ಮಳೆಗಾಲದಲ್ಲಿ ಪರ್ವತ ಪ್ರದೇಶಗಳ ಹವಾಮಾನವು ನೋಡಲು ತುಂಬಾ ಸುಂದರ ಮತ್ತು ಆಹ್ಲಾದಕರವಾಗಿರುತ್ತದೆ. ಆದರೆ ಈ ಸಮಯದಲ್ಲಿ ಇಲ್ಲಿ ಜನರು ತಿರುಗಾಡಲು ಆಗುವುದಿಲ್ಲ. ಏಕೆಂದರೆ ಈ ಸಮಯದಲ್ಲಿ ಪರ್ವತಗಳಿಗೆ ಹೋಗುವುದು ತುಂಬಾ ಅಪಾಯಕಾರಿ. ಇಲ್ಲಿ ಗುಡ್ಡ ಕುಸಿತ, ಕಲ್ಲುಗಳು ಜಾರಿ ಬೀಳುವುದು ಇತ್ಯಾದಿ ಅಪಾಯಕಾರಿ ಅವಘಡಗಳು ಸಂಭವಿಸುವುದನ್ನು ನಾವು ಪ್ರತಿದಿನ ನೋಡುತ್ತೇವೆ. ಆದರೆ ಇಂತಹ ಸಮಯದಲ್ಲಿ ನೀವು ಮಳೆಗಾಲದ ಸೀಸನ್ ಆನಂದಿಸಲು ಕಾಡು, ಗುಡ್ಡ ಬೆಟ್ಟಗಳ ಬದಲಿಗೆ ಬೇರೆ ಸ್ಥಳವನ್ನು ನೋಡಬಹುದು. ಹೌದು, ನಾವು ನಿಮಗಾಗಿ ಕೆಲವು ಸ್ಥಳಗಳ ಪಟ್ಟಿ ಕೊಡುತ್ತಿದ್ದೇವೆ. ನೀವಿಲ್ಲಿಗೆ ಮಳೆಗಾಲದಲ್ಲಿ ಮಾತ್ರವಲ್ಲದೆ ಎಲ್ಲ ಕಾಲದಲ್ಲೂ ತೆರಳಿ ಆನಂದಿಸಬಹುದು.

ಕೇರಳದ ಕೋವಲಂ
ಕೋವಲಂ ಕೇರಳದ ಅತ್ಯುತ್ತಮ ಮತ್ತು ಸುಂದರ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಮಳೆಗಾಲದಲ್ಲಿ ಇದು ಸುಂದರವಾದ ಸ್ವರ್ಗಕ್ಕಿಂತ ಕಡಿಮೆಯಿಲ್ಲ. ಕೋವಲಂನಲ್ಲಿ ಮಳೆಗಾಲದಲ್ಲಿ ಸುಂದರವಾದ ಮತ್ತು ಆಹ್ಲಾದಕರ ವಾತಾವರಣವಿರುತ್ತದೆ. ಅಲ್ಲಿ ನೀವು ಹಿತವಾದ ತಂಪಾದ ಗಾಳಿ, ಎತ್ತರದ ತೆಂಗಿನ ಮರಗಳನ್ನು ನೋಡಬಹುದು. ಕೋವಲಂನ ನೈಸರ್ಗಿಕ ಸೌಂದರ್ಯವನ್ನು ಅನುಭವಿಸುವುದರ ಜೊತೆಗೆ, ನೀವು ಸಮುದ್ರದಲ್ಲಿ ದೋಣಿ ವಿಹಾರವನ್ನು ಸಹ ಆನಂದಿಸಬಹುದು. ಆದರೆ ವಿಶೇಷವಾಗಿ ಮಾನ್ಸೂನ್ ಅವಧಿಯಲ್ಲಿ ಪ್ರವಾಹ ಏರಿಳಿತಗಳ ಅಪಾಯವಿರುವುದರಿಂದ ನಿರ್ಬಂಧಿತ ಪ್ರದೇಶಗಳಲ್ಲಿ ಈಜುವುದನ್ನು ತಪ್ಪಿಸಿ. ಸ್ಥಳೀಯ ಸ್ಥಳಗಳನ್ನು ಅನ್ವೇಷಿಸಲು ಸ್ಕೂಟರ್ ಅಥವಾ ಬೈಸಿಕಲ್ ಅನ್ನು ಬಾಡಿಗೆಗೆ ತೆಗೆದುಕೊಳ್ಳಬಹುದು. ನೀವು ಪ್ರಕೃತಿ ಪ್ರೇಮಿಯಾಗಿದ್ದರೆ, ಮಾನ್ಸೂನ್‌ನಲ್ಲಿ ಕೋವಲಂ ನಿಮಗೆ ಅತ್ಯುತ್ತಮ ತಾಣವಾಗಿದೆ.

ರಾಜಸ್ಥಾನದ ಪಿಂಕ್ ಸಿಟಿ
ರಾಯಲ್ ಸ್ಟೇಟ್ ಆಫ್ ಇಂಡಿಯಾ ಅಂದರೆ ರಾಜಸ್ಥಾನವು ಭಾರತದಲ್ಲಿ ಭೇಟಿ ನೀಡಲು ಉತ್ತಮ ಸ್ಥಳಗಳಲ್ಲಿ ಒಂದಾಗಿದೆ. ನೀವು ಇನ್ನೂ ರಾಜಸ್ಥಾನವನ್ನು ಅನ್ವೇಷಿಸದಿದ್ದರೆ ಮಾನ್ಸೂನ್‌ನಲ್ಲಿ ಅಂದರೆ ಮಳೆಗಾಲದಲ್ಲಿ ರಾಜಸ್ಥಾನಕ್ಕೆ ಪ್ರಯಾಣ ಬೆಳೆಸುವುದು ನಿಮಗೆ ಉತ್ತಮ ಆಯ್ಕೆಯಾಗಿದೆ. ನೀವಿಲ್ಲಿ ಮಳೆಗಾಲದಲ್ಲಿ ಸುಂದರವಾದ ಕೋಟೆಗಳು ಮತ್ತು ರಾಜಸ್ಥಾನದ ಪಿಂಕ್ ಸಿಟಿ ಜೈಪುರವನ್ನು ಅದರ ವಿಶ್ವಪ್ರಸಿದ್ಧ ಆಹಾರದೊಂದಿಗೆ ಅನ್ವೇಷಿಸಬಹುದು. ಮಳೆಗಾಲದ ಸಮಯದಲ್ಲಿ ಟೂರ್ ಪ್ಲಾನ್ ಮಾಡುತ್ತಿದ್ದರೆ ಆರಾಮಾಗಿ ನೀವು ನಿಮ್ಮ ಕುಟುಂಬದೊಂದಿಗೆ ರಾಜಸ್ಥಾನಕ್ಕೆ ಪ್ರವಾಸ ಮಾಡಬಹುದು. ರಾಜಸ್ಥಾನದಲ್ಲಿ ಸಾರ್ವಜನಿಕ ಸಾರಿಗೆ ವಿಚಾರಕ್ಕೆ ಬರುವುದಾದರೆ ನಗರಗಳ ಒಳಗೆ ಮತ್ತು ಇಂಟರ್‌ಸಿಟಿ ಪ್ರಯಾಣಕ್ಕೆ ವಿರಳ. ಖಾಸಗಿ ಟ್ಯಾಕ್ಸಿಗಳನ್ನು ಬಾಡಿಗೆಗೆ ಪಡೆದುಕೊಳ್ಳಿ ಅಥವಾ ರೈಡ್-ಶೇರಿಂಗ್ ಸರ್ವಿಸ್ ಬಳಸಿ.
ಯುಪಿಯ ಆಗ್ರಾ ಮತ್ತು ಬನಾರಸ್
ನೀವು ಇನ್ನೂ ತಾಜ್ ಮಹಲ್ ಮತ್ತು ಬನಾರಸ್ ಘಾಟ್‌ಗಳಿಗೆ ಭೇಟಿ ನೀಡಲು ಸಾಧ್ಯವಾಗದಿದ್ದರೆ, ಮಳೆಗಾಲದಲ್ಲಿ ಯುಪಿಯ ಆಗ್ರಾ ಮತ್ತು ಬನಾರಸ್‌ಗೆ ತೆರಳಲು ಪ್ಲಾನ್ ಮಾಡಬಹುದು. ಆಗ್ರಾದಲ್ಲಿರುವ ತಾಜ್ ಮಹಲ್ ಅನ್ನು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಇಲ್ಲಿ ರೊಮ್ಯಾಂಟಿಕ್ ಆಗಿ ಕಾಲ ಕಳೆಯಬಹುದು. ಒಂದು ವೇಳೆ ನೀವು ತಾಜ್ ಮಹಲ್ ಅನ್ನು ಅನ್ವೇಷಿಸದಿದ್ದರೆ ಬನಾರಸ್‌ನ ಸ್ಟ್ರೀಟ್ ಅನ್ವೇಷಿಸಲು ಯೋಜಿಸಬಹುದು. ವಿಶೇಷವಾಗಿ ಪೀಕ್ ಸೀಸನ್‌ನಲ್ಲಿ ಕ್ಯೂ ನಿಲ್ಲುವುದನ್ನು ತಪ್ಪಿಸಲು ತಾಜ್‌ಮಹಲ್‌ಗೆ ಟಿಕೆಟ್‌ಗಳನ್ನು ಮುಂಗಡವಾಗಿ ಕಾಯ್ದಿರಿಸಲು ಸಲಹೆ ನೀಡಲಾಗುತ್ತದೆ. ತಾಜ್ ಮಹಲ್ ಅನ್ನು ಶುಕ್ರವಾರದಂದು ಪ್ರಾರ್ಥನೆಗಾಗಿ ಮುಚ್ಚಲಾಗುತ್ತದೆ.

ಬೀಚ್ ಪ್ರೇಮಿಗಳಿಗಾಗಿ ಗೋವಾ
ನಿಮಗೆ ಗೊತ್ತಾ... ಮಳೆಗಾಲದಲ್ಲಿ, ಎಲ್ಲಾ ಬೀಚ್‌ಗಳು ಮೊದಲಿಗಿಂತ ಹಲವು ಪಟ್ಟು ಹೆಚ್ಚು ಆಕರ್ಷಕವಾಗಿ ಮತ್ತು ಸುಂದರವಾಗಿ ಕಾಣುತ್ತವೆ. ನೀವು ಬೀಚ್ ಲವರ್ ಅಥವಾ ಕಡಲತೀರ ಪ್ರಿಯರಾಗಿದ್ದಾರೆ ಈ ಸಮಯದಲ್ಲಿ ಗೋವಾ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಜೂನ್ ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಗೋವಾ ತುಂಬಾ ಆಕರ್ಷಕ ಮತ್ತು ಸುಂದರವಾಗಿ ಕಾಣುತ್ತದೆ . ಈ ಸಮಯದಲ್ಲಿ, ನಿಮ್ಮ ಸಂಗಾತಿಯೊಂದಿಗೆ ನೀವು ಅದ್ಭುತವಾದ ಸಮಯವನ್ನು ಕಳೆಯಬಹುದು. ಆದರೆ ಜೂನ್ ನಿಂದ ಸೆಪ್ಟೆಂಬರ್ ಕೆಲವು ಬೀಚ್ ಶಾಕ್ಸ್ ಹಾಗೂ ನೀರು ಆಧಾರಿತ ಚಟುವಟಿಕೆಗಳನ್ನು ಸ್ಥಗಿತಗೊಳಿಸಬಹುದು.

ಚೆನ್ನೈನಲ್ಲಿ ಶಾಂತವಾಗಿರುವ ಸಮುದ್ರ
ಚೆನ್ನೈ ನಗರವನ್ನು ಮಳೆಗಾಲದಲ್ಲಿ ಭೇಟಿ ನೀಡಲು ಉತ್ತಮ ಸ್ಥಳವೆಂದು ಪರಿಗಣಿಸಲಾಗಿದೆ. ಆದರೆ ಮಳೆಯು ಸಾಧಾರಣವಾಗಿರುವಾಗ ಮತ್ತು ನಗರದ ಮೂಲಕ ಪ್ರಯಾಣಿಸಲು ಅನುವು ಮಾಡಿಕೊಡುವ ಸೀಸನ್ ಆರಂಭದಲ್ಲಿ ಪ್ರವಾಸವನ್ನು ಯೋಜಿಸಲು ಬಯಸಬಹುದು. ಈ ಮಾನ್ಸೂನ್ ಸೀಸನ್‌ನಲ್ಲಿ ಸೊಲೋ ಟ್ರಿಪ್‌ಗೆ ಹೋಗುವ ಮೂಲಕ ಹೊಸ ಹೊಸ ಸಾಹಸಗಳನ್ನು ಅನ್ವೇಷಿಸಲು ಬಯಸಿದರೆ ಚೆನ್ನೈಗೆ ಯೋಜಿಸಬಹುದು. ನೀವು ಚೆನ್ನೈನಲ್ಲಿ ಅದರ ಸುಂದರವಾದ ಮತ್ತು ಶಾಂತ ಕಡಲತೀರಗಳ ಜೊತೆಗೆ ಅನೇಕ ಪ್ರಸಿದ್ಧ ಧಾರ್ಮಿಕ ಸ್ಥಳಗಳನ್ನು ಅನ್ವೇಷಿಸಬಹುದು. ಚೆನ್ನೈ ನಗರವು ಮಳೆಗಾಲದಲ್ಲಿ ತುಂಬಾ ಸುಂದರವಾಗಿ ಕಾಣುತ್ತದೆ. ಇಲ್ಲಿಗೆ ನೀವು ಏಕಾಂಗಿಯಾಗಿ, ಕುಟುಂಬ ಅಥವಾ ಸ್ನೇಹಿತರೊಂದಿಗೆ ಭೇಟಿ ಮಾಡಬಹುದು.


Click it and Unblock the Notifications



















