Search
  • Follow NativePlanet
Share
» »ಪಾರ್ವತಿ, ಪರಮೇಶ್ವರರ ವಿವಾಹಕ್ಕೆ ಸಾಕ್ಷಿಯಾದ ಮಾವಿನ ಮರವುನ್ನು ನೋಡಿದ್ದೀರಾ?

ಪಾರ್ವತಿ, ಪರಮೇಶ್ವರರ ವಿವಾಹಕ್ಕೆ ಸಾಕ್ಷಿಯಾದ ಮಾವಿನ ಮರವುನ್ನು ನೋಡಿದ್ದೀರಾ?

ಭಾರತ ದೇಶದಲ್ಲಿ ವೈಷ್ಣವ, ಶೈವ ಕ್ಷೇತ್ರಗಳು ಬೇರೆ-ಬೇರೆ ಸ್ಥಳಗಳಲ್ಲಿ ಇರುತ್ತವೆ. ಆದರೆ ಒಂದೇ ಸ್ಥಳದಲ್ಲಿ ಈ ಎರಡು ಧರ್ಮಗಳಿಗೆ ಸೇರಿದ ವಿಶಿಷ್ಟ ದೇವಾಲಯಗಳು ಇರುವುದು ಅತ್ಯಂತ ವಿಭಿನ್ನವಾದ ವಿಷಯ. ಅಂಥಹ ವಿಶಿಷ್ಟವಾದ ಕ್ಷೇತ್ರವೇ ಕಂಚಿ. ಇಲ್ಲಿಯೇ

ಭಾರತ ದೇಶದಲ್ಲಿ ವೈಷ್ಣವ, ಶೈವ ಕ್ಷೇತ್ರಗಳು ಬೇರೆ-ಬೇರೆ ಸ್ಥಳಗಳಲ್ಲಿ ಇರುತ್ತವೆ. ಆದರೆ ಒಂದೇ ಸ್ಥಳದಲ್ಲಿ ಈ ಎರಡು ಧರ್ಮಗಳಿಗೆ ಸೇರಿದ ವಿಶಿಷ್ಟ ದೇವಾಲಯಗಳು ಇರುವುದು ಅತ್ಯಂತ ವಿಭಿನ್ನವಾದ ವಿಷಯ. ಅಂಥಹ ವಿಶಿಷ್ಟವಾದ ಕ್ಷೇತ್ರವೇ ಕಂಚಿ. ಇಲ್ಲಿಯೇ ಪಾರ್ವತಿ ದೇವಿ ಶಿವಲಿಂಗವನ್ನು ತಯಾರು ಮಾಡಿ ತಪಸ್ಸು ಮಾಡಿದಳು ಎಂದು ಹೇಳುತ್ತಾರೆ. ಅಷ್ಟೇ ಅಲ್ಲದೇ, ಆಕೆಯ ತಪಸ್ಸಿಗೆ ಮೆಚ್ಚಿದ ಶಿವನು ಆಕೆಯನ್ನು ಇಲ್ಲಿಯೇ ವಿವಾಹವನ್ನು ಮಾಡಿಕೊಂಡನು ಎಂದು ಪುರಾಣಗಳು ಹೇಳುತ್ತವೆ. ಇದಕ್ಕೆ ಸಾಕ್ಷ್ಯಿ ಎಂಬಂತೆ ಮಾವಿನ ವೃಕ್ಷವು ಇಂದಿಗೂ ಇಲ್ಲಿಯೇ ಇದೆ.

ಪಂಚಭೂತ ಕ್ಷೇತ್ರದಲ್ಲಿ ಒಂದಾದ ಏಕಾಂಬರೇಶ್ವರ ದೇವಾಲಯ ಕಂಚಿಯಲ್ಲಿಯೇ ಇದೆ. ಇನ್ನು 108 ವೈಷ್ಣವ ಕ್ಷೇತ್ರದಲ್ಲಿ ಒಂದಾದ ವರದರಾಜಸ್ವಾಮಿ ದೇವಾಲಯವು ಇಲ್ಲಿಯೇ ಇದೆ. ಅಷ್ಟೇ ಅಲ್ಲದೇ, ಚಾರಿತ್ರಾತ್ಮಕವಾಗಿ ಕೂಡ ಕಂಚಿ ಎಷ್ಟೊ ಪ್ರಾಮುಖ್ಯತೆಯನ್ನು ಪಡೆದಿದೆ. ಈ ಮೂಲಕ ಆ ವೃಕ್ಷದ ಜೊತೆ-ಜೊತೆಗೆ ಕಂಚಿಯಲ್ಲಿನ ಮುಖ್ಯವಾದ ದೇವಾಲಯದ ಬಗ್ಗೆ ತಿಳಿಯೋಣ.

1.ಕಾಮಾಕ್ಷಿ ದೇವಾಲಯ

1.ಕಾಮಾಕ್ಷಿ ದೇವಾಲಯ

PC:YOUTUBE

ತಮಿಳುನಾಡಿನಲ್ಲಿನ ಕಂಚಿ ಪಟ್ಟಣದಲ್ಲಿರುವ ಕಾಮಾಕ್ಷಿ ದೇವಾಲಯವು ಅತ್ಯಂತ ಪ್ರಸಿದ್ಧವಾಗಿದೆ. ಮಧುರೆ ಮೀನಾಕ್ಷಿ, ತಿರುವನೈವಲ್ಲಿಯಲ್ಲಿನ ಅಖೀಲಾಂಡೇಶ್ವರಿ, ಕಾಶಿಯಲ್ಲಿನ ವಿಶಾಲಕ್ಷಿಯ ಜೊತೆಗೆ ಕಂಚಿಯಲ್ಲಿರುವ ಕಾಮಾಕ್ಷಿ ಒಬ್ಬರೇ ಎಂದು ಹೇಳುತ್ತಾರೆ. ಕಾಮಾಕ್ಷಿ ದೇವಿಯು ಇಲ್ಲಿಯೇ ಇರುವ ಮಾವಿನ ವೃಕ್ಷದ ಕೆಳಗೆ ಇರುವ ಮಣ್ಣಿನಿಂದಲೇ ಶಿವಲಿಂಗವನ್ನು ಮಾಡಿ ಸಾವಿರಾರು ವರ್ಷಗಳ ಕಾಲ ತಪಸ್ಸು ಮಾಡಿದರು ಎಂದು ಹೇಳುತ್ತಾರೆ. ಆಕೆಯ ತಪಸ್ಸಿಗೆ ಮೆಚ್ಚಿದ ಪರಮೇಶ್ವರನು ಆಕೆಯನ್ನು ಇಲ್ಲಿಯೇ ವಿವಾಹ ಮಾಡಿಕೊಂಡನು ಎಂದು ಹೇಳುತ್ತಾರೆ. ಈ ಮಾವಿನ ವೃಕ್ಷದ ಕಾಂಡವನ್ನು ಇಂದಿಗೂ ನಾವು ಆ ದೇವಾಲಯವನ್ನು ಕಾಣಬಹುದು.

2.ಮೂರು ಸಾವಿರ ಐದು ನೂರು ವರ್ಷ

2.ಮೂರು ಸಾವಿರ ಐದು ನೂರು ವರ್ಷ

PC:YOUTUBE

ಅದರ ವಯಸ್ಸು ಸುಮಾರು ಮೂರು ಸಾವಿರ ಐದು ನೂರು ವರ್ಷ. ಅಂದರೆ 3500 ವರ್ಷ ಹಳೆಯದು ಎಂದು ನಂಬಲಾಗಿದೆ. ಪೂರ್ವದಲ್ಲಿ ಈ ವೃಕ್ಷದಲ್ಲಿ ಮಾವಿನ ಕಾಯಿಯು ವಿವಿಧ ರುಚಿಗಳನ್ನು ಹೊಂದಿತ್ತಂತೆ. ಆ ಮಾವಿನ ಹಣ್ಣುಗಳನ್ನು ತಿಂದರೆ ಸಂತಾನವಾಗದೇ ಇರುವವರಿಗೆ ಸಂತಾನ ಭಾಗ್ಯವಾಗುತ್ತದೆ ಎಂದು ನಂಬುತ್ತಾರೆ. ಆದರೆ ಪ್ರಸ್ತುತ ಆ ಒಣಗಿದ ವೃಕ್ಷದ ಸ್ಥಾನದಲ್ಲಿ ಬೇರೆ ಮಾವಿನ ಗಿಡವನ್ನು ದೇವಾಲಯದ ನಿರ್ವಹಕರು ನಾಟಿದ್ದಾರೆ. ಇಲ್ಲಿಯೇ ದೇವಿಯು ಉಗ್ರರೂಪವನ್ನು ಬಿಡಲು ಆದಿ ಶಂಕರಾಚಾರ್ಯರು ಶ್ರೀ ಚಕ್ರವನ್ನು ಪ್ರತಿಷ್ಟಾಪಿಸಿದರು. ಇನ್ನು ಈ ದೇವಾಲಯದ ಪ್ರಾಂಗಣ ಅತ್ಯಂತ ಪ್ರಶಾಂತವಾಗಿ ಹಾಗು ವಿಶಾಲವಾಗಿದೆ.

3.ಗೋಪೂಜೆ ನಂತರವೇ ಮೊದಲ ಪೂಜೆ

3.ಗೋಪೂಜೆ ನಂತರವೇ ಮೊದಲ ಪೂಜೆ

PC:YOUTUBE

ಪ್ರತಿ ದಿನ ಪ್ರಾತಃಕಾಲದಲಿಯೇ ಗೋಪೂಜೆಯನ್ನು ಮಾಡುತ್ತಾರೆ. ಈ ಪೂಜೆಯ ನಂತರ ದೇವಿಗೆ ಇರುವ ತೆರೆಯನ್ನು ತೊಲಗಿಸಿ ಮೊದಲ ಹಾರತಿಯನ್ನು ಮಾಡುತ್ತಾರೆ. ಆ ಸಮಯದಲ್ಲಿ ದೇವಿಯ ವಿಶ್ವರೂಪವನ್ನು ದರ್ಶಿಸಿಕೊಳ್ಳುವ ಸಲುವಾಗಿ ಪ್ರಜೆಗಳು ಭೇಟಿ ನೀಡುತ್ತಾರೆ. ಈ ದೇವಾಲಯದ ಅವರಣವು ಅತ್ಯಂತ ವಿಶಾಲವಾಗಿರುತ್ತದೆ. ಅಷ್ಟೇ ಅಲ್ಲದೇ, ಅತ್ಯಂತ ಪ್ರಶಾಂತವಾಗಿರುತ್ತದೆ. ಕಂಚಿಯಲಲಿ ಕಾಮಾಕ್ಷಿ ದೇವಿ ದೇವಾಲಯದ ಜೊತೆಗೆ ವರದರಾಜಸ್ವಾಮಿ ದೇವಾಲಯ, ಏಕಾಂಬರೇಶ್ವರ ದೇವಾಲಯ ಅತ್ಯಂತ ಪುರಾಣ ಪ್ರಾಧಾನ್ಯತೆಯನ್ನು ಹೊಂದಿದೆ. ಏಕಾಂಬರೇಶ್ವರ ದೇವಾಲಯವು ಅತ್ಯಂತ ಪುರಾತನವಾದ ದೇವಾಲಯವೇ ಅಲ್ಲದೇ ಪ್ರಸಿದ್ಧವಾದ ದೇವಾಲಯ ಕೂಡ ಆಗಿದೆ.

4.ಅವುಗಳ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳಿ

4.ಅವುಗಳ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳಿ

PC:YOUTUBE

ವರದರಾಜಸ್ವಾಮಿ ದೇವಾಲಯದಲ್ಲಿಯೇ ಬಂಗಾರದ ಹಾಗು ಬೆಳ್ಳಿಯ ಹಲ್ಲಿಗಳ ವಿಗ್ರಹವನ್ನು ಕಾಣಬಹುದು. ಹಲ್ಲಿಯು ಶರೀರದ ಮೇಲೆ ಬಿದ್ದ ದೋಷವನ್ನು ಕಳೆದುಕೊಳ್ಳಲು ಪ್ರಜೆಗಳು ಕಂಚಿಯಲ್ಲಿನ ಈ ವರದರಾಜಸ್ವಾಮಿ ದೇವಾಲಯಕ್ಕೆ ಬಂದು ಈ ಎರಡು ಹಲ್ಲಿಗಳನ್ನು ಸ್ಪರ್ಶಿಸಿ ತಮ್ಮ ದೋಷವನ್ನು ಕಳೆದುಕೊಳ್ಳುತ್ತಾರೆ.

ಇನ್ನು ಈ ದೇವಾಲಯದಲ್ಲಿನ ಆನಂದ ಸರೋವರದಲ್ಲಿರುವ ಮರದ ಚಕ್ಕೆಯಿಂದ ಮಾಡಿರುವ ದೇವತಾ ಮೂರ್ತಿಯನ್ನು 40 ವರ್ಷಕ್ಕೆ ಒಮ್ಮೆ 40 ದಿನಗಳ ಕಾಲ ಪ್ರಜೆಗಳ ದರ್ಶನಕ್ಕೆ ಅವಕಾಶವನ್ನು ಕಲ್ಪಿಸುತ್ತಾರೆ. 1979 ರ ವರ್ಷದಲ್ಲಿ ವರದರಾಜಸ್ವಾಮಿಯ ಚಕ್ಕೆಯಿಂದ ತಯಾರು ಮಾಡಿದ ವಿಗ್ರಹವನ್ನು ನೀರಿನಿಂದ ಹೊರಗೆ ತೆಗೆದು ಪ್ರಜೆಗಳಿಗೆ ದರ್ಶನಕ್ಕೆ ಅವಕಾಶವನ್ನು ಕಲ್ಪಿಸುತ್ತಾರೆ. ಇನ್ನು 2019 ರ ಜೂನ್ ತಿಂಗಳಿನಲ್ಲಿ ಈ ವಿಗ್ರಹವನ್ನು ಪ್ರಜೆಗಳಿಗೆ ದರ್ಶನಕ್ಕೆ ಇಡುತ್ತಾರೆ.

5.ಎಲ್ಲಿದೆ?

5.ಎಲ್ಲಿದೆ?

PC:YOUTUBE

ಚೆನ್ನೈನಿಂದ ಕಂಚಿಗೆ 70 ಕಿ.ಮೀ ದೂರದಲ್ಲಿದೆ. ಸುಮಾರು 2 ಗಂಟೆಗಳ ಪ್ರಯಾಣ. ದೇಶದಲ್ಲಿನ ವಿವಿಧ ಪ್ರದೇಶಗಳಿಂದ ಇಲ್ಲಿಗೆ ರೈಲುಗಳು ಸಂಪರ್ಕ ಸಾಧಿಸುತ್ತವೆ. ಚೆನ್ನೈನವರೆಗೆ ವಿಮಾನಗಳು ಕೂಡ ಸಂಪರ್ಕ ಸಾಧಿಸುತ್ತವೆ. ಖಾಸಗಿ ಹಾಗು ಸರ್ಕಾರಿ ಬಸ್ಸುಗಳ ಸೌಕರ್ಯ ಕೂಡ ಇದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+