Search
  • Follow NativePlanet
Share
» »ಮಳೆಗಾಲದಲ್ಲಿ ಜಲಪಾತಗಳು, ಗಿರಿಧಾಮಗಳು, ನದಿಗಳಿರುವ ಸ್ಥಳಕ್ಕೆ ಹೋಗುತ್ತಿದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ…

ಮಳೆಗಾಲದಲ್ಲಿ ಜಲಪಾತಗಳು, ಗಿರಿಧಾಮಗಳು, ನದಿಗಳಿರುವ ಸ್ಥಳಕ್ಕೆ ಹೋಗುತ್ತಿದ್ದರೆ ಈ ವಿಷಯಗಳನ್ನು ನೆನಪಿನಲ್ಲಿಡಿ…

ರಾಜ್ಯ ಮಾತ್ರವಲ್ಲದೆ, ದೇಶಾದ್ಯಂತ ಮಳೆ ಚೆನ್ನಾಗಿ ಆಗುತ್ತಿದೆ. ಬಿಸಿಲಿನ ಝಳದ ಬಳಿಕ ಸುರಿದ ಮಳೆ ಜನರಲ್ಲಿ ಕೊಂಚ ನೆಮ್ಮದಿ ತಂದಿದೆ. ಇಂತಹ ಸಮಯದಲ್ಲಿ ಜನರು ತಮ್ಮ ಮನೆಗಳಿಂದ ಹೊರಬಂದು ಹಿತಕರವಾದ ವಾತಾವರಣವನ್ನು ಆನಂದಿಸಲು ಪ್ರವಾಸಕ್ಕೆ ತೆರಳುತ್ತಿದ್ದಾರೆ. ಈ ಸೀಸನ್‌ ಶಾಖದಿಂದೆನೋ ಪರಿಹಾರವನ್ನು ನೀಡಬಹುದು. ಆದರೆ ಇದು ಜನರಿಗೆ ತೊಂದರೆಗೂ ಕಾರಣವಾಗಬಹುದು.

ಭೂಶಿ ಅಣೆಕಟ್ಟು ಬಳಿ ನಡೆದ ದುರಂತ

ಇತ್ತೀಚೆಗೆ ಮಹಾರಾಷ್ಟ್ರದ ಲೋನಾವಲದ ಭೂಶಿ ಅಣೆಕಟ್ಟು ಬಳಿ ಏಕಾಏಕಿ ಪ್ರವಾಹ ಉಂಟಾಗಿದೆ. ಒಂದೇ ಕುಟುಂಬದ 16 ಜನರು ಇಲ್ಲಿಗೆ ವಿಹಾರಕ್ಕೆ ಬಂದಿದ್ದರು. ಅಣೆಕಟ್ಟಿನ ಬಳಿಯ ಜಲಪಾತದಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾಗ ಏಕಾಏಕಿ ನೀರಿನ ಹರಿವು ಹೆಚ್ಚಾಗಿದ್ದು, ಪ್ರವಾಹದಲ್ಲಿ ಹಲವರು ಕೊಚ್ಚಿ ಹೋಗಿದ್ದಾರೆ. ಘಟನೆಯಲ್ಲಿ ಮೂವರ ಮೃತದೇಹಗಳು ಪತ್ತೆಯಾಗಿದ್ದು, ಇಬ್ಬರು ಮಕ್ಕಳು ನಾಪತ್ತೆಯಾಗಿದ್ದಾರೆ.

traveltips monsoon

ಮಳೆಗಾಲದ ಘಟನೆಗಳು

ಮೇಲ್ಕಂಡ ಘಟನೆಗಳು ಮಳೆಗಾಲದಲ್ಲಿ ಹೆಚ್ಚಾಗಿ ಕೇಳಿಬರುತ್ತವೆ. ಜಲಪಾತಗಳು, ಸರೋವರಗಳು, ಗುಡ್ಡಗಾಡು ಪ್ರದೇಶಗಳು ಮತ್ತು ನದಿಗಳಿರುವ ಸ್ಥಳಗಳಲ್ಲಿ ಇಂತಹ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತವೆ. ಇಂತಹ ಅವಘಡಗಳನ್ನು ತಪ್ಪಿಸಲು, ನೀವು ಯಾವುದೇ ಗಿರಿಧಾಮಕ್ಕೆ, ಜಲಪಾತಗಳಿಗೆ ಅಥವಾ ಸರೋವರಗಳಿಗೆ ಮಳೆಗಾಲದಲ್ಲಿ ಭೇಟಿ ನೀಡಲು ಹೋದರೆ, ಕೆಲವು ವಿಷಯಗಳಿಗೆ ವಿಶೇಷ ಗಮನ ಕೊಡಿ

traveltips rainy season

ನೀರಿನ ಮಟ್ಟಗಳ ಬಗ್ಗೆ ಜಾಗರೂಕರಾಗಿರಿ

ಮಳೆಗಾಲದಲ್ಲಿ ನದಿ, ಕರೆ ತೊರೆಗಳಲ್ಲಿನ ನೀರಿನ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಇಂತಹ ಸಮಯದಲ್ಲಿ ನದಿಗಳಲ್ಲಿ ಬಲವಾದ ಏರಿಕೆ ಕಂಡುಬರಬಹುದು. ಈ ಸೀಸನ್‌ನಲ್ಲಿ ನೀವು ನದಿಗಳು ಮತ್ತು ಸರೋವರಗಳ ಬಳಿ ವಿಹಾರಕ್ಕೆ ಹೋಗುತ್ತಿದ್ದರೆ, ಹೆಚ್ಚುತ್ತಿರುವ ನೀರಿನ ಮಟ್ಟಗಳ ಬಗ್ಗೆ ಜಾಗರೂಕರಾಗಿರಿ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ನದಿಗಳು ಮತ್ತು ಸರೋವರಗಳ ಹತ್ತಿರ ಇಳಿಯಬೇಡಿ, ಹೋಗಲೂಬೇಡಿ.

ಭೂಕುಸಿತದ ಅಪಾಯ

ನಾವು ಈ ಹಿಂದಿನ ಲೇಖನದಲ್ಲಿ ಬರೆದಂತೆ ಮಳೆಗಾಲದ ಸಮಯದಲ್ಲಿ ಭೇಟಿ ನೀಡಲು ಸರಿಯಾದ ಸ್ಥಳವನ್ನು ಆಯ್ಕೆಮಾಡಿ. ಮಳೆಗಾಲದಲ್ಲಿ ಅನೇಕ ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತಗಳು ಸಂಭವಿಸಬಹುದು. ಗುಡ್ಡ ಗಾಡು ಪ್ರದೇಶಗಳಿಗೆ ಭೇಟಿ ನೀಡುವಾಗ ನಿಮ್ಮ ಕಾರಿನಲ್ಲಿ ಹೋಗುವುದನ್ನು ತಪ್ಪಿಸಿ.

ಸಾಹಸ ಚಟುವಟಿಕೆ

ಗಿರಿಧಾಮಗಳಿಂದ ಕಡಲತೀರಗಳವರೆಗೆ ಮತ್ತು ಅನೇಕ ನದಿಗಳು ಹಾಗೂ ಸರೋವರಗಳ ಸುತ್ತಲೂ ಜನರು ಸಾಹಸ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಸಾಮಾನ್ಯ. ಆದರೆ ಮಳೆಗಾಲದಲ್ಲಿ ಇಂತಹ ಸಾಹಸ ಚಟುವಟಿಕೆಗಳನ್ನು ತಪ್ಪಿಸಿ. ಈ ಋತುವಿನಲ್ಲಿ, ಜಲ ಕ್ರೀಡೆಗಳು, ಬಂಗೀ ಜಂಪಿಂಗ್ ಮುಂತಾದ ಅನೇಕ ಸಾಹಸ ಕ್ರೀಡೆಗಳಿಂದ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳಬೇಡಿ.

traveltips

ಇಲ್ಲಿ ಉಳಿಯಬೇಡಿ

ಒಂದು ವೇಳೆ ಮಳೆಗಾಲದಲ್ಲಿ ನೀವು ಇಂತಹ ಸ್ಥಳಗಳಿಗೆ ಹೋದರೆ, ನದಿಯ ಬಳಿ ಅಥವಾ ಪರ್ವತಗಳ ತಪ್ಪಲಿನಲ್ಲಿ ಉಳಿಯಬೇಡಿ. ಈ ಸ್ಥಳಗಳು ಉಳಿಯಲು ಅಪಾಯಕಾರಿ. ಮಳೆಯ ಸಮಯದಲ್ಲಿ, ನದಿಗಳಲ್ಲಿ ಪ್ರವಾಹ ಹೆಚ್ಚಾಗಬಹುದು ಅಥವಾ ಪರ್ವತ ಪ್ರದೇಶಗಳಲ್ಲಿ ಕಲ್ಲುಗಳು ಬೀಳಬಹುದು. ಹೋಟೆಲ್ ಆಯ್ಕೆಮಾಡುವಾಗಲೂ ಇದನ್ನು ನೆನಪಿನಲ್ಲಿಡಿ.

ರಸ್ತೆ ಪ್ರಯಾಣ ಮಾಡುವವರು...

ಈ ಮಳೆಗಾಲದ ಸಮಯದಲ್ಲಿ ರೋಡ್ ಟ್ರಿಪ್ ಹೋಗುತ್ತಿದ್ದರೆ ಆಂಟಿ-ಸ್ಕಿಡ್ ಸಸ್ಪೆನ್ಷನ್ ಟೈರ್‌ಗಳನ್ನು ಇರಿಸಿಕೊಳ್ಳಿ. ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಸ್ಪೀಡ್ ಡಯಲ್‌ನಲ್ಲಿ ಇರಿಸಿ. ತುಂತುರು ಮಳೆಗಿಂತ ಹೆಚ್ಚು ಮಳೆಯಾದರೆ ಮಧ್ಯಂತರ ವಿರಾಮ ತೆಗೆದುಕೊಳ್ಳಿ. ಮಳೆಯ ಸಮಯದಲ್ಲಿ ಕಾರ್‌ ಗ್ಲಾಸ್‌ ಸ್ಪಷ್ಟವಾಗಿ ಗೋಚರಿಸಬೇಕು. ಆದ್ದರಿಂದ ನಿಮ್ಮ ಕಾರ್ ವೈಪರ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಿ. ನೀವು ಕಾರನ್ನು ಬಾಡಿಗೆಗೆ ಪಡೆಯುತ್ತಿದ್ದರೆ, ಅದನ್ನು ವಿಮೆ ಮಾಡಲಾಗಿದೆಯೇ ಎಂದು ನೋಡಿಕೊಳ್ಳಿ ಮತ್ತು ಎಲ್ಲಾ ಮಾನ್ಯ ದಾಖಲೆಗಳನ್ನು ಕೇಳಿ. ಕೊನೆಯದಾಗಿ ನಿಧಾನವಾಗಿ ಚಾಲನೆ ಮಾಡುತ್ತಾ, ಪ್ರಕೃತಿಯ ದೃಶ್ಯಾವಳಿಗಳನ್ನು ಆನಂದಿಸಿ.

ತಗ್ಗು ಪ್ರದೇಶಗಳಲ್ಲಿ ಟೆಂಟ್‌ ನಿರ್ಮಿಸಬೇಡಿ

ಕ್ಯಾಂಪಿಂಗ್ ಪ್ರವಾಸದ ಮೂಲಕ ನೀವು ಪ್ರಕೃತಿಯನ್ನು ಪೂರ್ಣವಾಗಿ ಆನಂದಿಸಲು ಯೋಜಿಸುತ್ತಿದ್ದರೆ, ಮಾನ್ಸೂನ್ ಸುತ್ತಮುತ್ತಲಿನ ತಗ್ಗು ಪ್ರದೇಶಗಳಲ್ಲಿ ಕ್ಯಾಂಪಿಂಗ್ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು.

tool kits

ತುರ್ತು ಟೂಲ್‌ಕಿಟ್‌ಗಳು

ನೀವು ಸುಸಜ್ಜಿತರಾಗಿದ್ದರೆ ಮಳೆಗಾಲವನ್ನು ಚೆನ್ನಾಗಿ ಆನಂದಿಸಬಹುದು. ಹಾಗಾಗಿ ಎಮರ್ಜೆನ್ಸಿ ಟೂಲ್‌ ಕಿಟ್‌ಗಳನ್ನು ಜೊತೆಯಲ್ಲಿಟ್ಟುಕೊಳ್ಳಿ. ಸ್ವಿಸ್ ಚಾಕುಗಳು, ಹಗ್ಗಗಳು, ಕತ್ತರಿಗಳು, ಟೇಪ್‌ಗಳು, ಅಂಟುಗಳು ಮತ್ತು ಸ್ಕ್ರೂಡ್ರೈವರ್‌ಗಳನ್ನು ಹೊಂದಿರುವ ತುರ್ತು ಟೂಲ್‌ಕಿಟ್‌ಗಳು ಯಾವಾಗಲೂ ಸಹಾಯಕ್ಕೆ ಬರುತ್ತವೆ. ವಿಶೇಷವಾಗಿ ನೀವು ಸಾಹಸ ಕ್ರೀಡೆಗಳನ್ನು ಪ್ರೀತಿಸುತ್ತಿದ್ದರೆ ಅಥವಾ ಮಳೆಯ ಸಮಯದಲ್ಲಿ ಕಲ್ಲಿನ ಭೂಪ್ರದೇಶ ಬಳಿ ಇದ್ದಲ್ಲಿ ಹೀಗೆ ಅಗತ್ಯ ಜಾಗಗಳಲ್ಲಿ ನೀವಿದನ್ನು ಬಳಸಬಹುದು.

ವಾಟರ್‌ ಪ್ರೂಫ್‌ ಸಾಧನಗಳು

ಮಳೆಯಿಂದ ರಕ್ಷಣೆ ಬೇಕಿರುವುದು ನಿಮಗಷ್ಟೇ ಅಲ್ಲ, ನಿಮ್ಮ ಸಾಧನಗಳಿಗೂ. ಪ್ರವಾಸದ ಸಮಯದಲ್ಲಿ ಸೆಲ್ ಫೋನ್ ಅಥವಾ ಕ್ಯಾಮೆರಾದೊಂದಿಗೆ ವ್ಯವಹರಿಸುವುದು ಅಷ್ಟು ಸುಲಭವಲ್ಲ. ಆದ್ದರಿಂದ, ನಿಮ್ಮ ಬೆಲೆಬಾಳುವ ವಸ್ತುಗಳನ್ನು ನೆನೆಯದಂತೆ ಇರಿಸಿ. ನಿಮ್ಮ ವಸ್ತುಗಳು ಹಾನಿಯಾಗುವುದನ್ನು ತಡೆಯಲು ಸಹಾಯವಾಗುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+