Search
  • Follow NativePlanet
Share
» »ಮುಂಬೈನಲ್ಲಿ ನೋಡಲೇಬೇಕಾದ ಸುಂದರವಾದ ತಾಣಗಳು ಯಾವುವು ಗೊತ್ತ?

ಮುಂಬೈನಲ್ಲಿ ನೋಡಲೇಬೇಕಾದ ಸುಂದರವಾದ ತಾಣಗಳು ಯಾವುವು ಗೊತ್ತ?

Written By:

ಮುಂಬೈ ನಗರ ಎಂದರೆ ಸಾಕು ಮೊದಲು ನೆನಪಾಗುವುದೇ ಫ್ಯಾಷನ್ ಹಾಗು ಯಾವಾಗಲೂ ಬಿಜಿಯಾಗಿರುವ ಪ್ರದೇಶ ಎಂದು ಅಲ್ಲವೇ?. ತದನಂತರ ಬಾಲಿವುಡ್‍ನ ಸಿನಿಮಾಗಳು, ಪ್ರಸಿದ್ಧವಾದ ನಟ, ನಟಿಯರು ನೆನಪಾಗುತ್ತಾರೆ. ಒಂದೇ ಮಾತಲ್ಲಿ ಹೇಳಬೇಕಾದರೆ ಪ್ರಪಂಚಕ್ಕೆ ಅಮೇರಿಕಾ ದೇಶ ಹೇಗೆ ಇದೆಯೋ ಹಾಗೆಯೇ ಭಾರತ ದೇಶಕ್ಕೆ ಮುಂಬೈ ಹಾಗೆ. ಮುಂಬೈ ನಗರದ ಪ್ರಾಧಾನ್ಯತೆ ವಿವರಿಸಬೇಕಾದರೆ ಅಲ್ಲಿನ ವಿವಿಧ ಧರ್ಮಗಳ ಸಂಸ್ಕøತಿ, ಆಚಾರ, ವಿಚಾರ, ಆಹಾರಗಳ ಮೇಲೆ ಆಧಾರವಾಗಿರುತ್ತದೆ.

ಮುಂಬೈನಲ್ಲಿ ಎಲ್ಲಾ ವಯಸ್ಸಿನವರಿಗೂ, ಎಲ್ಲಾ ಅಭಿರುಚಿಯವರಿಗೂ ಸಾಕಾಗುವಷ್ಟು ಆನಂದ ಲಭಿಸುತ್ತದೆ. ಎಷ್ಟೇ ಕಡಿಮೆ ಸಮಯವಿದ್ದರು ಕೂಡ ನೀವು ಖಂಡಿತವಾಗಿ ಕಾಣಲೇಬೇಕಾದ ಮುಂಬೈನ ಕೆಲವು ಸುಂದರವಾದ ಸ್ಥಳಗಳು ಇವೆ. ಹಾಗಾದರೆ ಆ ಸುಂದರವಾದ ಸ್ಥಳಗಳ ಬಗ್ಗೆ ಮಾಹಿತಿಯನ್ನು ಪಡೆಯೊಣ.

ಮುಂಬೈ

ಮುಂಬೈ

ಮುಂಬೈನ ಸುಂದರವಾದ ವಾತಾವರಣ, ಸಮುದ್ರ ಮಟ್ಟದಿಂದ ಎತ್ತರವಿರುವ ಸುಂದರವಾದ ಸ್ಥಳ ಇದಾಗಿದೆ. ಈ ನಗರದಲ್ಲಿ ಸಾಮಾನ್ಯವಾಗಿ ಜನಸಂದಣಿ ಹೆಚ್ಚಾಗಿರುತ್ತದೆ.

ಮುಂಬೈ

ಮುಂಬೈ

2100 ರ ಹೊತ್ತಿಗೆ, ವಿಶ್ವದ ಜನಸಂಖ್ಯೆಯ ಐದನೇ ಒಂದು ಭಾಗವು ಸುಮಾರು 200 ದಶಲಕ್ಷ ಜನರು ವಾಸಸ್ಥಾನವು ಸಮುದ್ರಕ್ಕಿಂತ ಹೆಚ್ಚಾಗಿರುತ್ತದೆ.

ಮುಂಬೈ

ಮುಂಬೈ

ಇದರ ಅರ್ಥ ಅವರು ಜಾಗತಿಕ ಹವಾಮಾನ ಪರಿಸರದಲ್ಲಿ ನಿರಾಶ್ರಿತರಾಗುತ್ತಾರೆ ಎಂಬುದಾಗಿದೆ.

ಮುಂಬೈ

ಮುಂಬೈ

ಇಲ್ಲಿನ ಆನೇಕ ಕರಾವಳಿ ಪ್ರದೇಶಗಳು ಮುಳುಗಿ ಹೋಗುತ್ತವೆ. ಇದರಿಂದಾಗಿ ಎತ್ತರವಾದ ಪ್ರದೇಶಕ್ಕೆ ಇವರೆಲ್ಲಾ ವಲಸೆಗೆ ಹೋಗಬೇಕಾಗುತ್ತದೆ ಎಂದು ಕೆಲವು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಮುಂಬೈ

ಮುಂಬೈ

ಇಂದಿಗೂ ಕೂಡ ಮುಂಬೈ ಮತ್ತು ದೆಹಲಿ ಮುಂತಾದ ನಗರಗಳು ಕಡಿಮೆ ಭೂ ಪ್ರದೇಶದಲ್ಲಿ ಹೆಚ್ಚು ಜನರು ಜೀವನ ನಡೆಸುತ್ತಿದ್ದಾರೆ. ಇದರಿಂದಾಗಿ ಹಲವಾರು ಅವಘಡಗಳು ನಡೆಯುವ ಸಂಭವವಿದೆ.

ಮುಂಬೈ

ಮುಂಬೈ

ತೀರ ಪ್ರದೇಶದಲ್ಲಿ ಹಲವಾರು ನಿರಾಶ್ರಿತರು ವಾಸಿಸುತ್ತಿರುತ್ತಾರೆ. ಇವರಿಗೆ ಯಾವುದೇ ಸೌಕರ್ಯಗಳು ಇಲ್ಲ. ಹಾಗಾಗಿ ಇವರನ್ನು ಸಂರಕ್ಷಿಸಲು ಅನುಕೂಲಕರವಾದ ನೀತಿಗಳನ್ನು ಜಾರಿಗೊಳಿಸಬೇಕಾಗಿದೆ.

ಮುಂಬೈ

ಮುಂಬೈ

ವಿಶ್ವಸಂಸ್ಥೆಯ ವರದಿಯ ಪ್ರಕಾರ, 2050 ರ ಹೊತ್ತಿಗೆ ವಿಶ್ವದ ಜನಸಂಖ್ಯೆಯು ಸುಮಾರು 9000 ಕೋಟಿ ತಲುಪಲಿದೆ ಎಂದು ಹೇಳಿದ್ದಾರೆ. ಹಾಗೆಯೇ 2100 ರ ವೇಳೆಗೆ ಅದು 11 ಶತಕೋಟಿಯಷ್ಟು ತಲುಪಲಿದೆ.

ಮುಂಬೈ

ಮುಂಬೈ

ದರೆ ಅಷ್ಟು ಜನರಿಗೆ ಆಹಾರ, ವಸತಿಯನ್ನು ದೇಶ ಹೇಗೆ ಪೂರೈಸುತ್ತದೆ ಎಂಬುದೇ ಬಹುದೊಡ್ಡ ಪ್ರಶ್ನೆಯಾಗಿದೆ.

ಮುಂಬೈ

ಮುಂಬೈ

ಹವಾಮಾನ ಮುನ್ಸೂಚನೆಯ ಪ್ರಕಾರ, ಸಮುದ್ರ ಮಟ್ಟ ಹೆಚ್ಚಾಗಿ ಫಲವತ್ತಾದ ಭೂಮಿ ನಾಶ ಹೊಂದುತ್ತಾ ಇದೆ. ಹಾಗಾಗಿ ನದಿ ತೀರದ ಪ್ರದೇಶಗಳು ಮುಳಗುತ್ತಲಿವೆ. 2060 ರ ಹೊತ್ತಿಗೆ ಸುಮಾರು 20 ಮಿಲಿಯನ್ ಜನರು ನಿರಾಶ್ರಿತರಾಗುವ ಸಂಭವವಿದೆ ಎಂದು ಒಂದು ಅಧ್ಯಯನದ ಮೂಲಕ ತಿಳಿದು ಬಂದಿದೆ.

ಮುಂಬೈ

ಮುಂಬೈ

ಹವಾಮಾನ ಬದಲಾವಣೆಯನ್ನು ತಡೆಗಟ್ಟಲು ಮತ್ತು ಸಮುದ್ರ ಮಟ್ಟ ಕರುಗುವಿಕೆಯನ್ನು ತಡೆಗಟ್ಟುವ ಯಾವ ಮಾರ್ಗವು ಸಧ್ಯಕ್ಕೆ ಇಲ್ಲ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.

ಮುಂಬೈನ ಕೆಲವು ಪ್ರಸಿದ್ಧವಾದ ಪ್ರವಾಸಿ ತಾಣಗಳು

ಮುಂಬೈನ ಕೆಲವು ಪ್ರಸಿದ್ಧವಾದ ಪ್ರವಾಸಿ ತಾಣಗಳು

ಕೋಲಬಾ ಕಾಜ್ ವೇ
ಭಾರತ ದೇಶದಲ್ಲಿ ಮೊದಲು ಫ್ಯಾಷನ್ ಮೊದಲಾಗಿದ್ದೇ ಮುಂಬೈನಲ್ಲಿ ಎನ್ನುವಷ್ಟರ ಮಟ್ಟಿಗೆ ಪ್ರಸಿದ್ಧಿಯನ್ನು ಪಡೆದಿದೆ. ಮುಂಬೈನ ಬೀದಿಯ ಬದಿಯಲ್ಲಿ ಮಾರಟದಿಂದ ಮೊದಲಾಗುತ್ತದೆ. ಇಲ್ಲಿ ಹಲವಾರು ಪ್ಯಾಷನ್ ಆಭರಣಗಳನ್ನು ಮಾರಾಟ ಮಾಡುತ್ತಾರೆ ಹಾಗಾಗಿ ಒಮ್ಮೆ ಈ ಸ್ಥಳಕ್ಕೆ ಭೇಟಿ ನೀಡಿ ನೀವು ಕೂಡ ಖರೀದಿಸಿ.

ಮುಂಬೈನ ಕೆಲವು ಪ್ರಸಿದ್ಧವಾದ ಪ್ರವಾಸಿ ತಾಣಗಳು

ಮುಂಬೈನ ಕೆಲವು ಪ್ರಸಿದ್ಧವಾದ ಪ್ರವಾಸಿ ತಾಣಗಳು

ಎಸೆಲ್ ವಲ್ರ್ಡ್
ಇದು ದೇಶದ ಮೊದಲ ಮನರಂಜನಾ ಉದ್ಯಾನವನಗಳಲ್ಲಿ ಒಂದಾಗಿದೆ. ಇದು ಥೀಮ್ ಪಾರ್ಕುಗಳಲ್ಲಿ ಒಂದಾಗಿದೆ. ಇಲ್ಲಿ ಹಲವಾರು ಪ್ರವಾಸಿಗರು ಭೇಟಿ ನೀಡುತ್ತಾರೆ ಇಲ್ಲಿ ಹಲವಾರು ಬಗೆಯ ಸವಾರಿಗಳನ್ನು ಮಾಡಬಹುದಾಗಿದೆ. ಹುಲ್ಲಾ ಹೂಪ್, ಶಾಟ್ ಎನ್ ಡ್ರಾಪ್ ಮತ್ತು ಎಂಟಪ್ರೈಸ್ ಸಾಹಸವನ್ನು ಕೂಡ ಆನಂದಿಸಬಹುದಾಗಿದೆ.

ಮುಂಬೈನ ಕೆಲವು ಪ್ರಸಿದ್ಧವಾದ ಪ್ರವಾಸಿ ತಾಣಗಳು

ಮುಂಬೈನ ಕೆಲವು ಪ್ರಸಿದ್ಧವಾದ ಪ್ರವಾಸಿ ತಾಣಗಳು

ಗೇಟ್‍ವೇ ಆಫ್ ಇಂಡಿಯ
ಇದೊಂದು ಬ್ರಟಿಷ್ ಆಡಳಿತದ ನೆನಪಿಗಾಗಿ ನಿರ್ಮಾಣ ಮಾಡಿರುವ ಸ್ಮಾರಕವಾಗಿದೆ. ಡಿಸೆಂಬರ್ 1911 ರಲ್ಲಿ ಇಂಗ್ಲೆಂಡಿನ ರಾಜ, 5 ನೇ ಕಿಂಗ್ ಜಾರ್ಜ್ ಮತ್ತು ಕ್ವೀನ್ ಮೇರಿ ದೆಹಲಿಯ ದರ್ಬಾರ್‍ನಲ್ಲಿ ಭಾಗವಹಿಸಲು ಮುಂಬೈಗೆ ಭೇಟಿ ನೀಡಿದ ನೆನಪಿಗಾಗಿ ನಿರ್ಮಾಣ ಮಾಡಲಾಗಿದೆ.

ಮುಂಬೈನ ಕೆಲವು ಪ್ರಸಿದ್ಧವಾದ ಪ್ರವಾಸಿ ತಾಣಗಳು

ಮುಂಬೈನ ಕೆಲವು ಪ್ರಸಿದ್ಧವಾದ ಪ್ರವಾಸಿ ತಾಣಗಳು

ಹಜಿ ಅಲಿ
ಮುಂಬೈನ ಪ್ರಸಿದ್ಧವಾದ ಸ್ಥಳಗಳಲ್ಲಿ ಹಜಿ ಹಲಿ ಕೂಡ ಒಂದಾಗಿದೆ. ಇಲ್ಲಿಗೆ ಯಾವುದೇ ಜಾತಿ, ಧರ್ಮ ಎಂಬ ಬೇಧ-ಭಾವವಿಲ್ಲದೇ ಭೇಟಿ ನೀಡುತ್ತಾರೆ. ಇದೊಂದು ದರ್ಗಾ ಹಾಗು ಮಸೀದಿಯಾಗಿದೆ. ಇಲ್ಲಿ ಸೈಯದ್ ಫಿರ್ ಅಲಿ ಷಾ ಬುಕಾರಿಯವರ ಸಮಾಧಿ ಕೂಡ ಇದೆ.

ಮುಂಬೈನ ಕೆಲವು ಪ್ರಸಿದ್ಧವಾದ ಪ್ರವಾಸಿ ತಾಣಗಳು

ಮುಂಬೈನ ಕೆಲವು ಪ್ರಸಿದ್ಧವಾದ ಪ್ರವಾಸಿ ತಾಣಗಳು

ಜಾಹು ಬೀಚ್
ಮುಂಬೈನ ಅತ್ಯಂತ ಸುಂದರವಾದ ಬೀಚ್ಗಳಲ್ಲಿ ಈ ಜಾಹು ಬೀಚ್ ಒಂದು. ಇಲ್ಲಿ ಬೀಚ್‍ನ ಪ್ರೇಮಿಗಳು ಭೇಟಿ ನೀಡುತ್ತಾರೆ. ಪ್ರಶಾಂತವಾಗಿರುವ ಈ ಸ್ಥಳ ಯಾರಿಗೆ ಇಷ್ಟ ಆಗಲ್ಲ ಹೇಳಿ...ಇಲ್ಲಿನ ಬೀದಿ ತಿನಿಸುಗಳಿಗೆ ಮನಸೋತು ಭೇಟಿ ನೀಡುತ್ತಾರೆ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಮುಂಬೈಗೆ ಬೆಂಗಳೂರಿನಿಂದ ನೇರವಾದ ವಿಮಾನಗಳು, ರೈಲುಗಳ ಮಾರ್ಗವಿದೆ ಹಾಗಾಗಿ ಸುಲಭವಾಗಿ ಮಹಾರಾಷ್ಟ್ರದ ಮುಂಬೈಗೆ ಸುಲಭವಾಗಿ ತೆರಳಬಹುದಾಗಿದೆ. ಬೆಂಗಳೂರಿನಿಂದ ಮುಂಬೈಗೆ ಸುಮಾರು 980 ಕಿ,ಮೀ ದೂರದಲ್ಲಿದೆ.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more