Search
  • Follow NativePlanet
Share
» »ವಾಜಪೇಯಿಯವರ ನೆಚ್ಚಿನ ಸ್ವೀಟ್‌ ಶಾಪ್ "ಥಗ್ಗು ಕೀ ಲಡ್ಡು" ಬಗ್ಗೆ ನಿಮಗೆ ಗೊತ್ತಾ?

ವಾಜಪೇಯಿಯವರ ನೆಚ್ಚಿನ ಸ್ವೀಟ್‌ ಶಾಪ್ "ಥಗ್ಗು ಕೀ ಲಡ್ಡು" ಬಗ್ಗೆ ನಿಮಗೆ ಗೊತ್ತಾ?

ಕಾನ್ಪುರದಲ್ಲಿ ನೆಲೆಸಿರುವವರಿಗೆ 'ಥಗ್ಗು ಕೀ ಲಡ್ಡು' ಬಗ್ಗೆ ಗೊತ್ತೇ ಇರಬಹುದು. ಇದು ಕಾನ್ಪುರದಲ್ಲೇ ಬಹಳ ಪ್ರಸಿದ್ಧವಾದ ಸ್ವೀಟ್ ಶಾಪ್ ಆಗಿದೆ. ಇದೀಗ ಥಗ್ಗು ಕೀ ಲಡ್ಡುವಿನ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಅದಕ್ಕೆ ಕಾರಣ ಅಟಲ್ ಬಿಹಾರಿ ವಾಜಪೇಯಿ. ದೇಶದ ಮಾಜಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ನಿನ್ನೆ ದೈವಾಧೀನರಾಗಿದ್ದಾರೆ. ಈ ಸಂದರ್ಭದಲ್ಲಿ ಕಾನ್ಪುರದಲ್ಲಿರುವ ಅಟಲ್‌ ಜೀಯವರ ನೆಚ್ಚಿನ ಲಡ್ಡು ಶಾಪ್‌ನ ಚರ್ಚೆ ನಡೆಯುತ್ತಿದೆ.

ಅಟಲ್‌ ಜೀ ನೆಚ್ಚಿನ ಸ್ವೀಟ್ ಶಾಪ್

ಅಟಲ್‌ ಜೀ ನೆಚ್ಚಿನ ಸ್ವೀಟ್ ಶಾಪ್

ಕಾನ್ಪುರದಲ್ಲಿನ ಥಗ್ಗು ಕೀ ಲಡ್ಡು ಅಟಲ್‌ಜೀಯ ನೆಚ್ಚಿನ ಸ್ವೀಟ್‌ ಶಾಪ್ ಆಗಿತ್ತು. ಅಟಲ್‌ ಜೀ ಕಾನ್ಪುರಕ್ಕೆ ಆಗಮಿಸಿದಾಗ ತಗ್ಗುವಿನ ಲಡ್ಡುವಿನಿಂದ ಸ್ವೀಟ್ಸ್‌ ಖರೀದಿಸುತ್ತಿದ್ದರು. ಈ ಸ್ವೀಟ್‌ ಶಾಪ್‌ನ ಓನರ್ ಅಟಲ್‌ ಜೀ ಕಾನ್ಪುರಕ್ಕೆ ಬಂದಾಗ ಲಡ್ಡು ತೆಗೆದುಕೊಂಡು ಹೋಗುತ್ತಿದ್ದರಂತೆ.

 ತಗ್ಗುವಿನ ಲಡ್ಡು ಹೆಸರು ಬಂದಿದ್ದು ಹೇಗೆ?

ತಗ್ಗುವಿನ ಲಡ್ಡು ಹೆಸರು ಬಂದಿದ್ದು ಹೇಗೆ?

ರಾಮಾವತಾರ್‌ ಈ ಸ್ವೀಟ್‌ ಶಾಪ್‌ನ ಮಾಲಿಕ. ಈತ ಒಮ್ಮೆ 75 ವರ್ಷದ ಹಿಂದೆ ಗಾಂಧೀಜಿಯವರ ಭಾಷಣವೊಂದನ್ನು ಕೇಳಿದ್ದರಂತೆ. ಆಗ ಗಾಂಧೀಜಿ ಸಕ್ಕರೆಯನ್ನು ಬಿಳಿ ವಿಷ ಎಂದಿದ್ದರು. ಅದನ್ನು ಕೇಳಿದಾಗಿನಿಂದ ರಾಮಾವತಾರ್‌ ಮನಸ್ಸಿನಲ್ಲಿ ಏನೋ ಒಂದು ಗೊಂದಲ ಶುರುವಾಗಿತ್ತು.

ಗಾಂಧೀ ಭಾಷಣದಿಂದ ಪ್ರಭಾವಿತನಾದ ಮಾಲಿಕ

ಗಾಂಧೀ ಭಾಷಣದಿಂದ ಪ್ರಭಾವಿತನಾದ ಮಾಲಿಕ

ತಾನು ಒಂದು ಸ್ವೀಟ್‌ ಶಾಪ್ ನಡೆಸುತ್ತಿದ್ದು, ಅದರಲ್ಲಿ ಸಕ್ಕರೆಯ ಅಂಶವನ್ನು ಬಳಸುತ್ತಿದ್ದೇನೆ. ಎನ್ನುವ ಅಪರಾಧಿ ಭಾವನೆ ಕಾಡಲಾರಂಭಿಸಿತಂತೆ. ಆಗಿನಿಂದ ಸ್ವೀಟ್ ಶಾಪ್ ಮಾಲಿಕ ತನ್ನ ಶಾಪ್‌ನ ಹೆಸರನ್ನು ಥಗ್ಗು ಕೀ ಲಡ್ಡು ಎಂದು ಹೆಸರಿಟ್ಟ. ಅಂದರೆ ಮೋಸದ ಲಡ್ಡು ಎಂದರ್ಥವಾಗುತ್ತದೆ.

ಅಪರಾಧಿ ಭಾವನೆಯಿಲ್ಲ

ಅಪರಾಧಿ ಭಾವನೆಯಿಲ್ಲ

ಈಗ ಆತನದಲ್ಲಿ ಯಾವುದೇ ರೀತಿಯ ಅಪರಾಧಿ ಭಾವನೆಯಿಲ್ಲ. ಯಾಕೆಂದರೆ ಅಂಗಡಿ ಹೆಸರೇ ಥಗ್ಗು ಎಂದು ಇಟ್ಟಿದ್ದಾರೆ. ಈ ಮೂಲಕ ಜನರಿಗೆ ಅದರಲ್ಲಿ ಸಕ್ಕರೆ ಅಂಶ ಬಳಸಲಾಗಿದೆ ಎನ್ನುವುದನ್ನು ಮುಚ್ಚಿಟ್ಟಿಲ್ಲ.

ಶುದ್ಧ ತುಪ್ಪದಿಂದ ತಯಾರಿಸುವ ಸ್ವೀಟ್

ಶುದ್ಧ ತುಪ್ಪದಿಂದ ತಯಾರಿಸುವ ಸ್ವೀಟ್

ತನ್ನ ವಿಶೇಷವಾದ ಹೆಸರಿನಿಂದಲೇ ಜನರನ್ನು ಆಕರ್ಷಿಸುವ ಈ ಲಡ್ಡು ಶಾಪ್ ಕಾನ್ಪುರದ ಫೇಮಸ್ ಲಡ್ಡು ಶಾಪ್ ಆಗಿದೆ. ಸಾಕಷ್ಟು ಜನರು ಈ ಲಡ್ಡು ಶಾಪ್‌ನಿಂದ ಸ್ವೀಟ್ ಖರೀದಿಸುತ್ತಾರೆ. ಥಗ್ಗು ಕೀ ಲಡ್ಡುವಿನಲ್ಲಿ ಶುದ್ಧ ತುಪ್ಪದಿಂದಲೇ ಸ್ವೀಟ್‌ನ್ನು ತಯಾರಿಸುತ್ತಾರೆ. ಫ್ರೆಂಡ್ಸ್‌ಗಳಿಗೆ, ಸಂಬಂಧಿಕರಿಗೆ ಗಿಫ್ಟ್‌ ಮಾಡಲು ಈ ಲಡ್ಡು ಬಹಳ ಸೂಕ್ತವಾದುದಾಗಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+