Search
  • Follow NativePlanet
Share
» » ಕಬಾಬ್ ಅಂದ್ರೆ ನಿಮಿಗಿಷ್ಟಾನಾ? ಬೆಸ್ಟ್ ಕಬಾಬ್ ತಿನ್ನಬೇಕಾದ್ರೆ ಇಲ್ಲಿಗೆ ಹೋಗಿ

ಕಬಾಬ್ ಅಂದ್ರೆ ನಿಮಿಗಿಷ್ಟಾನಾ? ಬೆಸ್ಟ್ ಕಬಾಬ್ ತಿನ್ನಬೇಕಾದ್ರೆ ಇಲ್ಲಿಗೆ ಹೋಗಿ

ನಾನ್‌ವೆಜ್ ಡಿಶ್‌ಗಳಲ್ಲಿ ಕಬಾಬ್ ಕೂಡಾ ಒಂದು. ಒಂದೊಂದು ಊರಿನ ಕಬಾಬ್‌ಗೆ ಒಂದೊಂದು ಹೆಸರಿರುತ್ತದೆ. ಹಾಗೆಯೇ ಟೇಸ್ಟ್ ಕೂಡಾ ಬೇರೆ ಇರುತ್ತದೆ. ಹಾಗಾದರೆ ಯಾವ ಊರಲ್ಲಿ ಬೆಸ್ಟ್ ಚಿಕನ್ ಕಬಾಬ್ ಸಿಗುತ್ತದೆ ಅನ್ನೋದನ್ನು ನೋಡೋಣ...

ಹೈದರಾಬಾದ್

ಹೈದರಾಬಾದ್

PC - Jess Lander
ಹೈದರಾಬಾದ್ ದೇಶದಲ್ಲಿರುವ ಪ್ರಸಿದ್ಧ ಫುಡ್ ಹಬ್ ಆಗಿದೆ. ಮುಖ್ಯವಾಗಿ ನಾನ್ ವೆಜ್ ಫುಡ್‌ಗೆ ಎತ್ತಿದ ಕೈ. ಹೈದರಾಬಾದಿ ಬಿರಿಯಾನಿ ಬಗ್ಗೆ ನೀವು ಕೇಳಿಯೇ ಇರಬಹುದು. ಹಾಗೆಯೇ ಹೈದರಾಬಾದ್‌ಗೆ ಹೋದ ಮೇಲೆ ಶೇಖ್ ಕಬಾಬ್‌ ಅನ್ನು ಮಿಸ್ ಮಾಡೋ ಹಾಗಿಲ್ಲ. ಶೇಖ್ ಕಬಾಬ್‌ನ ಸ್ಪೆಶಾಲಿಟಿ ಎಂದರೆ ಇದು ಬೇರೆಲ್ಲಾ ಕಬಾಬ್‌ನ್ನು ಮೀರಿಸುವಂತದ್ದಾಗಿದೆ. ಉಳಿದೆಲ್ಲಾ ಕಬಾಬ್‌ನ್ನು ತವಾದಲ್ಲಿ ಬೇಯಿಸಿದರೆ ಇದನ್ನು ತಂದೂರ್‌ನಲ್ಲಿ ಬೇಯಿಸುತ್ತಾರೆ. ಪ್ರತಿಯೊಂದು ಬೈಟ್‌ನ್ನೂ ಸವಿದು ಸವಿದು ತಿನ್ನಬೇಕಾಗಿದೆ.

ಲಕ್ನೋ

ಲಕ್ನೋ

PC- Mcbridejc
ಲಕ್ನೋವನ್ನು ನವಾಬರ ಸಿಟಿ ಎಂದೂ ಕರೆಯಲಾಗುತ್ತೆ. ತನ್ನ ನೈಸರ್ಗಿಕ ಸೌಂದರ್ಯದಿಂದ ತನ್ನತ್ತ ಸೆಳೆಯುತ್ತಿರುವ ಲಕ್ನೌ ತನ್ನ ಬೆಚ್ಚಗಿನ ಆತಿಥ್ಯಕ್ಕೂ ಹೆಸರುವಾಸಿಯಾಗಿದೆ. ಇನ್ನೂ ನಾನ್‌ವೆಜ್ ಆಹಾರದ ಬಗ್ಗೆ ಹೇಳೋದಾದರೆ ಇಲ್ಲಿನ ಕಬಾಬ್ ಹಾಗು ಬಿರಿಯಾನಿಯನ್ನು ಹೊಗಳದೇ ಇರಲು ಸಾದ್ಯವಿಲ್ಲ. ಅವಾಡಿ ಭಕ್ಷ್ಯಗಳು ಹಾಗೂ ಟುಂಡೆ ಕಬಾಬ್ ಇಲ್ಲಿನ ಫೇಮಸ್ ಡಿಶ್‌ ಆಗಿದೆ.
ಪೂಲ್ ವಾಲಿ ಗಲಿಯಲ್ಲಿರುವ ಟುಂಡೆ ಕಬಾಬ್ , ಪುರಾನಿ ಚುಂಗಿಯಲ್ಲಿರುವ ಗ್ರಾಂಡ್‌ಸನ್ ಆಫ್ ತುಂಡೆ, ಲಕ್ನೌ ಕಬಾಬಿ ಇವೆಲ್ಲಾ ಇಲ್ಲಿನ ಫೇಮಸ್ ಕಬಾಬ್ ಸೆಂಟರ್‌ಗಳು

ಕೋಲ್ಕತ್ತಾ

ಕೋಲ್ಕತ್ತಾ

PC- Taylor and Kevin
ಕೊಲ್ಕತ್ತಾದಲ್ಲಿ ಮೀನಿನ ಡಿಶ್ ಅಂದರೆ ತುಂಬಾ ಫೇಮಸ್. ಕೊಲ್ಕತ್ತಾದ ಬಹುತೇಕರ ಫೇವರೆಟ್ ಡಿಶ್ ಏನೆಂಧು ಕೇಳಿದರೆ ಅದು ಫಿಶ್ ಆಗಿರುತ್ತದೆ. ಇದನ್ನು ಹೊರತುಪಡಿಸಿ ಇತರ ನಾನ್ ವೆಜ್ ಡಿಶ್‌ಗಳಾದ ಬಿರಿಯಾನಿ ಹಾಗೂ ಕಬಾಬ್‌ಗೂ ಕೊಲ್ಕತ್ತಾ ಫೇಮಸ್ ಆಗಿದೆ. ಕಬಾಬ್ ಬಗ್ಗೆ ಹೇಳೋದರೆ ಇಲ್ಲಿ ವಿಭಿನ್ನ ಬಗೆಯ ಕಬಾಬ್ ಸಿಗುತ್ತದೆ. ಭಾರತೀಯ ಸಾಂಪ್ರಾದಾಯಿಕ ಕಬಾಬ್‌ನಿಂದ ಹಿಡಿದು ಮಾರ್ಡನ್ ಕಬಾಬ್ ವರೆಗೆ ಎಲ್ಲವೂ ಇಲ್ಲಿ ಸಿಗುತ್ತದೆ.

ದೆಹಲಿ

ದೆಹಲಿ

PC- Jess Lander
ಎಲ್ಲಾ ರೀತಿಯ ಐಷಾರಾಮಿ ಜೀವನವನ್ನು ಅನುಭವಿಸಬೇಕಾದರೆ ದೆಹಲಿಗೆ ಹೋಗಿ. ದೆಹಲಿಯ ಶಾಮಿ ಕಬಾಬ್ ತುಂಬಾ ಫೇಮಸ್. ಇದು ಇಲ್ಲಿನ ಲೋಕಲ್ ವೆರೈಟಿ ಕಬಾಬ್ ಅಗಿದೆ. ಇಲ್ಲಿನ ಕಬಾಬ್‌ನಲ್ಲಿ ನಿಮಗೆ ಮೂಳೆಗಳೇ ಸಿಗುವುದಿಲ್ಲ. ಇಲ್ಲಿ ರಸ್ತೆ ಬದಿ ಕಬಾಬ್ ಮಾಡುವವನಿಂದ ಹಿಡಿದು ದೊಡ್ಡ ದೊಡ್ಡ ರೆಸ್ಟೋರೆಂಟ್ ವರೆಗೂ ಶಾಮಿ ಕಬಾಬ್ ಮಾರಾಟ ಮಾಡುತ್ತಾರೆ.

ಮುಂಬೈ

ಮುಂಬೈ

ಇಡೀ ಫಿಲ್ಮ್ ಇಂಡಸ್ಟ್ರೀಯೇ ಮುಂಬೈನಲ್ಲಿ ನೆಲೆಯಾಗಿದೆ. ನಿಮಗೆಲ್ಲಾ ತಿಳಿದಿರುವಂತೆ ಮುಂಬೈನಲ್ಲಿ ಫೇಮಸ್ ಏನಂದ್ರೆ ವಡಾ ಪಾವ್. ಆ ನಂತರ ಕಬಾಬ್. ಇಲ್ಲಿ ರಸ್ತೆ ಬದಿಯಲ್ಲಿರುವ ಸ್ಟಾಲ್‌ಗಳಲ್ಲಿ ನಿಮಗೆ ಬೇಕಾದಂತಹ ಎಲ್ಲಾ ರೀತಿಯ ಕಬಾಬ್‌ಗಳು ಬಹಳ ಕಡಿಮೆ ಬೆಲೆಗೆ ದೊರೆಯುತ್ತದೆ.

More News

Read more about: india food
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+