ಕಬ್ಬಾಳು ಇದೊಂದು ಗ್ರಾಮವಾಗಿದ್ದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿದೆ. ಇಲ್ಲಿರುವ ಕಬ್ಬಾಳಮ್ಮನ ನೆಲೆಯಿಂದಾಗಿ ಗ್ರಾಮಕ್ಕೆ ಕಬ್ಬಾಳು ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಈ ಪ್ರದೇಶದ ಸುತ್ತಮುತ್ತಲಿನ ಸುಮಾರು 28 ಗ್ರಾಮಗಳಿಗೆ ಈ ಕ್ಷೇತ್ರವೊಂದೆ ಪುಣ್ಯಕ್ಷೇತ್ರವೆಂದು ನಂಬಲಾಗಿದೆ.
ಕಬ್ಬಾಲುದುರ್ಗಕ್ಕೊಂದು ಟ್ರೆಕ್

ಚಿತ್ರಕೃಪೆ: Nagaraju B
ಇಲ್ಲಿನ ಜನರು ಹೇಳುವಂತೆ ಈ ದೇವಿಯು ಬಹು ಶಕ್ತಿಶಾಲಿ ತನ್ನ ಭಕ್ತರ ಸಕಲ ಇಷ್ಟಾರ್ಥಗಳನ್ನು ಪೂರೈಸುತ್ತಾಳಂತೆ. ಈ ಕ್ಷೇತ್ರದ ಕುರಿತು ಮೊದ ಮೊದಲು ಬಹುತೇಕರಿಗೆ ತಿಳಿದಿರಲಿಲ್ಲ. ಟಿವಿ 9 ರಲ್ಲಿ "ಹೀಗೂ ಉಂಟೆ" ಎಂಬ ಕಾರ್ಯಕ್ರಮದಲ್ಲಿ ಯಾವಾಗ ಇದರ ಕುರಿತು ಪ್ರಸಾರವಾಯಿತೊ ಅಂದಿನಿಂದ ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆ ಸಾಕಷ್ಟು ಏರಿದೆ.

ಚಿತ್ರಕೃಪೆ: Nagaraju B
ಇಲ್ಲಿನ ವಿಶೇಷವೆಂದರೆ ಹಿಂದಿನಿಂದ ಇಲ್ಲಿ ನಂದಿಯೊಂದು ಕೆಲ ವರ್ಷಗಳಿಂದ ವಾಸವಾಗಿದೆ. ದೇವಿಯ ಕೃಪಾ ಕಟಾಕ್ಷ ಅದಕ್ಕಿದ್ದು, ಯಾರಾದರೂ ತಮ್ಮ ಇಷ್ಟಾರ್ಥ ಹರಕೆಯ ರೂಪದಲ್ಲಿ ಕೇಳಿಕೊಳ್ಳುವರಿದ್ದರೆ ಅವರು ನೆಲದ ಮೇಲೆ ಮಲಗಬೇಕು. ಆ ನಂದಿಯು ನಿಧಾನವಾಗಿ ಅವರ ಮೇಲೆ ನಡೆದುಕೊಂಡು ಹೋಗುತ್ತದೆ.

ಚಿತ್ರಕೃಪೆ: Nagaraju B
ಹೀಗೆ ಮಾಡುವುದರಿಂದ ತಮ್ಮ ಬೇಡಿಕೆಗಳನ್ನು ನಿವೇದಿಸಿಕೊಂಡ ಭಕ್ತರ ಇಷ್ಟಾರ್ಥಗಳು ಬಹು ಬೇಗನೆ ಸಿದ್ಧಿಸುತ್ತವಂತೆ. ಹೀಗಾಗಿ ಕಾಣಿಕೆಯ ರೂಪದಲ್ಲಿ ಬಸವನ ಕೋಡುಗಳಲ್ಲಿ ಭಕ್ತರು ಹಣದ ನೋಟುಗಳನ್ನು ಸಿಕ್ಕಿಸಿರುವುದನ್ನು ಕಾಣಬಹುದು.

ಚಿತ್ರಕೃಪೆ: Nagaraju B
ಕಬ್ಬಾಳಮ್ಮ ದೇವಸ್ಥಾನವು ಬೆಂಗಳೂರಿನಿಂದ ಸುಮಾರು 75 ಕಿ.ಮೀ ಗಳಷ್ಟು ದೂರವಿದ್ದು ಕನಕಪುರ ಇಲ್ಲವೆ ರಾಮನಗರ/ಚೆನ್ನಪಟ್ಟಣದ ಮೂಲಕ ಸಾಗಿ ಸುಲಭವಾಗಿ ತಲುಪಬಹುದಾಗಿದೆ. ಬೆಂಗಳೂರಿನಿಂದ ಇಲ್ಲಿಗೆ ಬಸ್ಸುಗಳು ದೊರೆಯುವುದು ಕಷ್ಟವಾದ ಕಾರಣ ನಿಮ್ಮ ಸ್ವಂತ ವಾಹನ ಅಥವಾ ಬಾಡಿಗೆ ವಾಹನಗಳ ಮೂಲಕ ತೆರಳುವುದು ಉತ್ತಮ.


Click it and Unblock the Notifications















