ಭಾರತದಲ್ಲಿ ಕಂಡುಬರುವ ಪಶ್ಚಿಮ ಘಟ್ಟಗಳು ವಿಶ್ವದಲ್ಲೆ ಮೊದಲ ಹತ್ತು ಜೀವ ವೈವಿಧ್ಯತೆ ಕಂಡುಬರುವ ಉತ್ಕೃಷ್ಟ ವನ್ಯ ಜೀವಿಗಳ ತಾಣಗಳ ಪೈಕಿ ಒಂದಾಗಿದ್ದು ಪ್ರಮುಖ ಪ್ರವಾಸಿ ಆಕರ್ಷಣೆಯೂ ಆಗಿದೆ. ಗುಜರಾತ್ ಹಾಗು ಮಹಾರಾಷ್ಟ್ರ ರಾಜ್ಯಗಳ ಪಶ್ಚಿಮ ಅಂಚಿನ ಬಳಿಯಿಂದ ಪ್ರಾರಂಭವಾಗುವ ಈ ಘಟ್ಟಗಳು ಕರ್ನಾಟಕ, ಕೇರಳ ಹಾಗು ತಮಿಳುನಾಡಿನ ಕನ್ಯಾಕುಮಾರಿಯ ವರೆಗೂ ಹರಡಿದ್ದು ಸುಮಾರು 1600 ಕಿ.ಮೀ ಗಳಷ್ಟು ವ್ಯಾಪ್ತಿಯನ್ನು ಹೊಂದಿದೆ. ಒಟ್ಟಾರೆ 16,000 ಚ.ಕಿ.ಮೀ ಗಳಷ್ಟು ವಿಸ್ತೀರ್ಣವನ್ನು ಹೊಂದಿರುವ ಪಶ್ಚಿಮ ಘಟ್ಟಗಳು ಸಮುದ್ರ ಮಟ್ಟದಿಂದ ಸರಾಸರಿ 1200 ಮೀ (3900 ಅಡಿಗಳು) ಎತ್ತರದಲ್ಲಿದೆ. ಇದು ಯುನೆಸ್ಕೊದಿಂದ ವಿಶ್ವ ಪಾರಂಪರಿಕ ತಾಣಗಳ ಮಾನ್ಯತೆಯನ್ನು ಪಡೆದಿದೆ.
ಪ್ರಸ್ತುತ, 5000 ಕ್ಕೂ ಅಧಿಕ ಹೂ ಬಿಡುವ ಗಿಡಗಳು, 139 ಸಸ್ತನಿಗಳು, 508 ಪಕ್ಷಿ ಪ್ರಭೇದಗಳು, 179 ಉಭಯವಾಸಿಗಳನ್ನು ಈ ಪಶ್ಚಿಮ ಘಟ್ಟದಲ್ಲಿ ಗುರುತಿಸಲಾಗಿದೆ. ಇನ್ನೂ ಗುರುತಿಸಲ್ಪಡದ ಎಷ್ಟೊ ಜೀವಿಗಳಿರಬಹುದೆಂದೂ ಅಂದಾಜಿಸಲಾಗಿದೆ. ಒಟ್ಟಾರೆಯಾಗಿ ವನ್ಯಜೀವಿ ಪ್ರಿಯ ಪ್ರವಾಸಿಗರಿಗೆ ಇದೊಂದು ಅತ್ಯುತ್ತಮ ಆದರ್ಶಮಯ ತಾಣವಾಗಿದೆ. ಈ ಲೇಖನವು ಪಶ್ಚಿಮ ಘಟ್ಟದಲ್ಲಿ ಕಾಣಬಹುದಾದ ಹಲವಾರು ಅನನ್ಯ ಜೀವಿಗಳ ಪೈಕಿ ಕೆಲವು ವಿಶೀಷ್ಟ ಜೀವಿಗಳ ಪರಿಚಯ ಮಾಡಿಸುತದೆ. ಎಂದಾದರೂ ಒಮ್ಮೆ ನೀವು ಪಶ್ಚಿಮ ಘಟ್ಟಗಳಿಗೆ ಪ್ರವಾಸ ಕೈಗೊಂಡರೆ ಇಲ್ಲಿನ ಕೆಲ ಜೀವಿಗಳನ್ನು ಗುರುತಿಸಲು ಪ್ರಯತ್ನಿಸಿ. ಖಂಡಿತವಾಗಿಯೂ ನಿಮ್ಮ ಪ್ರವಾಸ ಆದರ್ಶಮಯವಾಗಿ ಪರಿಣಮಿಸುತ್ತದೆ.

ಅನುರಾ:
ಅನುರಾ ಸಂಕುಲಕ್ಕೆ ಒಳಪಡುವ ಒಂದು ಬಗೆಯ ಕಪ್ಪೆ. ಪಶ್ಚಿಮ ಘಟ್ಟದಲ್ಲಿ ಇಂತಹ ಸಂಕುಲದ ಕಪ್ಪೆಗಳು ನೋಡಲು ಕಾಣಸಿಗುತ್ತವೆ.

ನೇರಳೆ ಬಣ್ಣದ ಕಪ್ಪೆ:
ಉಭಯವಾಸಿಯಾದ ನೇರಳೆ ಬಣ್ಣದ ಕಪ್ಪೆಯನ್ನು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ 2003 ರಲ್ಲಿ ಮೊದಲ ಬಾರಿಗೆ ಶೋಧಿಸಲಾಯಿತು.
ಚಿತ್ರಕೃಪೆ: Karthickbala

ಲೆಸ್ಸರ್ ಫಾಲ್ಸ್ ವ್ಯಾಂಪೈರ್ ಬ್ಯಾಟ್ಸ್:
ಪಶ್ಚಿಮ ಘಟ್ಟದ ತಲೆವಾಡಿ ಗುಹೆಗಳಲ್ಲಿ ಈ ಅದ್ಭುತವಾದ ಬಾವಲಿಗಳು ಕಂಡುಬರುತ್ತವೆ.
ಚಿತ್ರಕೃಪೆ: Piekfrosch

ವ್ರೌಟನ್ ಫ್ರೀ ಟೇಲ್ಡ್ ಬ್ಯಾಟ್/ಬಾವಲಿ:
ಅವಸಾನದ ಅಂಚಿನಲ್ಲಿರುವ ಈ ಬಾವಲಿಗಳು ಬೆಳಗಾವಿ ಜಿಲ್ಲೆಯ ಭೀಮ್ಗಡ್ ಪ್ರದೇಶದ ಪಶ್ಚಿಮ ಘಟ್ಟದ ಬಾರಾಪೆಡೆ ಗುಹೆಗಳಲ್ಲಿ ಕಂಡುಬರುತ್ತವೆ.
ಚಿತ್ರಕೃಪೆ: Kalyanvarma

ಕಪ್ಪು ಚಿರತೆ/ಬ್ಲ್ಯಾಕ್ ಪ್ಯಾಂಥರ್:
ಇತ್ತ ಹುಲಿಯೂ ಅನಿಸದೆ ಅತ್ತ ಬೆಕ್ಕನ್ನು ಹೋಲದೆ ಭವ್ಯವಾಗಿ ಕಾಣುವ ಸಂಪೂರ್ಣ ಕಪ್ಪು ಬಣ್ಣದ ಕಪ್ಪು ಚಿರತೆಯು ಭಾರತದಲ್ಲಿ ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುತ್ತದೆ. ಅದರಲ್ಲೂ ಕರ್ನಾಟಕದ ಭದ್ರಾ ಹುಲಿ ಮೀಸಲು ಪ್ರದೇಶದಲ್ಲಿ ಇವುಗಳನ್ನು ಕಾಣಬಹುದಾಗಿದೆ.
ಚಿತ್ರಕೃಪೆ: Cburnett

ಗ್ರೇಟ್ ಇಂಡಿಯನ್ ಹಾರ್ನ್ ಬಿಲ್:
ಗ್ರೇಟ್ ಪೈಡ್ ಹಾರ್ನ್ ಬಿಲ್ ಎಂತಲೂ ಕರೆಯಲ್ಪಡುವ ಭಾರತದ ದೊಡ್ಡ ಹಕ್ಕಿಗಳ ಪೈಕಿ ಒಂದಾಗಿರುವ ಈ ಪಕ್ಷಿಯು ನೋಡಲು ವಿಶೀಷ್ಟವಾಗಿದ್ದು ಪಶ್ಚಿಮ ಘಟ್ಟಗಳ ದಟ್ಟವಾದ ಅರಣ್ಯಗಳಲ್ಲಿ ಹಾಗು ಈಶಾನ್ಯ ಭಾರತದ ಅರುಣಾಚಲ ಪ್ರದೇಶ ಹಾಗು ನಾಗಾಲ್ಯಾಂಡ್ ರಾಜ್ಯಗಳಲ್ಲಿ ಕಂಡುಬರುತ್ತದೆ.
ಚಿತ್ರಕೃಪೆ: Kalyanvarma

ಇಂಡಿಯನ್ ಮುಂಜ್ಯಾಕ್ (Indian munjac):
ಸಾಮಾನ್ಯವಾಗಿ ಬೊಗಳುವ ಜಿಂಕೆ ಎಂದು ಕರೆಯಲ್ಪಡುವ ಈ ವಿಶೀಷ್ಟ ಜಿಂಕೆಗಳು ಪಶ್ಚಿಮ ಘಟ್ಟಗಳ ಭಾಗವಾಗಿದ್ದು ಅದರಲ್ಲೂ ಚಿಕ್ಕಮಗಳೂರಿನ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕಂಡುಬರುತ್ತವೆ.
ಚಿತ್ರಕೃಪೆ: N. A. Naseer

ಕಾಡು ಹಂದಿ:
ಮಾಂಸ ಭಕ್ಷಕವೂ ಆಗಿರುವ ಭಾರತೀಯ ಕಾಡು ಹಂದಿಗಳು ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಮತ್ತೊಂದು ಪ್ರಾಣಿ ಪ್ರಭೇದ. ನೋಡಲು ಸಾಮಾನ್ಯವಾಗಿ ನಗರಗಳಲ್ಲಿ ಕಂಡುಬರುವ ಹಂದಿಗಳಂತಿರದೆ ಬಾಯಿಯ ಮುಂಭಾಗದಲ್ಲಿ ಕೋರೆ ಹಲ್ಲುಗಳನ್ನು ಗಮನಿಸಬಹುದು.
ಚಿತ್ರಕೃಪೆ: Mariomassone

ಬುಫೊ:
ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಮತ್ತೊಂದು ಸೊಗಸಾದ ಕಪ್ಪೆ.

ಕೆಂಪು ಪಟ್ಟಿಯ ಬಾರ್ಬ್:
ಪಶ್ಚಿಮ ಘಟ್ಟವು ಹಲವು ನೈಸರ್ಗಿಕ ಹಳ್ಳ ಕೊಳ್ಳ, ಹಾಗು ತೊರೆಗಳಿಗೆ ಮನೆಯಾಗಿದೆ. ಇಂತಹ ತಾಜಾ ನೀರಿನ ತೊರೆಗಳಲ್ಲಿ ವೈವಿಧ್ಯಮಯ ಬಾರ್ಬ್ ಅಲಂಕಾರಿಕ ಮೀನುಗಳು ಕಂಡುಬರುತ್ತವೆ. ಚಿತ್ರದಲ್ಲಿರುವುದು ಕೆಂಪು ಪಟ್ಟಿಯ ಬಾರ್ಬ್ ಮೀನು.
ಚಿತ್ರಕೃಪೆ: Michał Zalewski

ಥಿಯೋಬಾಲ್ಡ್ಸ್ ಟಾಂಬ್ ಬಾವಲಿ:
ಮತ್ತೊಂದಿ ವಿರಳ ಜಾತಿಯ ಈ ಬಾವಲಿಯು ಬೆಳಗಾವಿಯ ಭೀಮ್ಗಡ್ ಬಳಿಯಲ್ಲೆ ಇರುವ ಕೃಷ್ಣಾಪುರ ಗುಹೆಗಳಲ್ಲಿ ಕಂಡುಬರುತ್ತದೆ. ಭಾರತದಲ್ಲಿ ಕೇವಲ ಮೂರೇ ಪ್ರದೇಶಗಳಲ್ಲಿ ಈ ಬಾವಲಿಗಳನ್ನು ಕಾಣಬಹುದಾಗಿದ್ದು ಪಶ್ಚಿಮ ಘಟ್ಟದ ಈ ತಾಣವೂ ಅದರಲ್ಲಿ ಒಂದಾಗಿದೆ. ಇನ್ನುಳಿದಂತೆ ಎರಡು ಪ್ರದೇಶಗಳು ಮಧ್ಯ ಪ್ರದೇಶದಲ್ಲಿವೆ.
ಚಿತ್ರಕೃಪೆ: OwlMachine

ಯುರೋಪೆಲ್ಟಿಡೆ:
ಹಾವುಗಳ ಕುಟುಂಬಕ್ಕೆ ಸಂಬಂಧಪಟ್ಟ ಈ ಸರಿಸೃಪವು ಬಹುಶಃ ಪಶ್ಚಿಮ ಘಟ್ಟದಲ್ಲಿ ಮಾತ್ರವೆ ಕಾಣ ಸಿಗಲು ಸಾಧ್ಯ. ಆದರೆ ಇದು ವಿಷಕಾರಿಯಲ್ಲ.
ಚಿತ್ರಕೃಪೆ: Saleem Hameed

ಪಫರ್ ಮೀನು:
ಪಶ್ಚಿಮ ಘಟ್ಟದ ತೊರೆಗಳಲ್ಲಿ ಕಂಡುಬರುವ ವಿಶೀಷ್ಟ ಪಫರ್ ಮೀನು.
ಚಿತ್ರಕೃಪೆ: TANAKA Juuyoh

ನೀಲಗಿರಿ ತೋಪಿನ ಪಾರಿವಾಳ:
ಪಶ್ಚಿಮ ಘಟ್ಟದಲ್ಲಿ ಬರುವ ನೀಲಗಿರಿ ಪ್ರದೇಶದಲ್ಲಿ ಕಂಡುಬರುವ ಸುಂದರ ಪಾರಿವಾಳ.
ಚಿತ್ರಕೃಪೆ: Atanu Mondal

ಸಿಂಹ ಬಾಲದ ಕೋತಿ:
ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಾಣಬಹುದಾದ ಕೋತಿ. ಇದರ ಬಾಲವು ಸಿಂಹ ಬಾಲದ ರಚನೆಯ ಹಾಗೆಯೆ ಇರುವುದರಿಂದ ಇದಕ್ಕೆ ಸಿಂಹ ಬಾಲದ ಕೋತಿ ಎಂಬ ಹೆಸರು ಬಂದಿದೆ.
ಚಿತ್ರಕೃಪೆ: Babujayan

ಶಂಖು ಹುಳು:
ಪಶ್ಚಿಮ ಘಟ್ಟದ ದಟ್ಟ ಕಾಡುಗಳಲ್ಲಿ ಕಂಡು ಬರುವ ಮನಮೋಹಕ ಬಣ್ಣದ ಒಂದು ಶಂಖು ಹುಳು.
ಚಿತ್ರಕೃಪೆ: L. Shyamal

ಅಣಬೆ:
ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿ ಕಂಡು ಬರುವ ವಿಶೀಷ್ಟ ಬಗೆಯ ಶಿಲೀಂಧ್ರ ಅಥವಾ ನಾಯಿಕೊಡೆ.
ಚಿತ್ರಕೃಪೆ: Rayabhari

ಬೆಂಗಾಲ್ ಟೈಗರ್:
ಪಶ್ಚಿಮ ಘಟ್ಟದ ಭದ್ರಾ ಅರಣ್ಯ ಪ್ರದೇಶದಲ್ಲಿ ಕಂಡು ಬರುವ ಬಂಗಾಳ ಹುಲಿ.
ಚಿತ್ರಕೃಪೆ: Dineshkannambadi

ಮರಗಿಟುಕ:
ವುಡ್ ಪೆಕ್ಕರ್ ಅಥವಾ ಮರಗಿಟುಕವು ಸಾಮಾನ್ಯವಾಗಿ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದ ಮರ ಗಿಡಗಳಲ್ಲಿ ಕಂಡುಬರುತ್ತದೆ.
ಚಿತ್ರಕೃಪೆ: Suriyakumars

ಜುಟ್ಟುಳ್ಳ ಹದ್ದು:
ಅಪರೂಪದ ಜುಟ್ಟುಳ್ಳ ಹದ್ದು ದಕ್ಷಿಣ ಭಾರತದ ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ಕಂಡುಬರುತ್ತದೆ.
ಚಿತ್ರಕೃಪೆ: Suriyakumars


Click it and Unblock the Notifications

















