Search
  • Follow NativePlanet
Share
» »ಜಮ್ಮು ಕಾಶ್ಮೀರದಲ್ಲಿ ಏನೇಲ್ಲ ಮಾಡಬಹುದು!

ಜಮ್ಮು ಕಾಶ್ಮೀರದಲ್ಲಿ ಏನೇಲ್ಲ ಮಾಡಬಹುದು!

By Vijay

ಭಾರತ ಮಾತೆಯ ಕಿರೀಟದಂತೆ ಕಂಗೊಳಿಸುವ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಭಾರತದ ಪ್ರಖ್ಯಾತ ಪ್ರವಾಸಿ ರಾಜ್ಯಗಳ ಪೈಕಿ ಒಂದಾಗಿದೆ. ಕಾಶ್ಮೀರದ ಉತ್ತರ ಹಾಗು ದಕ್ಷಿಣಗಳು ಕ್ರಮವಾಗಿ ಮನಮೋಹಕ ಹಾಗು ಅಷ್ಟೆ ರುದ್ರ ರಮಣೀಯವಾದ ಹಿಮಾಲಯ ಮತ್ತು ಪೀರ್ ಪಾಂಜಾಲ್ ಪರ್ವತ ಶ್ರೇಣಿಗಳ ವಿಹಂಗಮ ಹಿನ್ನಿಲೆಯನ್ನು ಹೊಂದಿವೆ. ಇವು ಭಾರತದ ಕೆಲವು ಮಹಾ ನದಿಗಳ ಉಗಮ ಸ್ಥಾನಗಳಾಗಿವೆ. ಸುಂದರ ಕಣಿವೆಗಳು, ಹಿಮಚ್ಛಾದಿತ ಪರ್ವತಗಳು, ಕಲ್ಮಶರಹಿತ ವಾತಾವರಣ, ಮನಮೋಹಕ ಹೂದೋಟಗಳು, ಆಕರ್ಷಕ ಕೆರೆಗಳು, ತಾಜಾ ನೀರಿನ ತೊರೆಗಳು, ತಂಪಾದ ಅನುಭವ ಇವೆಲ್ಲವೂ ಸೇರಿ ಈ ಪ್ರದೇಶವನ್ನು ಭೂಲೋಕದ ಸ್ವರ್ಗವನ್ನಾಗಿಸಿದೆ.

ವರ್ಷದ ವಿವಿಧ ಸಮಯಗಳಲ್ಲಿ ವಿವಿಧ ಚಟುವಟಿಕೆಗಳಿಂದ ಆಕರ್ಷಿಸುವ ಕಾಶ್ಮೀರವು ವರ್ಷಪೂರ್ತಿ ಭೇಟಿ ಮಾಡಬಹುದಾದ ಆದರ್ಶ ತಾಣವಾಗಿದೆ. ಮುಖ್ಯವಾಗಿ ಕಾಶ್ಮೀರವು ವಸಂತ, ಬೇಸಿಗೆ, ಶರತ್ಕಾಲ ಹಾಗು ಚಳಿಗಾಲ ಎಂಬ ನಾಲ್ಕು ಋತುಗಳನ್ನು ಅನುಭವಿಸುತ್ತದೆ. ಪ್ರತಿಯೊಂದು ಋತುವಿನಲ್ಲೂ ವಿವಿಧ ಚಟುವಟಿಕೆಗಳನ್ನು ಇಲ್ಲಿ ಆಸ್ವಾದಿಸಬಹುದು. ಬೇಸಿಗೆಯು ಮೇ ಯಿಂದ ಅಗಸ್ಟ್ ವರೆಗಿದ್ದರೆ, ವಸಂತವು ಮಾರ್ಚ್ ನಿಂದ ಮೇ ವರೆಗಿರುತ್ತದೆ. ಇನ್ನೂ ಡಿಸೆಂಬರ್ ನಿಂದ ಮಾರ್ಚ್ ವರೆಗೆ ಚಳಿಗಾಲವಿದ್ದು, ಸೆಪ್ಟಂಬರ್ ಸಮಯವು ಶರತ್ಕಾಲದಿಂದ ಕಂಗೊಳಿಸುತ್ತದೆ.

ಉಡುಗೆಗಳು:

ಬೇಸಿಗೆಯ ಸಮಯದಲ್ಲಿ ಗುಲ್ಮಾರ್ಗ್, ಪಹಲ್ಗಾಮ್, ಸೋನಾಮಾರ್ಗ್ ಗಳಲ್ಲಿ ಲಘುವಾದ ವೂಲನ್/ಉಣ್ಣೆ ಬಟ್ಟೆಗಳನ್ನು ಧರಿಸಬಹುದು. ವಸಂತ ಮತ್ತು ಶರತ್ಕಾಲವು ತಂಪಾಗಿದ್ದು ದಪ್ಪವಾದ ಉಣ್ಣೆ ಬಟ್ಟೆಯನ್ನು ತೊಡಲೇಬೇಕು. ಇನ್ನು ಚಳಿಗಾಲದ ಸಂದರ್ಭದಲ್ಲಿ ಪ್ರದೇಶದ ತಾಪಮಾನವು ಮೈನಸ್ ಡಿಗ್ರಿಗಳಲ್ಲಿ ಕುಸಿಯುವುದರಿಂದ ಬೆಚ್ಚನೆಯ ದಪ್ಪವಾದ ಉಣ್ಣೆ ಬಟ್ಟೆಯು ಅನಿವಾರ್ಯವಾಗಿದೆ. ಏನೇಲ್ಲ ಚಟುವಟಿಕೆಗಳನ್ನು ಕಾಶ್ಮೀರ ರಾಜ್ಯದಲ್ಲಿ ಆನಂದಿಸಬಹುದಾಗಿದೆ ಎಂಬುದರ ಕುರಿತು ಈ ಲೇಖನದ ಮೂಲಕ ತಿಳಿಯೋಣ.

ಶಿಕಾರಾ ದೋಣಿ ಸವಾರಿ:

ಶಿಕಾರಾ ದೋಣಿ ಸವಾರಿ:

ಕಾಶ್ಮೀರದ ಅತಿ ಜನಪ್ರಿಯ ಹಾಗು ಅಷ್ಟೆ ಮನೋಹರವಾದ ದಾಲ್ ಸರೋವರವು ಜೀವಕಳೆ ತುಂಬಿದ ಒಂದು ಅನನ್ಯ ಕೆರೆಯಾಗಿದೆ. ಇಂತಹ ಸುಂದರ ಕೆರೆಯಲ್ಲಿ ದೋಣಿ ಸವಾರಿ ಮಾಡುವುದೆಂದರೆ ಹಾಲಿಗೆ ಸಕ್ಕರೆ ಹಾಕಿದಷ್ಟೆ ರುಚಿ. ಶಿಕಾರಾ ಸವಾರಿಯು ಕಾಶ್ಮೀರ ಪ್ರವಾಸದಲ್ಲಿದ್ದಾಗ ಮಾಡಬಹುದಾದ ಇಲ್ಲವೆ ಅನುಭವಿಸಬಹುದಾದ ಒಂದು ಆದರ್ಶಮಯ ಹಾಗು ಆನಂದಮಯ ಚಟುವಟಿಕೆಯಾಗಿದೆ. ಶಿಕಾರಾ ಒಂದು ಉದ್ದನೆಯ ದೋಣಿಯಾಗಿದ್ದು ಎರಡು ಘಂಟೆಗಳ ಇದರಲ್ಲಿನ ಪಯಣ ದಾಲ್ ಕೆರೆಯನ್ನು ಮತ್ತಷ್ಟು ಹತ್ತಿರದಿಂದ ಸವಿಯಬಹುದಾದ ಅವಕಾಶವನ್ನು ಒದಗಿಸುತ್ತದೆ. ಅಷ್ಟೆ ಅಲ್ಲ ಕೆರೆಯ ಮೇಲೆಯೆ ಪುಟ್ಟ ಪುಟ್ಟ ಕಟ್ಟಿಗೆಯ ಅಂಗಡಿಗಳಲ್ಲಿ ನೀರಲ್ಲೆ ಪಯಣಿಸುತ್ತ ಶಾಪಿಂಗ್ ಮಾಡಬಹುದು.

ಚಿತ್ರಕೃಪೆ: jktourism

ಸ್ಕೀಯಿಂಗ್:

ಸ್ಕೀಯಿಂಗ್:

ಒಂದು ಬಗೆಯ ಚಪ್ಪಲಿಯನ್ನು ಹಾಕಿಕೊಂಡು ನೀರ್ಗಲ್ಲು ಅಥವಾ ಹಿಮದ ಮೇಲೆ ಸರಾಗವಾಗಿ ಚಲಿವುದನ್ನು ಅಥವಾ ವೇಗವಾಗಿ ಕ್ರಮಿಸುವುದನ್ನು ಸ್ಕೀಯಿಂಗ್ ಎಂದು ಕರೆಯುತ್ತಾರೆ. ಇದೊಂದು ಮಜವಾದ ಅನುಭವವಾಗಿದೆ. ಇದು ಕಾಶ್ಮೀರದ ಪ್ರಮುಖ ಆಕರ್ಷಣೆಯಾಗಿದೆ. ಸಾಹಸಪ್ರಿಯ ಪ್ರವಾಸಿಗರಿಗಂತೂ ಇದು ಅತಿ ನೆಚ್ಚಿನ ಚಟುವಟಿಕೆಯಾಗಿದೆ. ಗುಲ್ಮಾರ್ಗ್ ನಲ್ಲಿ ಡೆಸಿಂಬರ್ ನಿಂದ ಹಿಡಿದು ಏಪ್ರಿಲ್ ಮಧ್ಯದವರೆಗೂ ಇದರ ಆನಂದವನ್ನು ಅನುಭವಿಸಬಹುದಾಗಿದೆ.

ಚಿತ್ರಕೃಪೆ: jktourism

ಗಾಲ್ಫ್:

ಗಾಲ್ಫ್:

ದಟ್ಟವಾಗಿ ಹರಡಿರುವ ಪೈನ್ ಹಾಗು ಚಿನಾರ್ ಮರಗಳು ಗಾಳಿಯಲ್ಲಿ ಬೀಸುತ್ತಾ ಮೈಮನಗಳಿಗೆ ತಂಪನ್ನು ಎರೆಯುತ್ತಾ, ಕರ್ಣೇಂದ್ರಿಯಗಳಲ್ಲಿ ಕಂಪಿಸುತ್ತ ಇರುವ ವಾತಾವರಣದಲ್ಲಿ ಗಾಲ್ಫ್ ಆಟದ ಅನುಭವವೆ ಭಿನ್ನವಾಗಿರುತ್ತದೆ. ಈ ರೀತಿಯ ಅನುಭವವನ್ನು ಪಡೆಯಬೇಕೆಂದು ನಿಮಗಿಷ್ಟವಿದ್ದಲ್ಲಿ ಶ್ರೀನಗರ ಹಾಗು ಗುಲ್ಮಾರ್ಗ್ ಗಳಲ್ಲಿ ಇದರ ಅನುಭವ ಪಡೆಯಬಹುದು. ಬೇಸಿಗೆಯ ಸಮಯವು ಈ ಆಟವನ್ನು ಆಡಲು ಪ್ರಶಸ್ತವಾದ ಸಮಯವಾಗಿದೆ.

ಚಿತ್ರಕೃಪೆ: jktourism

ರಾಫ್ಟಿಂಗ್:

ರಾಫ್ಟಿಂಗ್:

ಸಾಹಸ ಪ್ರವಾಸೋದ್ಯಮಕ್ಕೂ ಹೆಸರುವಾಸಿಯಾದ ಕಾಶ್ಮೀರದಲ್ಲಿ ಉಸಿರು ಬಿಗಿ ಹಿಡಿದು ಮಾಡಬಹುದಾದಂತಹ ರಿವರ್ ರಾಫ್ಟಿಂಗ್ ಕೂಡ ಲಭ್ಯವಿದೆ. ಕಾಶ್ಮೀರ ಕಣಿವೆ ಪ್ರದೇಶಗಳಲ್ಲಿ ರಭಸವಾಗಿ ಹರಿಯುವ ಕೆಲ ನದಿಗಳಲ್ಲಿ ಈ ಸಾಹಸಮಯ ಚಟುವಟಿಕೆಯನ್ನು ಆಸ್ವಾದಿಸಬಹುದು. ಗುಲ್ಮಾರ್ಗ್, ಸೋನ್ಮಾರ್ಗ್, ಪಹಲ್ಗಾಮ್ ಮತ್ತು ಡ್ರಾಸ್ ಗಳಲ್ಲಿ ರಾಫ್ಟಿಂಗ್ ಸೌಲಭ್ಯಗಳಿವೆ.

ಚಿತ್ರಕೃಪೆ: jktourism

ಮೌಂಟೇನ್ ಬೈಕಿಂಗ್:

ಮೌಂಟೇನ್ ಬೈಕಿಂಗ್:

ಕಾಶ್ಮೀರದ ದುರ್ಗಮ ಪರ್ವತ ಪ್ರದೇಶಗಳಲ್ಲಿ ಮಾಡಬಹುದಾದ ಸೈಕ್ಲಿಂಗ್ ನಿಜವಾಗಿಯೂ ಸವಾರನ ಕೌಶಲ್ಯತೆಗೆ ಸವಾಲು ಎಸೆಯುತ್ತದೆ. ಚಾಲೇಂಜ್ ಗಳನ್ನು ಇಷ್ಟಪಡುವ ಯುವ ಪ್ರವಾಸಿಗರಿಗೆ ಈ ಚಟುವಟಿಕೆಯು ಒಂದು ಸುವರ್ಣ ಅವಕಾಶವನ್ನು ಒದಗಿಸುತ್ತದೆ. ಶ್ರೀನಗರದಿಂದ ಗುಲ್ಮಾರ್ಗ್, ಗುಲ್ಮಾರ್ಗ್ ನಿಂದ ಪಹಲ್ಗಾಮ್, ಪಹಲ್ಗಾಮ್ ನಿಂದ ಶ್ರೀನಗರ, ಶ್ರೀನಗರದಿಂದ ಸೋನಾಮಾರ್ಗ್, ಸೋನಾಮಾರ್ಗದಿಂದ ವೂಲಾರ್ ಕೆರೆ ಮುಂತಾದ ಮಾರ್ಗಗಳು ಮೌಂಟೇನ್ ಬೈಕಿಂಗ್/ಸೈಕ್ಲಿಂಗ್ ಗಳಿಗೆ ಹೆಸರುವಾಸಿಯಾಗಿವೆ.

ಚಿತ್ರಕೃಪೆ: jktourism

ಚಾರಣ:

ಚಾರಣ:

ಪ್ರಕೃತಿಯನ್ನು ಅತಿ ಹತ್ತಿರದಿಂದ ನೋಡುವ ಅವಕಾಶ ದೊರೆಯುವುದೆ ಚಾರಣದ ಮೂಲಕ. ನಿಸರ್ಗದ ಅಸಾಧಾರಣ ವಿಶೇಷತೆಗಳ ಅಗಾಧತೆಯನ್ನು ಇಂಚು ಇಂಚುಗಳಲ್ಲಿ ಸವಿಯಬಹುದು ಚಾರಣದ ಮೂಲಕ. ಇಂತಹ ವಿಶೀಷ್ಟ ಅನುಭವವನ್ನೂ ಕೂಡ ಕಾಶ್ಮೀರ ರಾಜ್ಯದಲ್ಲಿ ಪಡೆಯಬಹುದು. ಅದರಲ್ಲೂ ಕಾಶ್ಮೀರದಲ್ಲಿನ ಚಾರಣವಂತೂ ಸದಾ ನೆನಪಿನಲ್ಲುಳಿಯುವ ಚಾರಣವಾಗಿದೆ. ಹಿಮಮಯ ಪ್ರದೇಶಗಳಲ್ಲಿ ಸುತ್ತಾಡುವುದು ಒಂದು ರೋಮಾಂಚನಕಾರಿಯಾದ ಅನುಭವವಾಗಿದೆ.

ಚಿತ್ರಕೃಪೆ: jktourism

ಪ್ಯಾರಾ ಗ್ಲೈಡಿಂಗ್:

ಪ್ಯಾರಾ ಗ್ಲೈಡಿಂಗ್:

ಹಕ್ಕಿಯಂತೆ ಬಾನಿನಲ್ಲಿ ಹಾರಾಡುತ್ತ, ಭೂಮಿಯ ವಿಹಂಗಮ ನೋಟವನ್ನು ಕಣ್ಣಾರೆ ಸವಿಯುತ್ತ, ಹಿಮ ಪರ್ವತಗಳ ಭವ್ಯ ನೋಟವನ್ನು ಸವಿಯುತ್ತ ಜಮ್ಮು ಕಾಶ್ಮೀರದ ಅಂದ ಚೆಂದವನ್ನು ಆಸ್ವಾದಿಸಬಹುದಾಗಿದೆ ಪ್ಯಾರಾಗ್ಲೈಡಿಂಗ್ ಮಾಡುವುದರ ಮೂಲಕ. ಜಮ್ಮುವಿನ ಸನಸರ್ ನಲ್ಲಿರುವ ಹಲವು ಕ್ಲಬ್ ಗಳಲ್ಲಿ ಈ ಸೌಲಭ್ಯವನ್ನು ಪಡೆಯಬಹುದು. ಮೇ-ಜೂನ್ ಹಾಗು ಸೆಪ್ಟಂಬರ್-ಅಕ್ಟೋಬರ್ ಮಧ್ಯದ ಅವಧಿಯು ಪ್ಯಾರಾ ಗ್ಲೈಡಿಂಗ್ ಮಾಡಲು ಪ್ರಶಸ್ತವಾಗಿದೆ.

ಚಿತ್ರಕೃಪೆ: jktourism

ವನ್ಯಜೀವನ ಸಂಪತ್ತು:

ವನ್ಯಜೀವನ ಸಂಪತ್ತು:

ಹಿಮಾಲಯ ಪ್ರದೇಶವು ಜಗತ್ತಿನ ಆಕರ್ಷಕ ಸ್ಥಳವಾಗಿರುವುದು ಅಲ್ಲದೆ ಒಂದರ ಮೂರನೆ ಭಾಗದಷ್ಟು ಹಿಮ ಸಸ್ತನಿಗಳಿಗೆ ಆಶ್ರಯ ಪ್ರದೇಶವಾಗಿದೆ. ಇಲ್ಲಿನ ಅಭಯಾರಣ್ಯಗಳಲ್ಲಿ ಹಿಮ ಚಿರತೆ, ಕಾಶ್ಮೀರಿ ಸಾರಂಗ, ದಾಲ್ ಕೆರೆಯಲ್ಲಿ ಕಂಡುಬರುವ ವಿವಿಧ ಹಕ್ಕಿಗಳು ಹಾಗು ಇತರೆ ವೈವಿಧ್ಯಮಯ ಪ್ರಾಣಿಗಳಿಂದ ಜಮ್ಮು ಕಾಶ್ಮೀರ ರಾಜ್ಯವು ಸಂಪದ್ಭರಿತವಾಗಿದ್ದು, ಇಲ್ಲಿನ ವನ್ಯಜೀವನ ವೀಕ್ಷಣೆಯು ಒಂದು ಅಹ್ಲಾದಕರ ಚಟುವಟಿಕೆಯಾಗಿದೆ.

ಚಿತ್ರಕೃಪೆ: jktourism

ಪರ್ವತಾರೋಹಣ:

ಪರ್ವತಾರೋಹಣ:

ಜಮ್ಮು ಕಾಶ್ಮೀರದಲ್ಲಿ ಕೈಗೊಳ್ಳಬಹುದಾದ ಪರ್ವತಾರೋಹಣ ಮತ್ತೊಂದು ಆಸಕ್ತಿಭರಿತ ಹಾಗು ಸಾಹಸಮಯ ಚಟುವಟಿಕೆಯಾಗಿದೆ. ಕಾಶ್ಮೀರದಲ್ಲಿನ ಪರ್ವತಗಳನ್ನು ಅಲ್ಪೈನ್ ಹಾಗು ಹಿಮಾಲಯನ್ ಗಳೆಂದು ವಿಂಗಡಿಸಬಹುದು. ಪರ್ವತಾರೋಹಣಕ್ಕೆ ಯೋಗ್ಯವಾಗಿರುವ ಜಮ್ಮು ಕಾಶ್ಮೀರ ರಾಜ್ಯದ ನಾಲ್ಕು ಪ್ರಮುಖ ವಿಭಾಗಗಳೆಂದರೆ ಕಾಶ್ಮೀರ, ಝಂನ್ಸ್ಕಾರ್, ಕಿಶ್ತವಾರ್ ಮತ್ತು ಲಡಾಖ್ ಪ್ರದೇಶಗಳು. ಪರ್ವತಾರೋಹಣವನ್ನು ಆಯೋಜಿಸುವ ಹಲವಾರು ವಾಣಿಜ್ಯ ಸಮೂಹಗಳಿವೆ.


ಚಿತ್ರಕೃಪೆ: jktourism

ನಗರದಲ್ಲಿ ಸುತ್ತಾಟ:

ನಗರದಲ್ಲಿ ಸುತ್ತಾಟ:

ಬಹಳಷ್ಟು ಜನರು ಇಷ್ಟಪಡುವ ಆನಂದಮಯ ಚಟುವಟಿಕೆ ಇದಾಗಿದೆ. ಸಾಮಾನ್ಯವಾಗಿ ಕಾಶ್ಮೀರವು ತಂಪುಮಯ ಪ್ರದೇಶವಾಗಿರುವುದರಿಂದ ಆಹ್ಲಾದಕರ ವಾತವರಣ ಇಲ್ಲಿರುತ್ತದೆ. ಅಲ್ಲದೆ ಸ್ಥಳೀಯ ಸಂಸ್ಕೃತಿಯು ವಿಭಿನ್ನವಾಗಿರುವುದರಿಂದ ಅದರ ನೋಟವನ್ನು ಅತಿ ಹತ್ತಿರದಿಂದ ಸವಿಯಬಹುದು ನಗರದಲ್ಲಿ ಸುತ್ತಾಡುವುದರ ಮೂಲಕ. ಅಷ್ಟೆ ಅಲ್ಲ ಸ್ಥಳೀಯ ಕರ ಕುಶಲ ವಸ್ತುಗಳನ್ನು ಸಹ ನಗರ ಮಾರುಕಟ್ಟೆ ಪ್ರದೇಶಗಳಲ್ಲಿ ಕೊಂಡುಕೊಳ್ಳಬಹುದು. ಮನಸ್ಸಿಗೆ ಆನಂದ ಉಂಟು ಮಾಡುವ ಚಟುವಟಿಕೆ ಇದಾಗಿದೆ.

ಚಿತ್ರಕೃಪೆ: jktourism

ಆಂಗ್ಲಿಂಗ್:

ಆಂಗ್ಲಿಂಗ್:

ಆಂಗ್ಲಿಂಗ್ ಎಂದರೆ ಹವ್ಯಾಸಕ್ಕಾಗಿ ಮೀನು ಹಿಡೀಯುವುದು. ಈ ಚಟುವಟಿಕೆಯೂ ಕೂಡ ಕಾಶ್ಮೀರದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಇಲ್ಲಿ ಅನೇಕ ನೈಸರ್ಗಿಕ ನೀರಿನ ತೊರೆಗಳನ್ನು ಕಾಣಬಹುದು. ಮೀನುಗಳನ್ನು ಹಿಡಿಯಲು ಏಪ್ರಿಲ್ ನಿಂದ ಅಕ್ಟೋಬರ್ ಸಮಯವು ಆದರ್ಶಪ್ರಾಯವಾಗಿದೆ. ಅದರಲ್ಲೂ ಪಹಲ್ಗಾಮ್ ಈ ಚಟುವಟಿಕೆಗೆ ಒಂದು ಯೋಗ್ಯವಾದ ಸ್ಥಳವಾಗಿದೆ.

ಚಿತ್ರಕೃಪೆ: jktourism

ಪಕ್ಷಿ ವೀಕ್ಷಣೆ:

ಪಕ್ಷಿ ವೀಕ್ಷಣೆ:

ಕಾಶ್ಮೀರದಲ್ಲಿ ಹಲವಾರು ಕೆರೆಗಳನ್ನು ಕಾಣಬಹುದು. ಈ ಕೆರೆಗಳ ಆಸು ಪಾಸಿನಲ್ಲಿ ವಿವಿಧ ಬಗೆಯ ಬಣ್ಣ ಬಣ್ಣದ ಹಕ್ಕಿಗಳು ಪಕ್ಷಿಪ್ರಿಯ ಪ್ರವಾಸಿಗರನ್ನು ಆಕರ್ಷಿಸುತ್ತದೆ. ನಿಮಗೆ ಬಿಡುವಿದ್ದಲ್ಲಿ ಇಂತಹ ಸ್ಥಳಗಳಿಗೆ ತೆರಳಿ ಸಂತೃಪ್ತಕರವಾಗಿ ಪಕ್ಷಿಗಳನ್ನು ಅವುಗಳ ಸಹಜ ಸ್ಥಿತಿಯಲ್ಲಿ ಗಮನಿಸಬಹುದು. ಅಲ್ಪೈನ್ ಭಾಗದಲ್ಲಿ 262 ಬಗೆಯ ಪಕ್ಷಿಗಳಿರುವುದನ್ನು ಗುರುತಿಸಲಾಗಿದೆ.


ಚಿತ್ರಕೃಪೆ: jktourism

ಕುದುರೆ ಸವಾರಿ:

ಕುದುರೆ ಸವಾರಿ:

ಕಾಶ್ಮೀರವನ್ನು ಭೂಮಿಯ ಸ್ವರ್ಗವೆಂದೆ ಸಂಭೋದಿಸಲಾಗುತ್ತದೆ. ಪ್ರಕೃತಿಯ ಅಸಾಧಾರಣ ಸೌಂದರ್ಯದಿಂದ ತುಂಬಿ ತುಳುಕುತ್ತಿರುವ ಈ ಕಣಿವೆ ರಾಜ್ಯವು ಭಾರತೀಯ ಪ್ರವಾಸೋದ್ಯಮಕ್ಕೆ ಮಹತ್ತರವಾದ ಕೊಡುಗೆ ನೀಡುತ್ತಿದೆ. ಇಲ್ಲಿನ ಸುಂದರ ಸ್ಥಳಗಳನ್ನು ಕುದುರೆ ಸವಾರಿ ಮಾಡುತ್ತ ನೋಡುವುದೆ ಒಂದು ಅಮೋಘವಾದ ಅನುಭವ. ಸ್ಥಳೀಯ ಸ್ಥಳ ವೀಕ್ಷಣೆ ಮಾಡಲು ಇಂತಹ ಒಂದು ಸುಂದರ ಚಟುವಟಿಕೆಯನ್ನು ಇಲ್ಲಿ ಕೈಗೊಳ್ಳಬಹುದಾಗಿದೆ.


ಚಿತ್ರಕೃಪೆ: jktourism

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+