Search
  • Follow NativePlanet
Share
» »ಲಿಟಲ್ ಇಂಗ್ಲೆಂಡ್‌ಗೆ ಹೋಗಬೇಕಾದ್ರೆ ಪಾಸ್‌ಪೋರ್ಟ್, ವೀಸಾ ಬೇಕಾಗಿಲ್ಲ

ಲಿಟಲ್ ಇಂಗ್ಲೆಂಡ್‌ಗೆ ಹೋಗಬೇಕಾದ್ರೆ ಪಾಸ್‌ಪೋರ್ಟ್, ವೀಸಾ ಬೇಕಾಗಿಲ್ಲ

ಕೃಷ್ಣಗಿರಿಯು ತಮಿಳುನಾಡಿನ ಒಂದು ಪ್ರಮುಖ ನಗರವಾಗಿದೆ. ಜೊತೆಗೆ ಸುಂದರವಾದ ಪ್ರವಾಸಿ ತಾಣವೂ ಆಗಿದೆ. ಈ ನಗರವು ಹಿಂದೆ ರಾಜ ಕೃಷ್ಣದೇವರಾಯನ ಆಳ್ವಿಕೆಗೆ ಒಳಪಟ್ಟಿತ್ತು. ಹಾಗಾಗಿ ಕೃಷ್ಣದೇವರಾಯನ ಹೆಸರಿನಿಂದ ಈ ನಗರಕ್ಕೆ ಕೃಷ್ಣಗಿರಿ ಎನ್ನುವ ಹೆಸರನ್ನು ಇಡಲಾಗಿದೆ. ಶಾಂತ ಬೆಟ್ಟಗಳು, ಹಚ್ಚ ಹಸಿರಿನ ಜೊತೆಗೆ ಈ ನಗರವು ಪ್ರವಾಸಿಗರನ್ನು ಸಾಕಷ್ಟು ಪ್ರಭಾವಿತವನ್ನಾಗಿಸಿದೆ.

ಕೃಷ್ಣಗಿರಿ ಡ್ಯಾಮ್

ಕೃಷ್ಣಗಿರಿ ಡ್ಯಾಮ್

PC: TheZionView

ಕೃಷ್ಣಗಿರಿಯನ್ನು ನೀವು ಸುತ್ತಾಡಬೇಕಾದರೆ ಮೊದಲಿಗೆ ಕೃಷ್ಣಗಿರಿ ಡ್ಯಾಮ್‌ನಿಂದ ಪ್ರಾರಂಭಿಸಿ. ಇದು ನಗರದಿಂದ 7 ಕಿ.ಮಿ ದೂರದಲ್ಲಿ ಕೃಷ್ಣಗಿರಿ ಹಾಗೂ ಧರ್ಮಪುರಿಯ ಮಧ್ಯದಲ್ಲಿದೆ. ಈ ಡ್ಯಾಮ್‌ನ್ನು ಕೃಷಿಗಾಗಿ ಬಳಸಲಾಗುತ್ತದೆ. ಕೃಷ್ಣಗಿರಿಯ ಸಮೀಪದಲ್ಲಿ ಸಾವಿರ ಎಕರೆ ಕೃಷಿ ಭೂಮಿ ಇದೆ. ಈ ಭೂಮಿಗೆ ನೀರು ಈ ಡ್ಯಾಮ್‌ನಿಂದಲೇ ಬರುತ್ತದೆ. ಇದೊಂದು ಪ್ರಮುಖ ಪ್ರವಾಸಿತಾಣವೂ ಆಗಿದೆ. ವೀಕೆಂಡ್‌ನಲ್ಲಿ ಸ್ನೇಹಿತರ ಜೊತೆ ಕಾಲಕಳೆಯಲು ಸೂಕ್ತ ತಾಣವಾಗಿದೆ.

ಚಂದ್ರ ಚೂಡೇಶ್ವರ ಮಂದಿರ

ಚಂದ್ರ ಚೂಡೇಶ್ವರ ಮಂದಿರ

ಪ್ರಾಕೃತಿಕ ಸೌಂದರ್ಯವನ್ನು ಹೊರತುಪಡಿಸಿ ನೀವು ಇಲ್ಲಿನ ಧಾರ್ಮಿಕ ಸ್ಥಳಗಳ ದರ್ಶನವನ್ನೂ ಮಾಡಬಹುದು. ಹೊಸೂರಿನಲ್ಲಿ ನ್ಯಾಷನಲ್ ಹೈವೆ 7ರಲ್ಲಿ ಸಣ್ಣ ಬೆಟ್ಟದ ಮೇಲೆ ನಿರ್ಮಿಸಲಾಗಿರುವ ಚಂದ್ರ ಚೂಡೇಶ್ಚರ ಮಂದಿರಕ್ಕೆ ಭೇಟಿ ನೀಡಬಹುದು. ಈ ಮಂದಿರವು ಕೃಷ್ಣಗಿರಿಯ ಸಮೀಪದ ಪವಿತ್ರ ಸ್ಥಳಗಳಲ್ಲೊಂದಾಗಿದೆ. ಅಷ್ಟೇ ಅಲ್ಲದೆ ಇಲ್ಲಿ ತಾರಾ ಮಂಡಲ ಹಾಗೂ ಚಿಲ್ಡ್ರನ್ ಪಾರ್ಕ್ ಕೂಡಾ ಕಾಣಬಹುದಾಗಿದೆ.

ಕೃಷ್ಣಗಿರಿ ಕೋಟೆ

ಕೃಷ್ಣಗಿರಿ ಕೋಟೆ

PC: Abhishek.Digha

ಇವೆಲ್ಲವನ್ನು ಹೊರತುಪಡಿಸಿ ನೀವು ಕೃಷ್ಣಗಿರಿ ಕೋಟೆಯನ್ನು ನೋಡಬಹುದು. ಈ ಕೋಟೆಯು ಜಿಲ್ಲೆಯ ಪ್ರಸಿದ್ಧ ಹಾಗೂ ಬಲಿಷ್ಟ ಕೋಟೆಯಾಗಿದೆ. ಈಗ ಪುರಾತತ್ವ ಇಲಾಖೆಯು ಇದನ್ನು ನೋಡಿಕೊಳ್ಳುತ್ತಿದೆ. ಈ ಕೋಟೆಯನ್ನು ಕೃಷ್ಣದೇವರಾಯನು ನಿರ್ಮಿಸಿದನು. ಇತಿಹಾಸದ ಬಗ್ಗೆ ತಿಳಿಯಲು ನೀವು ಇಲ್ಲಿಗೆ ಭೇಟಿ ನೀಡಬಹುದು.

ಹನುಮಂತ ತೀರ್ಥ

ಹನುಮಂತ ತೀರ್ಥ

ಕೃಷ್ಣಗಿರಿಯ ಸಮೀಪದ ತಾಣಗಳಲ್ಲಿ ನೀವು ಹನುಮಂತ ತೀರ್ಥವನ್ನೂ ಭೇಟಿ ನೀಡಬಹುದು. ಇದು ಪನ್ನೀಯರ್ ನದಿ ತೀರದಲ್ಲಿದೆ. ಇಲ್ಲಿನ ನೀರು ಪವಿತ್ರವಾಗಿದೆ, ಇಲ್ಲಿ ಆಧ್ಯಾತ್ಮಿಕ ಶಾಂತಿ ದೊರೆಯುತ್ತದೆ ಎನ್ನಲಾಗುತ್ತದೆ. ಇಲ್ಲಿನ ಸ್ಥಳವನ್ನು ಸುತ್ತಾಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಜುಲಾಯಿ-ಆಗಸ್ಟ್ ತಿಂಗಳಲ್ಲಿ ಆಗಮಿಸುತ್ತಾರೆ.

ಥಲಿ (ಲಿಟಲ್ ಇಂಗ್ಲೆಂಡ್)

ಥಲಿ (ಲಿಟಲ್ ಇಂಗ್ಲೆಂಡ್)

PC:A.danielwesley

ಹೊಸೂರಿನಲ್ಲಿ ಸುಮಾರು 25 ಕಿ.ಮಿ ದೂರದಲ್ಲಿ ಥಲಿ ಎನ್ನುವ ಸ್ಥಳವೊಂದಿದೆ. ಇದೊಂದು ಪ್ರಮುಖ ಪರ್ಯಾಟನಾ ಸ್ಥಳವಾಗಿದ್ದು, ಇದನ್ನು ಲಿಟಲ್ ಇಂಗ್ಲೆಂಡ್ ಎನ್ನಲಾಗುತ್ತದೆ. ಈ ಸ್ಥಳವು ಬೆಟ್ಟಗುಡ್ಡಗಳನ್ನು ಹೊಂದಿದ್ದು, ಇಂಗ್ಲೆಂಡ್‌ನಂತಹ ವಾತಾವರಣವನ್ನು ಹೊಂದಿರುವುದಕ್ಕೆ ಪ್ರಸಿದ್ಧವಾಗಿದೆ. ಇದನ್ನು ಬ್ರಿಟಿಷ್ ಸರ್ಕಾರದ ಸಂದರ್ಭದಲ್ಲೇ ಲಿಟಲ್ ಇಂಗ್ಲೆಂಡ್ ಎನ್ನುವ ಹೆಸರಿನಿಂದ ಕರೆಯಲಾಗುತ್ತಿತ್ತು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+