Search
  • Follow NativePlanet
Share
» »ದಕ್ಷಿಣ ಭಾರತದ ಅತ್ಯಂತ ಸುಂದರ ತಾಣಗಳು: ವಿಶೇಷವಾಗಿ ನವೆಂಬರ್‌ನಲ್ಲಿಯೇ ನೀವಿಲ್ಲಿಗೆ ಹೋದರೆ ಇದನ್ನೆಲ್ಲಾ ನೋಡಬಹುದು!

ದಕ್ಷಿಣ ಭಾರತದ ಅತ್ಯಂತ ಸುಂದರ ತಾಣಗಳು: ವಿಶೇಷವಾಗಿ ನವೆಂಬರ್‌ನಲ್ಲಿಯೇ ನೀವಿಲ್ಲಿಗೆ ಹೋದರೆ ಇದನ್ನೆಲ್ಲಾ ನೋಡಬಹುದು!

ದೇಶದ ಅತ್ಯಂತ ಸುಂದರವಾದ ಪ್ರದೇಶಗಳು ಯಾವುವು ಎಂದು ಪ್ರವಾಸಿಗರನ್ನು ಕೇಳಿದರೆ ಅನೇಕ ಜನರು ಮೊದಲು ದಕ್ಷಿಣ ಭಾರತದ ರಾಜ್ಯಗಳನ್ನು ಉಲ್ಲೇಖಿಸುತ್ತಾರೆ. ಏಕೆಂದರೆ ದಕ್ಷಿಣ ಭಾರತವು ಐದು ರಾಜ್ಯಗಳ ಅದ್ಭುತ ಗುಂಪು. ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಲ್ಲಿ ಒಂದಕ್ಕಿಂತ ಒಂದು ಅದ್ಭುತ ಸ್ಥಳಗಳಿದ್ದು, ಇಲ್ಲಿನ ಹವಾಗುಣ ಮೆಚ್ಚಿ ವಿದೇಶಿ ಪ್ರವಾಸಿಗರು ಬರುತ್ತಲೇ ಇರುತ್ತಾರೆ. ಇನ್ನು ನಾವು ಈ ಭಾಗದಲ್ಲೇ ಇರುವವರು, ನವೆಂಬರ್‌ ಸಮೀಪಿಸುತ್ತಿದೆ. ವಿಶೇಷವಾಗಿ ಚಳಿಗಾಲದಲ್ಲಿ ದಕ್ಷಿಣ ಭಾರತದ ಹಲವಾರು ತಾಣಗಳು ಇಬ್ಬನಿ ಹೊದ್ದು ಮಲಗಿರುತ್ತವೆ. ಈ ಸುಂದರ ದೃಶ್ಯವನ್ನು ನೋಡಲು ಎರಡು ಕಣ್ಣು ಸಾಲದು. ಹಾಗಾಗಿ ಮುಂದಿನ ತಿಂಗಳು ಪ್ರವಾಸಕ್ಕೆ ತೆರಳುತ್ತಿರುವವರು ಮರೆಯದೆ ದಕ್ಷಿಣ ಭಾರತದ ಈ ಅದ್ಭುತ ಸ್ಥಳಗಳಿಗೆ ತೆರಳಿ...ಬಹುಶಃ ಭೇಟಿ ನೀಡಿದ ನಂತರ ನೀವು ವಿದೇಶಿ ಸ್ಥಳಗಳನ್ನು ಮರೆತುಬಿಡುತ್ತೀರಿ.

ಅಲೆಪ್ಪಿ

ನವೆಂಬರ್ ತಿಂಗಳಿನಲ್ಲಿ ದಕ್ಷಿಣ ಭಾರತದ ಯಾವುದೇ ನಯನಮನೋಹರ ಸ್ಥಳಕ್ಕೆ ಭೇಟಿ ನೀಡಲು ಬರುವ ಅನೇಕ ಜನರು ಮೊದಲು ಬರುವುದು ಅಲೆಪ್ಪಿಗೆ. ಏಕೆಂದರೆ ಕೇರಳದ ಅಲೆಪ್ಪಿಯು ದಕ್ಷಿಣ ಭಾರತ ಮಾತ್ರವಲ್ಲದೆ, ವಿಶ್ವವಿಖ್ಯಾತ ಪ್ರವಾಸಿ ತಾಣವೂ ಆಗಿದೆ. ಅಲೆಪ್ಪಿಯು ತನ್ನ ಸುಂದರವಾದ ಕಡಲತೀರಗಳು, ಹಿನ್ನೀರಿಗೆ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದೆ. ಅಲೆಪ್ಪಿಯ ಸೌಂದರ್ಯವನ್ನು ನೋಡಿ ಇದನ್ನು ಪೂರ್ವದ ವೆನಿಸ್ ಎಂದೂ ಕರೆಯುತ್ತಾರೆ. ಅಲೆಪ್ಪಿಯಲ್ಲಿ ನೀವು ಅಲೆಪ್ಪಿ ಬೀಚ್, ಅಲೆಪ್ಪಿ ಹಿನ್ನೀರು, ಕುಮಾರಕೋಮ್ ಪಕ್ಷಿಧಾಮ, ಕುಟ್ಟನಾಡ್ ಮತ್ತು ವೆಂಬನಾಡ್ ಸರೋವರದಂತಹ ಒಂದಕ್ಕೊಂದು ಅದ್ಭುತವಾದ ಸ್ಥಳಗಳನ್ನು ಅನ್ವೇಷಿಸಿದ ನಂತರ ನೀವು ಭಾವಪರವಶರಾಗಿರುತ್ತೀರಿ.

ಗೋಕರ್ಣ

ನೀವು ನವೆಂಬರ್ ತಿಂಗಳಿನಲ್ಲಿ ಕರ್ನಾಟಕದೊಳಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ ಗೋಕರ್ಣದ ಸೌಂದರ್ಯವನ್ನು ಸವಿಯಲೇಬೇಕು. ಗೋಕರ್ಣವನ್ನು ಕೂಡ ಭಾರತದ ಪ್ರಮುಖ ತಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಅರೇಬಿಯನ್ ಸಮುದ್ರದ ದಂಡೆಯಲ್ಲಿರುವ ಗೋಕರ್ಣವು ತನ್ನ ಸೌಂದರ್ಯ ಮತ್ತು ಪಾರ್ಟಿಯ ತಾಣವಾಗಿ ಹೆಸರುವಾಸಿಯಾಗಿದೆ. ಇಲ್ಲಿ ಅನೇಕ ಸ್ಥಳೀಯ ಮತ್ತು ವಿದೇಶಿ ಜನರು ಪಾರ್ಟಿ ಮಾಡಲೆಂದೇ ಈ ಬೀಚ್‌ಗೆ ಬರುತ್ತಾರೆ. ಗೋಕರ್ಣವನ್ನು ಭಾರತದ ಪ್ರಮುಖ ಹನಿಮೂನ್ ತಾಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಕೊಡೈಕೆನಾಲ್

ಕೊಡೈಕೆನಾಲ್‌ ಅನ್ನು ಅತ್ಯಂತ ಸುಂದರವಾದ ಮತ್ತು ಜನಪ್ರಿಯ ಪ್ರವಾಸಿ ತಾಣವೆಂದು ಪರಿಗಣಿಸಲಾಗಿದೆ. ಇದನ್ನು ತಮಿಳುನಾಡಿನ ಅತಿ ಸುಂದರ ಗಿರಿಧಾಮವೂ ಹೌದು. ಇದು ಸಮುದ್ರ ಮಟ್ಟದಿಂದ 7200 ಅಡಿ ಎತ್ತರದಲ್ಲಿದೆ. ಎತ್ತರದ ಪರ್ವತಗಳು, ಚಹಾ ತೋಟಗಳು, ಹುಲ್ಲುಗಾವಲುಗಳು ಮತ್ತು ಸರೋವರಗಳು ಹಾಗೂ ಜಲಪಾತಗಳು ಕೊಡೈಕೆನಾಲ್‌ ಸೌಂದರ್ಯವನ್ನು ಹೆಚ್ಚಿಸುತ್ತವೆ. ಈ ಗಿರಿಧಾಮದ ಸೌಂದರ್ಯವು ಎಷ್ಟು ಜನಪ್ರಿಯವಾಗಿದೆ ಎಂದರೆ ಇದನ್ನು ಗಿರಿಧಾಮಗಳ ರಾಜಕುಮಾರ ಎಂದೂ ಕರೆಯುತ್ತಾರೆ. ಇಲ್ಲಿಗೆ ಸ್ಥಳೀಯರು ಮಾತ್ರವಲ್ಲದೆ ವಿದೇಶಿ ಪ್ರವಾಸಿಗರೂ ಬರುತ್ತಾರೆ. ಇಲ್ಲಿ ನೀವು ಕೊಡೈಕೆನಾಲ್ ಲೇಕ್, ಕೋಕರ್ಸ್ ವಾಕ್, ಪಿಲ್ಲರ್ ರಾಕ್, ಸಿಲ್ವರ್ ಕ್ಯಾಸ್ಕೇಡ್ ಫಾಲ್ಸ್ ಮತ್ತು ಚೆಟ್ಟಿಯಾರ್ ಪಾರ್ಕ್‌ನಂತಹ ಅದ್ಭುತ ಸ್ಥಳಗಳನ್ನು ಅನ್ವೇಷಿಸಬಹುದು.

ಅರಕು ಕಣಿವೆ

ಹಿಮಾಚಲ ಮತ್ತು ಉತ್ತರಾಖಂಡದಲ್ಲಿರುವ ಕಣಿವೆಗಳಿಗೆ ಭೇಟಿ ನೀಡಿ ಸಾಕಾಗಿದ್ದರೆ ಅಥವಾ ಅಲ್ಲಿಗೆ ಭೇಟಿ ನೀಡಲು ಸಾಧ್ಯವಾಗದವರು ದಕ್ಷಿಣ ಭಾರತದ ಆಂಧ್ರಪ್ರದೇಶದಲ್ಲಿರುವ ಅರಕು ಕಣಿವೆಗೆ ಭೇಟಿ ನೀಡಬಹುದು. ಆಂಧ್ರಪ್ರದೇಶ ರಾಜ್ಯದ ವಿಶಾಖಪಟ್ಟಣಂ ಜಿಲ್ಲೆಯಲ್ಲಿರುವ ಅರಕು ಕಣಿವೆಯನ್ನು ಸೌಂದರ್ಯದ ಖನಿ ಎಂದು ಪರಿಗಣಿಸಲಾಗಿದೆ. ಅರಕು ಕಣಿವೆಯನ್ನು ಪ್ರಕೃತಿ ಪ್ರಿಯರ ಸ್ವರ್ಗವೆಂದು ಸಹ ಎಂದು ಹೇಳಲಾಗುತ್ತದೆ. ಅರಕು ಕಣಿವೆಯಲ್ಲಿ, ನೀವು ಕಟಿಕಿ ಜಲಪಾತ, ಅನಂತಗಿರಿ ಬೆಟ್ಟಗಳು, ಭೀಮುನಿಪಟ್ಟಣಂ ಮತ್ತು ಡುಂಬ್ರಿಗುಡದಂತಹ ಅದ್ಭುತ ಸ್ಥಳಗಳನ್ನು ಸಹ ನೋಡಬಹುದು. ಅರಕು ಕಣಿವೆಯಲ್ಲಿ, ನೀವು ಟ್ರೆಕ್ಕಿಂಗ್, ಹೈಕಿಂಗ್ ಮತ್ತು ಕ್ಯಾಂಪಿಂಗ್ ಅನ್ನು ಆನಂದಿಸಬಹುದು.

ಈ ಸ್ಥಳಗಳನ್ನು ಅನ್ವೇಷಿಸಿ

ದಕ್ಷಿಣ ಭಾರತದಲ್ಲಿ ಇನ್ನೂ ಅನೇಕ ಅದ್ಭುತ ಸ್ಥಳಗಳಿವೆ. ಉದಾಹರಣೆಗೆ, ಕೇರಳದ ಮುನ್ನಾರ್ ಮತ್ತು ವಯನಾಡ್, ತಮಿಳುನಾಡಿನ ರಾಮೇಶ್ವರಂ ಮತ್ತು ಕಾಂಚೀಪುರಂ, ಕರ್ನಾಟಕದ ಬಾದಾಮಿ ಮತ್ತು ಮೈಸೂರು ಹಾಗೂ ಪುದುಚೇರಿಯಂತಹ ಸ್ಥಳಗಳನ್ನು ಸಹ ನೀವು ನವೆಂಬರ್‌ನಲ್ಲಿ ಅನ್ವೇಷಿಸಲು ಅತ್ಯುತ್ತಮ ಸಮಯವೆಂದು ಹೇಳಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+