Search
  • Follow NativePlanet
Share
» »ಮನೆ ಬಿಟ್ಟು ಓಡಿ ಬಂದ ಪ್ರೇಮಿಗಳಿಗೆ ರಕ್ಷಣೆ ನೀಡುತ್ತಂತೆ ಈ ಶಿವಾಲಯ!

ಮನೆ ಬಿಟ್ಟು ಓಡಿ ಬಂದ ಪ್ರೇಮಿಗಳಿಗೆ ರಕ್ಷಣೆ ನೀಡುತ್ತಂತೆ ಈ ಶಿವಾಲಯ!

ಪ್ರೀತಿಸುವ ಎರಡು ಹೃದಯಗಳನ್ನು ಬೇರ್ಪಡಿಸಲು ಹಲವಾರು ಶತ್ರುಗಳು ಇರುತ್ತಾರೆ. ಪ್ರತಿಯೊಂದು ಪ್ರೇಮಿಗಳಿಗೆ ಸಮಸ್ಯೆ ಇದ್ದೇ ಇರುತ್ತದೆ. ಅಂತಹ ಪ್ರೇಮಿಗಳ ರಕ್ಷಣೆಗಾಗಿ ಒಂದು ಮಂದಿರವಿದೆ. ಅದುವೇ ಉತ್ತರ ಭಾರತದ ಹಿಮಾಚಲ ಪ್ರದೇಶದಲ್ಲಿರುವ ಶಂಗಚೂಲ್ ಮಹದೇವ ದೇವಸ್ಥಾನ.

ಈ ನಗರಗಳಲ್ಲಿ ಗಂಡಸರೇ ತಮ್ಮ ಮನೆ ಹೆಂಗಸರಿಗೆ ಗಿರಾಕಿ ಹುಡುಕ್ತಾರಂತೆ!

ಎಲ್ಲಿದೆ ಈ ಶಂಗಚೂಲ್ ಮಹದೇವ ದೇವಸ್ಥಾನ

ಎಲ್ಲಿದೆ ಈ ಶಂಗಚೂಲ್ ಮಹದೇವ ದೇವಸ್ಥಾನ

ಹಿಮಾಚಲ ಪ್ರದೇಶದ ಕುಲ್ಲುವಿನಲ್ಲಿ ಶಂಗಡ್ ಎಂಬ ಹಳ್ಳಿ ಇದೆ. ಅಲ್ಲಿ ಶಂಗಚೂಲ್ ಮಹದೇವ ಎನ್ನುವ ದೇವಸ್ಥಾನವಿದೆ.ಈ ಮಂದಿರಕ್ಕೆ ಬರುವ ಪ್ರೇಮಿಗಳಿಗೆ ಯಾರೂ ಯಾವುದೇ ತೊಂದರೆ ನೀಡಲಾಗುವುದಿಲ್ಲವಂತೆ. ಅದು ಪ್ರೇಮಿಗಳಿಬ್ಬರ ಮನೆಯವರೂ ಆಗಿರಬಹುದು. ಅಥವಾ ಪೊಲೀಸರೂ ಆಗಿರಬಹುದು.

 ಪೊಲೀಸರಿಗೆ ನಿಷೇಧ

ಪೊಲೀಸರಿಗೆ ನಿಷೇಧ

ಈ ಕ್ಷೇತ್ರಕ್ಕೆ ಪೊಲೀಸರು ಆಗಮಿಸುವಂತಿಲ್ಲ. ಈ ಪ್ರದೇಶದಲ್ಲಿ ಪ್ರತಿಯೊಂದು ಕಾನೂನು ಹಾಗೂ ಕಾಯ್ದೆಗಳನ್ನು ಕಟ್ಟುನಿಟ್ಟಿನಲ್ಲಿ ಪಾಲಿಸಲಾಗುತ್ತದೆ. ಇಲ್ಲಿ ದೇವರ ತೀರ್ಪನ್ನೇ ಅನುಸರಿಸಲಾಗುತ್ತದೆ. ಇಲ್ಲಿಗೆ ಬರುವ ಮದುವೆಯಲ್ಲಿನ ಸಮಸ್ಯೆ ಕೂಡಾ ದೂರವಾಗುತ್ತದೆ ಎನ್ನಲಾಗುತ್ತದೆ. ಈ ದೇವಸ್ಥಾನದಲ್ಲಿ ಎಲ್ಲಿ ನೋಡಿದರೂ ನಿಮಗೆ ಬರೀ ಪ್ರೇಮಿಗಳೇ ಕಾಣಿಸುತ್ತಾರೆ.

ಅಮಲು ಪದಾರ್ಥ ತರುವಂತಿಲ್ಲ

ಅಮಲು ಪದಾರ್ಥ ತರುವಂತಿಲ್ಲ

ಈ ಹಳ್ಳಿಯಲ್ಲಿ ಯಾವುದೇ ವ್ಯಕ್ತಿ ಏರುಧ್ವನಿಯಲ್ಲಿ ಮಾತನಾಡುವಂತಿಲ್ಲ. ಯಾವುದೇ ರೀತಿಯ ಗಲಾಟೆ, ಗದ್ದಲ ನಡೆಸುವಂತಿಲ್ಲ. ಸಾರಾಯಿ, ಸಿಗರೇಟ್ ಹೀಗೆ ಅಮಲು ಪದಾರ್ಥಗಳನ್ನು ತರುವಂತಿಲ್ಲ.

ಮರುನಿರ್ಮಾಣ ಮಾಡಲಾಗಿದೆ.

ಮರುನಿರ್ಮಾಣ ಮಾಡಲಾಗಿದೆ.

ಉರಿದುಹೋಗಿದ್ದು ಈ ದೇವಸ್ಥಾನವನ್ನು 2015ರಲ್ಲಿ ಮರು ನಿರ್ಮಾಣ ಮಾಡಲಾಯಿತು. ಅಚಾನಕ್ಕಾಗಿ ಈ ಮಂದಿರ ಸಹಿತ ಸುತ್ತಮುತ್ತಲಿನ ಮೂರು ಮನೆಗಳು ಬೆಂಕಿಯಲ್ಲಿ ಭಸ್ಮವಾಗಿತ್ತು.

Read more about: india temple shiva himachal
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X