Search
  • Follow NativePlanet
Share
» »ಮೆಟ್ರೋ ನಿಲ್ದಾಣದಿಂದ ದೆಹಲಿ ಪ್ರವಾಸ

ಮೆಟ್ರೋ ನಿಲ್ದಾಣದಿಂದ ದೆಹಲಿ ಪ್ರವಾಸ

By Divya Pandit

ಭಾರತದ ರಾಜಧಾನಿ ದೆಹಲಿಯೂ ಕೂಡ ಒಂದು ಪ್ರಮುಖ ಪ್ರವಾಸ ತಾಣ. ಇಲ್ಲಿ ಐತಿಹಾಸಿಕ ಹಾಗೂ ಆಧುನಿಕ ತಂತ್ರಜ್ಞಾನಗಳ ಆಕರ್ಷಣೆಯಿಂದಾಗಿ ಜನಸಾಗರ ಹರಿದು ಬರುತ್ತಲೇ ಇರುತ್ತವೆ. ಅದಕ್ಕಾಗಿಯೇ ಇಲ್ಲಿ ವೇಗವಾಗಿ ಚಲಿಸುವ ಮೆಟ್ರೋ ಮಾರ್ಗವ್ಯವಸ್ಥೆ ಮಾಡಲಾಗಿದೆ. ದಿಲ್ಲಿ ಹಾತ್‌, ದೆಹಲಿ

ಈ ರೈಲು ಮಾರ್ಗವು ಪ್ರವಾಸ ಸ್ಥಳದ ಹತ್ತಿರದಿಂದಲೇ ಹಾದು ಹೋಗುವುದರಿಂದ, ಕೆಲವು ನಿಲ್ದಾಣದಲ್ಲಿ ಇಳಿದುಕೊಂಡರೆ ಸಾಕು. ಸುಲಭವಾಗಿ ಪ್ರವಾಸ ಸ್ಥಳದ ವೀಕ್ಷಣೆ ಮಾಡಬಹುದು. ದೆಹಲಿಯ ಪ್ರವಾಸ ಬಯಸಿದವರು ಮೆಟ್ರೋ ನಂಬಿಕೊಂಡರೆ ಕೆಲಸ ಸುಲಭವಾಗುತ್ತದೆ. ಯಾವುದೇ ಗೊಂದಲವಿಲ್ಲದೆ ದೆಹಲಿಯನ್ನು ಸುತ್ತಬಹುದು. ದೆಹಲಿ - ಭಾರತದ ಹೃದಯ

ಖಾನ್ ಮಾರ್ಕೆಟ್ ಮೆಟ್ರೋ ಸ್ಟೇಷನ್

ಖಾನ್ ಮಾರ್ಕೆಟ್ ಮೆಟ್ರೋ ಸ್ಟೇಷನ್

ಈ ಸ್ಟೇಷನ್ ಪ್ರಮುಖ ಪ್ರವಾಸ ಸ್ಥಳದ ಹತ್ತಿರವೇ ಇದೆ. ಇಲ್ಲಿ ಇಳಿದರೆ ಲೂದಿ ಗಾರ್ಡನ್, ಗಾಂಧಿ ಸ್ಮøತಿ, ಹುಮಾಯುನ್ ಟೊಂಬ್, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್, ಇಂದಿರಾ ಗಾಂಧಿ ಮ್ಯೂಸಿಯಂ, ಪುರಾಣ ಕ್ವಿಲ್ ಮತ್ತು ಸಫದರ್ಜುಂಗ್ ಟೊಂಬ್ ಇದೆ.

PC: araswami

ಕುತುಬ್ ಮಿನಾರ್ ಮೆಟ್ರೋ ಸ್ಟೇಷನ್

ಕುತುಬ್ ಮಿನಾರ್ ಮೆಟ್ರೋ ಸ್ಟೇಷನ್

ಕುತುಬ್ ಮಿನಾರ್ ಮೆಟ್ರೋ ಸ್ಟೇಷನ್ ಬಳಿಯೂ ನೋಡುವಂತಹ ಪ್ರದೇಶಗಳಿವೆ. ಅವುಗಳೆಂದರೆ ಕುತುಬ್ ಮಿನಾರ್, ದಿ ಗಾರ್ಡನ್ ಆಫ್ ಫೈವ್ ಸೆನ್ಸ್, ಟೊಂಬ್ ಆಫ್ ಇಮಾಮ್ ಝಮಿನ್, ಅಲಿ ಮಿನಾರ್, ಯೋಗಮಯಾ ದೇಗುಲ, ಮಹಮದ್ ಕುಲಿಖಾನ್ ಟೊಂಬ್ ಮತ್ತು ಜಹಾಜ್ ಮಹಲ್‍ಗಳನ್ನು ನೋಡಬಹುದು.

PC: Swaminathan

ಪ್ರಗತಿ ಮೈದಾನ ಮೆಟ್ರೋ ಸ್ಟೇಷನ್

ಪ್ರಗತಿ ಮೈದಾನ ಮೆಟ್ರೋ ಸ್ಟೇಷನ್

ಸದಾ ಜನಜಂಗುಳಿಯಿಂದ ಕೂಡಿರುವಂತಹ ಸ್ಟೇಷನ್ ಎಂದರೆ ಪ್ರಗತಿ ಮೈದಾನ ಮೆಟ್ರೋ ಸ್ಟೇಷನ್. ಈ ಮೈದಾನದಲ್ಲಿ ಎಂದಿಗೂ ಸಾಮಾಜಿಕ ಕಾರ್ಯಕ್ರಮ ಹಾಗೂ ವಸ್ತು ಪ್ರದರ್ಶನಗಳು ನಡೆಯುತ್ತವೆ. ಹಾಗಾಗಿ ಇದೊಂದು ದೆಹಲಿಯ ಮುಖ್ಯ ಭಾಗ ಎಂದು ಕರೆಯಬಹುದು. ಇಲ್ಲೇ ಹತ್ತಿರದಲ್ಲಿ ಕ್ರಾಫ್ಟ್ ಮ್ಯೂಸಿಯಂ, ನ್ಯಾಷನಲ್ ಸೈನ್ಸ್ ಸೆಂಟರ್, ನ್ಯಾಷನಲ್ ಹ್ಯಾಂಡ್ ಕ್ರಾಫ್ಟ್ ಮ್ಯೂಸಿಯಂ, ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ ಮತ್ತು ನ್ಯಾಷನಲ್ ಜ್ಯೂಲೊಜಿಕಲ್ ಪಾರ್ಕ್ ನೋಡಬಹುದು.

PC: wikimedia.org

ಅಕ್ಷರಧಾಮ ಮೆಟ್ರೋ ಸ್ಟೇಷನ್

ಅಕ್ಷರಧಾಮ ಮೆಟ್ರೋ ಸ್ಟೇಷನ್

ಪ್ರಗತಿ ಮೈದಾನಕ್ಕೆ ಸ್ವಲ್ಪವೇ ದೂರದಲ್ಲಿ ಅಕ್ಷರಧಾಮವಿದೆ. ಹಾಗಾಗಿ ಪ್ರಗತಿ ಮೈದಾನಕ್ಕೆ ಹತ್ತಿರದಲ್ಲಿರುವಂತಹ ಪ್ರದೇಶಗಳು ಅಕ್ಷರಧಾಮ ಮೆಟ್ರೋ ಸ್ಟೇಷನ್‍ಅಲ್ಲಿ ಇಳಿದುಕೊಂಡರೆ ನೋಡಬಹುದು.

PC: Kapil.xerox

ಸೆಂಟ್ರಲ್ ಸೆಕ್ರೆಟ್ರಿಟ್ ಮೆಟ್ರೋ ಸ್ಟೇಷನ್

ಸೆಂಟ್ರಲ್ ಸೆಕ್ರೆಟ್ರಿಟ್ ಮೆಟ್ರೋ ಸ್ಟೇಷನ್

ಇದು ಸಹ ಜನಸಂದಣಿಯಿಂದ ಕೂಡಿರುವಂತಹ ಪ್ರದೇಶ. ಇಲ್ಲಿಗೆ ಬಂದರೆ ರಾಷ್ಟ್ರಪತಿ ಭವನ, ಪಾರ್ಲಿಮೆಂಟ್ ಬಿಲ್ಡಿಂಗ್, ಗುರುದ್ವಾರ ಬಂಗ್ಲಾ ಸಾಹೇಬ್, ನ್ಯಾಷನಲ್ ಮ್ಯೂಸಿಯಂ, ಮುಘಲ್ ಗಾರ್ಡನ್, ಜಂತರ್ ಮಂತರ್‍ಗಳನ್ನು ನೋಡಬಹುದು.

PC: wikimedia.org

More News

Read more about: delhi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+