Search
  • Follow NativePlanet
Share
» »ಐದು ಸುಂದರ ಮರದ ಮೇಲಿನ ಮನೆಗಳು

ಐದು ಸುಂದರ ಮರದ ಮೇಲಿನ ಮನೆಗಳು

By Vijay

ನಾವು ಪ್ರತಿಬಾರಿಯೂ ಪ್ರವಾಸ ಹೊರಟಾಗ ಒಂದು ವಿಭಿನ್ನ ರೀತಿಯ ಅನುಭವ ಪಡೆಯಲು ಮನದಲ್ಲೆ ಬಯಸಿರುತ್ತೇವೆ. ಅದರಂತೆ ಯಾವುದೆ ತಾಣಕ್ಕೆ ಭೇಟಿ ನೀಡಿದಾಗ ಕೆಲವು ವಿಶೇಷ ಆಕರ್ಷಣೆಗಳೇನಾದರೂ ಇವೆ ಎಂದು ನೋಡಲು ಮರೆಯುವುದಿಲ್ಲ. ಈ ರೀತಿಯ ವಿಭಿನ್ನ ಅನುಭವ ಬಯಸುವ ಪ್ರವಾಸಿಗರಿಗೆಂದೆ ಅನೇಕ ರಿಸಾರ್ಟುಗಳು ಹಲವು ವಿಭಿನ್ನ ಕಸರತ್ತುಗಳನ್ನು ನಡೆಸುತ್ತಲೆ ಇರುತ್ತವೆ.

ಈ ನಿಟ್ಟಿನಲ್ಲಿ ಒಂದು ಯಶಸ್ವಿ ಪ್ರಯೋಗವಾಗಿದೆ ಮರದ ಮೇಲಿನ ಮನೆಗಳು. ಕೆಲ ಪ್ರವಾಸಿಗರಿಗೆ ಕಾಡಿನ ಪರಿಸರದಲ್ಲೆ ಕೆಲ ದಿನಗಳನ್ನು ಕಳೆಯುವುದೆಂದರೆ ಅಚ್ಚು ಮೆಚ್ಚು. ಆ ನೈಜ ಪರಿಸ್ಥಿತಿ, ಗಾಳಿಯಾಡಿದಾಗ ಗಿಡ ಮರಗಳು ನೀಡುವ ಪ್ರತಿಕ್ರಿಯೆ ಮುಂತಾದವುಗಳನ್ನು ಅವುಗಳ ಸಹಜವಾದ ಸ್ಥಿತಿಯಲ್ಲೆ ಅನುಭವಿಸುವುದೆಂದರೆ ಯಾರಿಗಾದರೂ ಸರಿ ಒಂದು ರೀತಿಯ ಕುತೂಹಲ ಉಂಟಾಗುವುದು ಸಹಜ.

ವಾರಾಂತ್ಯ ಕೊಡುಗೆ : ಹೋಟೆಲ್ ಬುಕ್ಕಿಂಗ್ ಮೇಲೆ 50% ಕಡಿತ ಪಡೆಯಿರಿ, ತ್ವರೆ ಮಾಡಿ!

ವಿಶೇಷ ಲೇಖನ : ಮೋಜು ಮಸ್ತಿಗಿಲ್ಲಿ ಕೊರತೆಯಿಲ್ಲ

ಐದು ಸುಂದರ ಮರದ ಮೇಲಿನ ಮನೆಗಳು

ದಕ್ಷಿಣ ಭಾರತದಲ್ಲಿರುವ ಕೆಲ ರಿಸಾರ್ಟುಗಳು ಪ್ರವಾಸಿಗರ ಬಯಕೆ ತಣಿಸುವ ನಿಟ್ಟಿನಲ್ಲಿ ಮರದ ಮೇಲೆ ಎಲ್ಲ ಜಾಗರೂಕತೆಗಳನ್ನು ತೆಗೆದುಕೊಂಡು ಮರದ ಮೇಲೆ ಮನೆಗಳನ್ನು ನಿರ್ಮಿಸಿವೆ. ಯಾವ ಯಾವ ರಿಸಾರ್ಟಿನ ಯಾವ ರೀತಿಯ ಮನೆಗಳು ನಿಮಗಿಷ್ಟ ಎಂದು ತಿಳಿಯಲು ಈ ಲೇಖನವನ್ನು ಓದಿ.

ವಿಶೇಷ ಲೇಖನ : ನಂಬಿದರೆ ನಂಬಿ ಬಿಟ್ಟರೆ ಬಿಡಿ

ವೈತಿರಿ ರಿಸಾರ್ಟ್ : ಕೇರಳದ ವಯನಾಡ್ ಜಿಲ್ಲೆಯ ಮಳೆಗಾಡಿನ ಪ್ರದೇಶಗಳಲ್ಲಿ ನೆಲೆಸಿರುವ ವೈತಿರಿ ರಿಸಾರ್ಟ್ ಪಶ್ಚಿಮ ಘಟ್ಟಗಳ ಅಮೋಘ ಪರಿಸರದಲ್ಲಿ ತಂಗುವ ವಿವಿಧ ಆಯ್ಕೆಗಳನ್ನು ನೀಡುತ್ತದೆ. ಅದರಲ್ಲಿ ಮರದ ಮೇಲಿನ ಕಾಟೇಜುಗಳು ಜನಪ್ರಿಯವಾಗಿವೆ. ಪ್ರಕೃತಿಯ ಅದ್ಭುತ ನೋಟವನ್ನು, ಪಕ್ಷಿಗಳ ಚಿಲಿಪಿಲಿ, ಸ್ವಚ್ಛಂದ ಹಾರಾಟವನ್ನು ಅವುಗಳ ನೈಜ ಸ್ಥಿತಿಯಲ್ಲೆ ಕಂಡು ಆನಂದಿಸಬಹುದು.

ಐದು ಸುಂದರ ಮರದ ಮೇಲಿನ ಮನೆಗಳು

ಮನಸೆಳೆವ ಮರದ ಮೇಲಿನ ಮನೆ
ಚಿತ್ರಕೃಪೆ: Vythiri Resort

ಸಫಾರಿ ಲ್ಯಾಂಡ್ ರಿಸಾರ್ಟ್ : ತಮಿಳುನಾಡು ರಾಜ್ಯದ ಮಾಸಿನಗುಡಿ ಅರಣ್ಯ ಪ್ರದೇಶದಲ್ಲಿ ಈ ರಿಸಾರ್ಟನ್ನು ಕಾಣಬಹುದು. ರೋಮಾಂಚನಗೊಳಿಸುವಂತಹ ಪರಿಸರದಲ್ಲಿ ಮತ್ತಷ್ಟು ವಿಸ್ಮಯಗೊಳಿಸುವಂತಹ ಮರದ ಮೇಲಿನ ಮನೆಗಳ ಆಯ್ಕೆಯನ್ನು ಈ ರಿಸಾರ್ಟ್ ಪ್ರವಾಸಿಗರಿಗೆ ಒದಗಿಸುತ್ತದೆ. ಇಬ್ಬರಿಗೆ, ಕುಟುಂಬಕ್ಕೆ ಹೀಗೆ ಹಲವು ವಿಧದ ಕಾಟೇಜುಗಳನ್ನು ಒದಗಿಸುತ್ತದೆ. ಅಷ್ಟೆ ಅಲ್ಲ ಅತಿ ಎತ್ತರದ ಅಂದರೆ ಭೂಮಿಯಿಂದ ೩೦ ಅಡಿಗಳಷ್ಟು ಎತ್ತರವಿರುವ ಕಾಟೇಜುಗಳೂ ಲಭ್ಯ.

ಐದು ಸುಂದರ ಮರದ ಮೇಲಿನ ಮನೆಗಳು

ಮಧುಚಂದ್ರಕ್ಕೆ ಹೇಳಿ ಮಾಡಿಸಿದಂತಹ ಮನೆ!
ಚಿತ್ರಕೃಪೆ: Safari Land Resort

ಪಾರ್ಕ್ಯೂಪೈನ್ ಕ್ಯಾಸಲ್ : ಕರ್ನಾಟಕದ ಕೊಡಗಿನಲ್ಲಿರುವ ಈ ರಿಸಾರ್ಟ್ ಕುಟುಂಬ ಪ್ರವಾಸಕ್ಕೆ ಒಂದು ಆದರ್ಶಮಯ ತಾಣವಾಗಿದೆ. ನಾರು, ಬೇರು, ರೆಂಬೆ, ಕೊಂಬೆಗಳಿಂದ ದೃಢವಾಗಿ ನಿರ್ಮಿಸಲಾಗಿರುವ ಮರದ ಮೇಲಿನ ಮನೆಗಳನ್ನು ನೀವು ಇಲ್ಲಿ ಆಯ್ಕೆ ಮಾಡಬಹುದು. ಹುಲ್ಲುಗಳ ಹೊದಿಕೆಯಂತೆ ಛಾವಣಿ ಹೊಂದಿದ್ದು ನೋಡಲು ದೊಡ್ಡ ಗಾತ್ರದ ಗುಡಿಸಿಲಿನಂತೆ ಭಾಸವಾಗುತ್ತದೆ.

ಐದು ಸುಂದರ ಮರದ ಮೇಲಿನ ಮನೆಗಳು

ಪಕ್ಷಿಗಳಂತೆ ಮಾನವನೂ ಕೂಡ ಗೂಡು ನಿರ್ಮಿಸಬಲ್ಲ
ಚಿತ್ರಕೃಪೆ: Porcupine Castle

ವನ್ಯಾ ಟ್ರೀ ಹೌಸ್ : ಕೇರಳದ ತೆಕ್ಕಡಿಯಲ್ಲಿರುವ ವನ್ಯ ಟ್ರೀ ಹೌಸ್ ಎಂಬ ರಿಸಾರ್ಟ್ ಅದ್ಭುತವಾದ ಮರದ ಮೇಲಿನ ಮನೆಗಳ ಆಯ್ಕೆ ನೀಡುತ್ತದೆ. ಮರಗಳು ಗಾಳಿಗೆ ಸೂಕ್ಷ್ಮವಾಗಿ ಅಲುಗಾಡಿದಂತೆ ಮನೆಯೆ ಜೋಕಾಲಿ ಆಡುತ್ತಿದೆಯೆನೋ ಅನ್ನಿಸುವ ಅನುಭವ ಉಂಟಾಗುತ್ತದೆ. ರಾತ್ರಿಯಿಡಿ ಕಾಡಿನ ಸಕಲ ಜೀವರಾಶಿಗಳ ಸದ್ದು, ಬೆಳಿಗ್ಗೆಯ ತಂಪಾದ ಇಬ್ಬನಿಯ ಪರಿಸರ ವಿಶಿಷ್ಟವಾದ ಸಂತಸವನ್ನು ಕರುಣಿಸುತ್ತದೆ.

ಐದು ಸುಂದರ ಮರದ ಮೇಲಿನ ಮನೆಗಳು

ಗಾಳಿಯೊಂದಿಗೆ ತುಗೋಣ ಬಾರಾ
ಚಿತ್ರಕೃಪೆ: Vanya Treehouse

ರೈನ್ ಫಾರೆಸ್ಟ್ ಟ್ರೀ ಹೌಸ್ : ನಿಮ್ಮ ಸಾಮನು ಸರಂಜಾಮುಗಳನ್ನು ಪ್ಯಾಕ್ ಮಾಡಿ ಕೇರಳದ ಅತ್ತಿರಪಲ್ಲಿ ಬಳಿ ಏನಾದರೂ ತೆರಳಿದರೆ ರೈನ್ ಫಾರೆಸ್ಟ್ ಟ್ರೀ ಹೌಸ್ ನಲ್ಲಿ ತಂಗಲು ಮಾತ್ರ ಮರೆಯಬೇಡಿ. ಜನಪ್ರೀಯ ಅತ್ತಿರಪಲ್ಲಿ ಜಲಪಾತದ ತಾಣದ ಬಳಿಯಲ್ಲೆ ಈ ರಿಸಾರ್ಟ್ ನೆಲೆ ನಿಂತಿದೆ ಹಾಗೂ ರಮಣೀಯ ದೃಶ್ಯಾವಳಿಗಳನ್ನು ಒದಗಿಸುವಂತಹ ಮರದ ಮೇಲಿನ ಮನೆಗಳು ಇಲ್ಲಿ ಲಭ್ಯವಿದೆ.

ಐದು ಸುಂದರ ಮರದ ಮೇಲಿನ ಮನೆಗಳು

ಚಿತ್ರಕೃಪೆ: Rainforest Treehouse Resort

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+