Search
  • Follow NativePlanet
Share
» »ಎರಡು ವಿಶಿಷ್ಟ ಏಕಮುಖಿ ದತ್ತ ದೇವಾಲಯಗಳು!

ಎರಡು ವಿಶಿಷ್ಟ ಏಕಮುಖಿ ದತ್ತ ದೇವಾಲಯಗಳು!

By Vijay

ತ್ರಿಮೂರ್ತಿಗಳ ಅವತಾರನೆಂದೆ ಆರಾಧಿಸಲಾಗುವ, ನಾಥ ಸಂಪ್ರದಾಯದ ಪ್ರಮುಖ ರೂವಾರಿಯಾದ ಶ್ರೂ ಗುರು ದತ್ತಾತ್ರೇಯರಿಗೆ ನಡೆದುಕೊಳ್ಳುವವರು ಅನೇಕ. ಸಾಮಾನ್ಯವಾಗಿ ದತ್ತಾತ್ರೇಯ ಸ್ವಾಮಿಯನ್ನು ಮೂರು ಮುಖಗಳಲ್ಲೆ ಬಿಂಬಿಸಲಾಗುತ್ತದಾದರೂ ಏಕಮುಖವುಳ್ಳ ದತ್ತಾತ್ರೇಯ ಸ್ವಾಮಿಗಳ ಸನ್ನಿಧಾನಗಳು ಬಹಳ ವಿರಳ ಸಂಖ್ಯೆಯಲ್ಲಿ ಕಂಡುಬರುತ್ತವೆ.

ಶ್ರೀಕ್ಷೇತ್ರ ಗಾಣಗಾಪುರ ದರ್ಶನ!

ಆದಾಗ್ಯೂ, ಆತ್ರೇಯ ಮಹಾ ಮುನಿಗಳ ಪುತ್ರನಾದ ದತ್ತಾತ್ರೇಯರಿಗೆ ಮುಡಿಪಾದ ದೇವಾಲಯಗಳು ಭಾರತದಾದ್ಯಂತ ನೂರಾರು ಸಂಖ್ಯೆಯಲ್ಲಿ ಕಂಡುಬರುತ್ತವೆಯಾದರೂ ಅದರಲ್ಲಿ ಪ್ರಮುಖವಾಗಿ ಪರಿಗಣಿಸಲ್ಪಡುತ್ತದೆ ಶ್ರೀಕ್ಷೇತ್ರ ಗಾಣಗಾಪುರ. ಅದರಂತೆ ದತ್ತಾತ್ರೇಯ ಸ್ವಾಮಿಯ ಏಕ ಮುಖವುಳ್ಳ ದೇವಾಲಯಗಳು ಬಲು ಅಪರೂಪವೆಂದೆ ಹೇಳಬಹುದು.

ಎರಡು ವಿಶಿಷ್ಟ ಏಕಮುಖಿ ದತ್ತ ದೇವಾಲಯಗಳು!

ಚಿತ್ರಕೃಪೆ: wikipedia

ಇಂತಹ ಎರಡು ಅಪರೂಪದ ದೇವಾಲಯಗಳ ಕುರಿತು ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ. ಮೊದಲನೇಯದಾಗಿ ಮಧ್ಯ ಪ್ರದೇಶ ರಾಜ್ಯದ ಖರಗೋನ್ ಜಿಲ್ಲೆಯ ಮಹೇಶ್ವರ ನಗರದಲ್ಲಿರುವ ಏಕ ಮುಖಿ ದತ್ತಾತ್ರೇಯ ದೇವಸ್ಥಾನ. ಇದು ಹೊಸದಾಗಿ ನಿರ್ಮಿಸಲಾದ ದೇವಾಲಯವಾಗಿದ್ದು ಸುಮಾರು 1000 ಚ.ಅಡಿಗಳಷ್ಟು ಸ್ಥಳವನ್ನು ಆಕ್ರಮಿಸಿದೆ.

ಎರಡು ವಿಶಿಷ್ಟ ಏಕಮುಖಿ ದತ್ತ ದೇವಾಲಯಗಳು!

ಮಹೇಶ್ವರದ ಏಕ ಮುಖಿ ದತ್ತ ಮಂದಿರ, ಚಿತ್ರಕೃಪೆ: Nilrocks

ನರ್ಮದಾ ನದಿಯು ಅತ್ಯಂತ ರಭಸವಾಗಿ ಹರಿಯುವ ಸ್ಥಳದ ತಟದಲ್ಲಿ ಏಕ ಮುಖವುಳ್ಳ ದತ್ತಾತ್ರೇಯನ ಈ ದೇವಾಲಯವಿದ್ದು ಪ್ರವಾಸಿಗರನ್ನು ಸಾಕಷ್ಟು ಆಕರ್ಷಿಸುತ್ತದೆ. ಈ ದೇವಾಲಯದಲ್ಲಿ ಒಂದೆ ಮುಖವುಳ್ಳ ದತ್ತಾತ್ರೇಯ ಸ್ವಾಮಿಯೊಂದಿಗೆ ನರ್ಮದಾ ದೇವಿ ಹಾಗೂ ಗಣೇಶನು ನೆಲೆಸಿರುವುದನ್ನು ಕಾಣಬಹುದು.

ಎರಡು ವಿಶಿಷ್ಟ ಏಕಮುಖಿ ದತ್ತ ದೇವಾಲಯಗಳು!

ನರಾಯಣಪುರ ದತ್ತ ಮಂದಿರ, ಚಿತ್ರಕೃಪೆ: Nilrocks

ಎರಡನೇಯದಾಗಿ ಮಹಾರಾಷ್ಟ್ರದ ಪುಣೆ ನಗರದ ನಾರಾಯಣಪುರದಲ್ಲಿರುವ ಏಕ ಮುಖ ದತ್ತಾತ್ರೇಯ ಮಂದಿರ. ಇದು ಪುಣೆ ನಗರದಲ್ಲೆ ಸಾಕಷ್ಟು ಹೆಸರುವಾಸಿಯಾದ ದತ್ತಾತ್ರೇಯ ಸ್ವಾಮಿಗೆ ಮುಡಿಪಾದ ದೇವಾಲಯವಾಗಿದೆ. ದತ್ತ ಜಯಂತಿಯ ಸಂದರ್ಭದಲ್ಲಂತೂ ಲಕ್ಷ ಸಂಖ್ಯೆಯಲ್ಲಿ ಭಕ್ತಾದಿಗಳು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಪುಣ್ಯ ನಗರಿ ಪುಣೆಯ ಧಾರ್ಮಿಕ ಕೇಂದ್ರಗಳು

ನಾರಾಯಣಪುರ ಒಂದು ಗ್ರಾಮ ಪ್ರದೇಶವಾಗಿದ್ದು ಪುಣೆಯ ದಕ್ಷಿಣ ದಿಕ್ಕಿನಲ್ಲಿ ಸ್ಥಿತವಿದೆ. ಮುಂಬೈ-ಪುಣೆ-ಸತಾರಾ ಮಾರ್ಗದ ಮೂಲಕ ನಾರಾಯಣಪುರವನ್ನು ಸುಲಭವಾಗಿ ತಲುಪಬಹುದಾಗಿದೆ. ಅಲ್ಲದೆ ಈ ತಾಣದಲ್ಲಿ ಮತ್ತೊಂದು ಪ್ರಸಿದ್ಧವಾದ ಪುರಂದರ ಕೋಟೆಯನ್ನೂ ಸಹ ಕಾಣಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+