Search
  • Follow NativePlanet
Share
» »ಈ ತೀರ್ಥಕ್ಷೇತ್ರದಲ್ಲಿ ನಿಮ್ಮ ರಾಹು ಹಾಗೂ ಕೇತು ದೋಷವನ್ನು ಪರಿಹಾರ ಮಾಡಿಕೊಳ್ಳಿ

ಈ ತೀರ್ಥಕ್ಷೇತ್ರದಲ್ಲಿ ನಿಮ್ಮ ರಾಹು ಹಾಗೂ ಕೇತು ದೋಷವನ್ನು ಪರಿಹಾರ ಮಾಡಿಕೊಳ್ಳಿ

ಶ್ರೀ ಕಾಳಹಸ್ತಿ ಆಂಧ್ರ ಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಒಂದು ಪಟ್ಟಣದಲ್ಲಿ ಈ ತೀರ್ಥಕ್ಷೇತ್ರವಿದೆ. ಈ ಪಟ್ಟಣವು ಸ್ವರ್ಣಮುಖಿ ನದಿಗೆ ಪೂರ್ವದಿಕ್ಕಿಗೆ ಶ್ರೀ ಕಾಳಹಸ್ತಿ ಪುಣ್ಯಕ್ಷೇತ್ರವಿದೆ. ಈ ದೇವಾಲಯವು ದಕ್ಷಿಣ ಕೈಲಾಸವೆಂದು ಪ್ರಸಿದ್ಧಿಯನ

ಶ್ರೀ ಕಾಳಹಸ್ತಿ ಆಂಧ್ರ ಪ್ರದೇಶ ರಾಜ್ಯದ ಚಿತ್ತೂರು ಜಿಲ್ಲೆಯ ಒಂದು ಪಟ್ಟಣದಲ್ಲಿ ಈ ತೀರ್ಥಕ್ಷೇತ್ರವಿದೆ. ಈ ಪಟ್ಟಣವು ಸ್ವರ್ಣಮುಖಿ ನದಿಗೆ ಪೂರ್ವದಿಕ್ಕಿಗೆ ಶ್ರೀ ಕಾಳಹಸ್ತಿ ಪುಣ್ಯಕ್ಷೇತ್ರವಿದೆ. ಈ ದೇವಾಲಯವು ದಕ್ಷಿಣ ಕೈಲಾಸವೆಂದು ಪ್ರಸಿದ್ಧಿಯನ್ನು ಪಡೆದಿದೆ. ಇದರ ಬಳಿ ಇರುವ ಬೆಟ್ಟಕ್ಕೆ ಕೈಲಾಸಗಿರಿಯೆಂದು ಹೆಸರು.

ಸಹಸ್ರಾರು ಭಕ್ತರು ಶಿವರಾತ್ರಿಯ ಕಾಲದಲ್ಲಿ ಈ ಪುಣ್ಯಕ್ಷೇತ್ರಕ್ಕೆ ತೆರಳಿ ವಿಜೃಂಭಣೆಯಿಂದ ಉತ್ಸವವನ್ನು ಆಚರಿಸುತ್ತಾರೆ. ಇಲ್ಲಿ ರಾಹು ಹಾಗೂ ಕೇತು ದೋಷವನ್ನು ಪರಿಹಾರ ಮಾಡಿಕೊಳ್ಳಲು ಹಲವಾರು ಭಕ್ತರು ದಿನನಿತ್ಯ ಬರುತ್ತಾರೆ.

ಈ ದೇವಾಲಯದ ಇತಿಹಾಸದ ಪ್ರಕಾರ ಪಲ್ಲವರು, ಚೋಳರು ಮತ್ತು ವಿಜಯನಗರದ ರಾಜರು ಕೂಡ ಈ ದೇವಾಲಯಕ್ಕೆ ಆನೇಕ ಸವಲತ್ತುಗಳನ್ನು ಒದಗಿಸಿದ್ದಾರೆ. ಕೆಲವು ಪುರಾಣಗಳ ಪ್ರಕಾರ ಶ್ರೀ ಕಾಳಹಸ್ತಿಯಲ್ಲಿರುವ ಶಿವಲಿಂಗವು ಬ್ರಹ್ಮದೇವನಿಂದ ಸ್ಥಾಪಿತವಾದದ್ದು. ಈ ಪುಣ್ಯ ಕ್ಷೇತ್ರದಲ್ಲಿ ಎರಡು ದೀಪಗಳು ಬೆಳಗುತ್ತಿರುತ್ತವೆ.

ಒಂದು ದೀಪ ಯಾವಾಗಲೂ ಗಾಳಿಗೆ ಕದುಲುತ್ತಿದ್ದರೆ, ಇನ್ನೊಂದು ದೀಪವು ನಿಶ್ಚಲವಾಗಿರುತ್ತದೆ. ಈ ದೇವಾಲಯದಲ್ಲಿರುವ ಸುಂದರವಾದ 3 ಗೋಪುರಗಳು ಪ್ರಾಚೀನ ಭಾರತೀಯ ವಾಸ್ತು ಕಲೆಗೆ ನಿದರ್ಶನವಾಗಿದೆ.

ಪ್ರಸ್ತುತ ಲೇಖನದಲ್ಲಿ ಶ್ರೀ ಕಾಳಹಸ್ತಿ ದೇವಾಲಯದಲ್ಲಿರುವ ಶಿವಲಿಂಗದ ರಹಸ್ಯದ ಬಗ್ಗೆ ತಿಳಿಯೋಣ.

ಶ್ರೀ ಕಾಳಹಸ್ತಿಶ್ವರ

ಶ್ರೀ ಕಾಳಹಸ್ತಿಶ್ವರ

ಸ್ವರ್ಣಮುಖಿ ನದಿ ತೀರದಲ್ಲಿ ನೆಲೆಸಿರುವ ಸ್ವಾಮಿ ಶ್ರೀ ಕಾಳಹಸ್ತಿಶ್ವರನು. ಸ್ವಯಂ ಭೂ ಲಿಂಗ ಎಂದು ಕೆಲವರು ಇನ್ನೂ ಕೆಲವರು ಬ್ರಹ್ಮ ದೇವನು ಪ್ರತಿಷ್ಟಾಪಿಸಿದ ಲಿಂಗ ಎಂದು ಇನ್ನೂ ಕೆಲವರು ತಿಳಿಸುತ್ತಾರೆ. ಲಿಂಗದ ಮುಂಭಾಗದಲ್ಲಿರುವ ದೀಪವು ಶಿವಲಿಂಗದಿಂದ ಬರುವ ಗಾಳಿಯಿಂದ ಕದಲುತ್ತದೆಯಂತೆ. ಶ್ರೀ ಕಾಳಹಸ್ತಿಯನ್ನು ದಕ್ಷಿಣ ಕಾಶಿ ಎಂದು ಸಹ
ಕರೆಯುತ್ತಾರೆ.


PC:Krishna Kumar Subramanian

ಶ್ರೀ ಕಾಳಹಸ್ತಿಶ್ವರ

ಶ್ರೀ ಕಾಳಹಸ್ತಿಶ್ವರ

ಶ್ರೀ ಕಾಳಹಸ್ತಿಯ ತಾಯಿ ಜ್ಞಾನ ಪ್ರಸಾದವನ್ನು ನೀಡುವ ತಾಯಿಯಾಗಿದ್ದಾಳೆ. ಇಲ್ಲಿನ ಶಿವಲಿಂಗವು ವರ್ತುಲಾಕಾರವೇ ಅಲ್ಲದೇ ಚರ್ತುಸ್ರಮವಾಗಿ ಕೂಡ ಇದೆ. ಸ್ಥಳ ಪುರಾಣಗಳ ಪ್ರಕಾರ ಬ್ರಹ್ಮನಿಗೆ ಜ್ಞಾನವನ್ನು ಪ್ರಸಾಧಿಸಿದ ಪ್ರದೇಶ.

ಶ್ರೀ ಕಾಳಹಸ್ತಿಶ್ವರ

ಶ್ರೀ ಕಾಳಹಸ್ತಿಶ್ವರ

ಶ್ರೀ ಕಾಳಹಸ್ತಿ ದೇವಾಲಯವು ರಾಹು ಹಾಗೂ ಕೇತು ದೋಷವನ್ನು ಪರಿಹರಿಸುವಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ಪೂಜೆಗಳು ಮಾಡಿದರೆ ಸಕಲ ದೋಷ ನಿವಾರಣೆಯಾಗಿ ಸಂತಾನ ಭಾಗ್ಯ, ವಿವಾಹ, ಉದ್ಯೋಗ, ಮನೆಯಲ್ಲಿ ಶಾಂತಿ ನೆಲೆಸುತ್ತದೆ. ರಾಹು ಹಾಗೂ ಕೇತು ದೋಷ ಪರಿಹಾರ ಮಾಡಿಸಿಕೊಳ್ಳಲು ಸಾವಿರಾರು ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ.

ಶ್ರೀ ಕಾಳಹಸ್ತಿಶ್ವರ

ಶ್ರೀ ಕಾಳಹಸ್ತಿಶ್ವರ

ಕಣ್ಣಪ್ಪ ಎಂಬ ಭೇಟೆಯವನು ದಿನನಿತ್ಯ ಸ್ವಾಮಿಯನ್ನು ಪೂಜಿಸುತ್ತಿದ್ದನು. ಆತನ ಭಕ್ತನನ್ನು ಪರೀಕ್ಷೀಸಬೇಕು ಎಂದು ಸ್ವಾಮಿಯು ಒಂದು ದಿನ ಸ್ವಾಮಿಯು ತನ್ನ ಶಿವಲಿಂಗದಿಂದ ರಕ್ತವನ್ನು ಸುರಿಸತೊಡಗಿದನು. ಇದನ್ನು ಕಂಡ ಕಣ್ಣಪ್ಪ ತನ್ನ ಎರಡು ಕಣ್ಣುಗಳನ್ನು ತೆಗೆದು ಸ್ವಾಮಿಗೆ ಅರ್ಪಿಸಿದನು.

ಶ್ರೀ ಕಾಳಹಸ್ತಿಶ್ವರ

ಶ್ರೀ ಕಾಳಹಸ್ತಿಶ್ವರ

ಭಕ್ತನಾದ ಕಣ್ಣಪ್ಪ ತನ್ನ ಭಕ್ತಿಯನ್ನು ಸ್ವಾಮಿಯ ಕಣ್ಣುಗಳನ್ನು ನೀಡುವ ಮೂಲಕ ನಿರೂಪಿಸಿದನು. ಇದರಿಂದ ಸಂತುಷ್ಟನಾದ ಸ್ವಾಮಿಯು ಪ್ರತ್ಯಕ್ಷನಾಗಿ ಭಕ್ತನಾದ ಕಣ್ಣಪ್ಪನಿಗೆ ಮುಕ್ತಿಯನ್ನು ಪ್ರಾಸಿದಿಸಿದನು. ವಿಶೇಷವೆನೆಂದರೆ ಈ ದೇವಾಲಯವು ಅತ್ಯಂತ ದೊಡ್ಡದಾದ ದೇವಾಲಯವಾಗಿದೆ.

ಶ್ರೀ ಕಾಳಹಸ್ತಿಶ್ವರ

ಶ್ರೀ ಕಾಳಹಸ್ತಿಶ್ವರ

"ಮಣಿಕುಂಡೇಶ್ವರಾಖ್ಯ" ಎನ್ನವ ಮಂದಿರವಿದೆ. ಕಾಶಿ ಕ್ಷೇತ್ರದಲ್ಲಿದ ಹಾಗೇ ಇಲ್ಲಿನ ಸ್ವಾಮಿ ಪರಶಿವನು ಕೂಡ ಓಂಕಾರ ಮಂತ್ರ ಹಾಗೂ ತಾರಕಮಂತ್ರವನ್ನು ಉಪದೇಶಿಸಿ ಮೋಕ್ಷಂ ನೀಡುತ್ತಾನೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಶ್ರೀ ಕಾಳಹಸ್ತಿಶ್ವರ

ಶ್ರೀ ಕಾಳಹಸ್ತಿಶ್ವರ

ದೇವಾಲಯದ ಪ್ರಾಂಗಣದಲ್ಲಿ ಪಾತಾಳ ವಿಘ್ನೇಶ್ವರನ ದೇವಾಲಯವಿದೆ. ದೇವಾಲಯದ ಪ್ರಾಗಂಣದ ಸಮೀಪದಲ್ಲಿಯೇ ಕಣ್ಣಪ್ಪನ ದೇವಾಲಯ ಕೂಡ ಇದೆ. ಶ್ರೀ ಕಾಳಹಸ್ತಿಶ್ವರ ದೇವಾಲಯದ ರಾಜಗೋಪುರವು ದಕ್ಷಿಣಾಭಿಮುಖವಾಗಿದೆ. ಸ್ವಾಮಿಯು ಉತ್ತರಾಣಭಿಮುಖವಾಗಿ ಇದೆ.

ಶ್ರೀ ಕಾಳಹಸ್ತಿಶ್ವರ

ಶ್ರೀ ಕಾಳಹಸ್ತಿಶ್ವರ

ಆದಿ ಶಂಕರಾಚಾರ್ಯರು ಇಲ್ಲಿ ಶ್ರೀ ಚಕ್ರವನ್ನು ಸ್ಥಾಪಿಸಿದರು. ಈ ದೇವಾಲಯದ ಇತರ ಹೆಸರುಗಳೆಂದರೆ, ದಕ್ಷಿಣ ಕೈಲಾಸ, ಸತ್ಯ ಮಾಹಾ ಭಾಸ್ಕರಕ್ಷೇತ್ರ, ಸದಾಮುಕ್ತಿ ಕ್ಷೇತ್ರ ಇನ್ನೂ ಹಲವಾರು. ಶಿವ ರಾತ್ರಿಯ ದಿನದಂದು ವಿಜೃಂಭಣೆಯಿಂದ ಉತ್ಸವವನ್ನು ಆಚರಿಸಲಾಗುತ್ತದೆ.


PC: PC:Hvadga

ಶ್ರೀ ಕಾಳಹಸ್ತಿಶ್ವರ

ಶ್ರೀ ಕಾಳಹಸ್ತಿಶ್ವರ

ಶ್ರೀ ಕಾಳಹಸ್ತಿ ದೇವಾಲಯದ ನಿರ್ಮಾಣದಲ್ಲಿ ಒಂದು ವಿಶೇಷವಿದೆ. ಇಲ್ಲಿನ ವಿನಾಯಕ, ಶ್ರೀ ಕಾಳಹಸ್ತಿಶ್ವರ, ಜ್ಞಾನ ಪ್ರಸೂನಾಂಬ ದೇವತೆ, ದಕ್ಷಿಣ ಮೂರ್ತಿ ಒಬ್ಬೊಬ್ಬರು ಒಂದೊದು ದಿಕ್ಕಿಗೆ ಅಭಿಮುಖವಾಗಿದ್ದಾರೆ. ಈ ದೇವಾಲಯದ ದರ್ಶನದಿಂದಾಗಿ ಎಲ್ಲಾ ಕಾರ್ಯವು ಸಿದ್ಧಿಯಾಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.

ಶ್ರೀ ಕಾಳಹಸ್ತಿಶ್ವರ

ಶ್ರೀ ಕಾಳಹಸ್ತಿಶ್ವರ

ಅಭಿಷೇಕ ಸಮಯದಲ್ಲಿ ಸ್ವಾಮಿಯ ನಿಜರೂಪ ದರ್ಶನವನ್ನು ಪಡೆದರೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂದು ಭಕ್ತರು ನಂಬಿದ್ದಾರೆ. ಸ್ವಾಮಿಯ ಲಿಂಗಾಕೃತಿದ ಮಧ್ಯೆ ಭಾಗದಲ್ಲಿ ನವಗ್ರಹ ಕವಚವಿದೆ. ಇದರಲ್ಲಿ ಸೂರ್ಯಚಂದ್ರಾದಿ 9 ಗ್ರಹಗಳು ಇರುತ್ತವೆ.

ಶ್ರೀ ಕಾಳಹಸ್ತಿಶ್ವರ

ಶ್ರೀ ಕಾಳಹಸ್ತಿಶ್ವರ

ಶ್ರೀಕಾಳಹಸ್ತಿ ಕ್ಷೇತ್ರದಲ್ಲಿ ಪವಿತ್ರವಾದ ಲಿಂಗವನ್ನು ದರ್ಶನ ಮಾಡಿಕೊಂಡರೆ ರಾಹು, ಕುಜ ಸರ್ವ ದೋಷಗಳು ಪರಿಹಾರವಾಗುತ್ತದೆ. ಹಾಗಾಗಿ ಇಲ್ಲಿ ದಿನನಿತ್ಯ ಸಾವಿರಾರು ಭಕ್ತರು ದಂಪತಿಗಳ ಸಮೇತ ತಮ್ಮ ದೋಷಗಳನ್ನು ಪರಿಹರಿಸಿಕೊಳ್ಳಲು ಭೇಟಿ ನೀಡುತ್ತಾರೆ.

ಪ್ರಯಾಣ ಸೌಕರ್ಯ

ಪ್ರಯಾಣ ಸೌಕರ್ಯ

ಶ್ರೀ ಕಾಳಹಸ್ತಿಗೆ ತಿರುಪತಿಯಿಂದ 30 ಕಿ,ಮೀ ದೂರದಲ್ಲಿರುವ ಈ ದೇವಾಲಯಕ್ಕೆ 5 ನಿಮಿಷಕ್ಕೆ ಒಮ್ಮೆ ಬಸ್‍ಗಳ ಸೌಕರ್ಯವಿದೆ. ರೈಲ್ವೆ ಮೂಲಕ ಸಾಗುವವರಿಗೆ ಬೆಂಗಳೂರಿನಿಂದ ತಿರುಪತಿಗೆ ನೇರವಾದ ತಿರುಪತಿ ಎಕ್ಸ್‍ಪ್ರೆಸ್ ಇದ್ದು, ಅಲ್ಲಿಂದ ಬಸ್ ಅಥವಾ ಟ್ಯಾಕ್ಸಿ ಮೂಲಕ ಶ್ರೀ ಕಾಳಹಸ್ತಿ ದೇವಾಲಯಕ್ಕೆ ತೆರಳಬಹುದಾಗಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+