ನೀವು ನಿಮ್ಮ ಮದುವೆಯನ್ನು ಕೆಲವೇ ಜನರ ಸಮಕ್ಷಮದಲ್ಲಿ ನಡೆಸಬೇಕೆಂದಿದ್ದರೆ ಅದಕ್ಕೆ ದೊಡ್ಡ ದೊಡ್ಡ ಹಾಲ್‌ಗಳನ್ನು ಬುಕ್ ಮಾಡೋ ಅಗತ್ಯವಿರುವುದಿಲ್ಲ. ಸ್ವಲ್ಪ ಇಂಟ್ರಸ್ಟಿಂಗ್ ಆಗಿ ಯೋಚಿಸಿದ್ದಲ್ಲಿ ಸಾಕಷ್ಟು ಯೂನಿಕ್ ವೆಡ್ಡಿಂಗ್ ಡೆಸ್ಟಿನೇಶನ್‌ಗಳು ಸಿಗುತ್ತದೆ. ಇವು ನಿಮ್ಮ ಮದುವೆಯ ದಿನವನ್ನು ಇನ್ನಷ್ಟು ಸುಮಧುರವಾಗಿಸುತ್ತದೆ. ಜೊತೆಗೆ ಎಲ್ಲರಿಗೂ ನೆನಪುಳಿಯುವಂತಿರುತ್ತದೆ ಇತರರಿಗೂ ಸ್ಫೂರ್ತಿದಾಯಕವಾಗುತ್ತದೆ. ಅಂತಹ ಕೆಲವು ವೆಡ್ಡಿಂಗ್ ಡೆಸ್ಟಿನೇಶನ್ ಬಗ್ಗೆ ನಾವಿಲ್ಲಿ ತಿಳಿಸಿದ್ದೇವೆ.

ಬೋಟ್ ಮದುವೆ
PC:Robin klein
ಸಾಮಾನ್ಯವಾಗಿ ಬೋಟ್‌ನಲ್ಲಿ ಪ್ರಯಾಣಿಸುವುದೆಂದರೆ ಎಲ್ಲರಿಗೂ ಇಷ್ಟ. ಬೋಟ್‌ನ್ನು ಹನಿಮೂನ್‌ಗೆ ಬಳಸುತ್ತಾರೆ ಎನ್ನುವುದು ನಿಮಗೆ ಗೊತ್ತಿರಬಹುದು. ಹಾಗಾದ್ರೆ ಮದುವೆಗ್ಯಾಕೆ ಬಳಸಬಾರದು. ನಡು ಸರೋವರದ ಮಧ್ಯೆಯಲ್ಲಿ ಬೋಟ್‌ನಲ್ಲಿ ಮದುವೆಯಾಗೋದು ಒಂದು ಥರಾ ಖುಷಿ ನೀಡುತ್ತದೆ. ಜೊತೆಗೆ ಸಮಾರಂಭಕ್ಕೆ ಆಗಮಿಸಿದವರ ಮನಸ್ಸಿನಲ್ಲೂ ಅಚ್ಚಳಿಯದೇ ಉಳಿಯುತ್ತದೆ. ನಿಮಗೆ ನೀರು, ಸಮುದ್ರವೆಂದರೆ ಇಷ್ಟವೆಂದಾದಲ್ಲಿ ಈ ಐಡಿಯಾವನ್ನು ಅಳವಡಿಸುವುದು ಒಳ್ಳೆಯದು.

ಐತಿಹಾಸಿಕ ಲೈಬ್ರೆರಿ
PC: Lotgov
ಕೆಲವು ಸ್ಥಳಗಳಲ್ಲಿ ಮದುವೆಯಂತಹ ಸಮಾರಂಭಗಳನ್ನು ನಡೆಸಲು ಅನುಮತಿ ನೀಡುತ್ತಾರೆ. ಒಂದು ವೇಳೆ ನೀವು ಲಿಟ್‌ರೇಚರ್‌ನ್ನು ಇಷ್ಟಪಡುವವರಾದರೆ ನಿಮಗೆ ಈ ಲೈಬ್ರೆರಿ ಐಡಿಯಾ ಖಂಡಿತಾ ಇಷ್ಟವಾಗುತ್ತದೆ. ಇಲ್ಲಿನ ಐತಿಹಾಸಿಕ, ಪುರಾತನ ಕಟ್ಟಡ, ವಾಸ್ತುಶಿಲ್ಪ ನಿಮ್ಮನ್ನು ಇನ್ನಷ್ಟು ಆಕರ್ಷಿಸುತ್ತದೆ.

ಪಾರ್ಕ್
PC:Jörg Blobelt
ಪಾರ್ಕ್‌ನಲ್ಲಿ ತೆರೆದ ಆಕಾಶದ ಕೆಳಗೆ ಮದುವೆಯಾಗೋದು ಒಂದು ರೀತಿ ವಿಭಿನ್ನ ಅನುಭವವನ್ನು ನೀಡುತ್ತದೆ. ಪಾರ್ಕ್‌ನಲ್ಲಿ ಸಾಕಷ್ಟು ಸ್ಥಳಾವಕಾಶ ಕೂಡಾ ಇರುತ್ತದೆ. ಹಚ್ಚ ಹಸಿರಿನ ನಡುವೆ ಸತಿ ಪತಿಗಳು ಒಂದಾಗಲು ಬೆಸ್ಟ್ ಆಪ್ಷನ್ ಆಗಿದೆ.

ಟ್ರೀ ಹೌಸ್
PC:Cherus
ಕಾಡಿನ ಮಧ್ಯೆ ಇರುವ ಕಾಟೇಜ್‌ಗಳು ಸ್ವಲ್ಪ ಗೆಸ್ಟ್‌ಗಳು ಆಗಮಿಸುವ ಮದುವೆಗೆ ಬೆಸ್ಟ್ ಆಯ್ಕೆಯಾಗಿದೆ. ಕಾಡಿನ ಮಧ್ಯೆ ಮರದ ಮೇಲೆ ಇರುವ ಕಾಟೇಜ್‌ನಲ್ಲಿ ಮದುವೆಯಾಗುವುದು ಒಂದು ಸಾಹಸಮಯ ವೆಡ್ಡಿಂಗ್ ಥೀಮ್ ಆಗಿದೆ. ಜೊತೆಗೆ ಕ್ಯಾಂಫ್ ಫಯರ್ ಹಾಕಿಕೊಂಡು, ಉತ್ತಮ ಭೋಜನ ವ್ಯವಸ್ಥೆಯನ್ನೂ ಅಲ್ಲೇ ಮಾಡಬಹುದು. ಇದು ಟ್ರಕ್ಕಿಂಗ್ ಪ್ರೀಯರಿಗೆಲ್ಲಾ ಇಷ್ಟವಾಗುವಂತಹ ಐಡಿಯಾ ಆಗಿದೆ.

ಅರಮನೆಯಲ್ಲಿ
PC: PP Yoonus
ನಿಮ್ಮ ಮದುವೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆಂದಾರೆ ಪ್ಯಾಲೇಸ್ ಬೆಸ್ಟ್ ಆಫ್ಷನ್. ಪ್ಯಾಲೆಸ್‌ನಲ್ಲಿ ಐಷಾರಾಮಿ ಮದುವೆಗಳು ನಡೆಯುತ್ತವೆ. ಜೈಪುರ ಪ್ಯಾಲೆಸ್, ಬೆಂಗಳೂರು ಪ್ಯಾಲೇಸ್ ಹೀಗೆ ಅನೇಕ ಪ್ಯಾಲೇಸ್‌ಗಳು ಮದುವೆ ಸಮಾರಂಭಕ್ಕಾಗಿ ಅರಮನೆಯನ್ನು ಬಾಡಿಗೆಗೆ ನೀಡುತ್ತವೆ.


Click it and Unblock the Notifications

















