Search
  • Follow NativePlanet
Share
» »ರೈಲಿನಲ್ಲಿ ಪ್ರವಾಸ: ಟಾಯ್ಲೆಟ್  ಸಮೀಪ ಸೀಟ್ ಸಿಗಬಾರದೆಂದರೆ ಹೀಗೆ ಮಾಡಿ…  

ರೈಲಿನಲ್ಲಿ ಪ್ರವಾಸ: ಟಾಯ್ಲೆಟ್  ಸಮೀಪ ಸೀಟ್ ಸಿಗಬಾರದೆಂದರೆ ಹೀಗೆ ಮಾಡಿ…  

ರೈಲಿನಲ್ಲಿ ಪ್ರಯಾಣಿಸುವುದು ಬಹಳ ಆರಾಮಾದಾಯಕ. ಎಲ್ಲಾ ದೃಷ್ಟಿಯಿಂದಲೂ ಹಿತಕರವೆನಿಸುವ ಈ ರೈಲು ಪ್ರಯಾಣದಲ್ಲಿ ಸ್ವಲ್ಪ ದುಡ್ಡು ಕೂಡ ಉಳಿತಾಯವಾಗುತ್ತದೆ. ವಿಶೇಷವಾಗಿ ಹಿರಿಯರು, ಮಕ್ಕಳು ಚುಕುಬುಕು ರೈಲು ಪ್ರವಾಸವನ್ನು ಬಹಳ ಇಷ್ಟಪಡುತ್ತಾರೆ. ಆದರೆ ಆಗಾಗ್ಗೆ ರೈಲಿನಲ್ಲಿ ಪ್ರಯಾಣಿಸುವವರಿಗೆ ಒಂದೇ ಒಂದು ಕಿರಿ ಕಿರಿಯಂತೂ ಇದೆ. ಅದೇನಪ್ಪಾ ಅಂದ್ರೆ, ನಿಮಗೆ ರೈಲಿನಲ್ಲಿ ಕಿಟಕಿ ಬದಿಯಲ್ಲಿ ಸೀಟ್ ಸಿಕ್ಕಾಗ ಎಷ್ಟು ಖುಷಿಯಾಗುತ್ತದೆಯೋ, ಶೌಚಾಲಯದ ಸಮೀಪ ಸೀಟ್ ಸಿಕ್ಕಾಗ ಅಷ್ಟೇ ಕೋಪ ಬರುತ್ತದೆ ಅಲ್ಲವೇ, ಆದ್ದರಿಂದ ಬೋಗಿಯಲ್ಲಿ ಮೊದಲ ಮತ್ತು ಕೊನೆಯ ಆಸನ ಸಿಕ್ಕಾಗ ಕೆಲವರಿಗೆ ಚಿಂತೆಯಾಗುತ್ತದೆ.

ಶೌಚಾಲಯದಿಂದ ಬರುವ ವಾಸನೆಯಿಂದ ಜನರಿಗೆ ಅಲ್ಲಿ ಕುಳಿತುಕೊಳ್ಳಲು ಕಷ್ಟವಾಗುತ್ತದೆ. ನಿಮಗೂ ಇಂತಹ ಸಮಸ್ಯೆ ಎದುರಾಗಿದ್ದರೆ ಚಿಂತಿಸಬೇಡಿ. ಏಕೆಂದರೆ ಇದಕ್ಕೂ ಪರಿಹಾರವಿದ್ದು, ನೀವು ನಿಮ್ಮ ಆಸನವನ್ನು ಟಾಯ್ಲೆಟ್ ಬಳಿ ಬುಕ್ಕಿಂಗ್ ಮಾಡದಂತೆ ತಪ್ಪಿಸಬಹುದು.

ಭಾರತೀಯ ರೈಲ್ವೇ ರೈಲುಗಳಲ್ಲಿರುವ ಆಸನದ ಮಾದರಿ

ಭಾರತೀಯ ರೈಲ್ವೇ ರೈಲುಗಳಲ್ಲಿರುವ ಆಸನದ ಮಾದರಿ

ಭಾರತೀಯ ರೈಲ್ವೇಯಲ್ಲಿ ಬರುವ ರೈಲುಗಳು ವಿಭಿನ್ನ ವಿನ್ಯಾಸಗಳು ಮತ್ತು ಲೇ ಔಟ್ ಗಳೊಂದಿಗೆ ವಿವಿಧ ರೀತಿಯ ಕೋಚ್‌ಗಳನ್ನು ಹೊಂದಿವೆ. ಹಣ, ಬರ್ತ್‌ಗಳಿಗೆ ತಕ್ಕ ಹಾಗೆ ಸೌಕರ್ಯಗಳು ಬದಲಾಗುತ್ತವೆ. ಆದರೆ ಅವೆಲ್ಲವೂ ಎರಡು ಬಾಗಿಲುಗಳು ಮತ್ತು ಕೋಚ್‌ನ ಪ್ರತಿ ತುದಿಯಲ್ಲಿ ಎರಡು ಶೌಚಾಲಯಗಳನ್ನು ಹೊಂದಿವೆ. ವಿವಿಧ ರೀತಿಯ ಕೋಚ್'ಗಳಿಗೆ ವಿವಿಧ ಲೇಔಟ್‌ಗಳು ಮತ್ತು ಆಸನ ವ್ಯವಸ್ಥೆಗಳಿವೆ.

ಎಸಿ ಫಸ್ಟ್ ಕ್ಲಾಸ್ (1 ಎ): ಎಸಿ ಫಸ್ಟ್ ಕ್ಲಾಸ್ (1 ಎ) ‘ಎಚ್' ಕೋಚ್‌ನಲ್ಲಿ ನಿಗದಿಪಡಿಸಲಾಗಿದೆ. ಕೋಚ್ ಪ್ರತಿ ಕೂಪ್‌ನಲ್ಲಿ 24 ಬರ್ತ್‌ಗಳನ್ನು ಹೊಂದಿದೆ. ಒಂದು ಮೇಲ್ಭಾಗ ಹಾಗೂ ಮತ್ತೊಂದು ಕೆಳಭಾಗ. ಅಗತ್ಯವಿದ್ದರೆ ನೀವು ಆ ಕೂಪ್‌ಗಳನ್ನು ಸಹ ಮುಚ್ಚಬಹುದು.

ಟೈರ್ ಎಸಿ ಸ್ಲೀಪರ್ (2ಎ): ಟೈರ್ ಎಸಿ ಸ್ಲೀಪರ್ (2ಎ) ‘ಎ' ಕೋಚ್‌ನಲ್ಲಿ ನಿಗದಿಪಡಿಸಲಾಗಿದೆ. ಕೋಚ್‌ನ ಗಾತ್ರವನ್ನು ಅವಲಂಬಿಸಿ, 46 ಅಥವಾ 54 ಬರ್ತ್‌ಗಳು ಇರಬಹುದು. ಇಲ್ಲಿ ಎರಡು ಕೆಳ ಭಾಗಗಳಲ್ಲಿ ಮತ್ತು ಒಂದು ಮೇಲಿನ ಭಾಗ ಮಾಡಲಾಗಿರುತ್ತದೆ. ಇದರಲ್ಲಿ ಕೂಪ್‌ಗಳು ತೆರೆದಿದ್ದರೂ, ಪರದೆಗಳ ವ್ಯವಸ್ಥೆಯನ್ನು ನೀಡಲಾಗಿದೆ.

ಟೈರ್ ಎಸಿ ಸ್ಲೀಪರ್ (3ಎ): ಟೈರ್ ಎಸಿ ಸ್ಲೀಪರ್ (3ಎ) ಕೋಚ್ ಕೋಡ್ ಬಿ. ಪ್ರತಿ ಕೋಚ್‌ಗೆ 64 ಬರ್ತ್‌ಗಳಿವೆ. ಸೈಡ್ ಬರ್ತ್‌ಗಳು ಎರಡು ಹಂತಗಳನ್ನು ಹೊಂದಿದ್ದು, ಪ್ರಯಾಣಿಕರಿಗೆ ಆಸನವನ್ನು ಒದಗಿಸಲು ಅಪ್ಪರ್, ಮಿಡ್ಲ್ ಮತ್ತು ಲೋಯರ್ ಬರ್ಥ್ ಗಳು ಇರುತ್ತವೆ.

ರೈಲುಗಳಲ್ಲಿರುವ ಎರಡನೇ ಕೋಚ್‌ನ ಆಸನದ ಮಾದರಿ

ರೈಲುಗಳಲ್ಲಿರುವ ಎರಡನೇ ಕೋಚ್‌ನ ಆಸನದ ಮಾದರಿ

ಸ್ಲೀಪರ್ ಕ್ಲಾಸ್ (ಎಸ್ ಎಲ್): ಇದರ ಕೋಚ್ ಕೋಡ್ ಎಸ್. ಸ್ಲೀಪರ್ ಕ್ಲಾಸ್ (ಎಸ್ ಎಲ್) ನಾನ್-ಎಸಿ ಕೋಚ್ ಆಗಿದೆ. ಕೋಚ್ 72 ವ್ಯಕ್ತಿಗಳಿಗೆ ಕುಳಿತುಕೊಳ್ಳಲು ಮತ್ತು ಮಲಗಲು ಬರ್ತ್‌ಗಳನ್ನು ಒದಗಿಸುತ್ತದೆ. ಎಸಿ ಹೊರತುಪಡಿಸಿ, ಕೋಚ್ ಲೇಔಟ್ ಟೈರ್ ಎಸಿ ಸ್ಲೀಪರ್ ಕ್ಲಾಸ್‌ನಂತೆಯೇ ಇದೆ. ನೀವು ಕಿಟಕಿಗಳನ್ನು ಸಹ ತೆರೆಯಬಹುದು.

ಎರಡನೇ ಆಸನ (2S): ಇದು ನಾನ್-ಎಸಿ ಕೋಚ್ ಆಗಿದ್ದು, ಕುಳಿತುಕೊಳ್ಳಲು ಮತ್ತು ಮಲಗಲು ಮಾತ್ರ ಸೀಟುಗಳು ಲಭ್ಯವಿವೆ. 108 ಸೀಟುಗಳು ಬರ್ತ್ ಇಲ್ಲದೆ ಲಭ್ಯವಿದೆ.

ರೈಲಿನಲ್ಲಿ ಸೀಟುಗಳನ್ನು ಹೇಗೆ ವಿತರಿಸಲಾಗುತ್ತದೆ?

ರೈಲಿನಲ್ಲಿ ಸೀಟುಗಳನ್ನು ಹೇಗೆ ವಿತರಿಸಲಾಗುತ್ತದೆ?

ನಾವು ರೈಲಿನ ಸೀಟ್ ಅಲ್ಗಾರಿದಮ್ ಅನ್ನು ನೋಡಿದರೆ, ಕೋಚ್‌ಗಳ ನಡುವಿನ ಸೀಟುಗಳು ಬುಕಿಂಗ್‌ಗಾಗಿ ಮೊದಲು ತೆರೆಯಲ್ಪಡುತ್ತವೆ. ಇದು ರೈಲಿನಲ್ಲಿನ ಜನರನ್ನು ವಿಂಗಡಣೆ ಮಾಡಿ, ಬ್ಯಾಲೆನ್ಸ್ ಮಾಡಲು ಸಹಾಯ ಮಾಡುತ್ತದೆ. ಮಧ್ಯದ ಸೀಟುಗಳನ್ನು ತುಂಬಿದ ನಂತರ, ಕೋಚ್‌ನ ಕೊನೆಯಲ್ಲಿ ಹೆಚ್ಚಿನ ಆಸನಗಳನ್ನು ಹಂಚಲಾಗುತ್ತದೆ.

ಟಾಯ್ಲೆಟ್ ಬಳಿ ರೈಲು ಸೀಟ್ ಸಿಗದಿರಲು ಸಲಹೆಗಳು

ಟಾಯ್ಲೆಟ್ ಬಳಿ ರೈಲು ಸೀಟ್ ಸಿಗದಿರಲು ಸಲಹೆಗಳು

*ನಿಮ್ಮ ಟಿಕೆಟ್ ಅನ್ನು ಆದಷ್ಟು ಬೇಗ ಬುಕ್ ಮಾಡಿ. ಐಆರ್‘ಸಿಟಿಸಿ ಕೋಚ್‌ನ ಮಧ್ಯದ ಸೀಟುಗಳನ್ನು ಮೊದಲು ಬಂದವರಿಗೆ ಮೊದಲು ಸೇವೆಯ ಆಧಾರದ ಮೇಲೆ ನಿಗದಿಪಡಿಸಲಾಗುತ್ತದೆ. ನೀವು ಬೇಗನೆ ಕಾಯ್ದಿರಿಸಿದರೆ, ಟಾಯ್ಲೆಟ್‌ನಿಂದ ದೂರವಿರುವ ಕೋಚ್‌ನ ಮಧ್ಯದಲ್ಲಿ ಆಸನವನ್ನು ಪಡೆಯುವ ಸಾಧ್ಯತೆ ಹೆಚ್ಚು.

*ಅಧಿಕೃತ ಐಆರ್‘ಸಿಟಿಸಿ ವೆಬ್ ಸೈಟ್ ಸೀಟುಗಳನ್ನು ಹಂಚಿಕೆ ಮಾಡುವಾಗ ನಿಮ್ಮ ಆಯ್ಕೆಯ ಪ್ರಕಾರ ಸೀಟ್ ಅನ್ನು ಆಯ್ಕೆ ಮಾಡಲು ನಿಮಗೆ ಅವಕಾಶ ನೀಡುತ್ತದೆ. ನೀವು ಶೌಚಾಲಯದಿಂದ ದೂರವಿರುವ ರೈಲು ಆಸನಗಳನ್ನು ಬಯಸಿದರೆ, ಮುಂಚಿತವಾಗಿ ಬುಕ್ ಮಾಡಿ. ನೀವು ಹೀಗೆ ಮಾಡುವುದರಿಂದ ನಿಮ್ಮ ಆಯ್ಕೆಯ ಆಸನವನ್ನು ಪಡೆಯುವ ಸಾಧ್ಯತೆಗಳು ಹೆಚ್ಚಾಗುತ್ತವೆ.

*ಅದೃಷ್ಟವಿದ್ದರೆ ತಡವಾಗಿ ಬುಕ್ ಮಾಡಿದರೂ ನಿಮ್ಮ ಆಯ್ಕೆಯ ಸೀಟು ಸಿಗುತ್ತದೆ. ಇದರರ್ಥ ಕನ್ ಫರ್ಮ್ ಸೀಟ್‌ಗಳನ್ನು ಹೊಂದಿರುವ ಜನರು ತಮ್ಮ ಟಿಕೆಟ್‌ಗಳನ್ನು ರದ್ದುಗೊಳಿಸಿದ್ದಾರೆ. ಇದರಿಂದ ನಿಮಗೆ ಈ ಸೀಟ್ ನೀಡಲಾಗುತ್ತಿದೆ. ಆದರೆ ಈ ಅವಕಾಶ ಅಪರೂಪಕ್ಕೆ ಮಾತ್ರ ಸಿಗುತ್ತದೆ.

ರೈಲಿನಲ್ಲಿ ಸೀಟುಗಳನ್ನು ಹೇಗೆ ವಿತರಿಸಲಾಗುತ್ತದೆ?

ರೈಲಿನಲ್ಲಿ ಸೀಟುಗಳನ್ನು ಹೇಗೆ ವಿತರಿಸಲಾಗುತ್ತದೆ?

ನಾವು ರೈಲಿನ ಸೀಟ್ ಅಲ್ಗಾರಿದಮ್ ಅನ್ನು ನೋಡಿದರೆ, ಕೋಚ್‌ಗಳ ನಡುವಿನ ಸೀಟುಗಳು ಬುಕಿಂಗ್‌ಗಾಗಿ ಮೊದಲು ತೆರೆಯಲ್ಪಡುತ್ತವೆ. ಇದು ರೈಲಿನಲ್ಲಿನ ಜನರನ್ನು ವಿಂಗಡಣೆ ಮಾಡಿ, ಬ್ಯಾಲೆನ್ಸ್ ಮಾಡಲು ಸಹಾಯ ಮಾಡುತ್ತದೆ. ಮಧ್ಯದ ಸೀಟುಗಳನ್ನು ತುಂಬಿದ ನಂತರ, ಕೋಚ್‌ನ ಕೊನೆಯಲ್ಲಿ ಹೆಚ್ಚಿನ ಆಸನಗಳನ್ನು ಹಂಚಲಾಗುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+