Search
  • Follow NativePlanet
Share
ಮುಖಪುಟ » ಸ್ಥಳಗಳು » ದೆಹಲಿ » ಆಕರ್ಷಣೆಗಳು » ದಿಲ್ಲಿ ಹಾತ್‌

ದಿಲ್ಲಿ ಹಾತ್‌, ದೆಹಲಿ

5

ದಿಲ್ಲಿಯಲ್ಲಿ ನೋಡಲೇಬೇಕಾದ ತಾಣಗಳಲ್ಲಿ ಇದೂ ಒಂದು. ಕಲೆ ಹಾಗೂ ಕರಕುಶಲ ಈ ಶಬ್ಧಗಳೇನಾದರೂ ನಿಮ್ಮನ್ನು ಪುಳಕಿತಗೊಳಿಸುತ್ತಿದ್ದರೆ, ಖಂಡಿತವಾಗಿಯೂ ನೀವು ಈ ತಾಣಕ್ಕೆ ಭೇಟಿ ನೀಡಲೇ ಬೇಕು. ತೆರೆದ ಮಂಟಪದಂತಿರುವ ಈ ತಾಣವು ಮುಕ್ತವಾದ, ಗಾಳಿ ಬೀಸುವ ಸುಂದರ ಪ್ರದೇಶದಲ್ಲಿ ಕಲೆ ಹಾಗೂ ಕರಕುಶಲ ವಸ್ತುವನ್ನು ನೋಡುವ ಅವಕಾಶ ನೀಡುತ್ತದೆ. ಇದನ್ನು ದಿಲ್ಲಿ ಪ್ರವಾಸೋದ್ಯಮ ಹಾಗೂ ಸಾರಿಗೆ ಇಲಾಖೆ (ಡಿಟಿಟಿಡಿಸಿ) ಹಾಗೂ ಎನ್‌ಎಂಡಿಸಿ, ಡಿಸಿ (ಕರಕುಶಲವಸ್ತು) ಹಾಗೂ ಡಿಸಿ (ಕರಕುಶಲ ಬಟ್ಟೆ), ಕೇಂದ್ರ ಜವಳಿ ಮತ್ತು ಪ್ರವಾಸೋದ್ಯಮ ಇಲಾಖೆ ಸೇರಿ ಜಂಟಿಯಾಗಿ ಆಯೋಜಿಸಿವೆ. ಭಾರತೀಯ ಕಲೆ, ಕರಕುಶಲ, ಸಂಸ್ಕೃತಿಯನ್ನು ಜನರಿಗೆ ಪರಿಚಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದು ಇದರ ಉದ್ದೇಶವಾಗಿದೆ.

ಪ್ರಸ್ತುತ ಈ ಪ್ರದೇಶದಲ್ಲಿ ಎರಡು ಬಜಾರ್‌ಗಳಿವೆ. ಹೊಸದಿಲ್ಲಿಯಲ್ಲಿರುವ ಇವನ್ನು ದಿಲ್ಲಿ ಹಾತ್‌ ಅನ್ನಲಾಗುತ್ತದೆ. ಮೂರನೇಯ ಬಜಾರ್, ನಿರ್ಮಾಣಹಂತದಲ್ಲಿದ್ದು, ಇದು ಜನಕಪುರಿಯಲ್ಲಿದೆ. ಇದು ಸಾರ್ವಜನಿಕ ಪ್ರವೇಶಕ್ಕೆ 2013 ರ ಆಗಸ್ಟ್‌ನಲ್ಲಿ ಮುಕ್ತವಾಗಲಿದೆ. ದಿಲ್ಲಿಯ ಮೊದಲ ದಿಲ್ಲಿ ಹಾತ್‌ ಅರಬಿಂದೋ ಮಾರ್ಗದಲ್ಲಿದೆ. ಇದನ್ನು 1994 ರಲ್ಲಿ ಸ್ಥಾಪಿಸಲಾಗಿದೆ. ಎರಡನೇ ದಿಲ್ಲಿ ಹಾತ್‌ 2008 ರ ಏಪ್ರಿಲ್‌ನಲ್ಲಿ ದಿಲ್ಲಿಯ ಪಿತಾಂಪುರದಲ್ಲಿ ಆರಂಭವಾಯಿತು. ಇವು ಒಟ್ಟು 7.2 ಹೆಕ್ಟೇರ್‌ ಪ್ರದೇಶವನ್ನು ಆವರಿಸಿವೆ. ವಸ್ತುಗಳನ್ನು ಕೊಳ್ಳುವವರಿಗೆ ಆರಾಮವಾಗಿ ಓಡಾಡಲು, ನಿಂತು ವಿಚಾರಿಸಲು ಅನುಕೂಲವಾಗಲೆಂದು ಇಷ್ಟು ಪ್ರದೇಶವನ್ನು ಮೀಸಲಿಡಲಾಗಿದೆ. ಮೊದಲ ದಿಲ್ಲಿ ಹಾತ್‌ ಕೂಡ ಅತ್ಯಂತ ಮುಕ್ತ ಪ್ರದೇಶವನ್ನು ಹೊಂದಿದ್ದು, ವ್ಹೀಲ್‌ ಚೇರ್‌ ಒಯ್ಯಲು ಕೂಡ ಅನುಕೂಲಕರವಾಗಿದೆ. ಅಲ್ಲದೇ ಇಲ್ಲಿ ಬಾತ್‌ರೂಂ ಸೌಲಭ್ಯ ಕೂಡ ಬಳಸಿಕೊಳ್ಳುವ ಅವಕಾಶ ಇದೆ.

ದಿಲ್ಲಿ ಹಾತ್‌ನಲ್ಲಿ ಕಲೆ ಹಾಗೂ ಕರಕುಶಲ ವಸ್ತುಗಳನ್ನು ಅತ್ಯಂತ ಗುಣಮಟ್ಟದ, ಆಕರ್ಷಕ ಹಾಗೂ ನೋಂದಣಿಯಾದ ಕರಕುಶಲಕರ್ಮಿಗಳಿಂದ ದೇಶದ ಎಲ್ಲೆಡೆಯಿಂದ ಸಿದ್ಧಪಡಿಸಿ ತಂದು ಮಾರಲಾಗುತ್ತದೆ. ಕರಕುಶಲ ಇಲಾಖೆಯಿಂದ ನೋಂದಣಿಯಾದ ಕಲಾವಿದರಿಗೆ ಮಾತ್ರ ಇಲ್ಲಿ ವಸ್ತುಗಳನ್ನು ಪ್ರದರ್ಶಿಸುವ ಹಾಗೂ ಮಾರುವ ಅವಕಾಶವಿದೆ. ಇಲ್ಲಿ ಮಳಿಗೆಯನ್ನು ಸರದಿಯಲ್ಲಿ ಬದಲಿಸುವ ವ್ಯವಸ್ಥೆಯೂ ಇದ್ದು, ಪ್ರತಿ 15 ದಿನಕ್ಕೊಮ್ಮೆ ಕಲಾವಿದರು ತಮ್ಮ ಮಳಿಗೆ ಬದಲಿಸಬೇಕು. ಇದರಿಂದ ಗ್ರಾಹಕರು ತಮಗೆ ಅತ್ಯಂತ ವಿಶಿಷ್ಟ ವಸ್ತುಗಳನ್ನು ಕೊಳ್ಳಲು, ವೀಕ್ಷಿಸಲು ಹಾಗೂ ಪರಿಚಯಿಸಿಕೊಳ್ಳಲು ಅನುಕೂಲವಾಗುತ್ತದೆ ಎನ್ನುವುದು ಇದರ ಹಿಂದಿನ ಭಾವನೆ. ಇದಲ್ಲದೇ ಗ್ರಾಮೀಣ ಪ್ರತಿಭೆಗಳು, ಸಾಧಕರು ತಮ್ಮ ಕಲೆ ಪ್ರಚುರಪಡಿಸುವ, ಗ್ರಾಹಕರಿಗೆ ತಲುಪಿಸುವ ಸುಗಮ ಮಾರ್ಗ ಕಂಡುಕೊಳ್ಳಲಿ ಎಂಬುದು ಹಾಗೂ ಅವರಿಗೆ ವ್ಯಾಪಾರ ಮಾಡಲು ತಮ್ಮನ್ನು ಪರಿಚಯಿಸಿಕೊಳ್ಳಲು ಒಂದು ವೇದಿಕೆ ಕಲ್ಪಿಸುವುದು ಕೂಡ ಇದರ ಹಿಂದಿರುವ ಉದ್ದೇಶವಾಗಿದೆ. ನಗರ ವಾಸಿಗಳಿಗೆ ಭಾರತೀಯ ಗ್ರಾಮೀಣ ಸಂಸ್ಕೃತಿ ತೋರಿಸುವ ಹಾಗೂ ಪರಿಚಯಿಸುವ ವಿನೂತನ ವಿಧಾನ ಇದಾಗಿದೆ.ಕಲಾತ್ಮಕ ಹಾಗೂ ಅಪರೂಪದ ಉಡುಗೆಗಳು, ಚಪ್ಪಲಿ, ವಸ್ತುಗಳು, ಆಟಿಕೆ, ಹಾಸಿಗೆ, ಗೇಮ್‌, ಅಲಂಕಾರಿಕ ಕಲಾ ಸಾಧನಗಳು, ಕಬ್ಬಿಣದ ಅಲಂಕಾರಿಕ ವಸ್ತುಗಳು, ಮರದ ಕೆತ್ತನೆಗಳು ಮತ್ತಿತರವು ಗಮನ ಸೆಳೆಯುತ್ತವೆ.

ಕುಟುಂಬ ಸಮೇತರಾಗಿ ತೆರಳಿ ಶಾಪಿಂಗ್‌ ಮಾಡಲು ಇದು ಪ್ರಶಸ್ತ ತಾಣ. ಒಂದೇ ಕಡೆ ಎಲ್ಲಾ ಅಗತ್ಯ ವಸ್ತುಗಳನ್ನು ಕೊಳ್ಳಲು ಹೇಳಿ ಮಾಡಿಸಿದಂತಿದೆ. ದೇಶದ ಎಲ್ಲಾ ಭಾಗದ ಆಹಾರವನ್ನು ಪರಿಚಯಿಸುವ ಫುಡ್‌ಕೋರ್ಟ್ ಕೂಡ ಇಲ್ಲಿದೆ. ಹಾತ್‌ ಆವರಣದಲ್ಲಿ ಒಮ್ಮೆ ಸುತ್ತಾಡಿ ಬಂದರೆ ಮನಸ್ಸು ಹಗುರಾಗುತ್ತದೆ. ಇಷ್ಟದ ವಸ್ತುವನ್ನು ಕೊಳ್ಳುವುದಕ್ಕೆ ಇದು ಪ್ರಶಸ್ತ ವೇದಿಕೆ. ದೇಶದ ನಾನಾ ರಾಜ್ಯದ ಕಲಾಪ್ರಕಾರಗಳು, ಸಂಸ್ಕೃತಿ, ಉಡುಗೆ, ತೊಡುಗೆ, ಆಹಾರ ಪದ್ಧತಿ ಎಲ್ಲವನ್ನೂ ತಿಳಿಯುವ ಸುವಣರ್ಣಾವಕಾಶ ಒದಗಿ ಲಭಿಸುತ್ತದೆ. ಇಲ್ಲೊಂದು ತೆರೆದ ವೇದಿಕೆ ಕೂಡ ಇದ್ದು, ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ನೀಡಲಾಗುತ್ತದೆ. ಇದರ ವೀಕ್ಷಣೆಗಾಗಿಯೇ ವೀಕ್ಷಕರು ಸಾಕಷ್ಟು ಸಂಖ್ಯೆಯಲ್ಲಿ ನಿತ್ಯ ಇಲ್ಲಿಗೆ ಜಮಾಯಿಸುತ್ತಾರೆ. ಮಕ್ಕಳಿಗೆ ಖುಶಿ ನೀಡುವ ಆಟಿಕೆಗಳು, ಮನರಂಜನೆ ಕೂಡ ಇಲ್ಲಿದೆ.

ಸಂಕೀರ್ಣದ ವಾಸ್ತುಶಿಲ್ಪ, ಮಳಿಗೆಗಳು, ಮಾರ್ಗ, ಕಟ್ಟಡದ ಮಾದರಿ ಎಲ್ಲವೂ ಭಾರತೀಯ ಶೈಲಿಯನ್ನು ಹೊಂದಿವೆ. ಸಾಕಷ್ಟು ಮರಗಳಿಂದ ಈ ಪ್ರದೇಶ ಆವೃತ್ತವಾಗಿದೆ. ಆಕರ್ಷಕ ಹಾಗೂ ಬಹುವರ್ಣದ ಹೂಗಿಡಗಳು ಕೂಡ ಇದೆ. ಎಲ್ಲಾ ಬೇಡಿಕೆಯನ್ನೂ ಈಡೇರಿಸುವ ಒಂದು ತಾಣವಾಗಿ ಇದು ಜನಪ್ರಿಯವಾಗಿದೆ.

One Way
Return
From (Departure City)
To (Destination City)
Depart On
26 Apr,Fri
Return On
27 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
26 Apr,Fri
Check Out
27 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
26 Apr,Fri
Return On
27 Apr,Sat