Search
  • Follow NativePlanet
Share
» »ಬೆಂಗಳೂರಲ್ಲಿರುವ ಈ ಶಿವಲಿಂಗಕ್ಕೆ ತುಪ್ಪ ಹಚ್ಚಿದ್ರೆ ಬೆಣ್ಣೆಯಾಗುತ್ತಂತೆ!

ಬೆಂಗಳೂರಲ್ಲಿರುವ ಈ ಶಿವಲಿಂಗಕ್ಕೆ ತುಪ್ಪ ಹಚ್ಚಿದ್ರೆ ಬೆಣ್ಣೆಯಾಗುತ್ತಂತೆ!

ಬೆಂಗಳೂರಿನಲ್ಲಿರುವವರು ಶಿವಗಂಗೆಯ ಬಗ್ಗೆ ಗೊತ್ತೇ ಇರಬಹುದು. ಇದೊಂದು ಧಾರ್ಮಿಕ ತಾಣದ ಜೊತೆಗೆ ಪ್ರವಾಸಿ ತಾಣವೂ ಆಗಿದೆ. ಶಿವಗಂಗೆಯಲ್ಲಿ ಹಿಂದೆ ಋಷಿಮುನಿಗಳು ತಪಸ್ಸು ಮಾಡುತ್ತಿದ್ದರು ಎನ್ನಲಾಗುತ್ತದೆ. ಈಗ ಇಲ್ಲಿ ಬೆಟ್ಟದ ಮೇಲೆ ಗಂಗಾಧರೇಶ್ವರ ದೇವಸ್ಥಾನವಿದೆ. ಇಲ್ಲಿನ ವಿಶೇಷ ಏನು ಅನ್ನೋದು ನಿಮಗೆ ಗೊತ್ತಾ?

ಗಂಗಾಧರೇಶ್ವರ ದೇವಾಲಯ

ಗಂಗಾಧರೇಶ್ವರ ದೇವಾಲಯ

PC:Dineshkannambadi

ಬೆಂಗಳೂರು ಗ್ರಾಮಾಂತರದಲ್ಲಿ ನೆಲಮಂಗಲ ತಾಲೂಕಿನ ಶಿವಗಂಗೆಯಲ್ಲಿ ದಾಬಸ್ ಪೇಟೆಯಿಂದ 6 ಕಿ.ಮೀ ದೂರದಲ್ಲಿ ಶಿವಗಂಗೆ ಬೆಟ್ಟ ಕಾಣಿಸುತ್ತದೆ. ಈ ಬೆಟ್ಟದ ಮೇಲೆ ಗಂಗಾಧರೇಶ್ವರ ದೇವಾಲಯವಿದೆ.

ಗಂಗೆಯಲ್ಲಿ ಉದ್ಭವಿಸಿದ ಶಿವಲಿಂಗ

ಗಂಗೆಯಲ್ಲಿ ಉದ್ಭವಿಸಿದ ಶಿವಲಿಂಗ

PC:Raj.shimoga

ಇಲ್ಲಿನ ಶಿವಲಿಂಗದ ವಿಶೇಷತೆ ಏನೆಂದರೆ ಇದು ಯಾವಾಗಲೂ ನೀರಿನ ಮೇಲೆ ಇದೆ. ಗಂಗೆಯಲ್ಲಿ ಉದ್ಭವಿಸಿದ ಶಿವಲಿಂಗ ಇದಾಗಿದ್ದು ಇದನ್ನು ಗಂಗಾಧರೇಶ್ವರ ಎಂದು ಕರೆಯಲಾಗತ್ತದೆ. ಹಾಗಾಗಿ ಈ ಬೆಟ್ಟವನ್ನು ಶಿವಗಂಗೆ ಎಂದು ಕರೆಯುತ್ತಾರೆ.

ತುಪ್ಪ ಬೆಣ್ಣೆಯಾಗುತ್ತದೆ

ತುಪ್ಪ ಬೆಣ್ಣೆಯಾಗುತ್ತದೆ

PC:Dayanandashetty beloor

ಇಲ್ಲಿನ ಶಿವಲಿಂಗದ ಮೇಲೆ ತುಪ್ಪ ಸವರಿದ್ರೆ ಬೆಣ್ಣೆಯಾಗುತ್ತದಂತೆ. ಇಲ್ಲಿ ಉತ್ಪತ್ತಿಯಾದ ಬೆಣ್ಣೆಯನ್ನು ಸೇವಿಸಿದ್ರೆ ಸರ್ವ ರೋಗ ಗುಣಮುಖವಾಗುತ್ತದಂತೆ. ತುಪ್ಪ ಕಣ್ಣಿಗೆ ಹಚ್ಚಿದ್ರೆ ಕಣ್ಣಿನ ದೋಷ ನಿವಾರಣೆಯಾಗುತ್ತಂತೆ. ಹಾಗಾಗಿ ಸಾಕಷ್ಟು ಜನರು ಇಲ್ಲಿಗೆ ಬಂದು ಈ ಅದ್ಭುತವನ್ನು ನೋಡಲು ಆಗಮಿಸುತ್ತಾರೆ.

ಹೊನ್ನಾದೇವಿ ದೇವಸ್ಥಾನ

ಹೊನ್ನಾದೇವಿ ದೇವಸ್ಥಾನ

ಇಲ್ಲಿ ಅನೇಕ ದೇವಾಲಯಗಳಿವೆ ಅವುಗಳಲ್ಲಿ ಹೊನ್ನಾದೇವಿ ದೇವಸ್ಥಾನವೂ ಒಂದು. ಹೊನ್ನಾದೇವಿ ದೇವಸ್ಥಾನದ ಹಿಂದೆ ಪಾತಾಳ ಗಂಗೆ ಇದೆ. ಬೇಸಿಗೆ ಗಾಲದಲ್ಲಿ ನೀರು ಮೇಲಕ್ಕೆ ಬರುತ್ತದೆ. ಮಳೆಗಾಲದಲ್ಲಿ ನೀರು ಒಳಕ್ಕೆ ಹೋಗುತ್ತಂತೆ.

ಪುರಾಣಕಥೆ

ಪುರಾಣಕಥೆ

PC: Manjeshpv

ರಕ್ತ ಬೀಜಾಸುರ ಅಸುರನನ್ನು ಸಂಹರಿಸಿದ ನಂತರ ದೇವಿಗೆ ಬಾಯಾರಿಕೆಯಿಂದ ತಾಯಿ ಬಂಡೆಯನ್ನು ತ್ರಿಶೂಲದಿಂದ ಹೊಡೆಯುತ್ತಾಳೆ. ಆಗ ನೀರು ಚಿಮ್ಮುತ್ತದೆ. ಹಾಗಾಗಿ ಇದನ್ನು ಪಾತಾಳ ಗಂಗೆ ಎಂದು ಕರೆಯಲಾಗುತ್ತದೆ.

ಬೆಟ್ಟದಲ್ಲಿ ನೆಲೆಯೂರಿದ ಗಂಗೆ

ಬೆಟ್ಟದಲ್ಲಿ ನೆಲೆಯೂರಿದ ಗಂಗೆ

PC:Christian Lederer

ನೀರು ಕುಡಿದು ದೇವಿ ಹೊರಡುವಾಗ ಗಂಗೆಯೂ ಹಿಂದೆಯೇ ಬರಳುತ್ತಾಳಂತೆ. ಆಗ ದೇವಿಯು ಗಂಗೆಗೆ ಹಿಂದೆ ಬರಬೇಡ ಬೆಟ್ಟ ಹತ್ತಿ ಬಂದವರಿಗೆ ನೀರು ಒದಗಿಸಲು ಇಲ್ಲೇ ಇರು ಎಂದು ಹೇಳಿದಳಂತೆ. ಹಾಗಾಗಿ ಗಂಗೆ ಅಲ್ಲೇ ನೆಲೆಯೂರಿದ್ದಾಳೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+