ಜಮ್ಮುವಿನಲ್ಲಿರುವ ವೈಷ್ಣೋದೇವಿಯ ದರ್ಶನ ಮಾಡಬೇಕೆಂಬುದು ಹೆಚ್ಚಿನವರಿಗೆ ಮನಸ್ಸಿರುತ್ತದೆ. ಆದರೆ ಎಲ್ಲರಿಗೂ ಅಲ್ಲಿಗೆ ಹೋಗಲು ಸಾಧ್ಯವಾಗೋದಿಲ್ಲ. ಅಂತವರಿಗಾಗಿ ಗುಲ್ಬರ್ಗಾದಲ್ಲಿ ಒಂದು ಹೊಸ ವೈಷ್ಣೋದೇವಿ ಮಂದಿರವನ್ನು ನಿರ್ಮಿಸಲಾಗಿದೆ. ಈ ದೇವಸ್ಥಾನವು ಜಮ್ಮುವಿನ ವೈಷ್ಣೊದೇವಿಯ ದೇವಸ್ಥಾನವನ್ನೇ ಹೋಲುತ್ತದೆ.

ಎಲ್ಲಿದೆ ಈ ದೇವಸ್ಥಾನ
PC: youtube
ಕಲಬುರ್ಗಿಯ ಹೊರವಲಯದಲ್ಲಿನ ಸೈಯ್ಯದ್ ಚಿಂಚೋಳಿ ಬಳಿಯ ರಿಂಗ್ ರಸ್ತೆಯಲ್ಲಿದೆ ವೈಷ್ಣೋದೇವಿ ದೇವಸ್ಥಾನ. ಇಲ್ಲಿ ಗುಹೆಯನ್ನು ನಿರ್ಮಿಸಲಾಗಿದೆ. ಇದರೊಳಗೆ ಹೋದರೆ ವೈಷ್ಣೋದೇವಿಯ ದರ್ಶನವಾಗುತ್ತದೆ. ಪ್ರತಿದಿನ ನೂರಾರು ಭಕ್ತರು ಇಲ್ಲಿಗೆ ಆಗಮಿಸುತ್ತಿದ್ದಾರೆ.

ಗಬರಾದಿ ರಿಲಿಜಿಯಸ್ ಟ್ರಸ್ಟ್
PC: youtube
ಈ ದೇವಸ್ಥಾನದ ಕಟ್ಟಡವು ನೋಡಲು ಸುಂದರವಾಗಿದ್ದು ವಿಶೇಷ ರೀತಿಯಲ್ಲಿ ನಿರ್ಮಿಸಲಾಗಿದೆ. ಗಬರಾದಿ ರಿಲಿಜಿಯಸ್ ಟ್ರಸ್ಟ್ ವತಿಯಿಂದ ನಿರ್ಮಾಣವಾಗಿರುವ ದೇವಸ್ಥಾನ ಇದಾಗಿದೆ.

ವೈಷ್ಣೋದೇವಿ ದೇವಸ್ಥಾನ
PC: youtube
ಈ ದೇವಸ್ಥಾನವು ಜಮ್ಮುವಿನ ವೈಷ್ಣೋದೇವಿ ದೇವಸ್ಥಾನವನ್ನೇ ಹೋಲುತ್ತದೆ. ಜಮ್ಮುವಿನದು ನೈಸರ್ಗಿಕ ದೇವಾಲಯವಾಗಿದೆ. ಆದರೆ ಇದು ಮಾನವ ನಿರ್ಮಿತ ದೇವಾಲಯವಾಗಿದೆ. ಇದೊಂದು ಗುಹಾ ದೇವಾಲಯ.

108 ಅಡಿ ಎತ್ತರ
PC: youtube
ವೈಷ್ಣೋದೇವಿ ದೇವಸ್ಥಾನ 108 ಅಡಿ ಎತ್ತರದವರೆಗೆ ನಿರ್ಮಿಸಲಾಗಿದೆ. ಜಮ್ಮು ಕಾಶ್ಮೀರದ ಮಾದರಿಯಲ್ಲಿಯೇ ನಿರ್ಮಿಸಿರುವುದರಿಂದ ಎಲ್ಲರ ಗಮನ ಸೆಳೆಯುತ್ತಿದೆ.

ಗುಲ್ಬರ್ಗಾದಲ್ಲಿನ ಬೃಹತ್ ದೇವಾಲಯ
PC: youtube
ಜಮ್ಮುವಿಗೆ ಹೋಗಿ ವೈಷ್ಣೋದೇವಿಯ ದರ್ಶನ ಪಡೆಯಲು ಸಾಧ್ಯವಾಗದ ಜನರಿಗೆ ಈ ದೇವಸ್ಥಾನದ ಮೂಲಕ ಗುಲ್ಬರ್ಗಾದಲ್ಲೇ ವೈಷ್ಣೋ ದೇವಿಯ ದರ್ಶನವಾಗಲಿದೆ. ಸುಮಾರು 1 ಎಕರೆ ವಿಸ್ತೀರ್ಣದಲ್ಲಿ ಈ ದೇವಾಲಯ ನಿರ್ಮಿಸಲಾಗಿದೆ. ಗುಲ್ಬರ್ಗಾದಲ್ಲಿನ ಬೃಹತ್ ದೇವಾಲಯ ಇದು ಎನ್ನಬಹುದು.

4ವರ್ಷದಲ್ಲಿ ಮಂದಿರ ನಿರ್ಮಾಣ
PC: youtube
ಸುಮಾರು 4 ವರ್ಷಗಳಿಂದ ಈ ದೇವಾಲಯದ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇನ್ನೂ ಕೆಲವು ನಿರ್ಮಾಣ ಕಾರ್ಯಗಳು ಬಾಕಿ ಇವೆ. ಬಿಹಾರ, ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರದ ಕೆಲಸಗಾರರು ಈ ದೇವಸ್ಥಾನದ ನಿರ್ಮಾಣದಲ್ಲಿ ತೊಡಗಿದ್ದಾರೆ.

ಅಮರನಾಥ ಗುಹೆ
PC: youtube
ಈ ದೇವಸ್ಥಾನವನ್ನು ಇನ್ನೂ ಅಭಿವೃದ್ದಿಪಡಿಸಲಾಗುತ್ತಿದೆ. ಅಮರನಾಥ ಗುಹೆಯನ್ನೂ ಈ ದೇವಸ್ಥಾನದೊಳಗೆ ಸೃಷ್ಠಿಸುವ ಕಾರ್ಯವನ್ನು ಈ ದೇವಸ್ಥಾನದ ಸಮಿತಿಯು ನಡೆಸುತ್ತಿದೆ.

ಯಾವ್ಯಾವ ದೇವರಿದ್ದಾರೆ
PC: youtube
ಕಲಬುರ್ಗಿಯಲ್ಲಿ ಹೊಸತಾಗಿ ನಿರ್ಮಿಸಲಾಗಿರುವ ದೇವಸ್ಥಾನ ಇದಾಗಿದೆ. ಇಲ್ಲಿ ಕೇವಲ ವೈಷ್ಣೋದೇವಿ ಮಾತ್ರವಲ್ಲ ಗಣೇಶ, ಬಾಲಾಜಿ, ಆಂಜನೇಯ. ಕಾಲಬೈರವ, ಮಹಾಕಾಳಿಯ ದರ್ಶನವೂ ಆಗುತ್ತದೆ.

ಭೇಟಿ ನೀಡಿ
PC: youtube
ಜಮ್ಮುವಿನ ವೈಷ್ಣೋದೇವಿಯನ್ನು ಗುಲ್ಬರ್ಗಾದಲ್ಲೇ ನೋಡಬಹುದು ಎನ್ನುವುದು ಜನರ ಅಭಿಪ್ರಾಯವಾಗಿದೆ. ನೀವು ಗುಲ್ಬರ್ಗಾಕ್ಕೆ ಭೇಟಿ ನೀಡಿದಾಗ ಇಲ್ಲಿನ ವೈಷ್ಣೋದೇವಿ ದೇವಸ್ಥಾನದ ದರ್ಶನ ಪಡೆಯಲೇ ಬೇಕು.


Click it and Unblock the Notifications

















