Search
  • Follow NativePlanet
Share
» »ಒಂದಿನ ಬ್ರೆಕ್ ತುಗೊಳ್ಳಿ ದಬ್ಬೆ ಜಲಪಾತಕ್ಕೆ ಟ್ರೆಕ್ ಮಾಡಿ

ಒಂದಿನ ಬ್ರೆಕ್ ತುಗೊಳ್ಳಿ ದಬ್ಬೆ ಜಲಪಾತಕ್ಕೆ ಟ್ರೆಕ್ ಮಾಡಿ

By Vijay

ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಪ್ರವಾಸಿ ಚಟುವಟಿಕೆಗಳು ಚುರುಕುಗೊಳ್ಳಲಾರಂಭಿಸುತ್ತವೆ. ಈ ಸಂದರ್ಭದಲ್ಲಿ ಪ್ರಮುಖವಾಗಿ ಜಲಪಾತ ತಾಣಗಳು ಕೈಬಿಸಿ ಕರೆಯುತ್ತವೆ. ಅದರಲ್ಲೂ ಟ್ರೆಕ್ ನಂತಹ ಚಟುವಟಿಕೆ ಮಾಡುತ್ತ ಚುಮು ಚುಮು ಉದುರುವ ಮಳೆ ಹನಿಗಳಲ್ಲಿ ಹಾಯಾಗಿ ಕ್ರಮಿಸುತ್ತ ಸಾಗುವುದೆಂದರೆ ಯುವ ಪ್ರವಾಸಿಗರಿಗೆ ಬಲು ಅಚ್ಚು ಮೆಚ್ಚು.

ಕರ್ನಾಟಕದ ಈ ಜಲಪಾತಗಳಲ್ಲಿ ನಿಮಗೆಷ್ಟು ಗೊತ್ತು?

ಕರ್ನಾಟಕದಲ್ಲೂ ಸಹ ಮಳೆಗಾಲವು ಸಾಕಷ್ಟು ನಯನ ಮನೋಹರ ಭೂದೃಶ್ಯಾವಳಿಗಳನ್ನು ನೋದುಗರಿಗೆ ಕರುಣಿಸುತ್ತದೆ. ದಟ್ಟ ಕಾಡುಗಳ ಮಧ್ಯದಲ್ಲಿ ಅವಿತು ಕುಳಿತಿರುವ ಸುಂದರ ಜಲಪಾತಗಳು ಮತ್ತೆ ತಮ್ಮ ರೆಕ್ಕೆ ಪುಕ್ಕಗಳನ್ನು ಬಿಚ್ಚಿ ಭೋರ್ಗೆರೆಯಲಾರಂಭಿಸುತ್ತವೆ. ವಾತಾವರಣದಲ್ಲಿನ ತಾಜಾತನ ಅದಕ್ಕೆ ಇಂಬು ನೀಡುವಂತೆ ಹಾಲಿನ ನೊರೆಯಂತೆ ಧುಮುಕುವ ಜಲಪಾತ ಒಂದೆ ಕ್ಷಣದಲ್ಲಿ ಹೃದಯವನ್ನು ಗೆದ್ದು ಬಿಡುತ್ತವೆ.

ಒಂದಿನ ಬ್ರೆಕ್ ತುಗೊಳ್ಳಿ ದಬ್ಬೆ ಜಲಪಾತಕ್ಕೆ ಟ್ರೆಕ್ ಮಾಡಿ

ಚಿತ್ರಕೃಪೆ: Manu gangadhar

ಪ್ರಸ್ತುತ ಲೇಖನದಲ್ಲಿ ಅಂತಹುದೆ ಒಂದು ಜಲಪಾತ ತಾಣದ ಕುರಿತು ತಿಳಿಸಲಾಗಿದೆ. ಇದರ ಹೆಸರು ಸಹ ವಿಶಿಷ್ಟವೆ. ಹೌದು, ಇದನ್ನು ದಬ್ಬೆ ಜಲಪಾತ ಎಂದೆ ಕರೆಯುತ್ತಾರೆ. ಸುಮಾರು 110 ಮೀ. ಗಳಷ್ಟು ಎತ್ತರದಿಂದ "ದಬ ದಬ" ಎಂದು ಧುಮುಕುವ ಈ ಜಲಪಾತಕ್ಕೆ ದಬ್ಬೆ ಜಲಪಾತ ಎಂಬ ಹೆಸರು ಬಂದಿರಬಹುದೆಂದು ಹೇಳಲಾಗುತ್ತದೆ ಹಾಗೂ ಇದನ್ನು ಚಾರಣದ ಮೂಲಕ ಮಾತ್ರವೆ ತಲುಪಬಹುದಾಗಿದೆ.

ಶಿವಮೊಗ್ಗ ಜಿಲ್ಲೆಯ ಸಾಗರದ ಹೊಸಗದ್ದೆ ಎಂಬ ಗ್ರಾಮದ ಸುತ್ತಲಿನ ಪಶ್ಚಿಮ ಘಟ್ಟದ ದಟ್ಟಾರಣ್ಯದಲ್ಲಿ ನೆಲೆಸಿರುವ ಈ ಜಲಪಾತ ಕಾಡಿನಲ್ಲಿ ಸುಮಾರು ಮೂರ್ನಾಲ್ಕು ಕಿ.ಮೀ ಗಳ ಸಾಹಸಮಯ ಚಾರಣಪಥ ದಾಟಿ ತಲುಪಬಹುದಾದ ಜಲಪಾತ ಕೇಂದ್ರವಾಗಿದೆ. ಮಳೆಗಾಲದಲ್ಲಿ ಅತೀವವಾಗಿ ಸುಂದರತೆಯಿಂದ ಕೂಡಿದ್ದು ಸಾಕಷ್ಟು ಜಾಗರೂಕತೆಯಿಂದ ಇಲ್ಲಿ ಚಾರಣ ಮಾಡಬೇಕು.

ಒಂದಿನ ಬ್ರೆಕ್ ತುಗೊಳ್ಳಿ ದಬ್ಬೆ ಜಲಪಾತಕ್ಕೆ ಟ್ರೆಕ್ ಮಾಡಿ

ಚಿತ್ರಕೃಪೆ: Vmjmalali

ಮೊದಲು ಶಿವಮೊಗ್ಗಕ್ಕೆ ತಲುಪಿ ಅಲ್ಲಿಂದ ಕಾರ್ಗಲ್-ಭಟ್ಕಳ ರಸ್ತೆಯಲ್ಲಿ ಸಿಗುವ ಹೊಸಗದ್ದೆಗೆ ತೆರಳಿ ಅಲ್ಲಿಂದ ಚಾರಣ ಪ್ರಾರಂಭಿಸಬೇಕು. ಇದಕ್ಕೂ ಮೊದಲು ಇಲ್ಲಿರುವ ಗೌಡರ ಮನೆಯಲ್ಲಿ ಚಾರಣ ಹೊರಟವರು ತಮ್ಮ ವಿವರಗಳನ್ನು ಕಡ್ಡಾಯವಾಗಿ ಬರೆದಿಟ್ಟು ಚಾರಣ ಪ್ರಾರಂಭಿಸಬೇಕು. ಮೊದ ಮೊದಲು ಗದ್ದೆಗಳ ಮೂಲಕ ಹಾದು ಹೋಗುವ ಈ ಮಾರ್ಗ ನಂತರದಲ್ಲಿ ಕಾಡಿನೊಳಗೆ ಕರೆದೊಯ್ಯುತ್ತದೆ.

ನಂತರ ಕಾಡಿನ ಅಪಾರ ಸೌಂದರ್ಯವನ್ನು ಸವಿಯುತ್ತ, ನಿಮ್ಮ ಚಾರಣ ಸಾಮರ್ಥ್ಯಕ್ಕನುಸಾರವಾಗಿ ಈ ಜಲಪಾತ ಕೇಂದ್ರವನ್ನು ತಲುಪಬಹುದು. ಇಲ್ಲಿನ ಸೌಂದರ್ಯವಂತೂ ವರ್ಣನಾತೀತ. ಶುದ್ಧ ತಂಪಾದ ಜಲಧಾರೆಯಲ್ಲಿ ಸ್ನಾನ ಮಾಡಬಹುದು ಇಲ್ಲವೆ ಹಾಗೆ ಸುಮ್ಮನೆ ಕಾಲುಗಳನ್ನು ನೀರಿನಲ್ಲಿ ಬಿಟ್ಟು ಜಲಧಾರೆಯ ಸದ್ದನ್ನು ಆನಂದಿಸುತ್ತ ಹಾಯಾಗಿ ಕುಳಿತುಕೊಳ್ಳಬಹುದು.

ಶಿವಮೊಗ್ಗಕ್ಕಿರುವ ರೈಲುಗಳ ವೇಳಾಪಟ್ಟಿ

ಈ ಪ್ರದೇಶದಲ್ಲಿ ಒಂದು ದೇವಾಲಯವಿದ್ದು ಇದು ಹಿಂದೆ ಭೀಮನು ತನ್ನ ಪತ್ನಿ ದ್ರೌಪದಿಗೆಂದು ಸೌಗಂಹಿಕಾ ಪುಷ್ಪವನ್ನು ತರಲು ತೆರಳಿದಾಗ ಇಲ್ಲಿ ಬಂದು ಶಿವನನ್ನು ಕುರಿತು ತಪಸ್ಸನ್ನಾಚರಿಸಿ ಶಿವನಿಂದ ವರದಾನವನ್ನು ಪಡೆದು ಹೋದನಂತೆ. ಇದು ಈ ಜಲಪಾತ ತಾಣದ ಕುರಿತು ಪ್ರಚಲಿತದಲ್ಲಿರುವ ಸ್ಥಳ ಪುರಾಣ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+