆ ಸಮಯದಲ್ಲಿ ಸಂಗೀತಗಾರರು ಮತ್ತು ನೃತ್ಯಗಾರರು ಜೊತೆಗೂಡಿ ಬೃಹತ್ ಮೆರವಣಿಗೆಯನ್ನು ತುಳಜಾ ಭವನಿ ದೇವಾಲಯದಲ್ಲಿ ನಡೆಯುತ್ತದೆ.

ದೇವಾಲಯ ತೆರೆಯುವ ಸಮಯ
ಬೆಳಗಿನ ಅಭಿಷೇಕ ಹಾಗು ಪೂಜೆ: 7 ಗಂಟೆಯಿಂದ ಪ್ರಾರಂಭ
ಸಂಜೆಯ ಅಭಿಷೇಕ ಹಾಗು ಪೂಜೆ: 7 ಗಂಟೆಯಿಂದ ಪ್ರಾರಂಭ

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+