Search
  • Follow NativePlanet
Share
» »ಈ ದೇವಾಲಯದಲ್ಲಿ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡ್ತಾರೆ ಚಿನ್ನ!

ಈ ದೇವಾಲಯದಲ್ಲಿ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡ್ತಾರೆ ಚಿನ್ನ!

ಸಾಮಾನ್ಯವಾಗಿ ದೇವಸ್ಥಾನದಲ್ಲಿ ಯಾವ್ಯಾವ ರೀತಿಯ ಪ್ರಸಾದ ನೀಡುತ್ತಾರೆ? ಲಡ್ಡು, ಪಂಚಕಜ್ಜಾಯ, ಪೊರಿ, ತೆಂಗಿನಕಾಯಿ, ಬಾಳೆಹಣ್ಣು, ನೈವೇದ್ಯ ಹೀಗೆ ಇನ್ನಿತರ ತಿನ್ನುವ ವಸ್ತುವನ್ನು ಪ್ರಸಾದವಾಗಿ ನೀಡುತ್ತಾರೆ. ಆದರೆ ಇಲ್ಲೊಂದು ದೇವಸ್ಥಾನದಲ್ಲಿ ಪ್ರಸಾದವಾಗಿ ಚಿನ್ನವನ್ನೇ ನೀಡುತ್ತಾರೆ. ಅದು ಯಾವ ದೇವಸ್ಥಾನ ಎನ್ನುವುದು ನಿಮಗೆ ಗೊತ್ತಾ?

ಐಶ್ವರ್ಯ ವೃದ್ಧಿಸುತ್ತದಂತೆ

ಐಶ್ವರ್ಯ ವೃದ್ಧಿಸುತ್ತದಂತೆ

PC: youtube
ಇಲ್ಲಿಯ ಪ್ರಸಾದವನ್ನು ಸ್ವೀಕರಿಸಲು ಭಕ್ತರು ದೂರದೂರದ ಸ್ಥಳಗಳಿಂದ ಆಗಮಿಸುತ್ತಾರೆ. ಆ ದೇವಸ್ಥಾನಕ್ಕೆ ಬರಲು ಪ್ರಯಾಣ ದರವು ಈ ಪ್ರಸಾದದ ಬೆಲೆಗಿಂತಲೂ ಹೆಚ್ಚಿರುತ್ತದೆ. ಆದರೂ ದೇವಿಯ ಆಶೀರ್ವಾದವನ್ನು ಪಡೆಯಲು ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಇದನ್ನು ಮಾರಾಟ ಮಾಡುವುದಿಲ್ಲ. ಬದಲಾಗಿ ತಮ್ಮ ಲಾಕರ್‌ನಲ್ಲಿ ಇಡುತ್ತಾರೆ. ಇದರಿಂದ ತಮ್ಮ ಐಶ್ವರ್ಯ ಇನ್ನಷ್ಟು ಹೆಚ್ಚುತ್ತದೆ ಎನ್ನುವುದು ಜನರ ನಂಬಿಕೆ.

ಕೋಟ್ಯಾಂತರ ಮೌಲ್ಯದ ಚಿನ್ನ ಅರ್ಪಣೆಯಾಗುತ್ತದೆ

ಕೋಟ್ಯಾಂತರ ಮೌಲ್ಯದ ಚಿನ್ನ ಅರ್ಪಣೆಯಾಗುತ್ತದೆ

PC: youtube
ಪ್ರತಿವರ್ಷ ಈ ದೇವಸ್ಥಾನಕ್ಕೆ ಕೋಟ್ಯಾಂತರ ಮೌಲ್ಯದ ಚಿನ್ನ ಬೆಳ್ಳಿ ಅರ್ಪಣೆಯಾಗುತ್ತದೆ, ಭಕ್ತರು ತಮ್ಮ ಮನೆಯಿಂದ ಚಿನ್ನ ಬೆಳ್ಳಿಯನ್ನು ದೇವಸ್ಥಾನಕ್ಕೆ ತಂದೊಪ್ಪಿಸುತ್ತಾರೆ. ಮುಖ್ಯ ಅರ್ಚಕರು ಯಾರ್ಯಾರು ಏನೆಲ್ಲಾ ವಸ್ತುಗಳನ್ನು ನೀಡಿದ್ದಾರೆ ಎನ್ನುವುದನ್ನು ಬರೆದಿಟ್ಟುಕೊಂಡಿರುತ್ತಾರೆ.

ದೀಪಾವಳಿ ಸಂದರ್ಭ ಉತ್ಸವ

ದೀಪಾವಳಿ ಸಂದರ್ಭ ಉತ್ಸವ

PC: youtube
ಮಧ್ಯಪ್ರದೇಶದಲ್ಲಿರುವ ಈ ಮಹಾಲಕ್ಷೀ ದೇವಾಲಯದಲ್ಲಿದೀಪಾವಳಿ ಸಂದರ್ಭದಲ್ಲಿ ಉತ್ಸವ ಜರುಗುತ್ತದೆ. ಮೂರು ದಿನಗಳ ಕಾಲ ಇಲ್ಲಿ ಉತ್ಸವ ಜರುಗಲಿದ್ದು, ಆ ಸಂದರ್ಭ ದೇವರನ್ನು ನೋಟು ಹಾಗೂ ಬಂಗಾರದ ಆಭರಣಗಳಿಂದ ಅಲಂಕರಿಸಲಾಗುತ್ತದೆ.

ದೇವಸ್ಥಾನವನ್ನು ಭಕ್ತರು ಹಣ ಒಡವೆಯಿಂದ ಅಲಂಕರಿಸಲಾಗುತ್ತದೆ

ದೇವಸ್ಥಾನವನ್ನು ಭಕ್ತರು ಹಣ ಒಡವೆಯಿಂದ ಅಲಂಕರಿಸಲಾಗುತ್ತದೆ

PC: youtube
ಭಕ್ತರು ದೀಪಾವಳಿ ಸಂದರ್ಭ ತಮ್ಮ ಮನೆಯಲ್ಲಿರುವ ಹಣ ಒಡವೆಯನ್ನು ದೇವಸ್ಥಾನದ ಅಲಂಕಾರಕ್ಕೆಂದು ಮುಖ್ಯ ಅರ್ಚಕ ನ ಕೈಯಲ್ಲಿ ನೀಡುತ್ತಾರೆ. ಅವರು ಅದನ್ನು ದೇವಸ್ಥಾನದ ಗರ್ಭಗುಡಿಯ ಬಳಿ ಇಡುತ್ತಾರೆ. ಇದೇ ಸಂಪ್ರದಾಯ ಹಲವಾರು ವರ್ಷಗಳಿಂದಲೂ ನಡೆದುಕೊಂಡು ಬಂದಿದೆ.

ಪ್ರಸಾದ ರೂಪದಲ್ಲಿ ವಿತರಣೆ

ಪ್ರಸಾದ ರೂಪದಲ್ಲಿ ವಿತರಣೆ

PC: youtube
ದೀಪಾವಳಿ ಮುಗಿದ ನಂತರ ಭಕ್ತರ ಹಣ ಒಡವೆಯನ್ನು ಅವರವರಿಗೆ ಹಿಂದಿರುಗಿಸಲಾಗುತ್ತದೆ. ದೇವರಿಗೆ ಇಡಲಾಗಿದ್ದ ದುಡ್ಡು, ಬಂಗಾರವನ್ನು ಪ್ರಸಾದದ ರೂಪದಲ್ಲಿ ದೇವರ ಆಶೀರ್ವಾದ ಎಂಬಂತೆ ಮರಳಿ ಪಡೆಯುತ್ತಾರೆ. ಈ ವರೆಗೂ ಯಾವುದೇ ಭಕ್ತರ ಆಭರಣ ಕಳೆದುಹೋಗಿಲ್ಲ ಎನ್ನುತ್ತಾರೆ ಅಲ್ಲಿನ ಭಕ್ತರು.

More News

Read more about: temple madhya pradesh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+